13 ವರ್ಷದಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣ; ಭಾವನಾತ್ಮಕ ವಿದಾಯದ ಕ್ಷಣ ಇಲ್ಲಿದೆ
ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದಾಗ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ತೀವ್ರ ಗಾಯಗಳಾಗಿ ಸುಮಾರು 13 ವರ್ಷದಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಅವರ ದಯಾಮರಣ ಪ್ರಕ್ರಿಯೆ ದೆಹಲಿ ಏಮ್ಸ್‌ನಲ್ಲಿ ಆರಂಭವಾಗಿದೆ. ಈ ಪ್ರಕ್ರಿಯೆ ಕುರಿತು ಇಲ್ಲಿದೆ ಕಿರು ಮಾಹಿತಿ.
ಸಂಗ್ರಹ ಚಿತ್ರ -
ನವದೆಹಲಿ: ಸುಪ್ರೀಂ ಕೋರ್ಟ್ (Supreme court)ನ ಆದೇಶದ ಮೇರೆಗೆ 13 ವರ್ಷದಿಂದ ಕೋಮಾದಲ್ಲಿರುವ ಹರೀಶ್ ರಾಣಾ (harish rana case) ಅವರ ದಯಾಮರಣ (euthanasia) ಪ್ರಕ್ರಿಯೆಯನ್ನು ದೆಹಲಿ ಏಮ್ಸ್‌ನಲ್ಲಿ (Delhi AIIMS) ಆರಂಭಿಸಲಾಗಿದೆ. ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದಾಗ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ತೀವ್ರ ಗಾಯಗಳಾಗಿ ಹರೀಶ್ ರಾಣಾ ಅವರು ಸುಮಾರು 13 ವರ್ಷದಿಂದ ಕೋಮಾದಲ್ಲಿದ್ದರು. ಕಳೆದ ಬುಧವಾರ ಅವರಿಗೆ ದಯಾಮರಣ ನೀಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.
13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಅವರಿಗೆ ಗೌರವಯುತ ಮರಣ ನೀಡಲು ದೆಹಲಿಯ ಏಮ್ಸ್ ಆಸ್ಪತ್ರೆಗೆ ಶನಿವಾರ ಸಂಜೆ ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಮಗನಿಗೆ ಅಂತಿಮ ವಿದಾಯ ಹೇಳಲು ತಂದೆ ಅಶೋಕ್ ರಾಣಾ ಮತ್ತು ಅವರ ಪತ್ನಿ ಆಸ್ಪತ್ರೆಗೆ ಬಂದಿದ್ದರು.
ಆದೇಶ ನೀಡುವಾಗ ಕಣ್ಣೀರಿಟ್ಟ ನ್ಯಾಯಮೂರ್ತಿ; ಹರೀಶ್ ರಾಣಾ ದಯಾಮರಣಕ್ಕೆ ಅನುಮತಿ
ಈ ಕುರಿತು ಮಾಹಿತಿ ನೀಡಿರುವ ರಾಣಾ ಅವರ ಪರ ವಕೀಲ ಮನೀಶ್ ಜೈನ್, ಹರೀಶ್ ರಾಣಾ ಅವರನ್ನು ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, 6 ವೈದ್ಯರ ತಂಡವು ದಯಾಮರಣ ಕಾರ್ಯವಿಧಾನವನ್ನು ನಡೆಸಲಿದೆ. ಮೊದಲಿಗೆ ಅವರ ವೈದ್ಯಕೀಯ ತಂಡವು ಹಂತ ಹಂತವಾಗಿ ಜೀವ ರಕ್ಷಕ ವ್ಯವಸ್ಥೆಯನ್ನು ತೆಗೆದು ಹಾಕಲಿದ್ದಾರೆ ಎಂದು ತಿಳಿಸಿದರು.
ಸಂಪೂರ್ಣ ಗೌಪ್ಯವಾಗಿ ಈ ಪ್ರಕ್ರಿಯೆಯನ್ನು ನಡೆಸಬೇಕಾಗುತ್ತದೆ. ಹೀಗಾಗಿ ಈ ಈ ಕುರಿತು ಹೆಚ್ಚಿನ ಮಾಹಿತಿಯನ್ನು ವೈದ್ಯರು ನೀಡುವುದಿಲ್ಲ. ಅವರು ಇದಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳುತ್ತಾರೆ ಎಂದರು.
ಹೇಗಿರುತ್ತೆ ದಯಾಮರಣ ?
ದೀರ್ಘಕಾಲದಿಂದ ಆರೋಗ್ಯ ಚೇತರಿಕೆ ಕಾಣದವರಿಗೆ ನಡೆಸುವ ದಯಾಮರಣ ಪ್ರಕ್ರಿಯೆಯಲ್ಲಿ ಮೊದಲು ಹಂತಹಂತವಾಗಿ ಅವರ ಜೀವ ರಕ್ಷಕ ವ್ಯವಸ್ಥೆಯನ್ನು ಹಂತಹಂತವಾಗಿ ತೆಗೆದು ಹಾಕಲಾಗುತ್ತದೆ. ಅಂತೆಯೇ ಹರೀಶ್ ರಾಣಾ ಅವರಿಗೆ ಮೊದಲು ದ್ರವ ಆಹಾರ ನೀಡಲು ಮತ್ತು ತ್ಯಾಜ್ಯ ಸಂಗ್ರಹಣೆಕ್ಕಾಗಿ ಅಳವಡಿಸಿರುವ ಟ್ಯೂಬ್‌ಗಳನ್ನು ತೆಗೆದುಹಾಕಲಾಗುತ್ತದೆ. ಬಳಿಕ ಅವರ ದೇಹವನ್ನು ನೈಸರ್ಗಿಕ ವ್ಯವಸ್ಥೆಗೆ ಪೂರಕವಾಗಿ ಮಾಡಲಾಗುತ್ತದೆ. ಅವರ ದೇಹ ಸಹಜ ಪರಿಸರದಲ್ಲಿ ಇದ್ದಷ್ಟು ಹೊತ್ತು ಅವರು ಜೀವಂತವಾಗಿರುತ್ತಾರೆ. ಬಳಿಕ ಹರೀಶ್ ರಾಣಾ ಅವರ ಅಂಗಾಂಗ ದಾನಕ್ಕೆ ಕುಟುಂಬ ಒಪ್ಪಿರುವುದರಿಂದ ವೈದ್ಯಕೀಯ ತಂಡವು ಅವರ ಅಂಗಗಳ ಸಂಪೂರ್ಣ ಪರೀಕ್ಷೆ ನಡೆಸಿ, ಅವುಗಳಲ್ಲಿ ಯಾವುದು ದಾನಕ್ಕೆ ಯೋಗ್ಯವಾಗಿದೆ ಎಂದು ನೋಡಿ ಅದನ್ನು ಉಳಿಸಿಕೊಳ್ಳುತ್ತಾರೆ. ಅನಂತರ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ.
ಐತಿಹಾಸಿಕ ತೀರ್ಪು
13 ವರ್ಷಗಳ ಹಿಂದೆ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದಾಗ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತೀವ್ರ ಗಾಯಗೊಂಡು ಕೋಮಾದಲ್ಲಿದ್ದ 32 ವರ್ಷದ ಹರೀಶ್ ರಾಣಾ ಅವರ ದಯಾಮರಣಕ್ಕೆ ಕಳೆದ ಬುಧವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ದೇಶದಲ್ಲಿ ನ್ಯಾಯಾಲಯ ಆದೇಶಿಸಿದ ನಿಷ್ಕ್ರಿಯ ದಯಾಮರಣ ಪ್ರಕರಣ ಇದಾಗಿದೆ.
ಗೋರಖ್‌ಪುರ ಏಮ್ಸ್‌ನಲ್ಲಿ ಘೋರ ಕೃತ್ಯ; ನಾಗಾಲ್ಯಾಂಡ್ ವೈದ್ಯೆಯ ಮೇಲೆ ಜನಾಂಗೀಯ ನಿಂದನೆ, ಲೈಂಗಿಕ ದೌರ್ಜನ್ಯ
ನಿಷ್ಕ್ರಿಯ ದಯಾಮರಣ ಕಾನೂನುಬದ್ಧತೆಯನ್ನು ಗುರುತಿಸಿದ 2018 ರ ಸುಪ್ರೀಂ ಕೋರ್ಟ್ ತೀರ್ಪಿನ ಹಲವಾರು ಅಂಶಗಳನ್ನು ಸ್ಪಷ್ಟಪಡಿಸಿದ ತೀರ್ಪನ್ನು ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಕೆವಿ ವಿಶ್ವನಾಥನ್ ಪೀಠ ನೀಡಿತ್ತು. ನ್ಯಾಯಾಂಗ ಇತಿಹಾಸದಲ್ಲೇ ಇದು ಐತಿಹಾಸಿಕ ನಿರ್ಧಾರವಾಗಿದೆ.