ಲವ್ ಜಿಹಾದ್, ಮತಾಂತರ, ʼಪ್ರಕಾಶ ರಾಮಯಣʼ, ಕೃಷ್ಣನ ಎದುರು ಚಿಕನ್, ಪೊಂಗಲ್ ಊಟದಲ್ಲಿ ಖರ್ಜೂರ; ಸನಾತನ ಧರ್ಮದ ವಿರುದ್ಧ ಮುಂದುವರಿದ ದಾಳಿ: ಏನಾಗುತ್ತಿದೆ ದೇಶದಲ್ಲಿ?
ಕೆಲವು ದಿನಗಳಿಂದ ದೇಶದಲ್ಲಿ ಹಿಂದೂ ವಿರೋಧಿ ಚಟುವಟಿಕೆ ಅವ್ಯಾಹತವಾಗಿ ಮುಂದುವರಿದಿದೆ. ಒಂದು ಕಡೆ ಕರ್ನಾಟಕ ಸೇರಿ ವಿವಿಧ ಕಡೆಗಳಲ್ಲಿ ಲವ್ ಜಿಹಾದ್ ಪ್ರಕರಣ ಹೆಚ್ಚಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಜಾಹೀರಾತುಗಳಲ್ಲಿಯೂ ಹಿಂದೂ ವಿರೋಧಿ ನಡೆ ಕಂಡು ಬರುತ್ತಿದೆ. ಕೇವಲ ಒಂದು ಧರ್ಮದ ವಿರುದ್ಧ ನಡೆಯುತ್ತಿರುವ ದಾಳಿ ಆಕ್ರೋಶಕ್ಕೆ ಕಾರಣವಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು, ಏ. 20: ಕೆಲವು ದಿನಗಳಿಂದ ದೇಶದಲ್ಲಿ ಹಿಂದೂ ವಿರೋಧಿ ಚಟುವಟಿಕೆ ಅವ್ಯಾಹತವಾಗಿ ಮುಂದುವರಿದಿದೆ. ಒಂದು ಕಡೆ ಕರ್ನಾಟಕ ಸೇರಿ ವಿವಿಧ ಕಡೆಗಳಲ್ಲಿ ಲವ್ ಜಿಹಾದ್ ಪ್ರಕರಣ ಹೆಚ್ಚಾಗುತ್ತಿದೆ. ಇತ್ತ ಟಿಸಿಎಸ್‌ನಂತಹ ಕಂಪನಿಗಳಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ. ಅಲ್ಲದೆ ಜಾಹೀರಾತುಗಳಲ್ಲಿ ಹಿಂದೂ ವಿರೋಧಿ ನಡೆ ಸ್ಪಷ್ಟವಾಗಿ ಕಂಡುಬರುತ್ತಿದೆ. ಒಟ್ಟಿನಲ್ಲಿ ಹಿಂದೂ ಧರ್ಮದ ವಿರುದ್ಧ ನಿರಂತರ ದಾಳಿ ನಡೆಯುತ್ತಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತ್ಯಾತೀತ ದೇಶದಲ್ಲಿ ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ದಾಳಿ ಚರ್ಚೆಗೆ ಕಾರಣವಾಗಿದೆ.
ಸದ್ಯ ಈ ವಿಚಾರ ದೇಶಾದ್ಯಂತ ತೀವ್ರ ಅಸಮಾಧಾನದ ಅಲೆ ಹುಟ್ಟುಹಾಕಿದೆ. ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಈ ಬಗ್ಗೆ ಧ್ವನಿ ಎತ್ತುತ್ತಿವೆ. ಈ ಬಗ್ಗೆ ಒಂದೂ ಮಾತನಾಡದ ನಕಲಿ ಜಾತ್ಯಾತೀತರ ನಡೆಯನ್ನು ಹಲವರು ಪ್ರಶ್ನಿಸುತ್ತಿದ್ದಾರೆ.
ಲವ್ ಜಿಹಾದ್
ರಾಜ್ಯದ ಹುಬ್ಬಳ್ಳಿ, ಬಾಗಲಕೋಟೆ, ಕೊಪ್ಪಳ ಮತ್ತು ಬೆಂಗಳೂರಿನಲ್ಲಿ ಇತ್ತೀಚೆಗೆ ಹಲವು ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿವೆ. ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಬಲೆಗೆ ಬೀಳಿಸಿ, ವಿಡಿಯೊ ಮಾಡಿ ಬೆದರಿಕೆ ಹಾಕಿರುವ ಘಟನೆಗಳು ಆತಂಕ ಮೂಡಿಸಿವೆ. ಹಲವು ಸಂತ್ರಸ್ತೆಯರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದು, ಲವ್ ಜಿಹಾದ್ ದಂಧೆಗೆ ತಡೆ ಒಡ್ಡುವಂತೆ ಕೂಗು ಜೋರಾಗಿದೆ.
ಲೆನ್ಸ್‌ಕಾರ್ಟ್‌ನಿಂದಲೂ ಹಿಂದೂ ವಿರೋಧಿ ನಡೆ: ಬಿಂದಿ, ತಿಲಕಕ್ಕೆ ನಿಷೇಧ, ಹಿಜಾಬ್‌ಗೆ ಅನುಮತಿ!
ಟಿಸಿಎಸ್‌ನಲ್ಲಿ ವ್ಯವಸ್ಥಿತ ಮತಾಂತರ
ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ದೇಶದ ಪ್ರಮುಖ ಟೆಕ್ ಕಂಪನಿ ಟಿಸಿಎಸ್‌ನಲ್ಲಿ (Tata Consultancy Services) ನಡೆಯುತ್ತಿದ್ದ ಕಾರ್ಪೊರೇಟ್ ಜಿಹಾದ್ ಮತ್ತು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದು ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಇಲ್ಲಿನ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದುದಲ್ಲದೆ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಿಸುವ ಕಾರ್ಯ ನಡೆಯುತ್ತಿತ್ತು. ಮಹಿಳಾ ಉದ್ಯೋಗಿಯೊಬ್ಬರು ದೂರು ನೀಡಿದ ಬಳಿಕ ಇಲ್ಲಿನ ಬೃಹತ್ ಜಾಲ ಹೊರ ಜಗತ್ತಿಗೆ ಗೊತ್ತಾಗಿದ್ದು, ತನಿಖೆ ಆರಂಭವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಟಿಸಿಎಸ್ ಈಗ ಟಾಟಾ ಕನ್ವರ್ಷನ್ ಸರ್ವಿಸ್ ಎಂದೇ ಜನಪ್ರಿಯವಾಗಿದೆ.
ಎನ್‌ಜಿಒ ಮುಖ್ಯಸ್ಥನಿಂದಲೂ ಮತಾಂತರದ ಆರೋಪ
ಮಹಾರಾಷ್ಟ್ರದ ನಾಸಿಕ್‌ನ ಟಿಸಿಎಸ್ ಕಂಪನಿಯಲ್ಲಿನ ಮತಾಂತರ ಜಾಲ ಬಯಲಾಗುತ್ತಿದ್ದಂತೆ ಅಂತಹುದೇ ಮತ್ತೊಂದು ಪ್ರಕರಣ ಬಯಲಾಗಿದೆ. ಧಾರ್ಮಿಕ ಮತಾಂತರ, ಕಿರುಕುಳ ಮತ್ತು ಮಹಿಳೆಯರನ್ನು ಇಸ್ಲಾಮಿಕ್ ಉಡುಪು ಧರಿಸುವಂತೆ ಒತ್ತಾಯಿಸುವುದು ಸೇರಿ ಹಲವು ಆರೋಪಗಳ ಮೇಲೆ ನಾಗ್ಪುರ ಮೂಲದ ಎನ್‌ಜಿಒ ಮುಖ್ಯಸ್ಥನನ್ನು ಬಂಧಿಸಲಾಗಿದೆ. ಆರೋಪಿ ಫಾಜಿಲ್ ಖಾಜಿ, ಯೂನಿವರ್ಸಲ್ ಮಲ್ಟಿಪರ್ಪಸ್ ಸೊಸೈಟಿ ಎಂಬ ಎನ್‌ಜಿಒಗೆ ಸೇರಿದ ಮಹಿಳೆಯರು ನಿರ್ದಿಷ್ಟ ಉಡುಪುಗಳನ್ನು ಧರಿಸುವುದು ಮತ್ತು ಕೆಲವು ಪದ್ಧತಿಗಳನ್ನು ಅನುಸರಿಸುವ ಇಸ್ಲಾಮಿಕ್ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.

ಬಿಂದಿ, ಸಿಂದೂರಕ್ಕೆ ಖೋಕ್; ಹಿಜಾಬ್‌ಗೆ ಅನುಮತಿ
ಪ್ರಸಿದ್ಧ ಕನ್ನಡಕ ತಯಾರಿಕ ಸಂಸ್ಥೆ ಲೆನ್ಸ್‌ಕಾರ್ಟ್ ಕೂಡ ಇತ್ತೀಚೆಗೆ ತನ್ನ ಹಿಂದೂ ವಿರೋಧಿ ನಡೆಯ ಮೂಲಕ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಸಂಸ್ಥೆಯು ಉದ್ಯೋಗಿಗಳು ಬಿಂದಿ, ಸಿಂದೂರ ಇಟ್ಟುಕೊಳ್ಳುವಂತಿಲ್ಲ ಎನ್ನುವ ನಿಯಮ ಜಾರಿಗೊಳಿಸಿತ್ತು. ಅದೇ ವೇಳೆ ಹಿಜಾಬ್‌ಗೆ ಅನುಮತಿ ನೀಡಿತ್ತು. ಈ ನಿಯಮ ವಿವಾದವಾಗುತ್ತಿದ್ದಂತೆ ಕಂಪನಿ ಕ್ಷಮೆ ಕೋರಿತ್ತು.
ಪೊಂಗಲ್ ಜಾಹೀರಾತಿನಲ್ಲಿ ಖರ್ಜೂರ
ಈ ವಿವಾದ ತಣ್ಣಗಾಗುವ ಮೊದಲೇ ಪೊಂಗಲ್ (ಸಂಕ್ರಾಂತಿ) ಹಬ್ಬದ ವೇಳೆ ಲೆನ್ಸ್‌ಕಾರ್ಟ್ ನೀಡಿದ ಜಾಹೀರಾತಿನ ಎಡವಟ್ಟು ಗಮನ ಸೆಳೆದಿದೆ. ಪೊಂಗಲ್ ಹಬ್ಬದ ಹಿನ್ನಲೆಯಲ್ಲಿ ಲೆನ್ಸ್‌ಕಾರ್ಟ್ ಬಿಡುಗಡೆ ಮಾಡಿದ ಜಾಹೀರಾತಿನಲ್ಲಿ ಸಾಂಪ್ರದಾಯಿಕ ಆಹಾರದ ಜತೆಗೆ ಖರ್ಜೂರವನ್ನು ಬಳಸಿದ್ದು ವಿಡಿಯೊದಲ್ಲಿ ಕಂಡುಬಂದಿದೆ. ಸಾಮಾನ್ಯವಾಗಿವಾಗಿ ಪೊಂಗಲ್ ಆಚರಣೆಯ ಸಂದರ್ಭದಲ್ಲಿ ಅಕ್ಕಿ, ಬೆಲ್ಲದಂತಹ ಆಹಾರ ಪದಾರ್ಥಗಳನ್ನು ಬಳಸಲಾಗುತ್ತದೆ. ಆದರೆ ಲೆನ್ಸ್‌ಕಾರ್ಟ್‌ನ ಜಾಹೀರಾತಿನಲ್ಲಿ ಬಾಳೆ ಎಲೆಯಲ್ಲಿ ಖರ್ಜೂರ ಇಡಲಾಗಿತ್ತು. ಸಾಂಪ್ರದಾಯಿಕ ಆಹಾರದ ಬದಲಿಗೆ ಮುಸ್ಲಿಮರು ಹೆಚ್ಚಾಗಿ ಬಳಸುವ ಖರ್ಜೂರವನ್ನು ತೋರಿಸಿದ್ದು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.
ಏರ್ ಇಂಡಿಯಾದಿಂದಲೂ ಎಡವಟ್ಟು
ಭಾರತದ ಜನಪ್ರಿಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಕೂಡ ಹಿಂದೂ ವಿರೋಧಿ ನಿಯಮ ಜಾರಿಗೊಳಿಸಿ ಎಡವಟ್ಟು ಮಾಡಿಕೊಂಡಿದೆ. ಏರ್ ಇಂಡಿಯಾ ಕ್ಯಾಬಿನ್ ತನ್ನ ಸಿಬ್ಬಂದಿಗೆ ಹೊರಡಿಸಿರುವ ರೂಲ್ಸ್ ಚರ್ಚೆಗೆ ಕಾರಣವಾಗಿದೆ. ಏರ್ ಇಂಡಿಯಾ ಕ್ಯಾಬಿನ್ ನಿಯಮದ ಹಲವು ಸ್ಕ್ರೀನ್‌ಶಾಟ್‌ಗಳು ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿವೆ. ಅದರಲ್ಲಿ ಬಿಂದಿ, ಸಿಂದೂರ್, ತಿಲಕ ಮತ್ತು ಕಲಾವಾ (ಧಾರ್ಮಿಕ ದಾರ) ಮುಂತಾದ ವಸ್ತುವನ್ನು ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಅನುಮತಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿರುವುದು ಕಂಡು ಬಂದಿದೆ. ಸಂಸ್ಥೆಯ ಪೋಸ್ಟ್‌ನಲ್ಲಿ ಹಿಂದೂಯೇತರರ ಧಾರ್ಮಿಕ ಉಡುಗೆ ಅಥವಾ ಗುರುತುಗಳನ್ನು ಉಲ್ಲೇಖಿಸಿಲ್ಲ. ಮುಸ್ಲಿಂ ಮಹಿಳಾ ಸಿಬ್ಬಂದಿಗೆ ಹಿಜಾಬ್ ಅಥವಾ ಸಿಖ್ ಪುರುಷನಿಗೆ ಪೇಟ ಧರಿಸಲು ಅವಕಾಶವಿದ್ದರೆ ನಮಗೂ ಬಿಂದಿ ತಿಲಕ ಧರಿಸ ಬಹುದಲ್ಲವೇ? ಎಂದು ಅನೇಕರು ಪ್ರಶ್ನಿಸಿದ್ದಾರೆ.
ನಿದಾ ಖಾನ್ ಇರುವ ಸ್ಥಳದ ಕುರಿತು ಪೊಲೀಸರಿಗೆ ಪತಿಯಿಂದಲೇ ಮಾಹಿತಿ!
ಅಮರಾವತಿಯಲ್ಲಿ ಯುವಕನಿಂದ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ
ಮಹಾರಾಷ್ಟ್ರದ ಅಮರಾವತಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಮುಸ್ಲಿಂ ಯುವಕನೊಬ್ಬ ಕನಿಷ್ಠ 180 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೊಗಳನ್ನು ರೆಕಾರ್ಡ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪರತ್ವಾಡ ನಗರದ ನಿವಾಸಿ ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್, ಹುಡುಗಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿ, ಮುಂಬೈ ಮತ್ತು ಪುಣೆಗೆ ಕರೆದೊಯ್ದು ಅವರ ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಕಾಶ್ ರಾಜ್ ʼರಾಮಾಯಣʼ ಮೂಲಕ ಮತ್ತೊಂದು ವಿವಾದ
ಸದಾ ಸನಾತನ ಧರ್ಮದ ವಿರುದ್ಧ ನಾಲಗೆ ಹರಿಯಬಿಡುವ ಬಹುಭಾಷಾ ನಟ ಪ್ರಕಾಶ್ ರಾಜ್ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಹಿಂದೂ ಧರ್ಮದ ಪವಿತ್ರ ಗ್ರಂಥ ʼರಾಮಾಯಣʼದ ಕಥೆಯನ್ನು ತಿರುಚಿ ಹೇಳುವ ಮೂಲಕ ಅಲ್ಪ ಸಂಖ್ಯಾತರ ಓಲೈಕೆಗೆ ಮುಂದಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ʼʼರಾಮ, ಲಕ್ಷ್ಮಣ ಹಾಗೂ ಸೀತೆ ದಕ್ಷಿಣ ಭಾರತಕ್ಕೆ ಬರುತ್ತಾರೆ. ಬಂದಾಗ ಲಕ್ಷ್ಮಣನಿಗೆ ಹಸಿವಾಗಿರುತ್ತದೆ. ಅಲ್ಲಿ ಹಣ್ಣಿನ ತೋಟ ಒಂದಿರುತ್ತದೆ. ಹೋಗಿ ಹಣ್ಣನ್ನು ತಿನ್ನೋಣ ಎಂದು ಲಕ್ಷ್ಮಣ ಹೇಳುತ್ತಾನೆ. ಎಲ್ಲರೂ ಹಣ್ಣು ತಿನ್ನುತ್ತಾರೆ. ಅಲ್ಲಿಗೆ ಬರುವ ಶೂರ್ಪನಖಿ, ಅಣ್ಣ ರಾವಣ ಯಾರೋ ಹಣ್ಣನ್ನು ತಿನ್ನುತ್ತಿದ್ದಾರೆ ಎನ್ನುತ್ತಾಳೆ. ಆಗ ರಾವಣ, ಅವರಿಗೆ ಹಸಿವಾಗಿದೆ ತಿನ್ನಲಿ ಎನ್ನುತ್ತಾನೆ. ಆ ಬಳಿಕ ರಾವಣ, ರಾಮನಲ್ಲಿ ಹಣ ಕೇಳುತ್ತಾನೆ. ರಾಮ ಇಲ್ಲ ಎನ್ನುತ್ತಾನೆ. 20 ಪರ್ಸೆಂಟ್ ಡಿಸ್ಕೌಂಟ್ ಕೊಡ್ತೀನಿ ಎಂದು ರಾವಣ ಹೇಳುತ್ತಾನೆ. ಹಣವೇ ಇಲ್ಲ ಎಂದ ಮೇಲೆ ಡಿಸ್ಕೌಂಟ್ ಕೊಟ್ಟು ಏನು ಪ್ರಯೋಜನ? ಅದೇ ರೀತಿ, ಹಿಂದಿ ಹೇರಿಕೆ ಮಾಡಬೇಡಿ. ಇಲ್ಲಿ ಬಂದು ನೀವು ಮಲಯಾಳಂ ಕಲಿಯಿರಿ. ನಾವು ಬೀಫ್ ಫೆಸ್ಟ್ ಮಾಡುತ್ತೇವೆʼʼ ಎಂದು ಹೇಳಿದ್ದರು. ಅವರ ಈ ಹೇಳಿಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಕೃಷ್ಣನ ಎದುರು ಚಿಕನ್
ವಿಷು ಹಬ್ಬದ (ಸೌರಮಾನ ಯುಗಾದಿ) ಪ್ರಯುಕ್ತ ಕೇರಳದ ಚೆರ್ತಲಾದಲ್ಲಿರುವ 'ಮೆಹರ್ ಮಂಡಿ ಆ್ಯಂಡ್ ಗ್ರಿಲ್ಸ್' ಎಂಬ ರೆಸ್ಟೋರೆಂಟ್ ಹಿಂದೂಗಳ ಆರಾಧ್ಯ ದೈವ ಶ್ರೀ ಕೃಷ್ಣನ ಚಿತ್ರದ ಪಕ್ಕದಲ್ಲಿ ಚಿಕನ್ ಖಾದ್ಯ ತೋರಿಸುವ ಜಾಹೀರಾತು ಪ್ರಕಟಿಸುವ ಮೂಲಕ ಮೂಲಕ ಆಕ್ರೋಶಕ್ಕೆ ಗುರಿಯಾಗಿದೆ. ಹೋಟೆಲ್ ಮಾಲಕರು ಹಿಂದೂ ನಂಬಿಕೆಗಳು ಮತ್ತು ದೇವತೆಗಳನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಹಲವರು ದೂರಿದ್ದಾರೆ.
ಟಿಸಿಎಸ್ ಬಳಿಕ ಬೆಳಕಿಗೆ ಬಂತು ಮತ್ತೊಂದು ಕಂಪನಿಯ ಮತಾಂತರ ದಂಧೆ; NGO ಮುಖ್ಯಸ್ಥನ ಬಂಧನ!
ಒಟ್ಟಿನಲ್ಲಿ ಸದ್ಯ ದೇಶದಲ್ಲಿ ನಡೆಯುತ್ತಿರುವ ಹಿಂದೂ ಧರ್ಮದ ಮೇಲಿನ ವ್ಯವಸ್ಥಿತ ದಾಳಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಿಯಮ ಜಾರಿಗೊಳಿಸುವುದು ತಪ್ಪಲ್ಲ, ಆದರೆ ಎಲ್ಲರಿಗೂ ಇದು ಅನ್ವಯವಾಗಬೇಕು. ಕೇವಲ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಸರಿಯಲ್ಲ ಎಂದು ಹಲವರು ಹೇಳಿದ್ದಾರೆ. ಶತಮಾನಗಳಿಂದ ನಮ್ಮ ದೇಶ ಧಾರ್ಮಿಕ ಸಹಿಷ್ಣುತೆ ಪಾಲಿಸಿಕೊಂಡು ಬಂದಿದೆ. ಆದರೆ ಇಂತಹ ಘಟನೆಗಳು ಸಮಾಜದ ಸ್ವಾಸ್ಥವನ್ನೇ ಕೆಡಿಸುತ್ತವೆ ಎನ್ನುವುದು ಹಲವರು ಹೇಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.