ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Year Ender 2025: ಮತ್ತೆ ಬೆಸೆದ ಸಂಬಂಧ; ಭಾರತದತ್ತ ಸ್ನೇಹ ಹಸ್ತ ಚಾಚಿದ ಚೀನಾ

ಸುಮಾರು ನಾಲ್ಕು ವರ್ಷಗಳ ಬಳಿಕ ಮೊದಲ ಬಾರಿಗೆ ಭಾರತ ಮತ್ತು ಚೀನಾ ನಡುವೆ ಬಿರುಕು ಬಿಟ್ಟಿದ್ದ ಸಂಬಂಧ ಪುನರ್ ಜೋಡಣೆ ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಎರಡು ರಾಷ್ಟ್ರಗಳು 2025ರಲ್ಲಿ ಹಲವು ಪ್ರಮುಖ ಹೆಜ್ಜೆಗಳನ್ನು ಇಟ್ಟಿದೆ. ಗಡಿ ಭಾಗದಲ್ಲಿ ಶಾಂತಿ ಉಂಟಾಗುತ್ತಿದ್ದಂತೆ ಚೀನಾದೊಂದಿಗೆ ಉತ್ತಮ ಸಂಬಂಧ ಸ್ಥಾಪನೆಗೆ ಭಾರತ ಮುಂದಾಗಿದ್ದು, ಈ ನಿಟ್ಟಿನಲ್ಲಿ ಎರಡು ರಾಷ್ಟ್ರಗಳು ಸಂವಾದ ಪ್ರಕ್ರಿಯೆಗಳು ತೀವ್ರಗೊಳಿಸಿತ್ತು.

ಸಂಬಂಧ ಪುನರ್ ನಿರ್ಮಾಣಕ್ಕೆ ಮುಂದಾದ ಭಾರತ- ಚೀನಾ

(ಸಂಗ್ರಹ ಚಿತ್ರ) -

ನವದೆಹಲಿ: ಗಡಿ ಸಂಘರ್ಷದಿಂದ (Border conflict) ಬಿರುಕು ಬಿಟ್ಟಿದ್ದ ಭಾರತ (India) ಮತ್ತು ಚೀನಾ (china) ನಡುವಿನ ಸಂಬಂಧ 2025ರಲ್ಲಿ (Year Ender 2025) ಸುಧಾರಣೆಯತ್ತ ಹೆಜ್ಜೆ ಹಾಕಿದೆ. ಈ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಹಲವು ರೀತಿಯಾಗಿ ಕಾರ್ಯನಿರ್ವಹಿಸುತ್ತಿವೆ. 2024ರ ಅಕ್ಟೋಬರ್‌ನಲ್ಲಿ ಗಡಿ ಸಂಘರ್ಷವನ್ನು ಕೊನೆಗೊಳಿಸಲು ಎರಡು ರಾಷ್ಟ್ರಗಳು ಒಪ್ಪಿಕೊಂಡ ಬಳಿಕ ಸಂಬಂಧ ಸುಧಾರಣೆಗೆ ಹೆಜ್ಜೆ ಇಡಲು (india-china relationship) ಪ್ರಾರಂಭಿಸಿದವು. ಇದರ ಪರಿಣಾಮವಾಗಿ ಈ ವರ್ಷದಲ್ಲಿ ಸಂಬಂಧ ಸುಧಾರಣೆಗೆ ಹಲವು ಪ್ರಮುಖ ಕಾರ್ಯಗಳನ್ನು ಕೈಗೆತ್ತಿಕೊಂಡಿವೆ.

2020ರ ಗಾಲ್ವಾನ್ ಘರ್ಷಣೆಯ ಬಳಿಕ ಉಂಟಾಗಿರುವ ಉದ್ವಿಗ್ನತೆಯನ್ನು ಕೊನೆಗೊಳಿಸಿ 2024ರ ಅಕ್ಟೋಬರ್ ತಿಂಗಳಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿನ ಮುಖಾಮುಖಿಯನ್ನು ಕೊನೆಗೊಳಿಸಲು ಒಪ್ಪಿಕೊಂಡವು. ಇದರಿಂದ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಯಾಗುವ ಲಕ್ಷಣಗಳು ಕಾಣಿಸಲು ಆರಂಭಿಸಿತು.

ಏನಾಗ್ತಿದೆ ಬಾಂಗ್ಲಾದೇಶದಲ್ಲಿ? ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ; 10 ದಿನಗಳ ಅಂತರದಲ್ಲಿ 3 ಹಿಂದೂಗಳ ಹತ್ಯೆ

ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಲು ಭಾರತ ಮುಂದಾದ ಬಳಿಕ ಎರಡು ರಾಷ್ಟ್ರಗಳ ನಡುವೆ ಸಂವಾದ ಪ್ರಕ್ರಿಯೆ ಚುರುಕುಗೊಂಡಿತು. ಈ ನಿಟ್ಟಿನಲ್ಲಿ ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳಾದ ಎನ್‌ಎಸ್‌ಎ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಹಲವು ಬಾರಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು.

ಕಳೆದ ಜುಲೈನಲ್ಲಿ ಚೀನಾಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವಾರು ಗಡಿ ಸಂಬಂಧಿತ ಸಮಸ್ಯೆಗಳು, ವಿಶೇಷವಾಗಿ ಉದ್ವಿಗ್ನತೆ ಶಮನ ಸೇರಿದಂತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದರು. ಬಳಿಕ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಟಿಯಾಂಜಿನ್‌ನಲ್ಲಿ ಭೇಟಿಯಾದರು. ಇದು ಎರಡು ಏಷ್ಯಾದ ದೈತ್ಯ ರಾಷ್ಟ್ರಗಳು ಒಗ್ಗಟ್ಟಾಗಿರುವ ಸಂದೇಶವನ್ನು ವಿಶ್ವಕ್ಕೆ ಸಾರಿತು. ಈ ವೇಳೆ ಮೋದಿ ಮತ್ತು ಕ್ಸಿ ಅವರು ಭಾರತ ಮತ್ತು ಚೀನಾ ಪ್ರತಿ ಸ್ಪರ್ಧಿಗಳಲ್ಲ. ಅಭಿವೃದ್ಧಿ ಪಾಲುದಾರರು ಎಂದು ಸ್ಪಷ್ಟಪಡಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವಕ್ಕೆ ಒಡ್ಡಿದ ಸುಂಕ ಹೆಚ್ಚಳದ ಭೀತಿಯ ನಡುವೆಯೇ ಏಷ್ಯಾದ ಎರಡು ರಾಷ್ಟ್ರಗಳು ಒಗ್ಗಟ್ಟಾಗಿರುವ ಸಂದೇಶವನ್ನು ನೀಡಿತ್ತು. ಇದರ ಮುಂದುವರಿದ ಭಾಗವಾಗಿ 2026ರಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಕ್ಸಿ ಅವರು ಭಾರತಕ್ಕೆ ಭೇಟಿ ನೀಡಬಹುದು ಎನ್ನಲಾಗಿದೆ.

ಪ್ರಮುಖ ಹೆಜ್ಜೆಗಳು

ಸಂಬಂಧ ಸುಧಾರಣೆಯ ಪ್ರಮುಖ ಹೆಜ್ಜೆಗಳಾಗಿ ಭಾರತ ಮತ್ತು ಚೀನಾ ಹಲವು ಹೆಜ್ಜೆಗಳನ್ನು ಇಟ್ಟಿದೆ. ಅವುಗಳಲ್ಲಿ ಮುಖ್ಯವಾದವುಗಳು ಇಂತಿವೆ. ಟಿಬೆಟ್‌ನಲ್ಲಿರುವ ಕೈಲಾಸ ಮತ್ತು ಮಾನಸ ಸರೋವರಕ್ಕೆ ಭಾರತೀಯ ಯಾತ್ರಿಕರ ಭೇಟಿ ಪುನರಾರಂಭ. ಎರಡೂ ದೇಶಗಳು ವೀಸಾ ಕಾರ್ಯವಿಧಾನಗಳನ್ನು ಸರಳಗೊಳಿಸಿದವು ಮತ್ತು ಐದು ವರ್ಷಗಳ ಅನಂತರ ಎರಡು ದೇಶಗಳ ವಿವಿಧ ನಗರಗಳನ್ನು ಸಂಪರ್ಕಿಸುವ ವಿಮಾನಗಳ ಪುನರಾರಂಭಿಸಿದವು.

ಹಲವು ಸವಾಲುಗಳು

ಈ ನಡುವೆ ಕಳೆದ ಮೇ ತಿಂಗಳಲ್ಲಿ ಭಾರತೀಯ ಸೇನೆಯು ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನಕ್ಕೆ ಚೀನಾದ ಬೆಂಬಲ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು. ಅಲ್ಲದೇ ಅರುಣಾಚಲ ಪ್ರದೇಶದ ಭಾರತೀಯ ಪ್ರೇಮಾ ಥೋಂಗ್‌ಡಾಕ್ ಅವರು ಜಪಾನ್‌ಗೆ ಪ್ರಯಾಣಿಸುತ್ತಿದ್ದಾಗ ಶಾಂಘೈ ವಿಮಾನ ನಿಲ್ದಾಣದಲ್ಲಿ ಚೀನಾದ ವಲಸೆ ಅಧಿಕಾರಿಗಳು ತೋರಿದ ವರ್ತನೆ ಕೂಡ ಭಾರತೀಯರಿಗೆ ಬೇಸರ ಉಂಟು ಮಾಡಿತ್ತು. ಈ ಬಳಿಕ ಚೀನಾದ ವಿಮಾನ ನಿಲ್ದಾಣಗಳ ಮೂಲಕ ಸಾಗುವ ಭಾರತೀಯರಿಗೆ ಯಾವುದೇ ಕಿರುಕುಳ ನೀಡುವುದಿಲ್ಲ ಎಂದು ಚೀನಾ ಅಧಿಕಾರಿಗಳು ಭರವಸೆ ನೀಡಿದರು.

ಅರುಣಾಚಲ ಪ್ರದೇಶದ ಮೇಲಿನ ತನ್ನ ಹಕ್ಕನ್ನು ಪುನರುಚ್ಚರಿಸಿರುವ ಚೀನಾದ ಹೇಳಿಕೆಯನ್ನು ದೆಹಲಿ ತೀವ್ರವಾಗಿ ತಿರಸ್ಕರಿಸಿದೆ. ಈ ರಾಜ್ಯವು ಭಾರತದ ಬೇರ್ಪಡಿಸಲಾಗದ ಭಾಗ ಎಂದು ಹೇಳಿದೆ.

ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಜೊತೆಗೆ ಚೀನಾವು ಭಾರತಕ್ಕೆ ಲೋಹಗಳ ರಫ್ತನ್ನು ನಿರ್ಬಂಧಿಸಿದಾಗ ಎರಡು ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಮತ್ತೊಂದು ಪ್ರಮುಖ ಸವಾಲು ಎದುರಾಯಿತು. ಈ ನಿಟ್ಟಿನಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ವಾಷಿಂಗ್ಟನ್‌ ಒಪ್ಪಿಕೊಂಡ ಬಳಿಕ ಬೀಜಿಂಗ್ ಅಮೆರಿಕಕ್ಕೆ ಆಯ್ದ ರಫ್ತು ಪರವಾನಗಿಗಳನ್ನು ತೆರವುಗೊಳಿಸಲು ಪ್ರಾರಂಭಿಸಿತು.

ನ್ಯೂ ಇಯರ್‌ ಶುಭಾಶಯದ ಲಿಂಕ್‌ ಕ್ಲಿಕ್‌ ಮಾಡುವ ಮುನ್ನ ಎಚ್ಚರ; ವಂಚನೆಯ ಹೊಸ ವಿಧಾನದ ಬಗ್ಗೆ ಪೊಲೀಸರಿಂದ ಮಹತ್ವದ ಅಪ್‌ಡೇಟ್‌

ಭಾರತೀಯ ಆಟೋಮೊಬೈಲ್‌ಗಳು ಮತ್ತು ಇತರ ಕೈಗಾರಿಕೆಗಳ ತಯಾರಿಕೆಯ ಮೇಲೆ ಚೀನಾದ ನಿರ್ಬಂಧಗಳು ಪರಿಣಾಮ ಬೀರಿದ್ದರೂ ಬಳಿಕ ಚೀನಾ ನಿರ್ಬಂಧಗಳನ್ನು ಭಾಗಶಃ ತೆಗೆದುಹಾಕಿದೆ. ಹೀಗೆ ಹಲವು ಸವಾಲುಗಳ ನಡುವೆಯೂ ಭಾರತ ಮತ್ತು ಚೀನಾ ಸಂಬಂಧ ಸುಧಾರಣೆಗೆ ನಿರಂತರ ಮಾತುಕತೆಯಲ್ಲಿ ತೊಡಗಿಕೊಂಡಿವೆ.