ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೋನಿಯಾ ಗಾಂಧಿ ಆತ್ಮಕಥೆ ವಿರುದ್ಧದ ಪ್ರತಿಭಟನೆ ವೇಳೆ ಬಾಳಾ ಠಾಕ್ರೆ ಫೋಟೊ ಹರಿದ ಶಿವ ಸೇನೆ ನಾಯಕಿ; ಭುಗಿಲೆದ್ದ ವಿವಾದ

Shaina NC: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ʼಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್‌ʼ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಈ ಪುಸ್ತಕ ವಿರುದ್ಧ ಪ್ರತಿಭಟನೆ ವೇಳೆ ಶಿವ ಸೇನೆ ನಾಯಕಿ ಶೈನಾ ಬಾಲಾ ಠಾಕ್ರೆ ಅವರ ಫೋಟೊವನ್ನು ಅಚಾನಕ್ಕಾಗಿ ಹರಿದದ್ದು ವಿವಾದಕ್ಕೆ ಕಾರಣವಾಗಿದೆ.

ಬಾಳಾ ಠಾಕ್ರೆ ಫೋಟೊ ಹರಿದ ಶಿವ ಸೇನೆ ನಾಯಕಿ; ವಿಡಿಯೊ ನೋಡಿ

-

Ramesh Ballamoole
Ramesh Ballamoole Nov 18, 2026 8:19 PM

ಮುಂಬೈ, ನ. 18: ಕಾಂಗ್ರೆಸ್‌ ನಾಯಕಿ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರ ಆತ್ಮಕಥೆ ʼಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್‌ʼ ಬಿಡುಗಡೆಯಾಗಿದ್ದು, ರಾಷ್ಟ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ವೈಯಕ್ತಿಕ, ರಾಜಕೀಯ ಜೀವನದ ಬಗ್ಗೆ ಸೋನಿಯಾ ಗಾಂಧಿ ಈ ಪುಸ್ತಕದಲ್ಲಿ ತಿಳಿಸಿದ್ದು, ಕೆಲವು ವಿಚಾರಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ ಪುಸ್ತಕದಲ್ಲಿನ ವೀರ ಸಾವರ್ಕರ್ ಕುರಿತಾದ ಉಲ್ಲೇಖಗಳನ್ನು ವಿರೋಧಿಸಿ ಶಿವ ಸೇನೆ (ಏಕನಾಥ ಶಿಂಧೆ ಬಣ) ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪಕ್ಷದ ನಾಯಕಿ ಶೈನಾ ಎನ್‌.ಸಿ. (Shaina NC) ಅಚಾನಕ್ಕಾಗಿ, ಗೊತ್ತಿಲ್ಲದೆ ಶಿವಸೇನೆ ಸ್ಥಾಪಕ ಬಾಳಾ ಠಾಕ್ರೆ (Bal Thackeray) ಅವರ ಫೋಟೊ ಹರಿದಿದ್ದು, ವಿವಾದಕ್ಕೆ ಕಾರಣವಾಗಿದೆ. ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದೇ ವಿಚಾರ ಮುಂದಿಟ್ಟುಕೊಂಡು ಇದೀಗ ಕಾಂಗ್ರೆಸ್‌ ಮತ್ತು ಉದ್ಧವ್‌ ಠಾಕ್ರೆ ನೇತೃತ್ವದ ಶಿವ ಸೇನೆ ಶೈನಾ ವಿರುದ್ಧ ಕಿಡಿಕಾರಿದ್ದು, ಬಾಳಾ ಠಾಕ್ರೆ ಅವರನ್ನು ಅವಮಾನ ಮಾಡಲಾಗಿದೆ ಎಂದು ದೂರಿವೆ.

ವಿವಾದದ ಕಿಡಿ ಹೊತ್ತಿಸಿದ ಶೈನಾ ಎನ್‌.ಸಿ. ವಿಡಿಯೊ:



ಘಟನೆ ವಿವರ

ಏಕನಾಥ ಶಿಂಧೆ ನೇತೃತ್ವದ ಶಿವ ಸೇನೆ ಬುಧವಾರ (ನವೆಂಬರ್‌ 18), ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯಲ್ಲಿ ವೀರ ಸಾವರ್ಕರ್ ಅವರನ್ನು ಅವಹೇಳನ ಮಾಡಲಾಗಿದೆ ಹಾಗೂ ಇತಿಹಾಸವನ್ನು ತಿರುಚುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿತು. ಇದೇ ವೇಳೆ ನಾಯಕರು ಪುಸ್ತಕದ ಪುಟಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು. ಪುಸ್ತಕ ಹರಿಯುವ ಭರದಲ್ಲಿ ಶೈನಾ ಗೊತ್ತಿಲ್ಲದೆ, ಆಕಸ್ಮಿಕವಾಗಿ ಬಾಳಾ ಠಾಕ್ರೆ ಅವರ ಫೋಟೊ ಹರಿದು ಬಿಟ್ಟರು. ಬಾಳಾ ಠಾಕ್ರೆ ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರ ಪ್ರತಿಕೃತಿಯನ್ನು ಚಪ್ಪಲಿಯಿಂದ ಹೊಡೆಯುತ್ತಿರುವ ಚಿತ್ರ ಅದಾಗಿತ್ತು.

ಬಾಳಾ ಠಾಕ್ರೆ ತಂದೆಯ ಪುಸ್ತಕವನ್ನು ಎಸೆದ ದಾದಿಯರು; ವಿಡಿಯೊ ವೈರಲ್

ಈ ವಿಚಾರವನ್ನು ಕೂಡಲೇ ನಾಯಕ ಸಂಜಯ್‌ ನಿರುಪಮ್‌ ಗಮನಕ್ಕೆ ತಂದಾಗ ಶೈನಾ ಹರಿದ ಫೋಟೊವನ್ನು ಪೇಪರ್‌ಗಳ ಕೆಳಗೆ ಅಡಗಿಸಲು ಯತ್ನಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಅವರ ಚಿತ್ರವನ್ನು ಹರಿದಿರುವುದಾಗಿ ಬಳಿಕ ಶೈನಾ ಸ್ಪಷ್ಟನೆ ನೀಡಿದ್ದಾರೆ. ಅದಾಗ್ಯೂ ಈ ವಿಚಾರ ಸದ್ಯ ಭಾರಿ ಸದ್ದು ಮಾಡುತ್ತಿದೆ.

ಶಿವ ಸೇನೆ vs ಶಿವ ಸೇನೆ

ಸದ್ಯ ಈ ಘಟನೆ ಶಿವ ಸೇನೆಯ 2 ಬಣಗಳ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಕಾರಣವಾಗಿದೆ. ಬಾಳಾ ಠಾಕ್ರೆ ಕಾಂಗ್ರೆಸ್‌ನ ಕಟು ವಿರೋಧಿಯಾಗಿದ್ದರೂ ಉದ್ಧವ್ ಠಾಕ್ರೆ ನೇತೃತ್ವದ ಸೇನೆಯು ಅದೇ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ಟೀಕಿಸಲು ಏಕನಾಥ್‌ ಶಿಂಧೆ ಬಣ ಅಯ್ಯರ್ ಅವರ ಪ್ರತಿಕೃತಿಗೆ ಬಾಳಾ ಠಾಕ್ರೆ ಹೊಡೆಯುತ್ತಿರುವ ಫೋಟೊ ಪ್ರದರ್ಶಿಸಿದರು.

ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಉದ್ಧವ್‌ ಠಾಕ್ರೆ ಬಣದ ಸಂಸದ ಸಂಜಯ್ ರಾವುತ್, ಶಿಂಧೆ ಬಣದ ನಾಯಕರನ್ನು ನಕಲಿ ಸೈನಿಕರು ಎಂದು ಕರೆದಿದ್ದಾರೆ. ಅಲ್ಲದೆ ಬಾಳಾ ಸಾಹೇಬ್ ಅವರನ್ನು ಅವಮಾನಿಸುವವರನ್ನು ಸಾರ್ವಜನಿಕವಾಗಿ ಚಾಟಿಯಿಂದ ಹೊಡೆಯಬೇಕು ಎಂದು ಹೇಳಿದ್ದಾರೆ. ಜತೆಗೆ ನಾಯಕರು ಶೈನಾ ವಿರುದ್ಧ ಘೋಷಣೆ ಕೂಗಿ ಪಕ್ಷದಿಂದ ಉಚ್ಛಾಟಿಸುವಂತೆ ಆಗ್ರಹಿಸಿದ್ದಾರೆ.

ಶಿವ ಸೇನೆ ಭದ್ರಕೋಟೆ ಮಹಾಯುತಿ ಪಾಲಿಗೆ! ಠಾಕ್ರೆ ಎಡವಿದ್ದೆಲ್ಲಿ?

ಈ ವಿವಾದದ ನಡುವೆ ಶೈನಾ ಎನ್.ಸಿ. ಅವರಿಗೆ ಶಿವ ಸೇನಾ ಮುಖ್ಯಸ್ಥ ಮತ್ತು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೋಟಿಸ್‌ ಕೊಟ್ಟಿದ್ದಾರೆ. ವಿಧಾನಸಭೆಯಲ್ಲಿ ಶಿಂಧೆ ಅವರನ್ನು ಭೇಟಿಯಾಗಿ ಶೈನಾ ಮಾತುಕತೆ ನಡೆಸಿದ್ದಾಗಿ ಮೂಲಗಳು ತಿಳಿಸಿವೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ