IND vs ENG: 8 ವರ್ಷಗಳ ಬಳಿಕ ಇಂಗ್ಲೆಂಡ್ ತಂಡಕ್ಕೆ ಮರಳಿದ ಲಿಯಾಮ್ ಡಾಸನ್ ಯಾರು?
Who is Liam Dawson?: ಭಾರತ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದ ಪ್ಲೇಯಿಂಗ್ XI ಅನ್ನು ಪ್ರಕಟಿಸಲಾಗಿದೆ. ಎಂಟು ವರ್ಷಗಳ ಬಳಿಕ ಇಂಗ್ಲೆಂಡ್ ತಂಡಕ್ಕೆ ಲಿಯಾಮ್ ಡಾಸನ್ ಮರಳಿದ್ದಾರೆ. ಗಾಯಾಳು ಶೋಯೆಬ್ ಬಶೀರ್ ಅವರ ಸ್ಥಾನಕ್ಕೆ ಡಾಸನ್ ಮರಳಿದ್ದಾರೆ. ಅವರು 2017ರಲ್ಲಿ ಕೊನೆಯ ಬಾರಿ ಇಂಗ್ಲೆಂಡ್ ಪರ ಆಡಿದ್ದರು.

ಇಂಗ್ಲೆಂಡ್ ತಂಡಕ್ಕೆ ಮರಳಿದ ಲಿಯಾಮ್ ಡಾಸನ್ ಯಾರು?

ನವದೆಹಲಿ: ಎಂದಿನಂತೆ ಭಾರತ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ (IND vs ENG) ಆರಂಭಕ್ಕೂ ಒಂದು ದಿನದ ಮುನ್ನ ಇಂಗ್ಲೆಂಡ್ ತಂಡದ (England Playing XI) ಪ್ಲೇಯಿಂಗ್ XI ಅನ್ನು ಪ್ರಕಟಿಸಲಾಗಿದೆ. ಗಾಯಾಳು ಶೋಯೆಬ್ ಬಶೀರ್ ಅವರ ಸ್ಥಾನಕ್ಕೆ ಮತ್ತೊರ್ವ ಸ್ಪಿನ್ನರ್ ಲಿಯಾಮ್ ಡಾಸನ್(Liam Dawson) ಅವರಿಗೆ ಇಂಗ್ಲೆಂಡ್ ಪ್ಲೇಯಿಂಗ್ XIನಲ್ಲಿ ಅವಕಾಶವನ್ನು ನೀಡಲಾಗಿದೆ. ಎಂಡು ವರ್ಷಗಳ ಬಳಿಕ ಲಿಯಾಮ್ ಡಾಸನ್ ಇಂಗ್ಲೆಂಡ್ ತಂಡಕ್ಕೆ ಮರಳಿದಾರೆ. 2017ರಲ್ಲಿ ಅವರು ಕೊನೆಯ ಬಾರಿ ಇಂಗ್ಲೆಂಡ್ ತಂಡದಲ್ಲಿ ಆಡಿದ್ದರು. ಅಂದಹಾಗೆ ಶೋಯೆಬ್ ಬಶೀರ್ ಅವರು ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಟೆಸ್ಟ್ ಸರಣಿಯ ಇನ್ನುಳಿದ ಭಾಗದಿಂದ ಹೊರ ಬಿದ್ದಿದ್ದಾರೆ. ಮೂರು ಪಂದ್ಯಗಳ ಅಂತ್ಯಕ್ಕೆ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ 2-1 ಮುನ್ನಡೆ ಪಡೆದಿದೆ.
2016ರಲ್ಲಿ ಲಿಯಾಮ್ ಡಾಸನ್ ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಕರುಣ್ ನಾಯರ್ ಅವರು 303 ರನ್‌ಗಳನ್ನು ಕಲೆ ಹಾಕಿದ್ದರು. ಈ ಪಂದ್ಯದಲ್ಲಿ ಡಾಸನ್ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ 66 ರನ್‌ಗಳು ಹಾಗೂ 2 ವಿಕೆಟ್‌ಗಳನ್ನು ಕಬಳಿಸಿದ್ದರು. ಇನ್ನು ಇವರು ದಕ್ಷಿಣ ಆಫ್ರಿಕಾ ವಿರುದ್ಧ 2017ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.
ರಾಷ್ಟ್ರೀಯ ತಂಡದಲ್ಲಿ ಲಿಯಾಮ್ ಡಾಸನ್ ಹೆಚ್ಚು ದಿನಗಳ ಕಾಲ ಆಡಲು ಸಾಧ್ಯವಾಗಿರಲಿಲ್ಲ. ಆದರೆ, ಅವರು ಹ್ಯಾಂಪ್‌ಶೈರ್ ತಂಡದ ಪರ ದೇಶಿ ಕ್ರಿಕೆಟ್‌ನಲ್ಲಿ ನಿಯಮಿತವಾಗಿ ಆಡುತ್ತಿದ್ದಾರೆ. ಎಡಗೈ ಸ್ಪಿನ್ನರ್ 212 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 10,731 ರನ್‌ಗಳು ಹಾಗೂ 371 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ತಮ್ಮ ಆಲ್‌ರೌಂಡ್ ಪ್ರದರ್ಶನವನ್ನು ತೋರಿದ್ದಾರೆ.
ENG vs IND: 4ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ; 8 ವರ್ಷದ ಬಳಿಕ ಮರಳಿದ ಸ್ಪಿನ್ನರ್
ಪ್ರಸ್ತುತ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಷಿಪ್ ಪ್ರಥಮ ಡಿವಿಷನ್‌ನಲ್ಲಿ ಆಡುತ್ತಿರುವ ಲಿಯಾಮ್ ಡಾಸನ್ ಅವರು 9 ಪಂದ್ಯಗಳಿಂದ 44.66ರ ಸರಾಸರಿಯಲ್ಲಿ 536 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಹ್ಯಾಂಪ್‌ಶೈರ್ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಆಗಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಮಿಂಚಿರುವ ಅವರು 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ತಾವು ಆಲ್‌ರೌಂಡರ್ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇದೀಗ ಇಂಗ್ಲೆಂಡ್ ತಂಡಕ್ಕೆ ಅಚ್ಚರಿ ರೀತಿಯಲ್ಲಿ ಎಂಟ್ರಿ ಕೊಟ್ಟಿರುವ ಲಿಯಾಮ್ ಡಾಸನ್ ಅವರು, ಸ್ಪಿನ್ ಜೊತೆಗೆ ಬ್ಯಾಟಿಂಗ್‌ನಲ್ಲಿ ಡೆಪ್ತ್ ತಂದುಕೊಡಲಿದ್ದಾರೆ. ಡಾಸನ್ ಸೇರ್ಪಡೆಯಿಂದ ಇಂಗ್ಲೆಂಡ್ ತಂಡದ ಕೆಳ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಲಿದೆ. ಡಾಸನ್ ಸೇರ್ಪಡೆಯಿಂದ ಬ್ರೈಡೆನ್ ಕಾರ್ಸ್ ಅವರು 10ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಡಾಸನ್ ಅವರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗಳಿಸಿರುವ ರನ್‌ಗಳನ್ನು ಎದುರಾಳಿ ಭಾರತ ತಂಡದ ಯಾವುದೇ ಬ್ಯಾಟ್ಸ್‌ಮನ್ ಗಳಿಸಿಲ್ಲ. ಆದರೆ ಕರುಣ್ ನಾಯರ್ ಅವರು 8601 ಪ್ರಥಮ ದರ್ಜೆ ರನ್‌ಗಳನ್ನು ಕಲೆ ಹಾಕಿ ಇಂಗ್ಲೆಂಡ್ ಆಲ್‌ರೌಂಡರ್‌ಗೆ ಸನಿಹವಾಗಿದ್ದಾರೆ.
IND vs ENG: 4ನೇ ಪಂದ್ಯದ ಪಿಚ್ ರಿಪೋರ್ಟ್; ಹವಾಮಾನ ವರದಿ ಹೀಗಿದೆ
ಇಂಗ್ಲೆಂಡ್ ಪ್ಲೇಯಿಂಗ್ XI
- ಝ್ಯಾಕ್ ಕ್ರಾವ್ಲಿ
- ಬೆನ್ ಡಕೆಟ
- ಒಲ್ಲಿ ಪೋಪ್
- ಜೋ ರೂಟ್
- ಹ್ಯಾರಿ ಬ್ರೂಕ್
- ಬೆನ್ ಸ್ಟೋಕ್ಸ್ (ನಾಯಕ)
- ಜೇಮೀ ಸ್ಮಿತ್ (ವಿ.ಕೀ)
- ಲಿಯಾಮ್ ಡಾಸನ್
- ಕ್ರಿಸ್ ವೋಕ್ಸ್
- ಬ್ರೈಡನ್ ಕಾರ್ಸ್
- ಜೋಫ್ರಾ ಆರ್ಚರ್