ಉಗ್ರ ಮಸೂದ್ ಅಝರ್‌ನ ಭಯಾನಕ ಸಂಚನ್ನು ವಿಫಲಗೊಳಿಸಿದ ಭಾರತೀಯ ಸೇನೆ; ಅತೀ ದೊಡ್ಡ ದುರಂತ ತಪ್ಪಿದ್ದು ಹೇಗೆ?
ಜಮ್ಮು ಜೈಲಿನಿಂದ ಉಗ್ರ ಮಸೂದ್ ಅಝರ್ ಪರಾರಿಯಾಗಲು ನೆರವಾಗುವಂತೆ ಸಿನಿಮೀಯ ರೀತಿಯಲ್ಲಿ ಸಂಚು ರೂಪಿಸಿ, ತಪ್ಪಿಸಿಕೊಳ್ಳುವ ವೇಳೆ ಸಿಕ್ಕಿ ಹಾಕಿಕೊಂಡಿದ್ದೆವು ಎಂದು ಉಗ್ರ ಅಝರ್ ಹೇಳಿದ್ದಾನೆ. ಎಲ್ಲರನ್ನು ಎಳೆದೊಯ್ದ ಅಧಿಕಾರಿಗಳು ಹಿಗ್ಗಾಮುಗ್ಗಾ ಥಳಿಸಿದ್ದರು ಎಂಬ ಆಘಾತಕಾರಿ ವಿಷಯ ಬಯಲಾಗಿದೆ. ಈ ಘಟನೆಯು ತನ್ನ ಜೀವನದ ಅತ್ಯಂತ ಕಠಿಣ ಕ್ಷಣಗಳಲ್ಲಿ ಒಂದು ಎಂದು ಅಝರ್ ಹೇಳಿಕೊಂಡಿದ್ದಾನೆ.
ಉಗ್ರ ಮಸೂದ್ ಅಝರ್ -
ನವದೆಹಲಿ, ಡಿ. 14: ನಿಷೇಧಿತ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್‌ನ ಮುಖ್ಯಸ್ಥ(Pakistan-based terror group Jaish-e-Mohammed) ಮಸೂದ್ ಅಝರ್ (Terrorist Masood Azhar) ಜಮ್ಮುವಿನಲ್ಲಿ ತಾನು ಬಂಧನದಲ್ಲಿದ್ದ ಸಮಯದಲ್ಲಿ ಜೈಲಿನಿಂದ ಪರಾರಿಯಾಗುವಂತೆ ಉಗ್ರರ ತಂಡ ರೂಪಿಸಿದ್ದ ಭೀಕರ ಸಂಚು ವಿಫಲ ಆಗಿದ್ದ ಘಟನೆ ಬಗ್ಗೆ ಮೆಲಕು ಹಾಕಿದ್ದಾನೆ. ಈ ಘಟನೆಯ ನಂತರ ಸೇನಾ ಸಿಬ್ಬಂದಿ ತನ್ನ ಮೇಲೆ ಹೀನಾಯವಾಗಿ ಹಲ್ಲೆ ನಡೆಸಿದ್ದರು ಎಂದಿದ್ದು, ಆ ಬಳಿಕ ನಾನು ಮಾನಸಿಕ ಹಾಗೂ ದೈಹಿಕವಾಗಿ ಯಾತನೆಗೆ ಒಳಗಾಗಿದೆ ಎಂದು ಹೇಳಿದ್ದಾನೆ.
ಜಮ್ಮುವಿನ ಜೈಲಿನಲ್ಲಿ ಬಂಧಿತನಾಗಿದ್ದ ಸಂದರ್ಭದಲ್ಲಿ ತನ್ನನ್ನು ಬಿಡುಗಡೆಗೊಳಿಸಲು ಉಗ್ರ ಸಂಘಟನೆಯ ಸಹಚರರು ರೂಪಿಸಿದ್ದ ಸಂಚು ಸಂಪೂರ್ಣವಾಗಿ ವಿಫಲವಾಯಿತು ಎಂದು ಅಝರ್ ಹೇಳಿಕೊಂಡಿದ್ದಾನೆ. ಭದ್ರತಾ ಪಡೆಗಳು ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿದ್ದರಿಂದ ನನ್ನ ಸಹಚರರು ರೂಪಿಸಿದ್ದ ಸಂಚನ್ನು ಭೇದಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದರು ಎಂದಿದ್ದಾನೆ.
ಅಝರ್ ಹೇಳಿಕೆಯ ಪ್ರಕಾರ, ಈ ಘಟನೆಯ ನಂತರ ಆತ ಭದ್ರತಾ ಸಿಬ್ಬಂದಿ ಆತನ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಈ ವೇಳೆ ಜೈಲಿನೊಳಗೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಉದ್ವಿಗ್ನತೆ ಉಂಟಾಗಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿತ್ತು ಎನ್ನಲಾಗಿದೆ. ಈ ಘಟನೆಯು ತನ್ನ ಜೀವನದ ಅತ್ಯಂತ ಕಠಿಣ ಮತ್ತು ನೋವಿನ ಕ್ಷಣಗಳಲ್ಲಿ ಒಂದಾಗಿತ್ತು ಎಂದು ಆತ ತನ್ನ ಬೆಂಬಲಿಗರ ಮುಂದೆ ಹೇಳಿಕೊಂಡಿದ್ದಾನೆ.
ಭಾರತದ ಭದ್ರತಾ ಸಂಸ್ಥೆಗಳ ಪ್ರಕಾರ, ಮಸೂದ್ ಅಝರ್ ಹಲವು ಭಯೋತ್ಪಾದಕ ದಾಳಿಗಳ ಹಿಂದಿರುವ ಪ್ರಮುಖ ಸೂತ್ರಧಾರನಾಗಿದ್ದು, ಪಠಾಣ್‌ಕೋಟ್ ದಾಳಿ, ಪುಲ್ವಾಮಾ ಆತ್ಮಾಹುತಿ ದಾಳಿ ಸೇರಿದಂತೆ ಅನೇಕ ಉಗ್ರ ಕೃತ್ಯಗಳಿಗೆ ಸಂಬಂಧ ಹೊಂದಿದ್ದಾನೆ. ಭಾರತ ಮಾತ್ರವಲ್ಲದೆ, ಅಮೆರಿಕ ಹಾಗೂ ಇತರ ಹಲವು ರಾಷ್ಟ್ರಗಳು ಆತನನ್ನು ಭಯೋತ್ಪಾದಕನಾಗಿ ಘೋಷಿಸಿವೆ. 2019ರಲ್ಲಿ ಸಂಯುಕ್ತ ರಾಷ್ಟ್ರಗಳ ಭದ್ರತಾ ಮಂಡಳಿ ಕೂಡಾ ಅಝರ್ ಅನ್ನು ಜಾಗತಿಕ ಉಗ್ರ ಎಂದು ಘೋಷಿಸಿತು.
ಜನರ ನೆಗೆಟಿವ್ ಕಮೆಂಟ್ ನಮಗೆ ಎಫೆಕ್ಟ್ ಆಗಲ್ಲ; ವಿಜಯಲಕ್ಷ್ಮಿ
ಭದ್ರತಾ ತಜ್ಞರ ಅಭಿಪ್ರಾಯದಂತೆ, ಇಂತಹ ಹೇಳಿಕೆಗಳ ಮೂಲಕ ಮಸೂದ್ ಅಝರ್ ತನ್ನ ಅನುಯಾಯಿಗಳಲ್ಲಿ ಸಹಾನುಭೂತಿ ಹುಟ್ಟುಹಾಕುವ ಹಾಗೂ ತನ್ನ ಉಗ್ರ ಚಟುವಟಿಕೆಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ನಡೆಸುತ್ತಿದ್ದಾನೆ. ಜೈಲಿನಿಂದ ತಪ್ಪಿಸಿಕೊಳ್ಳಲು ನಡೆದ ವಿಫಲ ಯತ್ನ ಹಾಗೂ ಹಲ್ಲೆ ಕುರಿತ ಕಥನವನ್ನು ಬಳಸಿಕೊಂಡು ತನ್ನನ್ನು ‘ಹಿಂಸೆಗೆ ಒಳಗಾದ ವ್ಯಕ್ತಿ’ ಎಂದು ಚಿತ್ರಿಸುವುದು ಆತನ ಉದ್ದೇಶವಾಗಿರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. ಆದರೆ ಭಾರತದ ಭದ್ರತಾ ಪಡೆಗಳು ಉಗ್ರ ಸಂಘಟನೆಗಳ ಯಾವುದೇ ಸಂಚುಗಳನ್ನು ಎದುರಿಸಲು ಸಂಪೂರ್ಣ ಸಿದ್ಧವಾಗಿವೆ. ದೇಶದ ಭದ್ರತೆ ಮತ್ತು ನಾಗರಿಕರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರಿಸಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಬೆಳವಣಿಗೆ ಮತ್ತೊಮ್ಮೆ ಉಗ್ರ ಸಂಘಟನೆಗಳ ಕಾರ್ಯತಂತ್ರ ಮತ್ತು ಅವುಗಳ ಪ್ರಚಾರದ ಮುಖವಾಡವನ್ನು ಬಹಿರಂಗಪಡಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.