ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಪಾಕ್‌ನ ಯಾವುದೇ ಯುದ್ಧ ವಿಮಾನ ದೇಶದೊಳಗೆ ಪ್ರವೇಶಿಸಿಲ್ಲ; ಭಾರತೀಯ ಸೇನೆ

ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಏ. 22ರಂದು ನಡೆದ ಉಗ್ರರ ದಾಳಿ ಬೆನ್ನಲ್ಲೇ ಭಾರತ ಪಾಕಿಸ್ತಾನದಲ್ಲಿದ್ದ ಭಯೋತ್ಪಾದರ ಅಡುಗು ತಾಣಗಳನ್ನು ಧ್ವಂಸ ಮಾಡಿದ್ದು, ಈಗಾಗಲೇ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಭಾರತ ಆಪರೇಷನ್ ಸಿಂದೂರ್‌ ಕಾರ್ಯಚರಣೆ ಯಶಸ್ವಿಯಾಗಿದೆ. ಈ ಬಗ್ಗೆ ಭಾರತೀಯ ಸೇನೆಯ ಮೂರು ಪಡೆಯ ಮುಖ್ಯಸ್ಥರು ಮಾತನಾಡಿದ್ದಾರೆ.

ಪಾಕ್‌ನ ಯಾವುದೇ ಯುದ್ಧ ವಿಮಾನ ದೇಶದೊಳಗೆ ಪ್ರವೇಶಿಸಿಲ್ಲ; ಭಾರತೀಯ ಸೇನೆ

Profile Ramesh B May 12, 2025 3:14 PM

ಹೊಸದಿಲ್ಲಿ: ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಏ. 22ರಂದು ನಡೆದ ಉಗ್ರರ ದಾಳಿ ಬೆನ್ನಲ್ಲೇ ಭಾರತ ಪಾಕಿಸ್ತಾನದಲ್ಲಿದ್ದ ಭಯೋತ್ಪಾದರ ಅಡುಗು ತಾಣಗಳನ್ನು ಧ್ವಂಸ ಮಾಡಿದ್ದು, ಈಗಾಗಲೇ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಭಾರತ ಆಪರೇಷನ್ ಸಿಂದೂರ್‌ (Operation Sindoor) ಕಾರ್ಯಚರಣೆ ಯಶಸ್ವಿಯಾಗಿದೆ. ಜತೆಗೆ ಮೇ 10ರಂದು ಭಾರತ-ಪಾಕಿಸ್ತಾನ ಮಧ್ಯೆ ಕದನ ವಿರಾಮ ಒಪ್ಪಂದ ಜಾರಿಗೆ ಬಂದಿದೆ. ಸೋಮವಾರ (ಮೇ 12)ರ ಎರಡೂ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಈ ಬಗ್ಗೆ ವಿಸ್ತೃತ ಮಾತುಕತೆ ನಡೆಸಲಿದ್ದಾರೆ. ಅದಕ್ಕೂ ಮುನ್ನವಾಗಿ ಭಾರತೀಯ ಸೇನೆಯ ಮೂರು ಪಡೆ (ವಾಯುಸೇನೆ, ನೌಕ ಪಡೆ ಹಾಗೂ ಭೂಸೇನೆ)ಯ ಮುಖ್ಯಸ್ಥರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ವಿಶೇಷ ಪತ್ರಿಕಾಗೋಷ್ಠಿಯನ್ನು ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ (ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು), ವೈಸ್ ಅಡ್ಮಿರಲ್ ಎ.ಎನ್.ಪ್ರಮೋದ್ (ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರು) ಮತ್ತು ಏರ್ ಮಾರ್ಷಲ್ ಎ.ಕೆ.ಭಾರ್ತಿ (ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕರು) ಭಾಗವಹಿಸಿದ್ದಾರೆ. ಪಾಕಿಸ್ತಾನದ ಯಾವುದೇ ಯುದ್ಧ ವಿಮಾನವನ್ನು ದೇಶದೊಳಗೆ ನುಸುಳಲು ಬಿಟ್ಟಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.

ಏರ್ ಮಾರ್ಷಲ್ ಎ.ಕೆ.ಭಾರ್ತಿ ಮಾತನಾಡಿ, ʼʼಭಾರತದ ಹೋರಾಟ ಭಯೋತ್ಪಾದಕರು, ಅವರ ಬೆಂಬಲಿಗರು, ಮೂಲಸೌಕರ್ಯಗಳ ವಿರುದ್ಧವಾಗಿದೆಯೇ ಹೊರತು ಪಾಕಿಸ್ತಾನ ಸೇನೆಯೊಂದಿಗೆ ಅಲ್ಲ. ಆದಾಗ್ಯೂ ಪಾಕಿಸ್ತಾನ ಸೇನೆಯು ಮಧ್ಯಪ್ರವೇಶಿಸಿ ಭಯೋತ್ಪಾದಕರ ಪರವಾಗಿ ಹೋರಾಟ ನಡೆಸಿದೆ. ಇದರಿಂದಾಗಿ ನಾವು ಪ್ರತಿಕ್ರಿಯಿಸಬೇಕಾಯಿತುʼʼ ಎಂದು ತಿಳಿಸಿದರು. ಭಾರತದ ಸಾರ್ವಭೌಮತೆ ಮತ್ತು ಭದ್ರತೆಗೆ ಬೆದರಿಕೆ ಹಾಕುವ ಯಾವ ದಾಳಿಯನ್ನಾದರೂ ಎದುರಿಸಲು ದೇಶದ ಎಲ್ಲ ಸೇನಾ ನೆಲೆಗಳು ಸಜ್ಜಾಗಿವೆ ಎಂದು ಸಶಸ್ತ್ರ ಪಡೆಗಳು ಪುನರುಚ್ಚರಿಸಿವೆ.



ʼʼನಾವು ಪಾಕ್ ಮಿಲಿಟರಿ ಆಕ್ರಮಣಗಳನ್ನು ವಿಫಲಗೊಳಿಸಿದ್ದೇವೆ. ಭಾರತದ ಬಲಿಷ್ಠ ವಾಯು ರಕ್ಷಣಾ (AD) ವ್ಯವಸ್ಥೆಯು ವಿವಿಧ ಹಂತಗಳಲ್ಲಿನ ವೈಮಾನಿಕ ಬೆದರಿಕೆಗಳನ್ನು ಎದುರಿಸಲು ವಿನ್ಯಾಸಗೊಳಿಸಲಾಗಿದೆ. ಸ್ಥಳೀಯ ವಾಯು ರಕ್ಷಣಾ ವ್ಯವಸ್ಥೆಯಾದ ಆಕಾಶ್ ಅದ್ಭುತ ಕಾರ್ಯ ಕ್ಷಮತೆ ಪ್ರದರ್ಶಿಸಿದೆʼʼ ಎಂದು ಎ.ಕೆ.ಭಾರ್ತಿ ಹೇಳಿದರು.

ಈ ಸುದ್ದಿಯನ್ನೂ ಓದಿ: Operation Sindoor: ಭಾರತದ ದಾಳಿಗೆ ಪಾಕ್‌ ತತ್ತರ; ಬಿಲ ಸೇರಿದ ಅಸಿಮ್‌ ಮುನೀರ್‌

ಪಾಕಿಸ್ತಾನದ ಮಿರಾಜ್‌ ಯುದ್ಧ ವಿಮಾನದ ಅವಶೇಷದ ವಿಡಿಯೊ ರಿಲೀಸ್‌

ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಮಿರಾಜ್ ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದ ಭಾರತೀಯ ಸೇನೆ ಅದರ ವಿಡಿಯೊವನ್ನು ರಿಲೀಸ್‌ ಮಾಡಿದೆ. ಭಾರತೀಯ ಸೇನೆ ಹಂಚಿಕೊಂಡ ವೀಡಿಯೊದಲ್ಲಿ ಪಾಕಿಸ್ತಾನಿ ಮಿರಾಜ್‌ನ ಅವಶೇಷಗಳನ್ನು ಕಂಡುಬಂದಿದೆ.

ʼʼಯಾವುದೇ ಶತ್ರು ವಿಮಾನಗಳು ಭಾರತದ ಭೂಪ್ರದೇಶದ ಒಳಗೆ ಬರಲು ಅವಕಾಶ ನೀಡಲಿಲ್ಲʼʼ ಎಂದು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎ.ಎನ್. ಪ್ರಮೋದ್ ಹೇಳಿದರು.

ನಮ್ಮ ಎಲ್ಲ ಸೈನಿಕ ನೆಲೆಗಳು ಹಾಗೂ ಉಪಕರಣಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಯಾವುದೇ ಪರಿಸ್ಥಿತಿ ಎದುರಿಸಲು ಸೇನೆ ಸನ್ನದ್ಧವಾಗಿದೆʼʼ ಎಂದು ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ತಿಳಿಸಿದರು. ನಮ್ಮ ಎಲ್ಲ ವಾಯುನೆಲೆಗಳು ಉತ್ತಮ ಸ್ಥಿತಿಯಲ್ಲಿವೆ. ನಾನು ನಮ್ಮ ಗಡಿ ಭದ್ರತಾ ಪಡೆಯೂ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಅವರು ನಮ್ಮ ಬೆಂಬಲಕ್ಕೆ ನಿಂತರು. ಅವರ ಪ್ರತಿ ಎಚ್ಚರಿಕೆ ವ್ಯವಸ್ಥೆಗಳು ನಮ್ಮ ವಾಯು ರಕ್ಷಣಾ ವ್ಯವಸ್ಥೆಯ ಭಾಗವಾಗಿದ್ದವು ಇದು ಪಾಕಿಸ್ತಾನದ ಸಂಚನ್ನು ವಿಫಲಗೊಳಿಸಿದೆ ಎಂದು ಹೇಳಿದರು.