ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐಫೋನ್‌ ಇಎಂಐ ಮಾತ್ರವಲ್ಲ...ಮಹಾರಾಷ್ಟ್ರದ ಜೆನ್‌ ಝೀ ಆತ್ಮಹತ್ಯೆಯ ಇನ್ನಷ್ಟು ಬೆಚ್ಚಿ ಬೀಳಿಸುವ ಅಂಶ ಬಹಿರಂಗ; ಹಿಂದೆಯೂ ಜೀವ ಕಳೆದುಕೊಳ್ಳಲು ಹೋಗಿದ್ದೇಕೆ ಕುನಾಲ್‌?

iPhone EMI: ಐಫೋನ್‌ ಹಠಕ್ಕೆ ಬಿದ್ದು ಮಹಾರಾಷ್ಟ್ರದ ಸಂಭಾಜಿ ನಗರ ಜಿಲ್ಲೆಯ ಬೆಟ್ಟದಿಂದ ಜಿಗಿದು ಸಾವಿಗೀಡಾಗಿ, ಹೆತ್ತವರ ಸಾವಿಗೂ ಕಾರಣನಾದ ಕುನಾಲ್‌ ಎಂಬ ಜೆನ್‌ ಝೀಯ ಪ್ರಕರಣಕ್ಕೆ ಇದೀಗ ಟ್ವಿಸ್ಟ್‌ ಸಿಕ್ಕಿದೆ. ಸಹೋದರನ ಮರಣದ ನಂತರ ನಡೆದ ಕೌಟುಂಬಿಕ ಕಲಹ ಮತ್ತು ಪೋಷಕರ ನಡುವಿನ ಬಿಕ್ಕಟ್ಟೂ ಇದಕ್ಕೆ ಕಾರಣ ಎನ್ನಲಾಗಿದೆ.

ಮಹಾರಾಷ್ಟ್ರದ ಜೆನ್‌ ಝೀ ಆತ್ಮಹತ್ಯೆಗೆ ಟ್ವಿಸ್ಟ್‌

ಕುನಾಲ್‌ ಮತ್ತು ಆತನ ಹೆತ್ತವರು (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Aug 23, 2026 8:45 PM

ಮುಂಬೈ, ಆ. 23: ಐಫೋನ್‌ ಹಠಕ್ಕೆ ಬಿದ್ದು ಮಹಾರಾಷ್ಟ್ರದ ಸಂಭಾಜಿ ನಗರ ಜಿಲ್ಲೆಯ ಬೆಟ್ಟದಿಂದ ಜಿಗಿದು ಸಾವಿಗೀಡಾಗಿ, ಹೆತ್ತವರ ಸಾವಿಗೂ ಕಾರಣನಾದ ಕುನಾಲ್‌ ಎಂಬ ಜೆನ್‌ ಝೀಯ ಪ್ರಕರಣ ಸದ್ಯ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಭಾರಿ ಟ್ವಿಸ್ಟ್‌ ಸಿಕ್ಕಿದ್ದು, ಕುನಾಲ್‌ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು ಐಫೋನ್‌ ಇಎಂಐ (iPhone EMI) ಮಾತ್ರವಲ್ಲ, ಬೇರೆಯೂ ಕಾರಣವಿದೆ ಎನ್ನುವುದು ಬೆಳಕಿಗೆ ಬಂದಿದೆ. ಸಹೋದರನ ಮರಣದ ನಂತರ ನಡೆದ ಕೌಟುಂಬಿಕ ಕಲಹ ಮತ್ತು ಪೋಷಕರ ನಡುವಿನ ಬಿಕ್ಕಟ್ಟು ಈತನ ಈ ನಿರ್ಧಾರಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ. ಅಲ್ಲದೆ ಕುನಾಲ್‌ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಮೂಲಗಳು ತಿಳಿಸಿವೆ.

ಕುನಾಲ್‌ ಕಳೆದ ವರ್ಷವೂ ಇದೇ ಸ್ಥಳದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ. ಆಗ ಸಕಾಲಕ್ಕೆ ಧಾವಿಸಿದ್ದ ಪೊಲೀಸರು ಆತನ ಆತ್ಮಹತ್ಯೆ ಶ್ರಮವನ್ನು ತಡೆದಿದ್ದರು. ಈ ಬಾರಿ ಪೊಲೀಸರು ಸ್ಥಳದಲ್ಲಿದ್ದರೂ ಆತನನ್ನು ಉಳಿಸಲು ಸಾಧ್ಯವಾಗಲಿಲ್ಲ. ಬೆಟ್ಟದ ಅಂಚಿನಲ್ಲಿ ನಿಂತಿದ್ದ ಕುನಾಲ್‌ ಬಳಿ ತಾಯಿ ಹಲವು ಬಾರಿ ಅಂಗಲಾಚಿ ಬೇಡಿದ್ದರೂ ಈಚೆ ಬಂದಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಗನನ್ನು ಕಾಪಾಡಲು ಹೋಗಿ ಬೆಟ್ಟದಿಂದ ಕೆಳಗೆ ಬಿದ್ದ ತಂದೆ; ಘಟನೆ ನೋಡಿ ತಾಯಿಯೂ ಆತ್ಮಹತ್ಯೆ!

ಮಗನನ್ನು ಕಾಪಾಡಲು ಮುರಳೀಧರ ಮುಂದೆ ಬಂದು ಈಚೆ ಎಳೆಯಲು ಕೈ ಮುಂದೆ ಚಾಚಿದ್ದರು. ಆದರೆ ಬಳಿಕ ನಿಯಂತ್ರಣ ತಪ್ಪಿ ಕುನಾಲ್‌ ಜತೆಗೆ 250 ಅಡಿ ಆಳದ ಕಣಿವೆಗೆ ಬಿದ್ದು ಬಿಟ್ಟರು. ಇದನ್ನು ನೋಡಿ ತಾಯಿ ಸಂಗೀತಾ ಕೂಡ ಪ್ರತಾಪಕ್ಕೆ ಹಾರಿದರು. ಆ ಮೂಲಕ ಮೂವರು ದುರಂತ ಅಂತ್ಯ ಕಂಡಿದ್ದಾರೆ. ಕುನಾಲ್‌ ಆಗಾಗ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದರಿಂದ ಕೆಳಗೆ ಬಲೆ ಹಿಡಿದು ಕಾಯುತ್ತಿದ್ದ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಕಾಪಾಡಲು ಸಾಧ್ಯವಾಗಲಿಲ್ಲ.

ಕುನಾಲ್-ಸಂಗೀತಾ ದಂಪತಿಯ ಹಿರಿಯ ಪುತ್ರ 6 ವರ್ಷಗಳ ಹಿಂದೆ ಕಾಯಿಲೆಯಿಂದ ಮೃತಪಟ್ಟ ಬಳಿಕ ಕಲಹ ಆರಂಭವಾಗಿತ್ತು. ಚಾಲಕ ವೃತ್ತಿಯಲ್ಲಿದ್ದ ಮುರಳೀಧರ ಕೆಲವೊಮ್ಮೆ ತಿಂಗಳುಗಟ್ಟಲೆ ಮನೆಗೆ ಬರುತ್ತಿರಲಿಲ್ಲ. ಘಟನೆ ನಡೆದ 2 ದಿನಗಳ ಹಿಂದೆಯಷ್ಟೆ ಅಂದರೆ ಆಗಸ್ಟ್‌ 19ರಂದು ಮುರಳೀಧರ ಮನೆಗೆ ಮರಳಿದ್ದರು. ಅದಾದ ಬಳಿಕ ಜಗಳ ಮತ್ತೆ ಕೌಟುಂಬಿಕ ಜಗಳ ಭುಗಿಲೆದ್ದಿತು.

ಪೊಲೀಸರ ಪ್ರಕಾರ, ಕೆಲವು ದಿನಗಳ ಹಿಂದೆ ಕುನಾಲ್‌ ಐಫೋನ್‌ ಖರೀದಿಸಿದ್ದ. ಆದರೆ ಇದರ ಇಎಂಐ ಪಾವತಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಆಗಸ್ಟ್‌ 21ರಂದು ತಂದೆ-ಮಗನ ಮಧ್ಯೆ ವಾಗ್ವಾದ ನಡೆಯಿತು. ಹೀಗಾಗಿ ಆತ ಬೆಟ್ಟದ ಅಂಚಿಗೆ ತೆರಳಿ ಅಲ್ಲಿಂದ ಜಿಗಿಯುವ ಬೆದರಿಕೆ ಒಡ್ಡಿದ್ದ.

ಐಫೋನ್‌ ಇಎಂಐ ಕಟ್ಟಲು ಸಾಧ್ಯವಾಗದೆ ಯಮುನಾ ನದಿಗೆ ಹಾರಿದ ಶಿಕ್ಷಕ

ತಾಯಿ ಸಂಗೀತಾ ನಿಗೂಢ ಪೋಸ್ಟ್

ತಮ್ಮದೇ ಯುಟ್ಯೂಬ್‌ ಚಾನೆಲ್‌ ಹೊಂದಿರುವ ಸಂಗೀತಾ ಅವರ ಇತ್ತೀಚಿನ ವಿಡಿಯೊ ಹಲವು ಅನುಮಾನಗಳಿಗೆ ಕಾರಣವಾಗಿದೆ. "ನೀವು ನನ್ನ ಮತ್ತು ನನ್ನ ಮಗನ ಆಸ್ತಿಯ ಹಕ್ಕನ್ನು ಕಸಿದುಕೊಂಡಿದ್ದೀರಿ. ಅಣ್ಣ-ತಮ್ಮಂದಿರು ಮತ್ತು ಪೋಷಕರು ಒಂದಾಗಲು ನೀವು ಎಂದಿಗೂ ಬಿಡಲಿಲ್ಲ. ನನ್ನ ಸುಖಿ ಕುಟುಂಬವನ್ನು ನೀವು ನಾಶಪಡಿಸಿದಿರಿ. ನನ್ನ ಕುಟುಂಬಕ್ಕೆ ನೀವು ವಿಷ ಉಣಿಸಿದಿರಿ. ಈ ಪಾಪವನ್ನು ನಿಮ್ಮ ಮುಂದಿನ ಏಳು ತಲೆಮಾರುಗಳು ಅನುಭವಿಸಲಿವೆ. ಇದು ನನ್ನ ಶಾಪ" ಎಂದು ಹೇಳಿದ್ದರು. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.