ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಗ್ರಾಹಕರ ಸುರಕ್ಷತೆಯೇ ನಮಗೆ ಆದ್ಯತೆ': ನೀರಿನ ಮಾದರಿ ಸುರಕ್ಷಿತ ಎಂದ ಬಿಸ್ಲೆರಿ; FSSAI ತನಿಖೆಗೆ ಸಂಪೂರ್ಣ ಸಹಕಾರ!

Bisleri Water Quality Issue: ಬಿಸ್ಲೆರಿ ಕುಡಿಯುವ ನೀರಿನ ಗುಣಮಟ್ಟದ ವಿಚಾರವಾಗಿ ಎದ್ದಿರುವ ಚರ್ಚೆ ಮತ್ತು ತನಿಖೆಯ ನಡುವೆಯೇ ಕಂಪನಿ ಮಹತ್ವದ ಸ್ಪಷ್ಟನೆ ನೀಡಿದೆ. ತನ್ನ ನೀರಿನ ಮಾದರಿಗಳು ಥರ್ಡ್-ಪಾರ್ಟಿ ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಸಂಪೂರ್ಣ ಸುರಕ್ಷಿತವಾಗಿವೆ ಎಂದು ಕಂಪನಿ ತಿಳಿಸಿದೆ. ಜೊತೆಗೆ ಎಫ್‌ಎಸ್‌ಎಸ್‌ಎಐ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದು, ಗ್ರಾಹಕರ ಸುರಕ್ಷತೆಯೇ ತಮಗೆ ಮೊದಲ ಆದ್ಯತೆ ಎಂದು ಬಿಸ್ಲೆರಿ ಸ್ಪಷ್ಟಪಡಿಸಿದೆ.

ಬಿಸ್ಲೆರಿ ನೀರು ಕುಡಿಯಲು ಯೋಗ್ಯ: ಕಂಪನಿ ಸ್ಪಷ್ಟನೆ

ಬಿಸ್ಲೆರಿ ನೀರು ಸುರಕ್ಷಿತ ಕಂಪನಿಯಿಂದ ಅಧಿಕೃತ ಸ್ಪಷ್ಟನೆ -

Profile
Jyoti S Nov 23, 2026 1:42 PM

ನವದೆಹಲಿ, ನ. 23: ಬಿಸ್ಲೆರಿ (Bisleri water) ನೀರಿನ ಗುಣಮಟ್ಟದ ಬಗ್ಗೆ ದೇಶಾದ್ಯಂತ ಎದ್ದಿರುವ ವಿರೋಧದ ನಡುವೆ, ತನ್ನ ಉತ್ಪನ್ನದ ಗುಣಮಟ್ಟ ಮತ್ತು ಸುರಕ್ಷತೆಯ ಕುರಿತು ಬಂದಿರುವ ವರದಿಗಳ ಕುರಿತು ಕಂಪನಿ ಅಧಿಕೃತ ಪ್ರತಿಕ್ರಿಯೆ ನೀಡಿದೆ. ನೀರಿನ ಮಾದರಿ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂಬ ವರದಿ ಹೊರಬಿದ್ದ ಬೆನ್ನಲ್ಲೇ ಎಫ್‌ಎಸ್‌ಎಸ್‌ಐ ಕ್ರಮಕ್ಕೆ ಮುಂದಾಗಿದೆ. ಆದರೆ ಈ ಪ್ರಕರಣ 14 ತಿಂಗಳ ಹಿಂದಿನದ್ದು ಎಂದು ಹೇಳಿರುವ ಬಿಸ್ಲೆರಿ, ತನ್ನ ಉತ್ಪನ್ನದ ಗುಣಮಟ್ಟದ ಬಗ್ಗೆ ಸ್ಪಷ್ಟನೆ ನೀಡಿದೆ.

ಈ ಪ್ರಕರಣ ಸುಮಾರು 14 ತಿಂಗಳ ಹಿಂದಿನದ್ದು. ಕುಡಿಯುವ ನೀರಿನ ಸುರಕ್ಷತೆ ತನ್ನ ಮೊದಲ ಆದ್ಯತೆಯಾಗಿದ್ದು, ಗುಣಮಟ್ಟ ಕಾಪಾಡಲು ಕಟ್ಟುನಿಟ್ಟಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ಎಫ್‌ಎಸ್‌ಎಸ್‌ಐ ಜೊತೆ ಸಹಕರಿಸುವುದಾಗಿಯೂ ಬಿಸ್ಲೆರಿ ತಿಳಿಸಿದೆ.

ಬಿಸ್ಲೆರಿ ಕಂಪನಿ ನೀಡಿರುವ ಸ್ಪಷ್ಟನೆ ಪೋಸ್ಟ್‌ ನೋಡಿ



ಬಿಸ್ಲೆರಿ ಕಂಪನಿ ಪೋಸ್ಟ್‌ನಲ್ಲಿ ಹೇಳಿದ್ದೇನು?

ಕಂಪನಿಯ ಹೇಳಿಕೆ ಪ್ರಕಾರ, ನಮ್ಮ ಉತ್ಪನ್ನಗಳ ಗುಣಮಟ್ಟ ನಿಯಂತ್ರಣ ವ್ಯವಸ್ಥೆ ಕಟ್ಟುನಿಟ್ಟಾಗಿದೆ. ಸ್ವತಂತ್ರ ಪ್ರಯೋಗಾಲಯದ ಪರೀಕ್ಷೆಯಲ್ಲಿ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಯಲ್ಲಿದೆ ಎಂದು ಕಂಪನಿ ತಿಳಿಸಿದೆ. ಕುಡಿಯುವ ನೀರಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಎಫ್‌ಎಸ್‌ಎಸ್‌ಐ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಕೂಡ ಕಂಪನಿ ಹೇಳಿದೆ.

ಕಳೆದ ವರ್ಷ ಸೆಪ್ಟೆಂಬರ್‌ 30ರಂದು ಎಫ್‌ಎಸ್‌ಎಸ್‌ಐ ಅಧಿಕಾರಿಗಳು ಗೋವಾದಲ್ಲಿರುವ ಬಿಸ್ಲೆರಿ ಘಟಕದಿಂದ ಒಟ್ಟು ಆರು ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದರು. ಈ ಪೈಕಿ ಐದು ಮಾದರಿಗಳ ಗುಣಮಟ್ಟ ಉತ್ತೀರ್ಣವಾಗಿದ್ದವು. ಆದರೆ, ಆರನೇ ಮಾದರಿಯಲ್ಲಿ ಬ್ರೋಮೇಟ್ ಪ್ರಮಾಣ ನಿಗದಿತಕ್ಕಿಂತ ಪ್ರತಿ ಲೀಟರ್‌ಗೆ 10 ಮೈಕ್ರೋಗ್ರಾಂ ತುಸು ಹೆಚ್ಚಿತ್ತು. ಅಂದರೆ ಪ್ರತಿ ಲೀಟರ್‌ಗೆ 12 ಮೈಕ್ರೋಗ್ರಾಂ ಇತ್ತು ಎಂದು ದಾಖಲಾಗಿದೆ.

ಈ ಫಲಿತಾಂಶದ ಬಳಿಕ ಕಂಪನಿ ಸ್ವತಂತ್ರವಾಗಿ ಮತ್ತೊಮ್ಮೆ ಪರೀಕ್ಷೆ ನಡೆಸಿದ್ದು, ಅದರಲ್ಲಿ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಯೊಳಗೆ ಇತ್ತು ಎಂದು ಹೇಳಿದೆ. ಆದರೆ ಎಫ್‌ಎಸ್‌ಎಸ್‌ಐ ಪರೀಕ್ಷೆಯ ಫಲಿತಾಂಶವನ್ನು ಪ್ರಶ್ನಿಸಿ ಕಂಪನಿ ಮೇಲ್ಮನವಿ ಸಲ್ಲಿಸಿದ ಬಳಿಕ, ಮಾದರಿಯನ್ನು ಮತ್ತೊಂದು ಉಲ್ಲೇಖಿತ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಪಾಲಿಸೈಕ್ಲಿಕ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAHs) ಪತ್ತೆಯಾಗಿವೆ ಎಂದು ಎಫ್‌ಎಸ್‌ಎಸ್‌ಐ ತಿಳಿಸಿದೆ. ಆ ಪ್ರಯೋಗಾಲಯವೂ ಮಾದರಿಯನ್ನು ಅಸುರಕ್ಷಿತ ಎಂದು ಘೋಷಿಸಿದೆ.

ಬಿಸ್ಲೇರಿ ನೀರು ಕುಡಿಯುವ ಮುನ್ನ ಮತ್ತೊಮ್ಮೆ ಯೋಚಿಸಿ; ಶುದ್ಧತೆ ಪರೀಕ್ಷೆಯಲ್ಲಿ ವಿಫಲ: ಕ್ಯಾನ್ಸರ್‌ಕಾರಕ ಅಂಶ ಪತ್ತೆ

FSSAI ತನಿಖೆಗೆ ಬಿಸ್ಲೆರಿ ಸಾಥ್

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಡೆಸುತ್ತಿರುವ ತನಿಖೆ ಹಾಗೂ ಪರಿಶೀಲನೆಗೆ ಬಿಸ್ಲೆರಿ ಸಂಸ್ಥೆ ಸಂಪೂರ್ಣವಾಗಿ ಸಹಕರಿಸಲಿದೆ ಎಂದು ತಿಳಿಸಿದೆ. ನಿಯಮಾವಳಿಗಳು ಮತ್ತು ಗುಣಮಟ್ಟದ ಮಾನದಂಡಗಳಿಗೆ ಬದ್ಧವಾಗಿಯೇ ಕಾರ್ಯನಿರ್ವಹಿಸುತ್ತಿರುವುದಾಗಿ ಕಂಪನಿ ಸ್ಪಷ್ಟನೆ ನೀಡಿದ್ದು, ತನಿಖಾ ಸಂಸ್ಥೆಗಳಿಗೆ ಅಗತ್ಯವಿರುವ ಎಲ್ಲಾ ದಾಖಲೆ ಮತ್ತು ಮಾಹಿತಿಗಳನ್ನು ಒದಗಿಸುವುದಾಗಿ ಹೇಳಿದೆ.

ಬಿಸ್ಲೆರಿ ನೀರು ಕುಡಿಯಬಹುದೇ?

ಗ್ರಾಹಕರ ಆರೋಗ್ಯ ಮತ್ತು ಸುರಕ್ಷತೆಯೇ ಸಂಸ್ಥೆಯ ಪ್ರಮುಖ ಆದ್ಯತೆಯಾಗಿದ್ದು, ಪ್ರತಿ ಹಂತದಲ್ಲೂ ಕಟ್ಟುನಿಟ್ಟಾದ ಗುಣಮಟ್ಟದ ತಪಾಸಣೆ ನಡೆಸಲಾಗುತ್ತದೆ ಎಂದು ಬಿಸ್ಲೆರಿ ಒತ್ತಿ ಹೇಳಿದೆ. ಯಾವ ಭಾಗದಲ್ಲಿ ಯಾವ ಬ್ಯಾಚ್‌ನ ಬಿಸ್ಲೆರಿ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು ಎನ್ನುವ ಬಗ್ಗೆ ಇಲ್ಲಿಯವರೆಗೂ ಪ್ರಾಧಿಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿಲ್ಲ. ಹೀಗಾಗಿ ದೇಶಾದ್ಯಂತ ಮಾರಾಟವಾಗುತ್ತಿರುವ ಬಿಸ್ಲೆರಿ ನೀರು ಕುಡಿಯಲು ಅಸುರಕ್ಷಿತ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸದ್ಯ ಗುಣಮಟ್ಟದ ವಿಚಾರ ಮಾತ್ರ ಆತಂಕಕ್ಕೆ ಕಾರಣವಾಗಿದ್ದು, ಎಫ್‌ಎಸ್‌ಎಸ್‌ಐ ಪ್ರಯೋಗಾಲಯದಿಂದ ವರದಿ ಮೇಲೆ ಎಲ್ಲರ ಗಮನವಿದೆ.