ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿಶಾ ಸಾಲಿಯಾನ್ ಸಾವಿನ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ ಸಿಬಿಐ: ಆದಿತ್ಯ ಠಾಕ್ರೆ, ಡಿನೋ ಮೋರಿಯಾ ವಿರುದ್ಧ ಕೇಸ್

Disha Salian Death Case: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್‌ರ ಅವರ ಮ್ಯಾನೇಜರ್‌ ಆಗಿದ್ದ ದಿಶಾ ಸಾಲಿಯನ್ ಅವರ ಸಾವಿನ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮಗ ಆದಿತ್ಯ ಠಾಕ್ರೆ ಮತ್ತು ಇತರರು ಈ ಅಪರಾಧದ ಸಂಚು ರೂಪಿಸುವಲ್ಲಿ ಹಾಗೂ ಅದನ್ನು ಮುಚ್ಚಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ದಿಶಾ ಅವರ ತಂದೆ, ದೂರುದಾರ ಸತೀಶ್ ಸಾಲಿಯನ್ ಆರೋಪಿಸಿದ್ದಾರೆ.

ದಿಶಾ ಸಾಲಿಯಾನ್ ಸಾವಿನ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ ಸಿಬಿಐ

ಮೃತ ದಿಶಾ ಸಾಲಿಯಾನ್ (ಸಂಗ್ರಹ ಚಿತ್ರ) -

Priyanka P
Priyanka P Sep 14, 2026 7:07 PM

ಮುಂಬೈ, ಸೆ. 14: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್‌ ಅವರ ಮ್ಯಾನೇಜರ್‌ ಆಗಿದ್ದ ದಿಶಾ ಸಾಲಿಯನ್ ಅವರ ಸಾವಿನ ಪ್ರಕರಣದಲ್ಲಿ (Disha Salian Death Case) ಸಿಬಿಐ ಎಫ್‌ಐಆರ್ ದಾಖಲಿಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ (Bombay High Court), ಕೇಂದ್ರೀಯ ತನಿಖಾ ದಳಕ್ಕೆ (CBI) ಆದೇಶಿಸಿದ ಹನ್ನೆರಡು ದಿನಗಳ ನಂತರ, ಪ್ರಕರಣದಲ್ಲಿ ಮೊದಲ ಮಾಹಿತಿ ವರದಿಯನ್ನು (FIR) ದಾಖಲಿಸಿರುವುದಾಗಿ ಕೇಂದ್ರ ತನಿಖಾ ಸಂಸ್ಥೆಯು ತಿಳಿಸಿದೆ.

ದಿಶಾ ಸಾಲಿಯಾನ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಆದೇಶದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಆರೋಪಿಗಳು ಮತ್ತು ಪ್ರಕರಣದ ಸೆಕ್ಷನ್‌ಗಳು ಸೇರಿ ಎಫ್‌ಐಆರ್ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಅಧಿಕಾರಿ ನಿರಾಕರಿಸಿದರು.

ತನಿಖೆಯ ಮೊದಲ ಹೆಜ್ಜೆಯಾಗಿ ಸಿಬಿಐ, ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ತನ್ನ ಮುಂಬೈ ಕಚೇರಿಯಲ್ಲಿ ದಿಶಾ ಅವರ ತಂದೆ ಸತೀಶ್ ಸಾಲಿಯಾನ್ ಅವರ ಹೇಳಿಕೆಯನ್ನು ಪಡೆದುಕೊಂಡ ನಂತರ ಎಫ್ಐಆರ್ ದಾಖಲಿಸಿದೆ.

ಬದುಕು ಮುಗಿಸಿದ ನಟಿ ಸಂಚಿತಾ ಉಗಾಲೆ; ಸುಶಾಂತ್ ಸಿಂಗ್ ನೆನಪು ಈಗ ಏಕೆ?

ಇದು ಸಿಬಿಐ ಎಫ್‌ಐಆರ್‌ನ ಭಾಗವಾಗಲಿದೆ ಎಂದು ಅವರ ವಕೀಲರಾದ ಅಡ್ವೊಕೇಟ್ ನಿಲೇಶ್ ಓಜಾ ಪ್ರತಿಪಾದಿಸಿದ್ದಾರೆ. ದಿಶಾ ಸಾಲಿಯಾನ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಇದನ್ನು ಮುಚ್ಚಿಹಾಕಲು ಅಂದಿನ ಕೆಲವು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ಓಜಾ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಹಲವು ಉನ್ನತ ವ್ಯಕ್ತಿಗಳು ಮತ್ತು ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.

ನ್ಯಾಯಾಲಯದ ಆದೇಶದಂತೆ ಸತೀಶ್ ಸಾಲಿಯಾನ್ ಅವರ ಹೇಳಿಕೆಯನ್ನು ಆಧರಿಸಿ ಸಿಬಿಐ ಎಫ್‌ಐಆರ್ ದಾಖಲಿಸಲಾಗಿದೆ. 24 ವರ್ಷದ ದಿಶಾ 2020ರ ಜೂನ್ 9ರಂದು ಮಾಲಾಡ್‌ನ 12ನೇ ಮಹಡಿಯ ಫ್ಲಾಟ್‌ನಿಂದ ಬಿದ್ದು ಮೃತಪಟ್ಟರು. ಮಾಲ್ವಾಣಿ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ನಂತರ, ಇದು ಆತ್ಮಹತ್ಯೆ ಮತ್ತು ಇದರಲ್ಲಿ ಯಾವುದೇ ಸಂಚು ಅಥವಾ ಅಪರಾಧ ಚಟುವಟಿಕೆ ನಡೆದ ಪುರಾವೆಗಳಿಲ್ಲ ಎಂದು ತೀರ್ಮಾನಿಸಿದ್ದರು. ಅಷ್ಟೇ ಅಲ್ಲದೆ, 2023ರ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರವು ರಚಿಸಿದ್ದ ವಿಶೇಷ ತನಿಖಾ ತಂಡವು (SIT) ಸಹ ದಿಶಾ ಅವರ ಸಾವಿನಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಪತ್ತೆಹಚ್ಚಿತ್ತು.

ಆರಂಭದಲ್ಲಿ ದಿಶಾ ಸಾಲಿಯಾನ್ ಅವರ ಸಾವಿನಲ್ಲಿ ಯಾವುದೇ ಸಂಚು ಇಲ್ಲ ಎಂದಿದ್ದ ಅವರ ಪೋಷಕರು, ಕಳೆದ ವರ್ಷ ತಮ್ಮ ಮಗಳು ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದಾಳೆ ಎಂದು ಆರೋಪಿಸಿ ಸ್ವತಂತ್ರ ತನಿಖೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ತೆಹಲ್ಕಾ ಪತ್ರಿಕೆಯ ಮಾಜಿ ಮುಖ್ಯ ಸಂಪಾದಕ ತರುಣ್ ತೇಜಪಾಲ್ ನ್ಯಾಯಾಲಯಕ್ಕೆ ಶರಣು

ಅವರ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್, ಎಡಿಆರ್ ತನಿಖೆ ಅಸಮರ್ಪಕವಾಗಿದೆ ಎಂದು ಹೇಳಿದ್ದು, ತನಿಖಾ ವರದಿಯಲ್ಲಿ ಕೆಲವು ವ್ಯತ್ಯಾಸಗಳನ್ನು ಗಮನಿಸಿದ ನಂತರ ಸೆಪ್ಟೆಂಬರ್ 2ರಂದು ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿತು.

ಇನ್ನು ಸಿಬಿಐ ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅವರ ಮಗ ಆದಿತ್ಯ ಠಾಕ್ರೆ ಮತ್ತು ಇತರರು ಈ ಅಪರಾಧದ ಸಂಚು ಹಾಗೂ ಅದನ್ನು ಮುಚ್ಚಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ದೂರುದಾರ ಸತೀಶ್ ಸಾಲಿಯಾನ್ ಆರೋಪಿಸಿದ್ದಾರೆ.