ಜೆನ್ ಝೀಗಳು ಹಿಂದುತ್ವದೊಂದಿಗೆ ಗುರುತಿಸಿಕೊಳ್ಳುತ್ತಾರೆಯೇ?: ಬಿಜೆಪಿ ಸಮಿತಿ ಹೇಳಿದ್ದೇನು?
ಜೆನ್ ಝೀಗಳ ಬಗ್ಗೆ ಅರಿಯಲು ಭಾರತೀಯ ಜನತಾ ಪಕ್ಷವು ಕೇಂದ್ರ ಯುವ ವ್ಯವಹಾರಗಳ ಸಚಿವ ಮನ್ಸುಖ್ ಮಾಂಡವಿಯಾ ಅವರ ನೇತೃತ್ವದ ತಂಡವನ್ನು ಆರು ಕಾರ್ಯ ಗುಂಪುಗಳಾಗಿ ವಿಂಗಡಿಸಲಾಗಿದ್ದು, ಇದು ವರದಿಯೊಂದನ್ನು ಸಿದ್ಧಪಡಿಸಲು ಕಳೆದ ಕೆಲವು ತಿಂಗಳುಗಳಲ್ಲಿ ಮೂರು ಬಾರಿ ಸಭೆ ಸೇರಿವೆ.
ಸಂಗ್ರಹ ಚಿತ್ರ -
ನವದೆಹಲಿ: ಜೆನ್ ಝೀಗಳು (Gen Z) ಹಿಂದುತ್ವದೊಂದಿಗೆ (Hindutva) ಗುರುತಿಸಿಕೊಳ್ಳುತ್ತಾರೆಯೇ ? ಅವರೊಂದಿಗೆ ಸಂವಹನ ನಡೆಸಲು ಯಾವ ರೀತಿಯ ಭಾಷೆ ಬಳಸಬೇಕು?, ಜೆನ್ ಝೀ ಪದ ಬಳಕೆ ಸೂಕ್ತವೇ ? ಎಂಬುದು ಸೇರಿದಂತೆ ಜೆನ್ ಝೀಗಳ ಬಗ್ಗೆ ಅರಿಯಲು ಭಾರತೀಯ ಜನತಾ ಪಕ್ಷ (Bharatiya Janata Party) ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೇಂದ್ರ ಯುವ ವ್ಯವಹಾರಗಳ ಸಚಿವ ಮನ್ಸುಖ್ ಮಾಂಡವಿಯಾ (minister Mansukh Mandaviya) ಅವರ ನೇತೃತ್ವದ ತಂಡವನ್ನು ಆರು ಕಾರ್ಯ ಗುಂಪುಗಳಾಗಿ ವಿಂಗಡಿಸಲಾಗಿದ್ದು, ಇದು ವರದಿಯೊಂದನ್ನು ಸಿದ್ಧಪಡಿಸಲು ಕಳೆದ ಕೆಲವು ತಿಂಗಳುಗಳಲ್ಲಿ ಮೂರು ಬಾರಿ ಸಭೆ ನಡೆಸಿದೆ.
ಜೆನ್ ಝೀಗಳೊಂದಿಗೆ ಸಂವಹನ ನಡೆಸಲು ತಮ್ಮ ಕಾರ್ಯತಂತ್ರ ಹಾಗೂ ಸಂದೇಶಗಳನ್ನು ಪರಿಷ್ಕರಿಸುವ ಉದ್ದೇಶದಿಂದ ಬಿಜೆಪಿ 80 ಸದಸ್ಯರ ಆಂತರಿಕ ಕಾರ್ಯ ತಂಡವನ್ನು ರಚಿಸಿದೆ. ಇದು ಪ್ರಸ್ತುತ ನಡೆಯುತ್ತಿರುವ ಬೀದಿ ಪ್ರತಿಭಟನೆಗಳನ್ನು ಎದುರಿಸಲು ಪಕ್ಷ ಕೈಗೊಂಡಿರುವ ಕ್ರಮಗಳಲ್ಲಿ ಒಂದು. ಈ ತಂಡವು ರೂಪಿಸಿರುವ ಯೋಜನೆಗಳನ್ನು ಈಗಾಗಲೇ ಅಳವಡಿಸಿಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಮೇಲೆ ಬಸ್ ಪಲ್ಟಿ; 8 ಮಂದಿ ಸಾವು
ಈ ಸಮಿತಿ ಸಭೆಯಲ್ಲಿ ಗೋರಖ್ಪುರ ಸಂಸದ ರವಿ ಕಿಶನ್, ನವದೆಹಲಿ ಸಂಸದೆ ಬನ್ಸೂರಿ ಸ್ವರಾಜ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ವಡೋದರಾ ಸಂಸದ ಹೇಮಾಂಗ್ ಜೋಶಿ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ ಅವರು ಭಾಗವಹಿಸಿದ್ದರು.
ಕಳೆದ ಜುಲೈ ತಿಂಗಳಲ್ಲಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ವ್ಯಾಪ್ತಿ ಮತ್ತು ತೀವ್ರತೆಯನ್ನು ಅಂದಾಜಿಸುವಲ್ಲಿ ಪಕ್ಷವು ತಪ್ಪು ಲೆಕ್ಕಾಚಾರ ಹಾಕಿದ್ದೇ ಈ ಹೊಸ ಬೆಳವಣಿಗೆಗೆ ಕಾರಣ. ಆ ಪ್ರತಿಭಟನೆಗಳ ಪರಿಣಾಮವಾಗಿ ಆಗಿನ ಕೇಂದ್ರ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಪಕ್ಷದ ಅಧ್ಯಕ್ಷರಾದ ನಿತಿನ್ ನಬಿನ್ ಅವರು ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಹಲವು ಸಲಹೆಗಳನ್ನು ಸ್ವೀಕರಿಸಲಾಯಿತು. ಅವುಗಳಲ್ಲಿ ಕೆಲವನ್ನು ಈಗ ಬಿಜೆಪಿ ತನ್ನ ಕಾರ್ಯತಂತ್ರದ ಭಾಗವಾಗಿ ಜಾರಿಗೆ ತಂದಿದೆ. ಇದರಲ್ಲಿ ಮುಖ್ಯವಾಗಿ ವಿರೋಧ ಪಕ್ಷಗಳ ಪ್ರತಿಭಟನೆಗಳನ್ನು ಎದುರಿಸಲು ಪಕ್ಷದ ಕಾರ್ಯತಂತ್ರವನ್ನು ರೂಪಿಸುವುದು ಒಂದು ಉದಾಹರಣೆಯಾಗಿದೆ.
ಜೆನ್ ಝೀ ಅನ್ನು ಸಂಬೋಧಿಸಲು 'ಯುವ' ಅಥವಾ 'ಯೂತ್' ನಂತಹ ಭಾರತೀಯ ಶಬ್ದಗಳನ್ನು ಬಳಸಲು ಮತ್ತು ಹಿಂದುತ್ವದ ಕುರಿತು ಯುವಜನರ ಅಭಿಪ್ರಾಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಬಹುತೇಕರು ಹಿಂದೂಗಳೇ ಆಗಿರುವುದರಿಂದ ಅದರ ಬಗ್ಗೆ ವಿಶೇಷವಾಗಿ ಒತ್ತು ನೀಡುವ ಬದಲು ಆಧ್ಯಾತ್ಮಿಕ ಶಕ್ತಿ ಮತ್ತು ಸಂಸ್ಕಾರಗಳ ಮೇಲೆ ಗಮನಹರಿಸುವುದು ಉತ್ತಮ ಎಂದು ರವಿ ಕಿಶನ್ ಸಭೆಯಲ್ಲಿ ತಿಳಿಸಿದರು. ಈ ಸಭೆಯ ಕುರಿತು ಮಂಡವೀಯ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.