ಜೈಲಿನಲ್ಲಿ ಕೈದಿಯನ್ನು ಮರಕ್ಕೆ ಕಟ್ಟಿ ಹಾಕಿ ನಿರ್ದಯವಾಗಿ ಥಳಿಸಿದ ಜೈಲಾಧಿಕಾರಿ; ವ್ಯಾಪಕ ಆಕ್ರೋಶ
Jail officer brutally beats: ಜೈಲಿನೊಳಗೆ ಮಾನವೀಯತೆಯನ್ನು ಮರೆತು ಪೊಲೀಸರು ವರ್ತಿಸಿದ ಘಟನೆಯೊಂದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಕೈದಿಯನ್ನು ಮರಕ್ಕೆ ಕಟ್ಟಿ ಹಾಕಿ ಜೈಲಧಿಕಾರಿಯೊಬ್ಬ ನಿರ್ದಯವಾಗಿ ಥಳಿಸಿದ ಆರೋಪ ಕೇಳಿಬಂದಿದ್ದು, ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಕೈದಿಯನ್ನು ಮರಕ್ಕೆ ಕಟ್ಟಿ ಹಾಕಿ ನಿರ್ದಯವಾಗಿ ಥಳಿಸಿದ ಜೈಲಾಧಿಕಾರಿ -
ಭೋಪಾಲ್, ಫೆ. 8: ಮಧ್ಯ ಪ್ರದೇಶದ ಜೈಲಿನಲ್ಲಿ ಕೈದಿಯೊಬ್ಬನನ್ನು ಮರಕ್ಕೆ ಕಟ್ಟಿಹಾಕಿ ನಿರ್ದಯವಾಗಿ ಥಳಿಸಲಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದೆ. ಇದು ಜೈಲಿನಲ್ಲಿ ನಡೆದ ದೌರ್ಜನ್ಯದ ಆಘಾತಕಾರಿ ಪ್ರಕರಣವನ್ನು ಬಹಿರಂಗಪಡಿಸಿದೆ. ಗುನಾದ ಚಾಚೋಡಾ ಸಬ್-ಜೈಲಿನೊಳಗೆ ಮರಕ್ಕೆ ಕಟ್ಟಿಹಾಕಲ್ಪಟ್ಟ ಕೈದಿಯೊಬ್ಬನನ್ನು ಸಬ್-ಜೈಲರ್ ನಿರ್ದಯವಾಗಿ ಕೋಲಿನಿಂದ ಹೊಡೆದಿದ್ದಾನೆ (Jail officer brutally beats).
ಈ ಘಟನೆ ಸುಮಾರು ಆರು ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಸಬ್-ಜೈಲರ್ ನಿಯಮಿತವಾಗಿ ಕೈದಿಗಳಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿವೆ. ಕೈದಿಗಳ ಕುಟುಂಬಗಳಿಂದ ಅಕ್ರಮವಾಗಿ ಸುಲಿಗೆ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ. ಈ ಘಟನೆ ಬಗ್ಗೆ ಪರಿಶೀಲಿಸುವ ಸಲುವಾಗಿ ಮಾಧ್ಯಮವೊಂದು ಜೈಲಿಗೆ ಭೇಟಿ ನೀಡಿತ್ತು. ಆದರೆ ಆ ದಿನ ಸಬ್ ಜೈಲರ್ ಕರ್ತವ್ಯಕ್ಕೆ ಗೈರುಹಾಜರಾಗಿದ್ದ. ವರದಿಯ ಪ್ರಕಾರ ಮೂರು ನಾಲ್ಕು ದಿನಗಳಿಂದ ರಜೆಯಲ್ಲಿದ್ದ. ಹಾಜರಿದ್ದ ಅಧಿಕಾರಿಗಳು ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.
20 ರುಪಾಯಿ ಲಂಚ ಪ್ರಕರಣ: 30 ವರ್ಷಗಳ ನಂತರ ನಿರ್ದೋಷಿ ಎಂದ ಕೋರ್ಟ್, ಮರುದಿನವೇ ವ್ಯಕ್ತಿ ಸಾವು
ಮೂರು ದಿನಗಳ ಹಿಂದೆ ಮಾಧ್ಯಮ ವರದಿಗಳ ಮೂಲಕ ವಿಡಿಯೊ ಬಗ್ಗೆ ತಿಳಿದುಕೊಂಡಿದ್ದಾಗಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರವಿ ಮಾಳವೀಯ ದೃಢಪಡಿಸಿದರು. ಈ ವಿಡಿಯೊದ ಸತ್ಯಾಸತ್ಯತೆ ಮತ್ತು ಸಮಯದ ಬಗ್ಗೆ ಪರಿಶೀಲಿಸಲು ಹಿರಿಯ ಅಧಿಕಾರಿಗಳಿಗೆ ಈ ದೃಶ್ಯಗಳನ್ನು ಕಳುಹಿಸಲಾಗಿದೆ ಎಂದು ಅವರು ಹೇಳಿದರು. ತನಿಖಾ ವರದಿ ಬಂದ ನಂತರ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕ್ರೌರ್ಯದ ಹೊರತಾಗಿಯೂ ಈ ವಿಡಿಯೊವು ಮತ್ತೊಂದು ಆತಂಕಕಾರಿ ವಿಚಾರವನ್ನು ತೆರೆದಿಟ್ಟಿದೆ. ಹೆಚ್ಚಿನ ಭದ್ರತೆಯ ಜೈಲು ಪ್ರದೇಶಕ್ಕೆ ಮೊಬೈಲ್ ಫೋನ್ ಅನ್ನು ಹೇಗೆ ತೆಗೆದುಕೊಂಡು ಬರಲಾಯಿತು? ಈ ವಿಡಿಯೊವನ್ನು ಯಾರು ರೆಕಾರ್ಡ್ ಮಾಡಿದರು? ಮತ್ತು ಅದನ್ನು ತಿಂಗಳುಗಳ ಕಾಲ ಏಕೆ ಮರೆಮಾಡಲಾಗಿತ್ತು? ಎಂಬ ಪ್ರಶ್ನೆಗಳು ಉದ್ಭವಿಸಿದೆ. ಜಿಲ್ಲಾಡಳಿತವು ಈಗ ವಿಡಿಯೊದ ಮೂಲವನ್ನು ಪತ್ತೆಹಚ್ಚಲು ಮತ್ತು ಜೈಲಿನ ಭದ್ರತೆಯಲ್ಲಿನ ಸಂಭಾವ್ಯ ಲೋಪಗಳನ್ನು ಗುರುತಿಸಲು ಸಮಾನಾಂತರ ತನಿಖೆಯನ್ನು ಪ್ರಾರಂಭಿಸಿದೆ.
ವಂಟಮೂರಿ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; 12 ಆರೋಪಿಗಳಿಗೆ 5 ವರ್ಷ ಜೈಲು ಶಿಕ್ಷೆ
ರಾಜ್‌ಪಾಲ್ ಯಾದವ್ ಚೆಕ್ ಬೌನ್ಸ್ ಪ್ರಕರಣ
ಹಳೆಯ ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಖ್ಯಾತ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ತಿಹಾರ್ ಜೈಲಿಗೆ ಶರಣಾಗಿದ್ದಾರೆ. ತಿಹಾರ್ ಜೈಲಿನ ಮೂಲಗಳ ಪ್ರಕಾರ, ದೆಹಲಿ ಹೈಕೋರ್ಟ್‌ನ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ರಾಜ್‌ಪಾಲ್ ಯಾದವ್ ಜೈಲು ಅಧಿಕಾರಿಗಳಿಗೆ ಶರಣಾಗಿದ್ದಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಲು ನ್ಯಾಯಾಲಯ ಅವರಿಗೆ ಜೈಲಿಗೆ ಶರಣಾಗುವಂತೆ ಆದೇಶಿಸಿತ್ತು.