ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಪರೇಷನ್ ಸಿಂದೂರ್ ಹುತಾತ್ಮರನ್ನು ಗೌರವಿಸಿಲ್ಲ: ಆರೋಪ ತಿರಸ್ಕರಿಸಿದ ರಕ್ಷಣಾ ಸಚಿವಾಲಯ ಹೇಳಿದ್ದೇನು?

ಆಪರೇಷನ್ ಸಿಂದೂರ್ ಸಮಯದಲ್ಲಿ ಹುತಾತ್ಮರಾದ ಆರು ಸಿಬ್ಬಂದಿಗೆ ಸರಿಯಾದ ಮಾನ್ಯತೆ ನೀಡಿಲ್ಲ ಎನ್ನುವ ಪ್ರತಿಪಕ್ಷಗಳ ಆರೋಪಗಳನ್ನು ತಿರಸ್ಕರಿಸಿರುವ ರಕ್ಷಣಾ ಸಚಿವಾಲಯ ಅಧಿಕೃತ ಗೌರವ, ಶೌರ್ಯ ಪ್ರಶಸ್ತಿಗಳ ಮೂಲಕ ಈಗಾಗಲೇ ಅವರ ತ್ಯಾಗವನ್ನು ಗುರುತಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆಪರೇಷನ್ ಸಿಂದೂರ್ ವೀರರ ಗೌರವದಲ್ಲಿ ಯಾವುದೇ ವಿಳಂಬ ಮಾಡಲಾಗಿಲ್ಲ ಎಂದು ಹೇಳಿದೆ.

ಆಪರೇಷನ್ ಸಿಂದೂರ್ ವೀರರನ್ನು ಗೌರವಿಸಲಾಗಿದೆ: ರಕ್ಷಣಾ ಸಚಿವಾಲಯ ಸ್ಪಷ್ಟನೆ

ಸಂಗ್ರಹ ಚಿತ್ರ -

ನವದೆಹಲಿ: ಆಪರೇಷನ್ ಸಿಂದೂರ್ (Operation Sindoor) ಸಮಯದಲ್ಲಿ ಸಾವನ್ನಪ್ಪಿದ ಆರು ಸಿಬ್ಬಂದಿಯನ್ನು (Operation Sindoor martyrs) ಆರಂಭಿಕವಾಗಿ ಗೌರವಿಸಲಾಗಿದೆ. ಅವರನ್ನು ಯಾವಾಗಲೂ ಘನತೆ, ಕೃತಜ್ಞತೆ ಮತ್ತು ಗೌರವದಿಂದ ಸ್ಮರಿಸಲಾಗುತ್ತದೆ ಎಂದು ಶನಿವಾರ ರಕ್ಷಣಾ ಸಚಿವಾಲಯ (Defence Ministry) ತಿಳಿಸಿದೆ. ಆಪರೇಷನ್ ಸಿಂದೂರ್ ಸಮಯದಲ್ಲಿ ಸೇವೆ ಸಲ್ಲಿಸಿದ ಆರು ಸಿಬ್ಬಂದಿಗೆ ಮಾತ್ರ ಮಾನ್ಯತೆ ನೀಡಲಾಗಿದೆ ಎನ್ನುವ ಪ್ರತಿಪಕ್ಷಗಳ ಆರೋಪಗಳನ್ನು ತಿರಸ್ಕರಿಸಿರುವ ರಕ್ಷಣಾ ಸಚಿವಾಲಯ ಮಡಿದ ಸಿಬ್ಬಂದಿಗೆ ಈಗಾಗಲೇ ಶೌರ್ಯ ಪ್ರಶಸ್ತಿಯೊಂದಿಗೆ ವಿಧ್ಯುಕ್ತ ಗೌರವವನ್ನು ಔಪಚಾರಿಕವಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದೆ.

ಆಪರೇಷನ್ ಸಿಂದೂರ್ ಸಮಯದಲ್ಲಿ ಹುತಾತ್ಮರಾದ ಆರು ಸಿಬ್ಬಂದಿಯನ್ನು ಗುರುತಿಸದೆ ಸರ್ಕಾರವು ಒಂದು ವರ್ಷದವರೆಗೆ ಅವರ ತ್ಯಾಗವನ್ನು ಮರೆಮಾಚಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದಕ್ಕೆ ರಕ್ಷಣಾ ಸಚಿವಾಲಯ ಸ್ಪಷ್ಟನೆಯನ್ನು ನೀಡಿದೆ.

ಮನ್ ಕಿ ಬಾತ್: ರಾಷ್ಟ್ರೀಯ ಭದ್ರತೆ, ಸ್ವಾವಲಂಬನೆ ಕ್ಷೇತ್ರಗಳಲ್ಲಿ ಭಾರತದ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ

ಹುತಾತ್ಮರಾದ ಸೈನಿಕರ ತ್ಯಾಗವನ್ನು ಇತ್ತೀಚೆಗೆ ಮಾತ್ರ ಅಂಗೀಕರಿಸಲಾಗಿದೆ ಎಂದು ವರದಿ ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸುಳ್ಳು ಎಂದಿರುವ ರಕ್ಷಣಾ ಸಚಿವಾಲಯ, ಕೆಲವು ಮಾಧ್ಯಮಗಳು ಆಪರೇಷನ್ ಸಿಂದೂರ್ ಸಮಯದಲ್ಲಿ ಹುತಾತ್ಮರಾದ ಆರು ಸೈನಿಕರ ತ್ಯಾಗವನ್ನು ಇತ್ತೀಚೆಗೆ ಮೊದಲ ಬಾರಿಗೆ ಗುರುತಿಸಲಾಗಿದೆ ಎಂದು ಹೇಳಿದೆ. ಆದರೆ ಇದು ಸುಳ್ಳು ಸುದ್ದಿ. ಆರಂಭದಲ್ಲೇ ಅವರ ತ್ಯಾಗಕ್ಕೆ ಸೂಕ್ತವಾದ ಗೌರವ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

2025ರ ಮೇ 11ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗಿನ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿದ್ದರು. ಆಪರೇಷನ್ ಸಿಂದೂರ್ ಸಮಯದಲ್ಲಿ ಅವರ ತ್ಯಾಗವನ್ನು ಗುರುತಿಸಿದ್ದರು. ಆರು ಸಿಬ್ಬಂದಿಗೆ ಶೌರ್ಯ ಪ್ರಶಸ್ತಿಗಳನ್ನು ನೀಡಲಾ ಗಿದ್ದು, ಇದನ್ನು 2025ರ ಆಗಸ್ಟ್ 14ರಂದು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ. ಇದು ಅವರ ಶೌರ್ಯ ಮತ್ತು ಅತ್ಯುನ್ನತ ತ್ಯಾಗದ ಔಪಚಾರಿಕ ಮತ್ತು ರಾಷ್ಟ್ರೀಯ ಮನ್ನಣೆ ಎಂದು ತಿಳಿಸಿರುವುದಾಗಿ ರಕ್ಷಣಾ ಸಚಿವಾಲಯ ಹೇಳಿದೆ.

ಯಾವುದೇ ವಿಳಂಬ ಮಾಡದೇ ಹುತಾತ್ಮ ಸೈನಿಕರಿಗೆ ಗೌರವವನ್ನು ಸಲ್ಲಿಸಿದ್ದೇವೆ. ಈ ವರ್ಷದ ಜನವರಿ 15 ರಂದು ಜೈಪುರದಲ್ಲಿ ನಡೆದ ಸೇನಾ ದಿನದ ಪರೇಡ್‌ನಲ್ಲಿ ಸೇನಾ ಮುಖ್ಯಸ್ಥರು ಮೂವರು ಸೈನಿಕರ ಕುಟುಂಬಗಳಿಗೆ ಶೌರ್ಯ ಸೇನಾ ಪದಕ ಪ್ರದಾನ ಮಾಡಿದ್ದರು. ಉಳಿದ ಮೂವರಿಗೆ 2025ರ ಅಕ್ಟೋಬರ್ 8ರಂದು ವಾಯುಪಡೆಯ ಮುಖ್ಯಸ್ಥರು ನೀಡಿ ಗೌರವಿಸಿದ್ದರು ಎಂದು ತಿಳಿಸಿದೆ.

ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಮೃತರಾದ ವೀರರ ಧೈರ್ಯ, ಕರ್ತವ್ಯದ ಮೇಲಿನ ಭಕ್ತಿ ಮತ್ತು ತ್ಯಾಗವು ಮುಂದಿನ ಪೀಳಿಗೆಯ ಭಾರತೀಯರಿಗೆ ಸ್ಫೂರ್ತಿಯಾಗಿದೆ. ರಾಷ್ಟ್ರದ ರಕ್ಷಣೆಗಾಗಿ ಸರ್ವೋಚ್ಚ ತ್ಯಾಗ ಮಾಡಿದ ಪ್ರತಿಯೊಬ್ಬ ಸೈನಿಕನನ್ನು ಭಾರತೀಯ ರಕ್ಷಣಾ ಪಡೆಯು ಗೌರವಿಸುತ್ತದೆ.

oper

ಭಯೋತ್ಪಾದನೆಗೆ ಹಣಕಾಸು ನೆರವು: ಕಾಶ್ಮೀರದ 3 ಕಡೆಗಳಲ್ಲಿ ದಾಳಿ, ಡಿಜಿಟಲ್ ಉಪಕರಣ ವಶಕ್ಕೆ

ಮೃತ ವೀರರಿಗೆ ಗೌರವವಾಗಿ ರಾಷ್ಟ್ರೀಯ ಯುದ್ಧ ಸ್ಮಾರಕದ ಗೋಡೆಯ ಮೇಲೆ ಆರು ಸಿಬ್ಬಂದಿ ಹೆಸರುಗಳನ್ನು ಕೆತ್ತಲಾಗಿದೆ. ತ್ಯಾಗ ಚಕ್ರದ ಗೋಡೆ ಸಂಖ್ಯೆ 3ಡಿ ಸುಬೇದಾರ್ ಮೇಜರ್ ಪವನ್ ಕುಮಾರ್, ರೈಫಲ್‌ಮನ್ ಸುನಿಲ್ ಕುಮಾರ್ , ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್, ಅಗ್ನಿವೀರ್ ಮೂಡ್ ಮುರಳಿನಾಯಕ್, ಹವಿಲ್ದಾರ್ ಸುನಿಲ್ ಕುಮಾರ್ ಸಿಂಗ್ ಮತ್ತು ಭಾರತೀಯ ವಾಯುಪಡೆಯ ಸಾರ್ಜೆಂಟ್ ಸುರೇಂದ್ರ ಕುಮಾರ್ ಅವರ ಹೆಸರುಗಳಿವೆ ಎಂದು ತಿಳಿಸಿದೆ.