ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಸ್ಲೇರಿ ನೀರು ಕುಡಿಯುವ ಮುನ್ನ ಮತ್ತೊಮ್ಮೆ ಯೋಚಿಸಿ; ಶುದ್ಧತೆ ಪರೀಕ್ಷೆಯಲ್ಲಿ ವಿಫಲ: ಕ್ಯಾನ್ಸರ್‌ಕಾರಕ ಅಂಶ ಪತ್ತೆ

Bisleri water: ಪರೀಕ್ಷೆಯಲ್ಲಿ ಬಿಸ್ಲೇರಿ ನೀರು ಶುದ್ಧವಿಲ್ಲ ಎನ್ನುವುದು ಪತ್ತೆಯಾಗಿದ್ದು, ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ. ನೀರಿನ ಮಾದರಿಯಲ್ಲಿ ಬ್ರೋಮೇಟ್ ಮತ್ತು ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ ಅಂಶ ಕಂಡು ಬಂದಿದೆ. ಇವು ಕ್ಯಾನ್ಸರ್‌ಕಾರಕ ಎಂದು ನಿರ್ಧರಿಸಲಾಗಿದೆ.

ಬಿಸ್ಲೇರಿ ನೀರಿನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 22, 2026 11:20 PM

ದೆಹಲಿ, ನ. 22: ನೀವು ನಂಬಿಕೆ ಇಟ್ಟು, ಇಷ್ಟಪಟ್ಟು ಕುಡಿಯುವ ಬಿಸ್ಲೇರಿ ನೀರೂ (Bisleri water) ಶುದ್ಧವಲ್ಲ! ಹೌದು, ಪರೀಕ್ಷೆಯಲ್ಲಿ ಬಿಸ್ಲೇರಿ ನೀರು ಶುದ್ಧವಿಲ್ಲ ಎನ್ನುವುದು ಪತ್ತೆಯಾಗಿದ್ದು, ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ. ನೀರಿನ ಮಾದರಿಯಲ್ಲಿ ಬ್ರೋಮೇಟ್ ಮತ್ತು ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳ (PAHs) ಅಂಶ ಕಂಡು ಬಂದಿದೆ. ಪ್ರಯೋಗಾಲಯ ಪರೀಕ್ಷೆಯ ಮೂಲಕ ಪ್ಯಾಕೇಜ್ಡ್ ಕುಡಿಯುವ ನೀರಿನ ತಯಾರಕ ಬಿಸ್ಲೇರಿ ಇಂಟರ್‌ನ್ಯಾಷನಲ್‌ನ ನೀರಿನ ಮಾದರಿಯನ್ನು ಅಸುರಕ್ಷಿತವೆಂದು ಘೋಷಿಸಿದ ನಂತರ, ಭಾರತದ ಆಹಾರ ಸುರಕ್ಷತಾ ನಿಯಂತ್ರಕವು ಅದರ ವಿರುದ್ಧ ಕಾನೂನು ಕ್ರಮ ಪ್ರಾರಂಭಿಸಿದೆ.

ಆರಂಭದಲ್ಲಿ ಬಿಸ್ಲೇರಿ ನೀರಿನ ಸ್ಯಾಂಪಲ್‌ನಲ್ಲಿ ನಿಗದಿತ ಬ್ರೋಮೇಟ್ ಮಿತಿ ಉಲ್ಲಂಘನೆಯಾಗಿರುವುದು ಪತ್ತೆಯಾಗಿತ್ತು. ಹೀಗಾಗಿ FSS ಆ್ಯಕ್ಟ್ 2006ರ ಅಡಿ ನೀರು ಅನ್‌ಸೇಫ್ ಎಂದು ಘೋಷಿಸಲಾಗಿದ್ದು, ಕಾನೂನು ಕ್ರಮಕ್ಕೆ ಬಿಸ್ಲೇರಿ ಇಂಟರ್‌ನ್ಯಾಷನಲ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಸ್ಲೇರಿಯೂ ಸುರಕ್ಷಿತವಲ್ಲ:



ʼʼರೆಫರಲ್ ಫುಡ್ ಲ್ಯಾಬ್‌ನಲ್ಲೂ ಪರೀಕ್ಷೆ ಮಾಡಲಾಗಿದ್ದು, ಅಲ್ಲೂ ನೀರಿನಲ್ಲಿ ಪಾಲಿನ್ಯೂಕ್ಲಿಯರ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್ಸ್ ಪತ್ತೆಯಾಗಿದೆ. 2ನೇ ಪರೀಕ್ಷೆಯಲ್ಲೂ ಅಸುರಕ್ಷಿತ ಎಂದು ವರದಿ ಬಂದಿದ್ದು, ಈ ಮೂಲಕ ಆಹಾರ ಸುರಕ್ಷತಾ ಕಾಯ್ದೆ ಉಲ್ಲಂಘನೆಯಾಗಿರುವುದು ದೃಢಪಟ್ಟಿದೆ. ಇದರಿಂದ ಬಿಸ್ಲೇರಿ ಇಂಟರ್‌ನ್ಯಾಷನಲ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲಾಗಿದೆʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಭಾರತೀಯ ಆಹಾರ ನಿಗಮದಿಂದ ಕರ್ನಾಟಕಕ್ಕೆ 11.80 ಲಕ್ಷ ಟನ್ ಆಹಾರಧಾನ್ಯ ಪೂರೈಕೆ

ನಿಯಮ ಉಲ್ಲಂಘನೆ

ಬಿಸ್ಲೇರಿ ನೀರಿನ ಆರಂಭಿಕ ವಿಶ್ಲೇಷಣೆಯಲ್ಲಿ ಬ್ರೋಮೇಟ್‌ಗೆ ಸಂಬಂಧಿಸಿದ ನಿಗದಿತ ಮಿತಿಗಳನ್ನು ಮೀರಿರುವುದು ಕಂಡುಬಂತು. ಇದರ ಪರಿಣಾಮವಾಗಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006ರ ಅಡಿಯಲ್ಲಿ ಈ ನೀರನ್ನು ಅಸುರಕ್ಷಿತ ಎಂದು ಘೋಷಿಸಲಾಯಿತು. ತರುವಾಯ ಕಂಪನಿಯು ಮೇಲ್ಮನವಿ ಸಲ್ಲಿಸುವ ತನ್ನ ಹಕ್ಕನ್ನು ಚಲಾಯಿಸಿ ಹೆಚ್ಚಿನ ಪರಿಶೀಲನೆಗಾಗಿ ಮಾದರಿಯನ್ನು ರೆಫರಲ್ ಫುಡ್ ಲ್ಯಾಬೊರೇಟರಿಗೆ ಕಳುಹಿಸಲಾಯಿತು. ಆದಾಗ್ಯೂ ಎರಡನೇ ಪ್ರಯೋಗಾಲಯದ ಮೌಲ್ಯಮಾಪನದಲ್ಲೂ ಈ ನೀರು ಅಸುರಕ್ಷಿತವೆಂದು ದೃಢಪಟ್ಟಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬ್ರೋಮೇಟ್ ಮತ್ತು ಪಿಎಎಚ್ ಎರಡನ್ನೂ ಕ್ಯಾನ್ಸರ್‌ಕಾರಕಗಳೆಂದು ವರ್ಗೀಕರಿಸಲಾಗಿದೆ. ಅಂದರೆ ಇವು ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯವಿರುವ ರಾಸಾಯನಿಕಗಳು.

ಚಾಕೋಲೇಟ್‌ ಕಂಪನಿಗೂ ನೋಟಿಸ್‌

ಬಿಸ್ಲೇರಿ ಜತೆಗೆ ಪ್ರಯೋಗಾಲಯದ ಪರೀಕ್ಷೆಯಲ್ಲಿ ಅಸುರಕ್ಷಿತವೆಂದು ದೃಢಪಟ್ಟ ನಂತರ, ಆಶಾ ಕನ್ಫೆಕ್ಷನರಿ ಸಂಸ್ಥೆಯ ಕುಕೀಸ್‌ನ ಒಂದು ಬ್ಯಾಚ್ ಅನ್ನು ತಕ್ಷಣವೇ ಹಿಂಪಡೆಯಬೇಕೆಂದು FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ) ನಿರ್ದೇಶನ ನೀಡಿದೆ.

Vishwavani Editorial: ಆಹಾರ ಸುರಕ್ಷತೆಯ ಪ್ರಶ್ನೆ

ಪರೀಕ್ಷೆಯಲ್ಲಿ ಉತ್ಪನ್ನದ ಘಟಕಾಂಶಗಳ ಪಟ್ಟಿಯಲ್ಲಿ ನಮೂದಿಸದಿದ್ದರೂ ಅದರಲ್ಲಿ ಕಾರ್ಮೈನ್ (Carmine) ಇರುವುದು ಪತ್ತೆಯಾಗಿದೆ. ಹಾಗೆಯೇ ಟಾರ್ಟ್ರಾಜೈನ್ (Tartrazine) ಅಂಶವು ಅನುಮತಿಸಲಾದ ಗರಿಷ್ಠ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ. ಇದಲ್ಲದೆ ಈ ಮಾದರಿಯಲ್ಲಿ 'ಸನ್‌ಸೆಟ್ ಎಲ್ಲೋ ಎಫ್‌ಸಿಎಫ್' (Sunset Yellow FCF) ಎಂಬ ಬಣ್ಣಕಾರಕವೂ ಇತ್ತು. ಈ ನಿರ್ದಿಷ್ಟ ಆಹಾರ ವರ್ಗದಲ್ಲಿ ಇದನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.