ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಅಲ್ಲಾ ಬಳಿ ಹೋಗುತ್ತೇನೆ"; ಲತೀಫ್‌ ಭಟ್‌ನನ್ನು ಸುತ್ತುವರಿದ ಸೇನೆ; ಶರಣಾಗಲು ಕೊನೆಯ ವಾರ್ನಿಂಗ್‌

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಮೊಹಮ್ಮದ್ ಲತೀಫ್ ಭಟ್ ಹತನಾಗಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಲತೀಫ್ ಭಟ್ ಜೊತೆಗೆ ಆತನ ಸಹಚರ ಉಮರ್ ನಿಸಾರ್ ದಾರ್ ಕೂಡ ಕೊಲ್ಲಲ್ಪಟ್ಟಿದ್ದಾನೆ.

ಲತೀಫ್‌ ಭಟ್‌ನನ್ನು ಸುತ್ತುವರಿದ ಸೇನೆ; ಶರಣಾಗಲು ವಾರ್ನಿಂಗ್‌

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 18, 2026 8:58 AM

‌ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕುಲ್ಗಾಮ್‌ನಲ್ಲಿ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಮೊಹಮ್ಮದ್ ಲತೀಫ್ ಭಟ್ (Latif Bhat) ಭದ್ರತಾ ಪಡೆಗಳು ಆತನನ್ನು ಸುತ್ತುವರಿದಿದೆ. ಈ ಕಾರ್ಯಾಚರಣೆಯಲ್ಲಿ ಲತೀಫ್ ಭಟ್ ಸಹಚರ ಉಮರ್ ನಿಸಾರ್ ದಾರ್ ಕೂಡ ಕೊಲ್ಲಲ್ಪಟ್ಟಿದ್ದಾನೆ. ನವೆಂಬರ್ 16, 2026 ರಂದು ಕುಲ್ಗಾಮ್ ಜಿಲ್ಲೆಯ ಲಾರೂ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ಜಂಟಿ ತಂಡ ಈ ಕಾರ್ಯಾಚರಣೆಯನ್ನು ನಡೆಸಿತ್ತು.

ಇದೀಗ ಅಧಿಕಾರಿಗಳು ಲತೀಫ್ ಭಟ್‌ಗೆ ಶರಣಾಗು ಎಂದು ಹೇಳುತ್ತಿರುವ ವಿಡಿಯೋ ಒಂದು ವೈರಲ್‌ ಆಗಿದೆ. ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳು ಉಗ್ರ ಲತೀಫ್ ಭಟ್‌ಗೆ ವಿಡಿಯೋ ಕರೆ ಮಾಡಿ, "ನಾವು ನಿನ್ನೊಂದಿಗಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಧೈರ್ಯ ತುಂಬಿ ಶರಣಾಗಲು ಸೂಚಿಸಿದರೂ, ಲತೀಫ್ ಅದಕ್ಕೆ ನಿರಾಕರಿಸಿದ್ದಾನೆ. "ನಾನು ಅಲ್ಲಾಹನನ್ನು ಭೇಟಿಯಾಗಲು ಬಯಸುತ್ತೇನೆ, ನಾನು ತುಂಬಾ ಸಂತೋಷವಾಗಿದ್ದೇನೆ" ಎಂದು ಆತ ಪ್ರತಿಕ್ರಿಯಿಸಿರುವುದಾಗಿ ತಿಳಿದುಬಂದಿದೆ.

ವಿಡಿಯೋ ನೋಡಿ



ನವೆಂಬರ್ 11ರಂದು ಅಖ್ರಾನ್‌ನಲ್ಲಿರುವ ಸಿಆರ್‌ಪಿಎಫ್ (CRPF) ಚೆಕ್‌ಪೋಸ್ಟ್ ಮೇಲೆ ನಡೆದ ದಾಳಿಯ ಹಿಂದೆ ಲತೀಫ್ ಭಟ್ ಕೈವಾಡವಿತ್ತು. ಈ ದಾಳಿಯಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದರು. ದಾಳಿಗೂ ಮುನ್ನ ಅಂದರೆ ನವೆಂಬರ್ 10ರಂದು ಲತೀಫ್ ಭಟ್ ಮತ್ತು ಆತನ ಸಹಚರ ಉಮರ್ ನಿಸಾರ್ ದಾರ್, ಮಿರ್ ಬಜಾರ್, ಅಖ್ರಾನ್, ಹಬ್ಲಿಶ್ ಮತ್ತು ಕಿಲಾಮ್ ಸೇರಿದಂತೆ ಹಲವು ಸ್ಥಳಗಳಲ್ಲಿ ಸಂಚರಿಸಿ ದಾಳಿಗೆ ಸಂಚು ರೂಪಿಸಿದ್ದರು.

ಕಳೆದ ಐದಾರು ತಿಂಗಳಿನಿಂದ ಲತೀಫ್ ಭಟ್‌ಗೆ ಆಶ್ರಯ ಮತ್ತು ಲಾಜಿಸ್ಟಿಕ್ ನೆರವು ನೀಡುತ್ತಿದ್ದ ಸ್ಥಳೀಯ ನಿವಾಸಿ ಹಾಗೂ ಸಹಚರ ಉಮರ್ ನಿಸಾರ್ ದಾರ್, ಸೋಮವಾರ ಕುಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ನವೆಂಬರ್ 11ರ ದಾಳಿಯ ನಂತರ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಬೃಹತ್ ಶೋಧ ಮತ್ತು ದಿಗ್ಬಂಧನ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ವಿಚಾರಣೆಗಾಗಿ 500ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ.

ಕುಲ್ಗಾಮ್‌ ದಾಳಿಗೆ ಮುನ್ನ ಸ್ಥಳ ಪರಿಶೀಲನೆಗೆ ಓಡಾಡಿದ್ದ ಉಗ್ರರು; ಸಿಸಿಟಿವಿ ಕ್ಯಾಮರಾದಲ್ಲಿ ಸಂಚಿನ ದೃಶ್ಯ ಸೆರೆ

ಯಾರು ಈ ಲತೀಫ್‌ ಭಟ್‌?

ಮೊಹಮ್ಮದ್ ಲತೀಫ್ ಭಟ್ ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಲಷ್ಕರ್-ಎ-ತೈಬಾ ಮತ್ತು ಅದರ ಅಂಗಸಂಸ್ಥೆಗಳಾದ ದಿ ರೆಸಿಸ್ಟೆನ್ಸ್ ಫ್ರಂಟ್ ಹಾಗೂ ಕಾಶ್ಮೀರ ರೆವಲ್ಯೂಷನರಿ ಆರ್ಮಿಗೆ ಸೇರಿದ ಮೋಸ್ಟ್ ವಾಂಟೆಡ್ ಸ್ಥಳೀಯ ಉಗ್ರನಾಗಿದ್ದ. ಈತ ಕುಲ್ಗಾಮ್ ಜಿಲ್ಲೆಯ ಖ್ರೆವಾನ್ ಚಡ್ಡರ್ ನಿವಾಸಿಯಾಗಿದ್ದು, 2025ರ ನವೆಂಬರ್ 19ರಂದು ಮನೆಯಿಂದ ನಾಪತ್ತೆಯಾಗಿ ಭಯೋತ್ಪಾದಕ ಸಂಘಟನೆಯನ್ನು ಸೇರಿದ್ದ.