ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಬಿಎಸ್‌ಎಫ್ ಶಿಬಿರದ ಮೇಲೆ ಮತ್ತೆ ಪಾಕ್‌ ಡ್ರೋನ್ ದಾಳಿಗೆ ಯತ್ನ

ಜೈಸಲ್ಮೇರ್‌ನ ರಾಮಗಢದಲ್ಲಿರುವ ಬಿಎಸ್‌ಎಫ್ ಶಿಬಿರವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಬೆಳಿಗ್ಗೆ 4.30 ರಿಂದ 5.30 ರ ನಡುವೆ ಡ್ರೋನ್ ದಾಳಿ ನಡೆಸುವ ಮೂಲಕ ಮತ್ತೊಂದು ಪ್ರಯತ್ನ ಮಾಡಿದೆ. ಆದರೆ ಭಾರತದ ರಕ್ಷಣಾ ವ್ಯವಸ್ಥೆಗಳು ಅದನ್ನು ಯಶಸ್ವಿಯಾಗಿ ವಿಫಲಗೊಳಿಸಿದೆ ಎಂದು ತಿಳಿದುಬಂದಿದೆ.

ಬಿಎಸ್‌ಎಫ್ ಶಿಬಿರದ ಮೇಲೆ ಮತ್ತೆ ಪಾಕ್‌ ಡ್ರೋನ್ ದಾಳಿಗೆ ಯತ್ನ

Profile Abhilash BC May 9, 2025 9:24 AM

ನವದೆಹಲಿ: ಆಪರೇಷನ್ ಸಿಂದೂರ(Operation Sindoor) ಕಾರ್ಯಾಚರಣೆ ಬೆನ್ನಲ್ಲೇ ಭಾರತದ ನಾಗರಿಕರು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ, ಗುರುವಾರ ರಾತ್ರಿ ಡ್ರೋನ್‌ ದಾಳಿ(Pak drone attack) ನಡೆಸಿತ್ತು. ಈ ಎಲ್ಲ ಯತ್ನಗಳನ್ನು ಭಾರತ ವಿಫಲಗೊಳಿಸಿತ್ತು. ಜತೆಗೆ ಪ್ರತಿ ದಾಳಿ ಮೂಲಕ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಿತ್ತು. ಪಾಕಿಸ್ತಾನದ ಲಾಹೋರ್‌, ಕರಾಚಿ ಸೇರಿ ಹಲವು ಪ್ರಮುಖ ನಗರಗಳ ಮೇಲೆ ಭಾರತ ಅಟ್ಯಾಕ್‌ ಮಾಡಿತ್ತು. ಪಾಕ್‌ ವಾಯು ರಕ್ಷಣಾ ವ್ಯವಸ್ಥೆಯನ್ನೇ ನಾಶಮಾಡಿತ್ತು. ಆದರೂ ಬುದ್ಧಿ ಕಲಿಯದ ಪಾಕಿಸ್ತಾನ ಶುಕ್ರವಾರ ಬೆಳಗ್ಗೆ ಮತ್ತೆ ಬಿಎಸ್‌ಎಫ್ ಶಿಬಿರವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸುವ ಪ್ರಯತ್ನ ಮಾಡಿದೆ.

ಜೈಸಲ್ಮೇರ್‌ನ ರಾಮಗಢದಲ್ಲಿರುವ ಬಿಎಸ್‌ಎಫ್ ಶಿಬಿರವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಬೆಳಿಗ್ಗೆ 4.30 ರಿಂದ 5.30 ರ ನಡುವೆ ಡ್ರೋನ್ ದಾಳಿ ನಡೆಸುವ ಮೂಲಕ ಮತ್ತೊಂದು ಪ್ರಯತ್ನ ಮಾಡಿದೆ. ಆದರೆ ಭಾರತದ ರಕ್ಷಣಾ ವ್ಯವಸ್ಥೆಗಳು ಅದನ್ನು ಯಶಸ್ವಿಯಾಗಿ ವಿಫಲಗೊಳಿಸಿದೆ ಎಂದು ತಿಳಿದುಬಂದಿದೆ.

ಜಮ್ಮು ಕಾಶ್ಮೀರದ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಗಡಿಯಾಚೆಗಿನಿಂದ ಪಾಕ್‌ ಪಡೆಗಳು ಶುಕ್ರವಾರ ನಡೆಸಿದ ಶೆಲ್ ದಾಳಿಗೆ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ರಜೇರ್ವಾನಿಯಿಂದ ಬಾರಾಮುಲ್ಲಾಗೆ ಪ್ರಯಾಣಿಸುತ್ತಿದ್ದ ನಾಗರಿಕ ವಾಹನವು ಮೊಹುರಾ ಬಳಿ ಶೆಲ್ ದಾಳಿಗೆ ಒಳಗಾಯಿತು. ಶೆಲ್ ವಾಹನಕ್ಕೆ ತಗುಲಿ, ರಜೇರ್ವಾನಿ ನಿವಾಸಿ ಬಶೀರ್ ಖಾನ್ ಅವರ ಪತ್ನಿ ನರ್ಗಿಸ್ ಬೇಗಂ ಸಾವನ್ನಪ್ಪಿದರು.

ಇದನ್ನೂ ಓದಿ Operation Sindoor: LOC ಬಳಿ ಪಾಕ್‌ ಸೇನಾ ನೆಲೆ ಧ್ವಂಸ; ಮೊದಲ ದೃಶ್ಯ ಹಂಚಿಕೊಂಡ ಸೇನೆ

ಗುರುವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಚಿವಾಲಯ ಮತ್ತು ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ‘ಸದಾ ಎಚ್ಚರದಿಂದಿದ್ದು, ಸ್ಪಷ್ಟ ಸಂವಹನವನ್ನು ಮುಂದುವರೆಸಿ’ ಎಂದು ಸೂಚಿಸಿದ್ದಾರೆ. ಈ ಮೂಲಕ, ‘ಪಾಕ್‌ ವಿರುದ್ಧದ ಪ್ರತೀಕಾರ ಇನ್ನೂ ಮುಗಿದಿಲ್ಲ’ ಎಂದು ಪರೋಕ್ಷವಾಗಿ ಹೇಳಿದ್ದಾರೆ.