Year Ender 2025: ಇಡ್ಲಿಯಿಂದ ಬೀಟ್ರೂಟ್ ಕಾಂಜಿವರೆಗೆ; 2025ರಲ್ಲಿ ಗೂಗಲ್‍ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಭಾರತೀಯ ಖಾದ್ಯಗಳಿವು
2025ರಲ್ಲಿ ಗೂಗಲ್‌ನಲ್ಲಿ ಜನರ ಗಮನ ಸೆಳೆದ ಅತಿದೊಡ್ಡ ಖಾದ್ಯಗಳ ಪಟ್ಟಿ ಇಲ್ಲಿದೆ. ಈ ಆಹಾರಗಳು ಜನರಲ್ಲಿ ಹೆಚ್ಚು ಆಸಕ್ತಿ ಹುಟ್ಟಿಸಿದ್ದವು ಮತ್ತು ಆರೋಗ್ಯ, ರುಚಿಯ ಕಾರಣದಿಂದಲೂ ಜನಪ್ರಿಯವಾಗಿವೆ. ಅವುಗಳು ಯಾವ್ಯಾವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಇಡ್ಲಿ (ಸಾಂದರ್ಭಿಕ ಚಿತ್ರ) -
ದೆಹಲಿ, ಡಿ. 13: ಹಿಂದೆಲ್ಲ ಮದುವೆಯಾಗುವ ಮೊದಲು ಹುಡುಗಿಗೆ ಅಡುಗೆ ಬರುತ್ತದೆಯೇ ಎಂಬ ಪ್ರಶ್ನೆ ಕೇಳುತ್ತಿದ್ದರು. ಆದರೀಗ ಬಹುತೇಕ ಹೆಣ್ಮಕ್ಕಳಿಗೆ ಅಡುಗೆ ಮಾಡಲು ಬರುವುದೇ ಇಲ್ಲ. ಹಾಗಂತ ಇತ್ತೀಚೆಗೆ ಅಡುಗೆ ಮಾಡುವುದು ಕೂಡ ಅಂತಹ ತ್ರಾಸದಾಯಕ ಕೆಲಸವೇನಲ್ಲ. ಯಾರ್ಯಾರದ್ದೋ ಜತೆ ಕೇಳಿ ಅಡುಗೆ ಮಾಡಬೇಕೆಂತೇನಿಲ್ಲ. ಕ್ಷಣ ಮಾತ್ರದಲ್ಲಿ ನಾವು ಯಾವುದೇ ಪಾಕವಿಧಾನವನ್ನು ಗೂಗಲ್‍ನಲ್ಲಿ (Google) ಹುಡುಕಿ ಮಾಡಬಹುದು. ಗೂಗಲ್‌ನ ವಾರ್ಷಿಕ Year in Search 2025ರ ವರದಿಯಲ್ಲಿ ಜನರು ಯಾವ ಪಾಕವಿಧಾನವನ್ನು ಹೆಚ್ಚಾಗಿ ಹುಡುಕಿದರು ಎಂಬುದರ ಬಗ್ಗೆ ತಿಳಿಸಲಾಗಿದೆ. ಈ ಬಗ್ಗೆ ಇಲ್ಲಿದೆ ವಿವರ.
ಇಡ್ಲಿ: ದಕ್ಷಿಣ ಭಾರತದ ಪ್ರಸಿದ್ಧ ಬೆಳಗ್ಗಿನ ತಿಂಡಿಯಾಗಿರುವ ಇಡ್ಲಿ ಹೆಚ್ಚಿನವರಿಗೆ ಅಚ್ಚುಮೆಚ್ಚು. ದಕ್ಷಿಣ ಭಾರತೀಯರಿಗಂತೂ ಹಾಟ್ ಫೇವರಿಟ್. ಅಕ್ಕಿ-ಉದ್ದಿನ ಬೇಳೆಯನ್ನು ರುಬ್ಬಿ, ಹುದುಗು ಬರಿಸಲಾಗುತ್ತದೆ. 8 ಗಂಟೆಯ ನಂತರ ಇದನ್ನು ಇಡ್ಲಿ ಪಾತ್ರೆಯೊಂದಿಗೆ ಬೇಯಿಸಲಾಗುತ್ತದೆ. ಇದನ್ನು ಚಟ್ನಿ ಹಾಗೂ ಸಾಂಬಾರ್ ಜತೆ ಬಡಿಸಲಾಗುತ್ತದೆ.
ಚಳಿ ಚಳಿ ತಾಳೆನು ಈ ಚಳಿಯ...ಚಳಿಯಿಂದ ನಿಮ್ಮ ಅರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ
ಪೋರ್ನ್‌ಸ್ಟಾರ್ ಮಾರ್ಟಿನಿ: ಕಾಕ್‌ಟೈಲ್ ವೋಡ್ಕಾ ಮತ್ತು ಪ್ಯಾಶನ್‌ಫ್ರೂಟ್ ಪ್ಯೂರಿ ಅಥವಾ ಲಿಕ್ಕರ್ ಅನ್ನು ಒಳಗೊಂಡಿದೆ. ಇದನ್ನು ಸಾಮಾನ್ಯವಾಗಿ ಸ್ಪಾರ್ಕ್ಲಿಂಗ್ ವೈನ್‌ನ ಸೈಡ್ ಶಾಟ್‌ನೊಂದಿಗೆ ಬಡಿಸಲಾಗುತ್ತದೆ. ಇದು ಸಿಹಿ-ಟಾರ್ಟ್‌ಗೆ ವಿಶೇಷವಾಗಿ ಪ್ರಸಿದ್ಧಿಯಾಗಿದೆ.
ಮೋದಕ: ಸಾಮಾನ್ಯವಾಗಿ ಗಣೇಶ ಹಬ್ಬದಂದು ಈ ಸಿಹಿತಿಂಡಿಯನ್ನು ತಯಾರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಪ್ರಧಾನವಾಗಿ ತಯಾರಿಸಲಾಗುವ ಈ ಭಕ್ಷ್ಯವು ಗಣೇಶನಿಗೆ ಬಹಳ ಪ್ರಿಯವಾಗಿದೆ ಎಂದೇ ಪ್ರಸಿದ್ಧಿ ಪಡೆದಿದೆ. ಅಕ್ಕಿಯ ಹಿಟ್ಟಿನ ಮೂಲಕ ತಯಾರಿಸಲಾಗುವ ಮೋದಕಕ್ಕೆ ಹೂರಣವಾಗಿ ತೆಂಗಿನಕಾಯಿ ಮತ್ತು ಬೆಲ್ಲವನ್ನು ತುಂಬಲಾಗುತ್ತದೆ.
ತೇಕ್ವಾ: ಈ ಸಿಹಿತಿಂಡಿ ಸಾಮಾನ್ಯವಾಗಿ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಬಹಳ ಜನಪ್ರಿಯ. ಸಾಂಪ್ರದಾಯಿಕ ಈ ಸಿಹಿತಿಂಡಿಯನ್ನು ಚತ್ ಪೂಜಾ ಸಂದರ್ಭದಲ್ಲಿ ತಯಾರಿಸಲಾಗುತ್ತದೆ.
ಉಗಾದಿ ಪಚಡಿ: ಇದು ವಿಶೇಷವಾಗಿ ಉಗಾದಿ ಅಂದರೆ ತೆಲುಗು ಹೊಸ ವರ್ಷದ ಸಂದರ್ಭದಲ್ಲಿ ತಯಾರಿಸಲಾಗುತ್ತದೆ. ಈ ಸಿಹಿತಿಂಡಿಯನ್ನು ಆರು ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಬೇವು, ಬೆಲ್ಲ, ಹುಣಸೆಹಣ್ಣು ಮತ್ತು ಮಾವಿನಕಾಯಿ ಬಹಳ ಮುಖ್ಯ ಪದಾರ್ಥ.
ಬೀಟ್ರೂಟ್ ಕಾಂಜಿ: ಉತ್ತರ ಭಾರತದಲ್ಲಿ ತಯಾರಿಸಲಾಗುವ ಈ ವಿಶೇಷ ಪಾನೀಯವನ್ನು ಬೀಟ್ರೂಟ್, ಸಾಸಿವೆ ಮತ್ತು ನೀರು ಬಳಸಿ ತಯಾರಿಸಲಾಗುತ್ತದೆ. ಇದಕ್ಕೆ ತುಪ್ಪವನ್ನು ಸಹ ಸೇರಿಸಬಹುದು.
ತಿರುವಾತಿರೈ ಕಲಿ: ಇದು ತಮಿಳುನಾಡಿನ ತಿರುವಾತಿರೈ ಹಬ್ಬದ ಸಂದರ್ಭದಲ್ಲಿ ತಯಾರಿಸಲಾಗುವ ಸಾಂಪ್ರದಾಯಿಕ ಆಹಾರ. ಮೆಕ್ಕೆಜೋಳ ಅಥವಾ ಅಕ್ಕಿ-ಬೆಲ್ಲದೊಂದಿಗೆ ಬೇಯಿಸಿ, ಏಲಕ್ಕಿ ಹಾಕಿ ತಯಾರಿಸಲಾಗುವ ಬಹಳ ರುಚಿಯಾದ ಖಾದ್ಯ ಇದು.
ಯಾರ್ಕ್‌ಶೈರ್ ಪುಡಿಂಗ್: ಈ ಬ್ರಿಟಿಷ್ ಪಾಕವಿಧಾನವು ಮೊಟ್ಟೆ, ಹಿಟ್ಟು ಮತ್ತು ಹಾಲು ಅಥವಾ ನೀರಿನಿಂದ ತಯಾರಿಸಲಾದ ಸರಳ ಬ್ಯಾಟರ್ ಬಳಸಿ ಬೇಕ್ ಮಾಡಲಾಗುತ್ತದೆ. ಇದು ಸಾಮಾನ್ಯವಾಗಿ ಇಂಗ್ಲೆಂಡ್‌ನ ಸಾಂಪ್ರದಾಯಿಕ ರೋಸ್ಟ್ (Sunday Roast) ಭಾಗವಾಗಿ ನೀಡಲಾಗುತ್ತದೆ.
ಗೋಂಡ್ ಕಟ್ಟಿರಾ: ಇದು ಖಾದ್ಯವಲ್ಲ, ಇದೊಂದು ಪದಾರ್ಥ. ಇದನ್ನು ನೀರಿನಲ್ಲಿ ನೆನೆಸಿ ಕುಡಿಯಲಾಗುತ್ತದೆ. ನೀರಿನಲ್ಲಿ ನೆನೆಸಿದಾಗ ಜೆಲ್ಲಿ ರೂಪಕ್ಕೆ ಬಂದ ಬಳಿಕ ಸೇವಿಸಬಹುದಾಗಿದೆ. ಇದನ್ನು ಸಾಮಾನ್ಯವಾಗಿ ಬೇಸಿಗೆ ಪಾನೀಯಗಳಲ್ಲಿ ಸೇರಿಸುತ್ತಾರೆ.
ಕೊಲುಕಟ್ಟೆ: ದಕ್ಷಿಣ ಭಾರತದ ತಿಂಡಿಯಾಗಿರುವ ಇದನ್ನು ಹಬೆಯಲ್ಲಿ ಬೇಯಿಸಲಾಗುತ್ತದೆ. ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುವ ಈ ಖಾದ್ಯವು ಸಿಹಿ ಮತ್ತು ಖಾರ ಎರಡನ್ನೂ ಹೊಂದಿದೆ. ಇದು ವಿನಾಯಕ ಚತುರ್ಥಿಯಂತಹ ಹಬ್ಬಗಳ ಸಮಯದಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ.