ಮೆಟ್ರೋ ಪ್ಲಾಟ್‌ಫಾರ್ಮ್‌ನಲ್ಲಿ ಮೂತ್ರ ವಿಸರ್ಜಿಸಿದ ವ್ಯಕ್ತಿ; ಕ್ಯಾಮೆರಾದಲ್ಲಿ ಸೆರೆ ಆಯ್ತು ನೀಚ ಕೃತ್ಯ
Man Urinates Near Delhi Metro Platform: ರಾಷ್ಟ್ರ ರಾಜಧಾನಿ ದೆಹಲಿಯ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ ಬಳಿ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಿದ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ನಾಗರಿಕ ಪ್ರಜ್ಞೆ ಕುರಿತ ಚರ್ಚೆಗೆ ಈ ಘಟನೆ ಮತ್ತೆ ಕಿಡಿ ಹಚ್ಚಿದೆ.
ದೆಹಲಿ ಮೆಟ್ರೋ ಪ್ಲಾಟ್‌ಫಾರ್ಮ್‌ನಲ್ಲಿ ಮೂತ್ರ ವಿಸರ್ಜಿಸಿದ ವ್ಯಕ್ತಿ -
ದೆಹಲಿ, ಜ.20: ರಾಷ್ಟ್ರ ರಾಜಧಾನಿ ದೆಹಲಿಯ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ (Delhi Metro Station) ವ್ಯಕ್ತಿಯೊಬ್ಬ ಬಹಿರಂಗವಾಗಿ ಮೂತ್ರ ವಿಸರ್ಜಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗುತ್ತಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಂತಹ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಈ ಘಟನೆಯು ನಾಗರಿಕ ಪ್ರಜ್ಞೆಯ ಕೊರತೆ ಮತ್ತು ಸಾವಿರಾರು ಪ್ರಯಾಣಿಕರು ನಿಯಮಿತವಾಗಿ ಪ್ರಯಾಣಿಸುವ ಪ್ಲಾಟ್‌ಫಾರ್ಮ್‌ನಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ಬೇಜವಾಬ್ದಾರಿಯುತ ವರ್ತನೆಯನ್ನು ತೋರಿಸುತ್ತದೆ.
ವಿಡಿಯೊದಲ್ಲಿ, ಮಧ್ಯವಯಸ್ಕ ವ್ಯಕ್ತಿಯೊಬ್ಬ ಗಾಜಿನ ಕಾರಿಡಾರ್ ಬಳಿ ನಿಂತು ಬಹಿರಂಗವಾಗಿ ಮೂತ್ರ ವಿಸರ್ಜಿಸುತ್ತಿರುವುದನ್ನು ಕಾಣಬಹುದು. ಈ ದೃಶ್ಯವನ್ನು ಮತ್ತೊಬ್ಬ ಪ್ರಯಾಣಿಕ ರೆಕಾರ್ಡ್ ಮಾಡಿದ್ದಾನೆ. ಯಾರೋ ತನ್ನನ್ನು ರೆಕಾರ್ಡ್ ಮಾಡುತ್ತಿರುವುದನ್ನು ಆ ವ್ಯಕ್ತಿ ಗಮನಿಸಿದ ಕ್ಷಣ, ಏನೂ ಆಗೇ ಇಲ್ಲವೆಂಬಂತೆ ಸ್ಥಳದಿಂದ ಓಡಿಹೋದನು.
Viral Video: ಮರವೇರಿ ಹಾಯಾಗಿ ಕುಳಿತ ಹುಲಿ; AI ವಿಡಿಯೊ ಎಂದ ನೆಟ್ಟಿಗರು
ದೆಹಲಿಯಲ್ಲಿ ಅನೇಕ ಜನರಲ್ಲಿ ನಾಗರಿಕ ಪ್ರಜ್ಞೆ ಗಂಭೀರವಾಗಿ ಕೊರತೆಯಿದೆ. ಮೆಟ್ರೋ ಆವರಣದಲ್ಲಿ, ಕೆಲವರು ಬಹಿರಂಗವಾಗಿ ಮೂತ್ರ ವಿಸರ್ಜಿಸುತ್ತಾರೆ. ಮಕ್ಕಳನ್ನು ಸಹ ಅದೇ ರೀತಿ ಮೂತ್ರವಿಸರ್ಜಿಸಲು ಬಿಡುತ್ತಾರೆ. ದೆಹಲಿಯಲ್ಲಿ ಮೂಲಭೂತ ನಾಗರಿಕ ಜವಾಬ್ದಾರಿಯ ಕೊರತೆ ಆತಂಕಕಾರಿಯಾಗಿದೆ ಎಂದು ವಿಡಿಯೊವನ್ನು ಹಂಚಿಕೊಂಡ ಬಳಕೆದಾರರು ಬರೆದಿದ್ದಾರೆ.
ಜನರು ದೆಹಲಿ ಮೆಟ್ರೋವನ್ನು ಮನೆಯಂತೆ ಭಾವಿಸುತ್ತಾರೆ. ಅವರು ಸುತ್ತಾಡುತ್ತಾರೆ, ಮೂತ್ರ ವಿಸರ್ಜಿಸುತ್ತಾರೆ ಮತ್ತು ಅವರಿಗೇನು ಇಷ್ಟವೋ ಅದನ್ನೇ ಮಾಡುತ್ತಾರೆ. ಸರ್ಕಾರ ಈ ಸಂಬಂಧ ಕ್ರಮ ಕೈಗೊಳ್ಳಬೇಕು. ದೆಹಲಿ ನಮ್ಮ ರಾಜಧಾನಿ. ನಾವು ಅದನ್ನು ಹಾಳುಮಾಡಲು ಬಯಸುವುದಿಲ್ಲ ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ.
ಇಲ್ಲಿದೆ ವಿಡಿಯೊ:
Civic sense what? Man publicly urinates on Delhi Metro platform. @OfficialDMRC pic.twitter.com/4W00NKdUkM
— Harsh Trivedi (@harshtrivediii) January 19, 2026
ದೆಹಲಿ ಮೆಟ್ರೋದಲ್ಲಿ ನಡೆದ ಮತ್ತೊಂದು ನಾಚಿಕೆಗೇಡಿನ ಘಟನೆಯಲ್ಲಿ, ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಹೊರಗೆ ಮೂತ್ರ ವಿಸರ್ಜಿಸುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದು, ತಕ್ಷಣದ ಜನಸಮೂಹ ಸೇರಿ ಆತನಿಗೆ ಚೆನ್ನಾಗಿ ಬೈದಿದ್ದಾರೆ. ವಿದೇಶಿಗನೊಬ್ಬ ಸಹ ಆತನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿತ್ತು.
ವಿದೇಶಿಗ ಸ್ವಯಂಸೇವಕರೊಂದಿಗೆ ಸಮೀಪದಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದಾಗ, ಆ ವ್ಯಕ್ತಿ ಈ ಕೃತ್ಯ ಎಸಗುತ್ತಿದ್ದಾಗ ಸಿಕ್ಕಿಬಿದ್ದ. ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ನಾಗರಿಕ ಪ್ರಜ್ಞೆ ಮತ್ತು ಸಾರ್ವಜನಿಕರ ಜವಾಬ್ದಾರಿ ಹಾಗೂ ಅಧಿಕಾರದ ದುರ್ಬಳಕೆ ಬಗ್ಗೆ ಕಳವಳವನ್ನು ಹುಟ್ಟುಹಾಕಿತು.
ಲಿಫ್ಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿ ಸಿಕ್ಕಿಬಿದ್ದ ಡೆಲಿವರಿ ಬಾಯ್!
ವಸತಿ ಕಟ್ಟಡವೊಂದರ ಲಿಫ್ಟ್‌ನಲ್ಲಿ ಡೆಲಿವರಿ ಬಾಯ್‌ವೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಹೀನ ಕೃತ್ಯವೊಂದು ಮುಂಬೈನ ವಿರಾರ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿತ್ತು. ಈ ಸಂಬಂಧ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಡೆಲಿವರಿ ಬಾಯ್ ಲಿಫ್ಟ್‌ನಲ್ಲಿ ಮೂತ್ರ ವಿಸರ್ಜಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.