ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಚಾಲಕ; 10 ಕೋಟಿ ರೂ. ಬಂಪರ್ ಲಾಟರಿಯಿಂದ ಬದುಕೇ ಚೇಂಜ್‌

Lottery Winner: ರಾತ್ರೋರಾತ್ರಿ ಬಂಪರ್ ಲಾಟರಿ ಹೊಡೆದ ಕಥೆಯಿದು. ದಿನನಿತ್ಯ ಚಾಲಕರಾಗಿ ದುಡಿಯುತ್ತಿದ್ದ ವ್ಯಕ್ತಿಯೊಬ್ಬರು 10 ಕೋಟಿ ರೂ. ಬಂಪರ್ ಲಾಟರಿ ಗೆದ್ದು ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಈ ಅಚ್ಚರಿಯ ಗೆಲುವು ಅವರ ಜೀವನದಲ್ಲಿ ಹೊಸ ಅಧ್ಯಾಯವನ್ನು ತೆರೆದಿದ್ದು, ಎಲ್ಲರ ಗಮನ ಸೆಳೆದಿದೆ. ಕುಟುಂಬಸ್ಥರು, ಗ್ರಾಮಸ್ಥರಲ್ಲಿ ಸಂಭ್ರಮ ಮನೆಮಾಡಿದೆ.

ಚಾಲಕನಿಗೆ ಬಂಪರ್ ಲಾಟರಿ ಜಾಕ್‌ಪಾಟ್

ಸಾಂದರ್ಭಿಕ ಚಿತ್ರ -

Priyanka P
Priyanka P Jan 20, 2026 11:25 AM

ಗುರುಗ್ರಾಮ: ಹರಿಯಾಣದ (Haryana) ಸಿರ್ಸಾ ಜಿಲ್ಲೆಯ ರಾನಿಯಾದ ಮುಹಮ್ಮದ್‌ಪುರಿಯಾ ಗ್ರಾಮದ 35 ವರ್ಷದ ಚಾಲಕನೊಬ್ಬ 10 ಕೋಟಿ ರೂಪಾಯಿ ಲಾಟರಿ ಗೆದ್ದಿದ್ದು (Bumper Lottery) ಗ್ರಾಮಸ್ಥರು ಮತ್ತು ಕುಟುಂಬದಲ್ಲಿ ಸಂಭ್ರಮಾಚರಣೆಗೆ ಕಾರಣವಾಗಿದೆ.

ಅದೃಷ್ಟಶಾಲಿ ವ್ಯಕ್ತಿಯನ್ನು ಪೃಥ್ವಿ ಸಿಂಗ್ ಎಂದು ಗುರುತಿಸಲಾಗಿದೆ. ಚಾಲಕನಾಗಿ ಕೆಲಸ ಮಾಡುವ ಮೂಲಕ ಅವರು ಜೀವನ ಸಾಗಿಸುತ್ತಿದ್ದಾರೆ. ಪೃಥ್ವಿ ಸಿಂಗ್ ಅವರು ಕೆಲವು ದಿನಗಳ ಹಿಂದೆ ದಬ್ವಾಲಿ ಬಳಿಯ ಕಿಲಿಯನ್‌ವಾಲಿಯಲ್ಲಿ ಪಂಜಾಬ್ ಲೋಹ್ರಿ ಮಕರ ಸಂಕ್ರಾಂತಿ 2026 ಬಂಪರ್ ಲಾಟರಿ ಟಿಕೆಟ್ ಖರೀದಿಸಿದ್ದರು. ಇದೀಗ ಅವರು 10 ಕೋಟಿ ರೂ.ಗಳ ಪ್ರಥಮ ಬಹುಮಾನವನ್ನು ಗೆದ್ದಿದ್ದರು.

UAE Lottery: ತಾಯಿ ಬರ್ತ್‌ ಡೇಯಂದೇ ಜಾಕ್‌ಪಾಟ್‌! ಅಬುಧಾಬಿಯಲ್ಲಿ ₹240 ಕೋಟಿ ರೂ. ಲಾಟರಿ ಗೆದ್ದ ಭಾರತದ ಯುವಕ

ಪೃಥ್ವಿಯ ತಂದೆ ದೇವಿಲಾಲ್ ಕೂಡ ಚಾಲಕರಾಗಿ ಕೆಲಸ ಮಾಡುತ್ತಾರೆ. ಅವರ ಕುಟುಂಬದಲ್ಲಿ ಅವರ ಪತ್ನಿ, ಮಗಳು, ಮಗ, ಸಹೋದರ ಮತ್ತು ಮೂವರು ಸಹೋದರಿಯರು ಇದ್ದಾರೆ. ಅವರ ಎಲ್ಲಾ ಸಹೋದರಿಯರು ವಿವಾಹಿತರು.

ಲಾಟರಿ ಗೆದ್ದ ವಿಚಾರ ತಿಳಿದ ಪೃಥ್ವಿ ಆರಂಭದಲ್ಲಿ ದಿಗ್ಭ್ರಮೆಗೊಂಡರಂತೆ. ಇನ್ನೂ ಅವರಿಗೆ ತಾನು ಕೋಟ್ಯಧಿಪತಿಯಾದ ವಿಚಾರವನ್ನ ನಂಬೋಕೆ ಆಗುತ್ತಿಲ್ಲವಂತೆ. ಮಕ್ಕಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾನು ಹಣವನ್ನು ಬಳಸಲು ಬಯಸುತ್ತೇನೆ. ಮೊದಲು ನಾನು ಎರಡು ಬಾರಿ ಲಾಟರಿ ಟಿಕೆಟ್‌ಗಳನ್ನು ಖರೀದಿಸಿದ್ದೆ. ನನ್ನ ಮೂರನೇ ಪ್ರಯತ್ನದಲ್ಲೇ ನಾನು ಅದೃಷ್ಟಶಾಲಿಯಾಗುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ಅವರು ಹೇಳಿದರು.

ಪೃಥ್ವಿಯವರ 6 ವರ್ಷದ ಮಗ ದಕ್ಷ, ಲಾಟರಿ ಹಣದಿಂದ ಐಷಾರಾಮಿ ಕಾರನ್ನು ಖರೀದಿಸುವ ಆಸೆ ಹೊಂದಿದ್ದಾನೆ ಎಂದು ಹೇಳಿದನು. ಶಾಲೆಯಲ್ಲಿ ಪಿಯೋನ್ ಆಗಿ ಕೆಲಸ ಮಾಡುತ್ತಿರುವ ಪೃಥ್ವಿ ಅವರ ಪತ್ನಿ ಸುಮನ್ ರಾಣಿ, ದಿನವಿಡೀ ನೂರಾರು ಜನರು ತಮ್ಮ ಪತಿಗೆ ಅಭಿನಂದನೆ ಸಲ್ಲಿಸಲು ತಮ್ಮ ಮನೆಗೆ ಬರುತ್ತಿದ್ದಾರೆ ಎಂದು ಹೇಳಿದರು. ನಾವು ತುಂಬಾ ಸಂತೋಷವಾಗಿದ್ದೇವೆ. ಈ ಹಣದಿಂದ ನಮ್ಮ ಮಕ್ಕಳ ಕನಸುಗಳನ್ನು ನನಸಾಗಿಸಲು ಬಯಸುತ್ತೇವೆ ಎಂದು ಅವರು ಹೇಳಿದರು.

Lottery Winner: 7.14 ಕೋಟಿ ರೂ.ಗಳ ಲಾಟರಿ ಗೆದ್ದ ಉದ್ಯೋಗಿ; ಕೊನೆಗೆ ಆಗಿದ್ದೇನು?

ಲಾಟರಿ ಟಿಕೆಟ್ ಸ್ಟಾಲ್ ಮಾಲೀಕ ಮದನ್ ಸಿಂಗ್ ಅವರು ಕಿಲಿಯನ್‌ವಾಲಿಯಲ್ಲಿ ಹಲವು ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದ ಜನರು ಅನೇಕ ಬಹುಮಾನಗಳನ್ನು ಗೆದ್ದಿದ್ದಾರೆ. ಈ ಬಾರಿ ಸಿರ್ಸಾದ ಪೃಥ್ವಿ 10 ಕೋಟಿ ರೂಪಾಯಿಗಳ ಪ್ರಥಮ ಬಹುಮಾನವನ್ನು ಗೆದ್ದಿದ್ದಾರೆ ಎಂದು ಅವರು ಹೇಳಿದರು.

ಪೃಥ್ವಿ ಕೆಲವು ದಿನಗಳ ಹಿಂದೆಯಷ್ಟೇ ಲಾಟರಿ ಟಿಕೆಟ್ ಖರೀದಿಸಿದ್ದರು. ಈಗ ಅವರು 10 ಕೋಟಿ ರೂ. ಗೆದ್ದಿದ್ದಾರೆ ಎಂದು ಮುಹಮ್ಮದ್ ಪುರಿಯಾ ಗ್ರಾಮದ ಸರಪಂಚರು ಹೇಳಿದರು. ಇದು ಗ್ರಾಮ ಮತ್ತು ಅವರ ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.