ಉದ್ಯೋಗ ಆಮಿಷದ ಲಿಂಕ್ ಕ್ಲಿಕ್ ಮಾಡಿದ ಬ್ಯಾಂಕ್ ಮ್ಯಾನೇಜರ್: ಕ್ಷಣಾರ್ಧದಲ್ಲೇ 1.25 ಲಕ್ಷ ರೂಪಾಯಿ ಮಾಯ!
Cyber crime: ನಕಲಿ ಉದ್ಯೋಗದ ಆಮಿಷವೊಡ್ಡಿ ಕೋಟಕ್ ಮಹೀಂದ್ರಾ ಬ್ಯಾಂಕ್ನ ಉಪ ಶಾಖಾ ವ್ಯವಸ್ಥಾಪಕರೊಬ್ಬರಿಗೆ ಸೈಬರ್ ವಂಚಕರು ಸುಮಾರು 1.25 ಲಕ್ಷ ರೂಪಾಯಿ ವಂಚಿಸಿರುವ ಆರೋಪ ರಾಜಸ್ಥಾನದ ಅಲ್ವಾರ್ ನಗರದಲ್ಲಿ ಕೇಳಿಬಂದಿದೆ. ಉದ್ಯೋಗದ ಆಮಿಷವೊಡ್ಡಿ ವಂಚಿಸಿರುವ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಾಂದರ್ಭಿಕ ಚಿತ್ರ -
ಜೈಪುರ, ಅ. 27: ನಕಲಿ ಉದ್ಯೋಗದ ಆಮಿಷವೊಡ್ಡಿ ಕೋಟಕ್ ಮಹೀಂದ್ರಾ ಬ್ಯಾಂಕ್ನ ಉಪ ಶಾಖಾ ವ್ಯವಸ್ಥಾಪಕರೊಬ್ಬರಿಗೆ ಸೈಬರ್ ವಂಚಕರು ಸುಮಾರು 1.25 ಲಕ್ಷ ರೂಪಾಯಿ ವಂಚಿಸಿರುವ ಆರೋಪ ರಾಜಸ್ಥಾನದ (Rajasthan) ಅಲ್ವಾರ್ ನಗರದಲ್ಲಿ ಕೇಳಿಬಂದಿದೆ. ಉದ್ಯೋಗಾವಕಾಶದ ಕುರಿತು ಲಿಂಕ್ ಇರುವ ಸಂದೇಶವನ್ನು ವಂಚಕರು ಕಳುಹಿಸಿದ್ದರು. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ ಬಳಿಕ ಅವರ ಕ್ರೆಡಿಟ್ ಕಾರ್ಡ್ನಿಂದ ಹಣ ಕಡಿತವಾಗಿದೆ.
ಸಂತ್ರಸ್ತ ರಾಹುಲ್ ಅಗರ್ವಾಲ್ ಕೋಟಕ್ ಮಹೀಂದ್ರಾ ಬ್ಯಾಂಕ್ನಲ್ಲಿ ಉಪ ಶಾಖಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ಯೋಗದ ಆಮಿಷವೊಡ್ಡಿ ವಂಚಿಸಿರುವ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಮೊಬೈಲ್ ಫೋನ್ಗೆ ಉದ್ಯೋಗಾವಕಾಶದ ಬಗ್ಗೆ ಸಂದೇಶವೊಂದು ಬಂದಿತ್ತು. ಅದರಲ್ಲಿದ್ದ ಲಿಂಕ್ ಮೂಲಕ ಉದ್ಯೋಗದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ತಾವು ಕ್ಲಿಕ್ ಮಾಡಿದ್ದಾಗಿ ರಾಹುಲ್ ಅಗರ್ವಾಲ್ ದೂರಿನಲ್ಲಿ ತಿಳಿಸಿದ್ದಾರೆ.
ಲಿಂಕ್ ಮೇಲೆ ಕ್ಲಿಕ್ ಮಾಡಿದ ಬಳಿಕ ತಮ್ಮ ಕ್ರೆಡಿಟ್ ಕಾರ್ಡ್ನಿಂದ ಸುಮಾರು 1.25 ಲಕ್ಷ ರೂಪಾಯಿ ಕಡಿತವಾಗಿದೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಭಾನುವಾರ (ಅ. 25) ಸಂಜೆ ರಾಹುಲ್ ಅಗರ್ವಾಲ್ ಅವರಿಗೆ ಸೈಬರ್ ವಂಚನೆ ನಡೆದಿರುವುದು ತಿಳಿದುಬಂದಿದೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಸೈಬರ್ ಕ್ರೈಮ್: ಬೆಂಗಳೂರಿನ 74 ವರ್ಷದ ಮಹಿಳೆಗೆ 24 ಕೋಟಿ ರೂ. ವಂಚನೆ
ಸೋಮವಾರ ಅವರು ಅಲ್ವಾರ್ನ ಕೊಟ್ವಾಲಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಇಡೀ ಘಟನೆಯನ್ನು ವಿವರಿಸುವ ವರದಿಯನ್ನು ಸಲ್ಲಿಸಿದರು. ದೂರಿನ ನಂತರ, ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದರು. ವಂಚನೆ ಹೇಗೆ ನಡೆಯಿತು ಎಂಬುದನ್ನು ಪತ್ತೆಹಚ್ಚಲು ಮತ್ತು ಅಪರಾಧದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಗುರುತಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಸೈಬರ್ ವಂಚನೆಗೆ ಸಂಬಂಧಿಸಿದ ಆನ್ಲೈನ್ ದೂರನ್ನು ಸಹ ದಾಖಲಿಸಲಾಗಿದೆ. ಆನ್ಲೈನ್ ಸೈಬರ್ ವಂಚನೆ ದೂರು ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ದಿನೇಶ್ ಚಂದ್ ಶರ್ಮಾ ತಿಳಿಸಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.