ಆರ್‌ಎಸ್‌ಎಸ್ ಮಾಜಿ ಕಾರ್ಯಕರ್ತನ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಮಹಿಳೆ: ಕೇರಳದಲ್ಲಿ ಮಾನವೀಯತೆಗೆ ಮೆಚ್ಚುಗೆ
ಕೇರಳದ ಕಾಸರಗೋಡಿನಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟ ಮಾಜಿ ಆರ್‌ಎಸ್‌ಎಸ್ ಕಾರ್ಯಕರ್ತನ ಅಂತ್ಯಸಂಸ್ಕಾರವನ್ನು ಮುಸ್ಲಿಂ ಮಹಿಳೆ ಇರ್ಫಾನಾ ಇಕ್ಬಾಲ್ ನೆರವೇರಿಸಿದ್ದು, ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂಬ ಸಂದೇಶಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.
ಆರ್‌ಎಸ್‌ಎಸ್ ಮಾಜಿ ಕಾರ್ಯಕರ್ತನ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಮಹಿಳೆ -
ಕಾಸರಗೋಡು, ಜೂ.27: ಧರ್ಮಕ್ಕಿಂತ (Religion) ಮಾನವೀಯತೆ (Humanity) ದೊಡ್ಡದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುವ ಘಟನೆ ಕೇರಳದ (Kerala) ಕಾಸರಗೋಡುವಿನಲ್ಲಿ ನಡೆದಿದೆ. ಕ್ಯಾನ್ಸರ್ (Cancer) ನಿಂದ ಮೃತಪಟ್ಟ ಆರ್‌ಎಸ್‌ಎಸ್ ಮಾಜಿ ಕಾರ್ಯಕರ್ತ (Former RSS Worker) ನ ಅಂತ್ಯಸಂಸ್ಕಾರವನ್ನು ಮುಸ್ಲಿಂ ಮಹಿಳೆ (Muslim Woman) ಯೊಬ್ಬರು ನೆರವೇರಿಸಿ ಮಾನವೀಯತೆಯ ಮೆರೆದಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಭಾಗದ ಜಿಲ್ಲಾ ಪಂಚಾಯತ್ ಸದಸ್ಯೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್ ಅವರು, ಕ್ಯಾನ್ಸರ್‌ನಿಂದ ಮೃತಪಟ್ಟ ನಾರಾಯಣನ್ ತೊಟ್ಟತೋಡಿ (64) ಅವರ ಅಂತ್ಯಕ್ರಿಯೆಯನ್ನು ನೆರವೇರಿಸಿದರು. ಶುಕ್ರವಾರ ಅವರ ಸ್ವಗ್ರಾಮವಾದ ಮಂಜೇಶ್ವರ ಬ್ಲಾಕ್‌ನ ಮೀನ್ಜಾ ಪಂಚಾಯತ್ ವ್ಯಾಪ್ತಿಯ ಚಿಗ್ರುಪಾಡವು ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಿತು.
Viral Video: ಭಕ್ತರಿಗೆ 'ತಿಲಕ' ಇಟ್ಟು 3 ಗಂಟೆಗಳಲ್ಲಿ 2,350 ರುಪಾಯಿ ಗಳಿಸಿದ ಯುವಕ
ಸುಮಾರು ಒಂದು ತಿಂಗಳ ಹಿಂದೆ, ಬಾಯಿಯ ಕ್ಯಾನ್ಸರ್‌ನ ಕೊನೆಯ ಹಂತದಲ್ಲಿದ್ದ ನಾರಾಯಣನ್ ಅವರನ್ನು ಸ್ಥಳೀಯರು ಅಂಗಡಿಯೊಂದರ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಹಿಡಿದಿದ್ದರು. ಕುಟುಂಬದ ಸಮಸ್ಯೆಗಳಿಂದ ಅವರು ನಿರಾಶ್ರಿತರಾಗಿದ್ದು, ಅವರನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಅವರ ವಯೋವೃದ್ಧ ಸಹೋದರಿಯೂ ಆರೈಕೆ ಮಾಡುವ ಸ್ಥಿತಿಯಲ್ಲಿರಲಿಲ್ಲ.
ಈ ಬಗ್ಗೆ ವಾರ್ಡ್ ಸದಸ್ಯ ಶರೀಫ್ ಚಿನಾಲಾ ಅವರು ಇರ್ಫಾನಾ ಇಕ್ಬಾಲ್ ಅವರಿಗೆ ಮಾಹಿತಿ ನೀಡಿದರು. ಇರ್ಫಾನಾ ಅವರ ಕುಟುಂಬ ನಡೆಸುತ್ತಿರುವ ಶೇಖ್ ಜಾಯೆದ್ ಫೌಂಡೇಶನ್ನ ವೃದ್ಧಾಶ್ರಮಕ್ಕೆ ದಾಖಲಿಸುವ ಯತ್ನ ನಡೆದರೂ, ಅವರ ಆರೋಗ್ಯ ಗಂಭೀರವಾಗಿದ್ದ ಕಾರಣ ತಕ್ಷಣವೇ ಕೋಝಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಸುಮಾರು ಒಂದು ತಿಂಗಳ ಚಿಕಿತ್ಸೆ ಬಳಿಕ ಗುರುವಾರ ನಾರಾಯಣನ್ ನಿಧನರಾದರು. ಅವರ ಕುಟುಂಬದವರು ಅಂತ್ಯಸಂಸ್ಕಾರಕ್ಕೆ ಮುಂದೆ ಬಾರದ ಹಿನ್ನೆಲೆಯಲ್ಲಿ, ಇರ್ಫಾನಾ ಇಕ್ಬಾಲ್ ಸ್ವತಃ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ಈ ಘಟನೆ ಕೇರಳದಲ್ಲಿ ಧರ್ಮ, ಜಾತಿ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ಮಾನವೀಯತೆ ಮೇಲು ಎಂಬ ಸಂದೇಶವನ್ನು ಸಾರಿದ್ದು, ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.