Jagdeep Dhankhar: ಕಟು ಮಾತಿನ ಮೂಲಕ ವಿರೋಧ ಪಕ್ಷಗಳನ್ನು ಕೆರಳಿಸಿದ್ದ ಜಗದೀಪ್ ಧನ್‌ಕರ್
ಆರೋಗ್ಯ ಸಮಸ್ಯೆಗಳ (health reasons) ಕಾರಣದಿಂದ ಜಗದೀಪ್ ಧನ್‌ಕರ್ (Jagdeep Dhankhar ) ಭಾರತದ ಉಪರಾಷ್ಟ್ರಪತಿ (Vice President of India) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭೆಯ ಮೊದಲ ಮಳೆಗಾಲದ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಅವರು ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.


ನವದೆಹಲಿ: ಆರೋಗ್ಯ ಸಮಸ್ಯೆಗಳ (health reasons) ಕಾರಣದಿಂದ ಜಗದೀಪ್ ಧನ್‌ಖರ್ (Jagdeep Dhankhar) ಭಾರತದ ಉಪರಾಷ್ಟ್ರಪತಿ (Vice President of India) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭೆಯ ಮೊದಲ ಮಳೆಗಾಲದ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಅವರು ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ರಾಜ್ಯಸಭೆಯ ಅಧ್ಯಕ್ಷರೂ ಆಗಿದ್ದ ಅವರು ತಮ್ಮ ಅಧಿಕಾರಾವಧಿಯಲ್ಲಿ ತೀಕ್ಷ್ಣವಾದ ಮಾತುಗಳಿಂದ ವಿರೋಧ ಪಕ್ಷಗಳ ನಾಯಕರು ಕೆರಳುವಂತೆ ಮಾಡಿದ್ದರು. ಇದು ಕೆಲವೊಮ್ಮೆ ವಿವಾದವನ್ನು ಉಂಟು ಮಾಡಿತ್ತು.
ರಾಜಸ್ಥಾನದ ಜುನ್ಜುನು ಜಿಲ್ಲೆಯ ಕಿಥಾನಾ ಗ್ರಾಮದಲ್ಲಿ 1951ರ ಮೇ 18ರಂದು ಜನಿಸಿದ ಜಗದೀಪ್ ಧನ್‌ಕರ್ ರಾಜಸ್ಥಾನ ಬಾರ್ ಕೌನ್ಸಿಲ್‌ನಿಂದ ಭಾರತದ ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುವವರೆಗೆ ಸಾಕಷ್ಟು ಹೋರಾಟದ ಬದುಕನ್ನೇ ಸಾಗಿಸಿದ್ದಾರೆ.
2022ರ ಆಗಸ್ಟ್ ನಲ್ಲಿ ಭಾರತದ ಉಪಾಧ್ಯಕ್ಷ ಮತ್ತು ರಾಜ್ಯಸಭೆಯ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಅವರು ಅದೇ ವರ್ಷದ ಕೊನೆಯಲ್ಲಿ ಕೊನೆಯಲ್ಲಿ ಪ್ರತಿಪಕ್ಷಗಳೊಂದಿಗೆ ಮಾತಿನ ಸಂಘರ್ಷಕ್ಕೆ ಇಳಿದರು. 2023ರಲ್ಲಿ ನಡೆದ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಧನ್‌ಕರ್ ಸುಮಾರು 146 ಸಂಸದರನ್ನು ಅಮಾನತುಗೊಳಿಸಿ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾದರು.
ವಿರೋಧ ಪಕ್ಷಗಳನ್ನು ಕೆರಳಿಸಿದ್ದ ಧನ್‌ಕರ್
- ರಾಜ್ಯಸಭೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಧನ್‌ಕರ್ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾದರು. ಅವರು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC) ಕಾಯ್ದೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ನ 2015ರ ತೀರ್ಪನ್ನು ಟೀಕಿಸಿ ವಿವಾದ ಸೃಷ್ಟಿಸಿದರು.
- 2022ರ ಡಿಸೆಂಬರ್ ತಿಂಗಳಲ್ಲಿ ಧನ್‌ಕರ್‌ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಸರ್ಕಾರ "ನ್ಯಾಯಾಂಗವನ್ನು ಅಮಾನ್ಯಗೊಳಿಸಲು" ಪ್ರಯತ್ನಿಸುತ್ತಿದೆ ಎಂಬ ಹೇಳಿಕೆ ನೀಡಿ ವಿವಾದ ಉಂಟು ಮಾಡಿದರು.
- 2023ಈ ಡಿಸೆಂಬರ್ ತಿಂಗಳಲ್ಲಿ ಧನ್‌ಕರ್ ಹಲವಾರು ಮೇಲ್ಮನೆ ಸದಸ್ಯರ ಅಮಾನತುಗೊಳಿಸುವಿಕೆಯನ್ನು ಸಮರ್ಥಿಸಿಕೊಂಡರು, ಇದು ಕೂಡ ವಿರೋಧ ಪಕ್ಷಗಳನ್ನು ಕೆರಳಿಸಿತ್ತು.
- ಇದಾದ ಬಳಿಕ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರಿಗೆ ಪತ್ರ ಬರೆದ ಧನ್‌ಕರ್ ಸಂಸತ್ತಿನಲ್ಲಿ ನಡೆದ ಘಟನೆಯಲ್ಲಾದ ರಾಜಕೀಯ ಗ್ರಹಿಕೆಗಳ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದರು.
- 2024ರ ಫೆಬ್ರವರಿಯಲ್ಲಿ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಸಿಂಗ್ ವಿರುದ್ಧದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರ ಹೇಳಿಕೆಗಳನ್ನು ಧನ್‌ಕರ್ ಟೀಕಿಸಿದರು. ಇದನ್ನು ವಿರೋಧಿಸಿದ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
- 2024ರ ಮಾರ್ಚ್ ತಿಂಗಳಲ್ಲಿ ಧನ್‌ಕರ್ ವಿರೋಧ ಪಕ್ಷವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆಲವೆಡೆ ಪ್ರತಿಭಟನೆಗಳು ನಡೆದವು.
- 2024ರ ಜುಲೈ ತಿಂಗಳಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಹೇಳಿಕೆಗಳನ್ನು ಧನ್‌ಕರ್ ಟೀಕಿಸಿದರು. ಇದು ವಿರೋಧ ಪಕ್ಷದವರನ್ನು ಕೆರಳಿಸಿತ್ತು.
- 2024ರ ಜೂನ್‌ನಲ್ಲಿ ಪತ್ರಿಕೆ ಸೋರಿಕೆ ಕುರಿತು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು, ಧನ್‌ಕರ್ ಅವರಿಂದ ತೀವ್ರ ಟೀಕೆಗೆ ಕಾರಣವಾಯಿತು.
- 2024ರ ಜುಲೈ ತಿಂಗಳಲ್ಲಿ ಧನ್‌ಕರ್ ಅವರು ಕಳೆದ 25 ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಭಿಮಾನಿಯಾಗಿರುವುದಾಗಿ ಹೇಳಿದರು. ಅಲ್ಲದೇ ಅವರು ಬಿಜೆಪಿಯ ಸೈದ್ಧಾಂತಿಕ ಪೋಷಕ ಸಂಘಟನೆಯಾದ ಆರ್‌ಎಸ್‌ಎಸ್ ಅನ್ನು ಹೊಗಳಿದರು. ಇದು ಕೂಡ ಪ್ರತಿಪಕ್ಷಗಳ ಕೆಂಗಣ್ಣಿಗೆ ಅವರನ್ನು ಗುರಿಯಾಗಿಸಿತ್ತು.
- 2024ರ ಸೆಪ್ಟೆಂಬರ್ ನಲ್ಲಿ ಅಮೆರಿಕದಲ್ಲಿ ಮಾತನಾಡಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತದ ರಾಜಕೀಯದಲ್ಲಿ ಪ್ರೀತಿ, ಗೌರವ ಮತ್ತು ನಮ್ರತೆ ಕಾಣೆಯಾಗಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಧನ್‌ಕರ್ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದರು. ಅಲ್ಲದೇ ಅವರು ತಮ್ಮ ಮಾತಿನಲ್ಲಿ ರಾಷ್ಟ್ರದ ಶತ್ರುಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕಿಂತ ಹೆಚ್ಚು ಖಂಡನೀಯವಾದದ್ದು ಯಾವುದೂ ಇಲ್ಲ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Jagdeep Dhankhar: ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಪ್ ಧನಕರ್