IRTC: ಏ. 15 ರಿಂದ ತತ್ಕಾಲ್ ಬುಕಿಂಗ್‌ಗೆ ಹೊಸ ನಿಮಯ ಜಾರಿ
ಭಾರತೀಯ ರೈಲ್ವೆ ಇಂದು ಕೆಲವು ಪ್ರಮುಖ ನಿಯಮ ಬದಲಾವಣೆಗಳನ್ನ ಪರಿಚಯಿಸಿದೆ. ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳು 2025ರಲ್ಲಿ ಹಲವಾರು ಹೊಸ ಬದಲಾವಣೆಗಳು ಜಾರಿಗೆ ಬಂದಿವೆ. ಈ ವರ್ಷ ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನ ಜಾರಿಗೆ ತಂದಿದೆ.


ನವದೆಹಲಿ: ಭಾರತೀಯ ರೈಲ್ವೆ (IRCTC) ಇಂದು ಕೆಲವು ಪ್ರಮುಖ ನಿಯಮ ಬದಲಾವಣೆಗಳನ್ನ ಪರಿಚಯಿಸಿದೆ. ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳು 2025ರಲ್ಲಿ ಹಲವಾರು ಹೊಸ ಬದಲಾವಣೆಗಳು ಜಾರಿಗೆ ಬಂದಿವೆ. ರೈಲು ಪ್ರಯಾಣಿಕರಿಗೆ ರೈಲು ಸೇವೆಗಳನ್ನ ಸುಲಭ ಮತ್ತು ಉತ್ತಮಗೊಳಿಸಲು ಭಾರತೀಯ ರೈಲ್ವೆ ನಿರಂತರವಾಗಿ ವಿವಿಧ ಹೊಸ ಉಪಕ್ರಮಗಳು ಮತ್ತು ಹೊಸ ನಿಯಮಗಳನ್ನ ಜಾರಿಗೆ ತರುತ್ತಿದೆ. ಈ ನಿಟ್ಟಿನಲ್ಲಿ, ಈ ವರ್ಷ ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನ ಜಾರಿಗೆ ತಂದಿದೆ. ಈ ನಿಯಮಗಳನ್ನು ಅನುಸರಿಸಿದರೆ ಮಾತ್ರ ಟಿಕೆಟ್ ಕಾಯ್ದಿರಿಸಲು ಸಾಧ್ಯ.
ಏನಿದು ಹೊಸ ನಿಯಮ
ಈ ಹೊಸ ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳು ಪ್ರಯಾಣಿಕರಿಗೆ ರೈಲು ಸೇವೆಗಳನ್ನು ಮತ್ತಷ್ಟು ಸುಲಭಗೊಳಿಸಲಾಗಿದೆ. ಎಸಿ ಮತ್ತು ನಾನ್ ಎಸಿ ಬೋಗಿಗಳಿಗೆ ತತ್ಕಾಲ್ ಟಿಕೆಟ್ಗಳಿಗೆ ರೈಲ್ವೆ ವಿಶೇಷ ಕೋಟಾವನ್ನ ನಿಗದಿಪಡಿಸಿದೆ. ಇದು ಪ್ರಯಾಣಿಕರು ತಮ್ಮ ಆಯ್ಕೆಯ ಸೀಟುಗಳನ್ನು ಪಡೆಯುವ ಸಾಧ್ಯತೆಗಳನ್ನ ಹೆಚ್ಚಿಸುತ್ತದೆ ಎಂದು ಐಆರ್ಸಿಟಿಸಿ ಹೇಳಿದೆ. ತತ್ಕಾಲ್ ಟಿಕೆಟ್ ಮರುಪಾವತಿ ಮಾನದಂಡಗಳಲ್ಲಿ ಕೆಲವು ಸಡಿಲಿಕೆಗಳನ್ನು ನೀಡಲಾಗಿದೆ. ಪ್ರಯಾಣಕ್ಕೆ 24 ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಲಾಗಿದ್ದರೂ, ಪ್ರಯಾಣಿಕರು ಈಗ ಹೆಚ್ಚಿನ ಮರುಪಾವತಿ ಪಡೆಯಲು ಸಾಧ್ಯವಾಗುತ್ತದೆ ಎಂದು IRCTC ತಿಳಿಸಿದೆ.
ಹಿರಿಯ ನಾಗರಿಕರಿಗೆ ನೀಡಿದ ರಿಯಾಯಿತಿ ಹಿಂಪಡೆದ ಬಳಿಕ ಭರ್ಜರಿ ಲಾಭ
ಹಿರಿಯ ನಾಗರಿಕರಿಗೆ ನೀಡಿದ ರಿಯಾಯಿತಿಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಭಾರತೀಯ ರೈಲ್ವೆ ಐದು ವರ್ಷಗಳಲ್ಲಿ ಸುಮಾರು 8,913 ಕೋಟಿ ರೂಪಾಯಿಗಳ ಹೆಚ್ಚುವರಿ ಆದಾಯವನ್ನು ಗಳಿಸಿದೆ ಎಂದು ಆರ್‌ಟಿಐ ಮಾಹಿತಿಯಲ್ಲಿ ಬಹಿರಂಗವಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಿದ ಪ್ರಶ್ನೆಗೆ ʼಸೆಂಟರ್ ಫಾರ್ ರೈಲ್ವೆ ಇನ್ಫರ್ಮೇಷನ್ ಸಿಸ್ಟಮ್ಸ್ʼ (CRIS) ಈ ಉತ್ತರವನ್ನು ನೀಡಿದೆ. ಈ ಹಿಂದೆ 60 ವರ್ಷ ಮೇಲ್ಪಟ್ಟ ಪುರುಷರು ಮತ್ತು ಟ್ರಾನ್ಸ್‌ಜಂಡರ್‌ಗಳಿಗೆ ರೈಲ್ವೆ ಟಿಕೆಟ್‌ನಲ್ಲಿ ಶೇ.40ರಷ್ಟು ರಿಯಾಯಿತಿ ಮತ್ತು 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಆದರೆ, ಈ ವಿನಾಯಿತಿಯು 2020ರ ಮಾರ್ಚ್ 20ರ ಮೊದಲು ಲಭ್ಯವಿತ್ತು. ಕೋವಿಡ್ ಬಳಿಕ ರೈಲ್ವೆ ಸಚಿವಾಲಯ ಈ ವಿನಾಯಿತಿಯನ್ನು ರದ್ದುಗೊಳಿಸಿತ್ತು.