ರಕ್ಷಣೆ, ತಂತ್ರಜ್ಞಾನ...ಭಾರತದೊಂದಿಗೆ 20ಕ್ಕೂ ಹೆಚ್ಚು ಒಪ್ಪಂದಕ್ಕೆ ಮುಂದಾದ ಫ್ರಾನ್ಸ್; ಎಐ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್
ರಕ್ಷಣೆ, ಕೌಶಲ್ಯ, ತಂತ್ರಜ್ಞಾನ ಸಹಕಾರ, ವ್ಯಾಪಾರ, ಆರೋಗ್ಯ ಸೇರಿದಂತೆ ಫ್ರಾನ್ಸ್ ಭಾರತದೊಂದಿಗೆ 20ಕ್ಕೂ ಹೆಚ್ಚು ಒಪ್ಪಂದ ನಡೆಸಲು ಮುಂದಾಗಿದೆ. ಇದರ ಕುರಿತು ಉನ್ನತ ಮಟ್ಟದ ಚರ್ಚೆಗಳನ್ನು ನಡೆಸಲು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮೂರು ದಿನಗಳ ಕಾಲ ಭಾರತದಲ್ಲಿ ಉಳಿದುಕೊಳ್ಳಲಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ರಕ್ಷಣೆ, ಕೌಶಲ್ಯ, ತಂತ್ರಜ್ಞಾನ ಸಹಕಾರ, ವ್ಯಾಪಾರ, ಆರೋಗ್ಯ ಸೇರಿದಂತೆ ಫ್ರಾನ್ಸ್ (France) ಭಾರತದೊಂದಿಗೆ 20ಕ್ಕೂ ಹೆಚ್ಚು ಒಪ್ಪಂದ (india-france deal) ನಡೆಸಲು ಮುಂದಾಗಿದೆ. ಇದರ ಕುರಿತು ಉನ್ನತ ಮಟ್ಟದ ಚರ್ಚೆಗಳನ್ನು ನಡೆಸಲು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (French President Emmanuel Macron) ಅವರು ಮೂರು ದಿನಗಳ ಕಾಲ ಭಾರತದಲ್ಲಿ ಉಳಿದುಕೊಳ್ಳಲಿದ್ದಾರೆ. ಅವರು 2026ರ ಎಐ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂಬೈನಲ್ಲಿ ನಡೆದ ವ್ಯಾಪಕ ದ್ವಿಪಕ್ಷೀಯ ಮಾತುಕತೆಗಳ ಬಳಿಕ ಈ ಕುರಿತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಘೋಷಿಸಿದರು.
ನವದೆಹಲಿಯಲ್ಲಿ ನಡೆಯಲಿರುವ 2026ರ ಎಐ ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತು ಭಾರತೀಯ ನಾಯಕರೊಂದಿಗೆ ಉನ್ನತ ಮಟ್ಟದ ಚರ್ಚೆಗಳನ್ನು ನಡೆಸಲು ಭಾರತ ಭೇಟಿ ನೀಡಿರುವ ಎಮ್ಯಾನುಯೆಲ್ ಮ್ಯಾಕ್ರನ್, ವ್ಯಾಪಾರ, ರಕ್ಷಣೆ, ಇಂಧನ ಮತ್ತು ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಸಂಬಂಧಗಳನ್ನು ಹೆಚ್ಚಿಸುವತ್ತ ಮಾತುಕತೆಗಳಿಗೆ ಹೆಚ್ಚಿನ ಗಮನ ಹರಿಸಿರುವುದಾಗಿ ತಿಳಿಸಿದ್ದಾರೆ.
ಕೋಲಾರದಲ್ಲಿ ಟಾಟಾ-ಏರ್‌ಬಸ್ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ-ಮ್ಯಾಕ್ರನ್ ಚಾಲನೆ
ಮುಂಬೈನಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಗತ್ತು ಇಂದು ಅನಿಶ್ಚಿತತೆಯ ಮೂಲಕ ಸಾಗುತ್ತಿದೆ. ಇಂತಹ ವಾತಾವರಣದಲ್ಲಿ ಭಾರತ ಮತ್ತು ಫ್ರಾನ್ಸ್ ಪಾಲುದಾರಿಕೆ ಜಾಗತಿಕ ಸ್ಥಿರತೆಗೆ ಒಂದು ಶಕ್ತಿಯಾಗಿದೆ ಎಂದು ಹೇಳಿದರು.
ಫ್ರಾನ್ಸ್ ಅನ್ನು ಭಾರತದ ಅತ್ಯಂತ ಹಳೆಯ ಕಾರ್ಯತಂತ್ರದ ಪಾಲುದಾರರಲ್ಲಿ ಒಂದು ಎಂದು ಹೇಳಿದ ಅವರು ಎರಡೂ ರಾಷ್ಟ್ರಗಳು ತಮ್ಮ ಸಂಬಂಧಕ್ಕೆ ಅಭೂತಪೂರ್ವ ಆಳ ಮತ್ತು ಶಕ್ತಿಯನ್ನುನೀಡಿವೆ. ಈ ನಂಬಿಕೆ ಮತ್ತು ಹಂಚಿಕೆಯ ದೃಷ್ಟಿಕೋನದ ಆಧಾರದ ಮೇಲೆ ಇಂದು ನಾವು ನಮ್ಮ ಸಂಬಂಧಗಳನ್ನು ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯಾಗಿ ಸ್ಥಾಪಿಸುತ್ತಿದ್ದೇವೆ ಎಂದು ತಿಳಿಸಿದರು.
ಇದು ಜನರ ಸಂಬಂಧಗಳನ್ನು ಬಲಪಡಿಸಲಿದೆ. ಕೈಗಾರಿಕೆಗಳು, ನವೋದ್ಯಮಗಳು, ಎಂಎಸ್ಎಂಇಗಳು, ವಿದ್ಯಾರ್ಥಿಗಳು, ರಕ್ಷಣಾ, ಶುದ್ಧ ಇಂಧನ, ಬಾಹ್ಯಾಕಾಶ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಂಶೋಧಕರನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ ಎಂದರು.
ಆರೋಗ್ಯದಲ್ಲಿ ಇಂಡೋ-ಫ್ರೆಂಚ್ ಕೇಂದ್ರಕ್ಕಾಗಿ ಎಐ, ಡಿಜಿಟಲ್ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಇಂಡೋ-ಫ್ರೆಂಚ್ ಕೇಂದ್ರ ಮತ್ತು ಏರೋನಾಟಿಕ್ಸ್‌ನಲ್ಲಿ ಕೌಶಲ್ಯಕ್ಕಾಗಿ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರವನ್ನು ಪ್ರಾರಂಭಿಸಲಿದ್ದೇವೆ. ಇವು ಕೇವಲ ಸಂಸ್ಥೆಗಳಲ್ಲ. ಭವಿಷ್ಯವನ್ನು ನಿರ್ಮಿಸುವ ವೇದಿಕೆಗಳು ಎಂದರು.
ಕರ್ನಾಟಕದಲ್ಲಿ ಹೆಚ್125 ಹೆಲಿಕಾಪ್ಟರ್ ಫೈನಲ್ ಅಸೆಂಬ್ಲಿ ಲೈನ್ ಅನ್ನು ತಯಾರಿಸಲು ಏರ್‌ಬಸ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಜಂಟಿ ಉದ್ಯಮವನ್ನು ವರ್ಚುವಲ್ ಆಗಿ ಉದ್ಘಾಟಿಸಿದ ಅವರು, ಭಾರತ ಮತ್ತು ಫ್ರಾನ್ಸ್ ಒಟ್ಟಾಗಿ ಭಾರತದಲ್ಲಿ ಮೌಂಟ್ ಎವರೆಸ್ಟ್‌ನ ಎತ್ತರಕ್ಕೆ ಹಾರುವ ಸಾಮರ್ಥ್ಯವಿರುವ ವಿಶ್ವದ ಏಕೈಕ ಹೆಲಿಕಾಪ್ಟರ್ ಅನ್ನು ತಯಾರಿಸಲಿದೆ ಮತ್ತು ಅದನ್ನು ಜಾಗತಿಕವಾಗಿ ರಫ್ತು ಮಾಡಲಿದೆ ಎಂದು ಹೇಳಿದರು.
ಮತದಾರ ಪಟ್ಟಿಯಲ್ಲಿ ಅಕ್ರಮ ಎಸಗಿರುವ ಬಿಎಒಗಳ ಅಮಾನತುಗೊಳಿಸಿ: ಚುನಾವಣಾ ಆಯೋಗಕ್ಕೆ ಡಿಕೆಶಿ ಮನವಿ ಪತ್ರ
ಭಾರತಕ್ಕೆ ತಮ್ಮ ನಾಲ್ಕನೇ ಅಧಿಕೃತ ಭೇಟಿ ವೇಳೆ ಪ್ರಧಾನಿ ಮೋದಿ ಅವರು ನೀಡಿರುವ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದ ಹೇಳಿದ ಮ್ಯಾಕ್ರನ್, ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧವು ನಿಜವಾಗಿಯೂ ಗಮನಾರ್ಹ ಮತ್ತು ವಿಶಿಷ್ಟವಾಗಿದೆ. ಈ ಸಂಬಂಧವು ನಂಬಿಕೆ, ಮುಕ್ತತೆ ಮತ್ತು ಮಹತ್ವಾಕಾಂಕ್ಷೆಯದ್ದಾಗಿದೆ ಎಂದರು.