ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉತ್ತರ ಪ್ರದೇಶದ ಸಾರ್ವಜನಿಕ ರಸ್ತೆಗಳಲ್ಲಿ ನಮಾಜ್ ಮಾಡುವಂತಿಲ್ಲ: ಸಿಎಂ ಯೋಗಿ ಆದಿತ್ಯನಾಥ್‌ ಖಡಕ್ ಎಚ್ಚರಿಕೆ

ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಎಚ್ಚರಿಕೆ ಆದೇಶ ನೀಡಿದ್ದು, ರಸ್ತೆಗಳು ನಮಾಜ್ ಮಾಡುವ ಸ್ಥಳವಲ್ಲ. ಯಾರೂ ಕೂಡ ರಸ್ತೆಯನ್ನು ದುರುಪಯೋಗ ಪಡಿಸುವಂತಿಲ್ಲ. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ ಎಂದು ಹೇಳಿದರು.

ರಸ್ತೆಗಳಲ್ಲಿ ಇನ್ನು ನಮಾಜ್ ಮಾಡುವಂತಿಲ್ಲ: ಸಿಎಂ ಯೋಗಿ

ಸಂಗ್ರಹ ಚಿತ್ರ -

ಉತ್ತರಪ್ರದೇಶ: ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವಂತಿಲ್ಲ (namaz on public roads) ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh Chief Minister Yogi Adityanath) ಅವರು ಸೋಮವಾರ ಖಡಕ್ ಎಚ್ಚರಿಕೆ ನೀಡಿದ್ದಾರೆ. ರಸ್ತೆಗಳು ನಮಾಜ್ (Namaz) ಮಾಡುವ ಸ್ಥಳಗಳಲ್ಲ. ಯಾರೂ ಕೂಡ ರಸ್ತೆಯನ್ನು ದುರುಪಯೋಗ ಪಡಿಸುವಂತಿಲ್ಲ. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ ಎಂದು ಹೇಳಿದರು. ಪತ್ರಿಕಾ ಸಮೂಹವೊಂದು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಸೋಮವಾರ ಮಾತನಾಡಿದರು.

ರಸ್ತೆಗಳು ಸಾರ್ವಜನಿಕ ಸಂಚಾರಕ್ಕಾಗಿ ಇರುವಂತದ್ದು. ಅವುಗಳಲ್ಲಿ ನಮಾಜ್ ಮಾಡಲು ನಿರ್ಬಂಧಿಸಬಾರದು. ಉತ್ತರ ಪ್ರದೇಶದಲ್ಲಿ ಇನ್ನು ಮುಂದೆ ಅಂತಹ ಪದ್ಧತಿಗಳು ನಡೆಯುವುದಿಲ್ಲ ಎಂದು ತಿಳಿಸಿದರು.

''ಮಗಳ ಪ್ರಾಣಕ್ಕಿಂತ ಪ್ರತಿಷ್ಠೆ ಮುಖ್ಯವಾಯ್ತೆ?ʼʼ: ನಿಗೂಢವಾಗಿ ಮೃತಪಟ್ಟ ತ್ವಿಶಾ ವಾಟ್ಸ್‌ಆ್ಯಪ್ ಚಾಟ್‌ ನೋಡಿ ನೆಟ್ಟಿಗರಿಂದ ಕ್ಲಾಸ್‌

ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಜನರು ರಸ್ತೆಗಳಲ್ಲಿ ನಮಾಜ್ ಮಾಡವುದಿಲ್ಲವೇ ಎಂದು ನನ್ನನ್ನು ಕೇಳಲಾಗುತ್ತದೆ. ಅದು ಇಲ್ಲಿ ನಡೆಯುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಬೇಕಿದ್ದರೆ ಬಂದು ನೋಡಿ. ರಸ್ತೆಗಳು ಇರುವುದು ಸಂಚಾರಕ್ಕಾಗಿ. ಯಾರಾದರೂ ಬಂದು ಅಡ್ಡರಸ್ತೆಯಲ್ಲಿ ಪ್ರದರ್ಶನವನ್ನು ಮಾಡಿ ಅವುಗಳನ್ನು ನಿರ್ಬಂಧಿಸಬಹುದೇ? ಸಾರ್ವಜನಿಕ ಸಂಚಾರವನ್ನು ಅಡ್ಡಿಪಡಿಸಲು ಯಾರಿಗೂ ಹಕ್ಕಿಲ್ಲ ಎಂದು ಹೇಳಿದರು.



ನಾರ್ವೆಯ ಅತ್ಯುನ್ನತ ಗೌರವ ಗ್ರ್ಯಾಂಡ್ ಕ್ರಾಸ್ ಸ್ವೀಕರಿಸಿದ ನರೇಂದ್ರ ಮೋದಿ: ಪ್ರಧಾನಿಗಿದು 32ನೇ ಅಂತಾರಾಷ್ಟ್ರೀಯ ಗೌರವ

ಕೆಲವರು ನಮ್ಮ ಸಂಖ್ಯೆ ದೊಡ್ಡದಿದೆ ಎಂದು ಹೇಳಿದರು. ಅದಕ್ಕೆ ಅವರಿಗೆ ತಮ್ಮ ಸಂಸ್ಥೆಗಳಲ್ಲಿ ಪಾಳಿಗಳಲ್ಲಿ ಮಾಡಿ ಎಂದು ಉತ್ತರಿಸಿದ್ದೇವೆ. ಮನೆಯಲ್ಲಿ ಸ್ಥಳವಿಲ್ಲದಿದ್ದರೆ ಅದಕ್ಕೆ ಅನುಗುಣವಾಗಿ ಸಂಖ್ಯೆಗಳನ್ನು ನಿರ್ವಹಿಸುವಂತೆ ಅನಗತ್ಯವಾಗಿ ಜನಸಂದಣಿ ಉಂಟು ಮಾಡಬಾರದು. ಕಾನೂನಿನ ನಿಯಮ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ಸಾರ್ವಜನಿಕ ಸ್ಥಳಗಳನ್ನು ದುರುಪಯೋಗಪಡಿಸಿಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ನಾವು ನಮಾಜ್ ಅನ್ನು ನಿಲ್ಲಿಸುವುದಿಲ್ಲ. ಆದರೆ ಅದು ರಸ್ತೆಗಳಲ್ಲಿ ನಡೆಯಬಾರದು ಎಂದು ತಿಳಿಸಿದರು.