Akshay Kumar: ಅಭಿಮಾನಿಯ ಫೋನ್ ಕಿತ್ತುಕೊಂಡು ಹಿಗ್ಗಾ-ಮುಗ್ಗಾ ಜಾಡಿಸಿದ ನಟ ಅಕ್ಷಯ್ ಕುಮಾರ್- ವಿಡಿಯೊ ನೋಡಿ
ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಕೂಡ ಅನುಮತಿ ಇಲ್ಲದೆ ತನ್ನ ವಿಡಿಯೋ ಮಾಡಿದ್ದ ಅಭಿಮಾನಿ ಮೇಲೆ ಸಿಟ್ಟಾಗಿದ್ದಾರೆ. ತಮ್ಮ ಒಪ್ಪಿಗೆ ಇಲ್ಲದೆ ವಿಡಿಯೋ ಮಾಡುತ್ತಿದ್ದ ಅಭಿ ಮಾನಿಯೊಬ್ಬರ ಜೊತೆಗೆ ನಟ ಅಕ್ಷಯ್ ಕುಮಾರ್ ಅವರು ಕೋಪಗೊಂಡು ವಾಗ್ವಾದಕ್ಕಿಳಿದಿದ್ದು ಸದ್ಯ ಅವರ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ...


ಲಂಡನ್: ಸೆಲೆಬ್ರಿಟಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಕಂಡಾಗ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ವಿಡಿಯೋ ಮಾಡುವುದು ಇತ್ಯಾದಿ ಸಾಮಾನ್ಯ. ಆದರೆ ಇದೇ ವಿಚಾರದಿಂದ ಅಭಿಮಾನಿಗಳ ಜೊತೆಗೆ ಕಿರಿಕ್ ಮಾಡಿಕೊಂಡ ಅದೆಷ್ಟೋ ನಟ ನಟಿಯರನ್ನು ನಾವು ನೋಡಿದ್ದೇವೆ. ಅಂತೆಯೇ ಈ ಬಾರಿ ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಅವರು ಕೂಡ ಅನುಮತಿ ಇಲ್ಲದೆ ತನ್ನ ವಿಡಿಯೋ ಮಾಡಿದ್ದ ಅಭಿಮಾನಿ ಮೇಲೆ ಸಿಟ್ಟಾಗಿದ್ದಾರೆ. ತಮ್ಮ ಒಪ್ಪಿಗೆ ಇಲ್ಲದೆ ವಿಡಿಯೋ ಮಾಡುತ್ತಿದ್ದ ಅಭಿಮಾನಿಯೊಬ್ಬರ ಜೊತೆಗೆ ನಟ ಅಕ್ಷಯ್ ಕುಮಾರ್ ಅವರು ಕೋಪಗೊಂಡು ವಾಗ್ವಾದಕ್ಕಿಳಿದಿದ್ದು ಸದ್ಯ ಅವರ ವಿಡಿಯೋ ಒಂದು ಸೋಶಿಯಲ್ ಮಿಡಿ ಯಾದಲ್ಲಿ ವೈರಲ್ ಆಗುತ್ತಿದೆ.
ನಟ ಅಕ್ಷಯ್ ಕುಮಾರ್ ಅವರು ತಮ್ಮ ಫ್ಯಾಮಿಲಿ ಜೊತೆಗೆ ಲಂಡನ್ ಗೆ ಪ್ರವಾಸಕ್ಕೆಂದು ತೆರಳಿ ದ್ದಾರೆ. ಲಂಡನ್ ನ ಆಕ್ಸ್ ಫರ್ಡ್ ಸ್ಟ್ರೀಟ್ ನಲ್ಲಿ ಅಕ್ಷಯ್ ಒಬ್ಬರೇ ವಾಕ್ ಮಾಡಿ ತೆರಳುತ್ತಿದ್ದಾಗ ಇವರನ್ನು ಅಭಿಮಾನಿ ಒಬ್ಬರು ಗುರುತಿಸಿದ್ದಾರೆ. ಅವರು ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಅಭಿಮಾನಿಯೂ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿರುವಾಗಲೇ ನಟ ಅಕ್ಷಯ್ ಕುಮಾರ್ ಇದನ್ನು ಗಮನಿಸಿದ್ದಾರೆ.
ಕೂಡಲೇ ಆ ವ್ಯಕ್ತಿ ಬಳಿ ಬಂದು ವಿಡಿಯೋ ಮಾಡುತ್ತಿರುವುದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಬಳಿಕ ಅಭಿಮಾನಿಯ ಫೋನನ್ನು ಕಸಿದುಕೊಂಡು ತನ್ನ ಅನುಮತಿ ಇಲ್ಲದೆ ವಿಡಿಯೋ ಮಾಡ ದಂತೆ ಎಚ್ಚರಿಸಿದ್ದಾರೆ. ಬಳಿಕ ಅಭಿಮಾನಿಯು ಕ್ಷಮೆಯಾಚಿಸಿದ್ದಕ್ಕೆ ಮನವಿ ಮಾಡಿದ್ದ ನಂತರ ಅವರ ಫೋನನ್ನು ನಟ ಅಕ್ಷಯ್ ಕುಮಾರ್ ಮರಳಿಸಿದ್ದಾರೆ. ಅನಂತರ ಅಭಿಮಾನಿಯ ಜೊತೆಗೆ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದ್ದು ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ರೀತಿ ವಿಡಿಯೋ ಮಾಡಿದ್ದ ವ್ಯಕ್ತಿಯು ಕೂಡ ಸ್ವತಃ ಸ್ಪಷ್ಟನೆ ನೀಡಿದ್ದಾರೆ. ಲಂಡನ್ ನಲ್ಲಿ ಅಕ್ಷಯ್ ಕುಮಾರ್ ಅವರಂತೆ ಒಬ್ಬ ವ್ಯಕ್ತಿ ಯನ್ನು ನೋಡಿದೆ ಹತ್ತಿರಕ್ಕೆ ಹೋದಾಗ ಅವರೆ ಎಂಬುದು ನನಗೆ ಖಾತರಿಯಾಯಿತು. ಆದರೆ ಅವರ ವಿಡಿಯೋ ಚಿತ್ರೀಕರಿಸುತ್ತಿದ್ದಂತೆ ಅವರು ಕೋಪಗೊಂಡು ನನ್ನ ಮೊಬೈಲ್ ಅನ್ನು ಕಸಿದು ಕೊಂಡರು. ಬಳಿಕ ನನ್ನ ಬಳಿ ಅವರು ಮಾತನಾಡಿದ್ದು, ವೈಯಕ್ತಿಕ ಉದ್ದೇಶದಿಂದ ಬಂದಿದ್ದೇನೆ, ನನಗೆ ತೊಂದರೆ ಕೊಡಬೇಡಿ. ನನ್ನ ಫೋಟೋ ಅಥವಾ ವಿಡಿಯೋ ತೆಗೆಯಬೇಡಿ ಎಂದು ಮನವಿ ಮಾಡಿದರು. ಆ ಬಳಿಕ ಅವರೊಂದಿಗೆ ಫೋಟೊ ಕೂಡ ಕ್ಲಿಕ್ಕಿಸಿಕೊಂಡೆ. ಅದನ್ನು ಬಿಟ್ಟು ನಮ್ಮ ನಡುವೆ ಯಾವ ಸಮಸ್ಯೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಕ್ಷಯ್ ಕುಮಾರ್ ಅಭಿನಯದ ಹೌಸ್ ಫುಲ್ 5 ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಕೂಡ ಮಾಡಿತ್ತು. ಇದಾದ ಬಳಿಕ ವೆಲ್ಕಮ್ ಟು ದಿ ಜಂಗಲ್ ಚಿತ್ರದಲ್ಲಿಯೂ ನಟಿಸಲಿದ್ದು ಈ ಸಿನಿಮಾ ಈ ವರ್ಷದ ಕೊನೆಗೆ ರಿಲೀಸ್ ಆಗಲಿದೆ. ಇದಾದ ಬಳಿಕ ಜಾಲಿ ಎಲ್ಎಲ್ ಬಿ 3 ಮತ್ತು ಹೈವಾನ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಮೂಲಕ ಅಕ್ಷಯ್ ಕುಮಾರ್ ಅವರು ಅಭಿಮಾನಿಗಳನ್ನು ಮನರಂಜಿಸಲಿದ್ದಾರೆ.