Karthigai Deepam: ಕೊನೆಗೂ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ
Karthigai Deepam festival: ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿರುವ ತಿರುಪ್ಪರಂಕುಂದ್ರಂನ ಅಣ್ಣಾಮಲೈ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗಿದೆ. ಕಾರ್ತಿಕ ದೀಪೋತ್ಸವ ಪ್ರಯುಕ್ತ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ಉಚ್ಚಿ ಪಿಳ್ಳೈಯಾರ್ ದೇವಾಲಯದ ಮೇಲ್ಭಾಗದಲ್ಲಿ ದೀಪ ಬೆಳಗಿಸಲಾಯಿತು.
ಸಾಂದರ್ಭಿಕ ಚಿತ್ರ -
ಚೆನ್ನೈ, ನ. 24: ಭಾರಿ ವಿವಾದದ ಬಳಿಕ ಕೊನೆಗೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿರುವ ತಿರುಪ್ಪರಂಕುಂದ್ರಂನ ಅಣ್ಣಾಮಲೈ ಬೆಟ್ಟದ ಮೇಲೆ ಕೊನೆಗೂ ಕಾರ್ತಿಕ ದೀಪ (Karthigai Deepam) ಬೆಳಗಿದೆ. ಕಾರ್ತಿಕ ದೀಪೋತ್ಸವ ಪ್ರಯುಕ್ತ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ವಿವಾದಿತ ಕಲ್ಲಿನ ಸ್ತಂಭದ ಬಳಿ ಮಂಗಳವಾರ (ನವೆಂಬರ್ 24) ದೀಪ ಬೆಳಗಿಸಲಾಯಿತು. ಆದರೆ ಕಲ್ಲಿನ ಕಂಬದ (ದೀಪಸ್ತಂಭ) ಬದಲಿಗೆ ಎಂದಿನಂತೆ ಉಚ್ಚಿ ಪಿಳ್ಳೈಯಾರ್ ದೇವಾಲಯದ ಮೇಲ್ಭಾಗದಲ್ಲಿ ದೀಪವನ್ನು ಬೆಳಗಿಸಲಾಯಿತು.
ಈ ದೀಪವನ್ನು ಬೆಳಗಿಸುವ ಮುನ್ನ, ಸುಪ್ರೀಂ ಕೋರ್ಟ್ ನಿರ್ದೇಶಿಸಿದಂತೆ ದೀಪಸ್ತಂಭದಲ್ಲೇ ದೀಪ ಬೆಳಗಿಸಬೇಕೆಂದು ಆಗ್ರಹಿಸಿ ಕೆಲವು ಹಿಂದೂ ಸಂಘಟನೆಗಳ ಸದಸ್ಯರು ತಿರುಪ್ಪರಂಕುಂದ್ರಂ ಬೆಟ್ಟದ ಬಳಿ ಪ್ರತಿಭಟನೆ ನಡೆಸಿದರು.
ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ಈಪ ಬೆಳಗಲಾಯಿತು:
#WATCH | Thiruparankundram, Tamil Nadu | The Maha Deepam lit at the Annamalai Hills in Thiruparankundram as part of the annual Karthigai Deepam festival. Deepam lit at Ucchi Pillayar Temple, where the lamp is traditionally lit on Karthigai Deepam day. https://t.co/KVMSKVCW1d
— ANI (@ANI) November 24, 2026
ತಿರುಪರಂಕುಂದ್ರಂನಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಗಳ ಅಡಿಯಲ್ಲಿ ಅಕ್ರಮವಾಗಿ ಬಂಧಿಸಲ್ಪಟ್ಟಿದ್ದ ಎಲ್ಲರನ್ನು ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಆದೇಶಿಸಿದೆ ಎಂದು ಎಎನ್‌ಐ (ANI) ವರದಿ ಮಾಡಿದೆ. ಅಲ್ಲದೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಕಾರ್ತಿಕ ದೀಪ ಕುರಿತಾದ ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲಿಸುವಂತೆ ಸೂಚಿಸಿತು. ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆಗಳನ್ನು ಜಾರಿಗೊಳಿಸಿದರು.
'ದೇವಾಲಯದಲ್ಲಿ ದೀಪ ಹಚ್ಚಲೇಬೇಕು': ಮಧುರೈ ಬೆಟ್ಟದ ದೀಪ ವಿವಾದ ಆದೇಶ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್
ಕೋರ್ಟ್ ಹೇಳಿದ್ದೇನು?
ವಿವಾದದ ಬಗ್ಗೆ ನವೆಂಬರ್ 20ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ʼʼನ. 24ರಂದು ನಡೆಯಲಿರುವ ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ವಿವಾದಿತ ಕಲ್ಲಿನ ಸ್ತಂಭದ ಬಳಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಿಂದ ಮತ್ತು ಸರ್ಕಾರಿ ಅಧಿಕಾರಿಗಳು ಮಾತ್ರ ದೀಪ ಬೆಳಗುವ ಧಾರ್ಮಿಕ ವಿಧಿಯನ್ನು ನೆರವೇರಿಸಬಹುದು. ಸಾರ್ವಜನಿಕರಿಗೆ ಪ್ರವೇಶವಿಲ್ಲʼʼ ಎಂದು ಆದೇಶ ನೀಡಿತ್ತು.
ದೀಪ ಹಚ್ಚಿದ ನಂತರ ಸ್ಥಳದಲ್ಲಿ ಯಾವುದೇ ವಸ್ತುಗಳನ್ನು ಬಿಟ್ಟು ಹೋಗಬಾರದು. ಯಾವುದೇ ಉತ್ಖನನ, ನಿರ್ಮಾಣ ಅಥವಾ ಕಂಬಕ್ಕೆ ಹಾನಿ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸೂಚಿಸಿತ್ತು. ಅಲ್ಲದೆ, ಪಕ್ಕದಲ್ಲಿರುವ ದರ್ಗಾ ಮತ್ತು ಇತರ ಧಾರ್ಮಿಕ ಸಂಸ್ಥೆಗಳ ಪ್ರವೇಶಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್ ಹೇಳಿತ್ತು.
ವಿವಾದದ ಹಿನ್ನೆಲೆ
ತಿರುಪ್ಪರಂಕುಂದ್ರಂ ಬೆಟ್ಟದ ಕೆಳಭಾಗದಲ್ಲಿರುವ ಉಚ್ಚಿ ಪಿಳ್ಳೈಯಾರ್ ದೇವಸ್ಥಾನದ ಬಳಿಯ ದೀಪ ಮಂಟಪದಲ್ಲಿ ಕಾರ್ತಿಕ ದೀಪ ಬೆಳಗುವುದು ವಾಡಿಕೆ. ಆದರೆ ಬೆಟ್ಟದ ಮೇಲ್ಭಾಗದಲ್ಲಿ ದರ್ಗಾದ ಸಮೀಪವಿರುವ ಕಲ್ಲಿನ ಸ್ತಂಭವಾದ ದೀಪತ್ತೂಣ್ ಮೇಲೆ ಸಾಂಪ್ರದಾಯಿಕ ದೀಪ ಬೆಳಗಬೇಕು ಎಂಬ ಬೇಡಿಕೆ ಕೇಳಿಬಂದಿತ್ತು. ಅದರಂತೆ 2025ರ ಡಿಸೆಂಬರ್‌ನಲ್ಲಿ ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠವು ದೀಪತ್ತೂಣ್‌ನಲ್ಲಿ ದೀಪ ಬೆಳಗಲು ಅನುಮತಿ ನೀಡಿತ್ತು ಹಾಗೂ 2026ರ ಜನವರಿ 6ರಂದು ವಿಭಾಗೀಯ ಪೀಠವು ಅದನ್ನು ಎತ್ತಿಹಿಡಿದಿತ್ತು. ಕಾನೂನು ಸುವ್ಯವಸ್ಥೆ ಮತ್ತು ಧಾರ್ಮಿಕ ಸೂಕ್ಷ್ಮತೆಯ ಕಾರಣ ನೀಡಿ ತಮಿಳುನಾಡು ಸರ್ಕಾರ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.
ವಿವಾದಿತ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗಲು ಸುಪ್ರೀಂ ಕೋರ್ಟ್ ಷರತ್ತುಬದ್ಧ ಅನುಮತಿ
ಮಧುರೈ ಹೊರವಲಯದಲ್ಲಿರುವ ತಿರುಪ್ಪರಂಕುಂದ್ರಂ ಬೆಟ್ಟವು ಸುಮಾರು 1,050 ಅಡಿ ಎತ್ತರವಿದೆ. ಇದರ ತಪ್ಪಲಿನಲ್ಲಿ ಶತಮಾನಗಳಿಂದ ಹಿಂದೂಗಳ ಆರಾಧನಾ ಕೇಂದ್ರವಾಗಿರುವ ಅರುಲ್ಮಿಗು ಸುಬ್ರಹ್ಮಣ್ ಸುಬ್ರಹ್ಮಣ್ಯ ಸ್ವಾಮಿ ಗುಹಾಂತರ ದೇವಾಲಯವಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.