ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ತುರ್ತು ಸೇವೆಗಳ ವೈಫಲ್ಯ: ಆಂಬುಲೆನ್ಸ್ ಬಾರದೇ ರಸ್ತೆ ಮಧ್ಯೆ ನರಳಾಡಿದ ಗಾಯಾಳು!

Viral News: ಬೆಂಗಳೂರಿನಲ್ಲಿ ನಡೆದ ಘಟನೆಯೂ ಸಂಕಷ್ಟದಲ್ಲಿರುವವರಿಗೆ ತುರ್ತು ಸೇವೆಗಳು ಎಷ್ಟು ತ್ವರಿತವಾಗಿ ಸ್ಪಂದಿಸುತ್ತವೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಘಟನೆಯನ್ನು ಕಣ್ಣಾರೆ ಕಂಡ ನಿವಾಸಿಯೊಬ್ಬರು ಅಪಘಾತದ ಸ್ಥಳದಲ್ಲಿ ಜನಜಂಗುಳಿ ಸೇರಿದ್ದರೂ, ಗಾಯಗೊಂಡ ಚಾಲಕ ಸಹಾಯಕ್ಕಾಗಿ ಕಾಯುತ್ತಲೇ ಉಳಿಯಬೇಕಾಯಿತು ಎಂದು ಬೇಸರ ಹೊರಹಾಕಿದ್ದಾರೆ.

ಜೀವಕ್ಕೆ ಬೆಲೆಯಿಲ್ಲವೇ? ಆಂಬುಲೆನ್ಸ್ ಬಾರದೇ ಪರದಾಟ ನಡೆಸಿದ ಗಾಯಾಳು

ಇಂಟರ್ ನೆಟ್ ಚಿತ್ರ -

Profile
Pushpa Kumari Oct 17, 2026 3:34 PM

ಬೆಂಗಳೂರು,ಅ.17: ಸಿಲಿಕಾನ್ ಸಿಟಿಯಲ್ಲಿ ನಡೆದ ಅಪಘಾತವೊಂದರಲ್ಲಿ ಗಾಯಳುವೊಬ್ಬರಿಗೆ ತುರ್ತು ಸೇವೆ ಸಿಗದೆ ಪರದಾಡಿದ ಘಟನೆಯೊಂದು ನಡೆದಿದೆ.ಪೊಲೀಸ್ ಅಥವಾ ಆಂಬುಲೆನ್ಸ್ ಬಾರದೇ ಕೊನೆಗೆ ಸ್ಥಳದಲ್ಲಿದ್ದವರೇ ಆಸ್ವತ್ರೆಗೆ ಕರೆದೊಯ್ದಿದ್ದಾರೆ. ತುರ್ತು ಸೇವೆಗಳಿಗೆ ಕರೆ ಮಾಡಿದಾಗ, 'ಪ್ರಕರಣ ಮುಕ್ತಾಯಗೊಂಡಿದೆ' ಎಂಬ ಸಂದೇಶ ಬಂತು ಎಂದು ಅಲ್ಲಿನ ಸ್ಥಳೀಯರೊಬ್ಬರು (Viral News) ದೂರಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಘಟನೆಯೂ ಸಂಕಷ್ಟದಲ್ಲಿರುವವರಿಗೆ ತುರ್ತು ಸೇವೆಗಳು ಎಷ್ಟು ತ್ವರಿತವಾಗಿ ಸ್ಪಂದಿಸುತ್ತವೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಘಟನೆಯನ್ನು ಕಣ್ಣಾರೆ ಕಂಡ ನಿವಾಸಿಯೊಬ್ಬರು ಅಪಘಾತದ ಸ್ಥಳದಲ್ಲಿ ಜನಜಂಗುಳಿ ಸೇರಿದ್ದರೂ, ಗಾಯಗೊಂಡ ಚಾಲಕ ಸಹಾಯಕ್ಕಾಗಿ ಕಾಯುತ್ತಲೇ ಉಳಿಯಬೇಕಾಯಿತು ಎಂದು ಬೇಸರ ಹೊರಹಾಕಿದ್ದಾರೆ.

Viral Video: ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ; ಜನಪ್ರಿಯವಾಗುತ್ತಿದೆ ದೇಶದ ಹೆಲ್ತ್‌ ಟೂರಿಸಂ

ಬೆಂಗಳೂರಿನ ತಡರಾತ್ರಿ 2 ಗಂಟೆಯ ಸುಮಾರಿಗೆ ಅಪಘಾತವೊಂದು ಸಂಭವಿಸಿತ್ತು. ದೊಡ್ಡ ಶಬ್ದ ಕೇಳಿ ಬಾಲ್ಕನಿಗೆ ಹೊರಗೆ ಬಂದು ನಿವಾಸಿಯೊಬ್ಬರು ವೀಕ್ಷಿಸಿದಾಗ ಎರಡು ಕಾರುಗಳು ಅಪಘಾತಕ್ಕೀಡಾಗಿರುವುದು ಕಂಡು ಬಂದಿದೆ. ಸುಮಾರು 15 ನಿಮಿಷ ಕಾದರೂ ಯಾವುದೇ ಪೊಲೀಸ್ ವಾಹನ ಅಥವಾ ಆಂಬುಲೆನ್ಸ್ ಸ್ಥಳಕ್ಕೆ ಬಂದಿರಲಿಲ್ಲ. ಅಲ್ಲಿ ಜನ ಗುಂಪು ಸೇರಿದ್ದರೂ ಯಾರು ಸಹಾಯಕ್ಕಾಗಿ ಮುಂದೆ ಬಂದಿರಲಿಲ್ಲ.

ಸಾಕಷ್ಟು ಸಮಯ ಕಳೆದರೂ ಸಹಾಯ ಸಿಗಲಿಲ್ಲ. "ಸಮಯ ಕಳೆಯುತ್ತಲೇ ಇತ್ತು. 25 ನಿಮಿಷಗಳಾದವು, ಯಾರೂ ಕದಲಲಿಲ್ಲ, ಜನರು ಸುಮ್ಮನೆ ನಿಂತು ನೋಡುತ್ತಿದ್ದರು. ಅಂತಿಮವಾಗಿ, ಆ ವ್ಯಕ್ತಿ 30 ನಿಮಿಷಗಳ ಕಾಲ ನರಳಿದ ನಂತರ, ಅವರನ್ನು ಟ್ಯಾಕ್ಸಿಯಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದೊಯ್ಯ ಲಾಯಿತು,ಎಂದು ಅವರು ಹೇಳಿದರು.

ನಿವಾಸಿಗಳು ತುರ್ತು ಸಂಖ್ಯೆಗೆ ಕರೆ ಮಾಡಿದಾಗ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ ಎಂದು ತಿಳಿಸಲಾಯಿತು.ಆದರೆ 30 ನಿಮಿಷ ಕಳೆದರೂ ಯಾರೂ ಬಾರದ ಕಾರಣ, ಕೊನೆಗೆ ಗಾಯಾಳುವನ್ನು ಕ್ಯಾಬ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.​ಈ ಘಟನೆಯ ಕುರಿತು ನಿವಾಸಿ ಪೋಸ್ಟ್ ನಲ್ಲಿ ಬರೆದು ಕೊಂಡಿದ್ದು, ದೇಶದಲ್ಲಿ ಮಾನವ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಬೆಂಗಳೂರಿನಂತಹ ನಗರಗಳಲ್ಲಿ ಅಪರಿಚಿತರಿಂದ ಸಹಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ..