Operation Sindoor: ಆಪರೇಷನ್ ಸಿಂದೂರ್ ಮೂಲಕ ಭಾರತ ಸಾಧಿಸಿದ್ದೇನು?
ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಉಗ್ರರನ್ನು ಹತ್ಯೆ ಮಾಡಿದ ಭಯೋತ್ಪಾದಕರ ವಿರುದ್ದ ಭಾರತ ಸಮರ ಸಾರಿದ್ದು, ಆಪರೇಷನ್ ಸಿಂದೂರು ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿಯಲಾಗಿದೆ. ಈ ಕಾರ್ಯಾಚರಣೆ ಮೂಲಕ ಭಾರತ ಗಳಿಸಿದ್ದೇನು ಎನ್ನುವ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಆಪರೇಷನ್ ಸಿಂದೂರ್ (Operation Sindoor) ಬಗ್ಗೆ ಮಾಹಿತಿ ನೀಡಲು ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾರತೀಯ ಸೇನೆ ವಿವಿಧ ವಿವರಗಳನ್ನು ಹಂಚಿಕೊಂಡಿದೆ. ಈ ಕಾರ್ಯಾಚರಣೆ ಮೂಲಕ ನಾವು ಯಾವೆಲ್ಲ ಗುರಿಗಳನ್ನು ತಲುಪಿದ್ದೇವೆ ಎನ್ನುವುದನ್ನು ಸುದ್ದಿಗೋಷ್ಠಿ ಮೂಲಕ ವಿವರಿಸಿದೆ. ಈ ಸುದ್ದಿಗೋಷ್ಠಿಯಲ್ಲಿ ವಿವಿಧ ಪಡೆಗಳ ಮಹಾನಿರ್ದೇಶಕರು ಪಾಲ್ಗೊಂಡಿದ್ದರು. ಇದೇ ವೇಳೆ ಒಂದುವೇಳೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದರೆ ಪ್ರತ್ಯುತ್ತರ ನೀಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಕ್‌ಗೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡುವಂತೆ ಸೂಚಿಸಿದ್ದಾರೆ.
ಪಾಕಿಸ್ತಾನ ಮೂಲದ ಉಗ್ರರು ಏ. 22ರಂದು ಭಾರತಕ್ಕೆ ನುಗ್ಗಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಅಮಾಯಕರನ್ನು ಹತ್ಯೆ ಮಾಡಿತು. ಇದಕ್ಕೆ ಪ್ರತೀಕಾರವಾಗಿ ಆರಂಭಿಸಲಾದ ಆಪರೇಷನ್ ಸಿಂದೂರ್ ಸಂಪೂರ್ಣ ಯಶಸ್ವಿಯಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ನೆಲೆಯನ್ನು ಧ್ವಂಸಗೊಳಿಸಲಾಗಿದೆ. ಇದರ ಜತೆಗೆ ಈ ಕಾರ್ಯಾಚರಣೆ ಮೂಲಕ ಭಾರತ ಯಾವೆಲ್ಲ ಗುರಿ ಸಾಧಿಸಿದೆ ಎನ್ನುವ ವಿವರ ಇಲ್ಲಿದೆ.
ಭಾರತೀಯ ಸೇನೆಯ ಸುದ್ದಿಗೋಷ್ಠಿ:
Called Pakistan's nuclear deterent bluff, no engagement on Kashmir; Sources
— ANI Digital (@ani_digital) May 11, 2025
Read @ANI Story |https://t.co/FZtwkhwomu#India #Pakistan #sindooroperation #Army #Navy pic.twitter.com/VmTJAlpu6H
ಈ ಸುದ್ದಿಯನ್ನೂ ಓದಿ: Operation Sindoor: ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಿ; ಪ್ರಬಲ ಪ್ರಹಾರದ ಸೂಚನೆ ನೀಡಿದ ಪ್ರಧಾನಿ ಮೋದಿ
9 ಭಯೋತ್ಪಾದಕ ಶಿಬಿರ ನಾಶ
ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಭಯೋತ್ಪಾದಕ ನೆಲೆಗಳನ್ನು ಭಾರತ ನಾಶಪಡಿಸಿದೆ. ಇವು ಲಷ್ಕರ್-ಎ-ತೈಬಾ (ಎಲ್‌ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳಿಗೆ ಸೇರಿದ್ದವು. ಈ ಸ್ಥಳಗಳಲ್ಲಿ ಭಾರತದ ವಿರುದ್ಧ ದಾಳಿಗಳನ್ನು ಸಂಘಟಿಸಲು ತರಬೇತಿ ನೀಡಲಾಗುತ್ತಿತ್ತು. ದಾಳಿ ವೇಳೆ ಸುಮಾರು 100 ಉಗ್ರರು ಹತರಾಗಿದ್ದಾರೆ.
ಪಾಕಿಸ್ತಾನದ ಪ್ರಮುಖ ತಾಣಗಳ ಮೇಲೆ ದಾಳಿ
ಪಿಒಕೆ ಮಾತ್ರವಲ್ಲದೆ ಪಾಕಿಸ್ತಾನದ ನೂರಾರು ಕಿ.ಮೀ. ಒಳಗಡೆ ದಾಳಿಗಳು ನಡೆದವು. ಪಾಕಿಸ್ತಾನ ಸೇನೆಯ ಕಾರ್ಯತಂತ್ರದ ಭದ್ರಕೋಟೆ ಎಂದು ಪರಿಗಣಿಸಲಾದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲೂ ಭಾರತ ದಾಳಿ ನಡೆಸಿತು. ಭಾರತೀಯ ಸೇನೆಯ ದಾಳಿಯಿಂದಾಗಿ ಪಾಕಿಸ್ತಾನದ ಸರ್ಗೋದಾ, ಶುಕೂರ್, ಸಿಯಾಲ್‌ಕೋಟ್, ನೂರ್‌ಖಾನ್, ರಹ್ಮಯಾರ್ ಖಾನ್, ಚುನಿಯಾ ವಾಯುನೆಲೆ, ಜೈಶ್ ಪ್ರಧಾನ ಕಚೇರಿ, ಲಷ್ಕರ್ ಭಯೋತ್ಪಾದಕ ಸಂಘಟನೆಯ ಶಿಬಿರ ಧ್ವಂಸವಾಗಿದೆ. ಅಮೆರಿಕ ಕೂಡ ತನ್ನ ಡ್ರೋನ್‌ಗಳನ್ನು ಕಳುಹಿಸಲು ಹಿಂಜರಿಯುವ ಬಹಾವಲ್ಪುರದಂತಹ ಸೂಕ್ಷ್ಮ ಭಯೋತ್ಪಾದಕ ಕೇಂದ್ರಗಳ ಮೇಲೂ ಭಾರತ ದಾಳಿ ಮಾಡಿದೆ. ಈ ಮೂಲಕ ಪಾಕಿಸ್ತಾನದ ಪ್ರತಿಯೊಂದು ಇಂಚು ಕೂಡ ತಲುಪಲು ಸಾಧ್ಯ ಎಂಬುದನ್ನು ಭಾರತ ಸಾರಿ ಹೇಳಿದೆ. ಇದು ಪಾಕಿಸ್ತಾನಿ ವಾಯುಪಡೆಯ (ಪಿಎಎಫ್) ಶೇಕಡಾ 20ರಷ್ಟು ಮೂಲ ಸೌಕರ್ಯವನ್ನು ನಾಶ ಮಾಡಿದೆ. ಈ ವೇಳೆ ಪಾಕಿಸ್ತಾನದ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್, ನಾಲ್ವರು ವಾಯು ಪಡೆಯ ಸಿಬ್ಬಂದಿ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಹೊಸ ಮಾದರಿಯ ಹೋರಾಟ
ಮೊದಲ ಬಾರಿಗೆ ಭಾರತವು ಭಯೋತ್ಪಾದಕರು ಮತ್ತು ಅವರ ಪ್ರಾಯೋಜಕರು- ಇಬ್ಬರ ವಿರುದ್ಧವೂ ಕ್ರಮ ಕೈಗೊಂಡಿದೆ.
ಪಾಕಿಸ್ತಾನದ ದುರ್ಬಲ ವಾಯು ರಕ್ಷಣಾ ವ್ಯವಸ್ಥೆ ಬಹಿರಂಗ
ಭಾರತೀಯ ಪಡೆಗಳು ಪಾಕಿಸ್ತಾನದ ವಾಯು ರಕ್ಷಣಾ ಗ್ರಿಡ್ ಅನ್ನು ಯಶಸ್ವಿಯಾಗಿ ಧ್ವಂಸ ಮಾಡಿದೆ. ಪಾಕ್ ಒಳಗೆ ನುಗ್ಗಿ 23 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿದೆ. SCALP ಕ್ಷಿಪಣಿಗಳು ಮತ್ತು ಹ್ಯಾಮರ್ ಬಾಂಬ್‌ಗಳನ್ನು ಹೊಂದಿದ ಭಾರತೀಯ ರಫೇಲ್ ಜೆಟ್‌ಗಳು ಸ್ವಲ್ಪವೂ ಹಾನಿಗೊಳ್ಳದೆ ಕಾರ್ಯಾಚರಣೆಯನ್ನು ನಿರ್ವಹಿಸಿದವು. ಆ ಮೂಲಕ ತಾಂತ್ರಿಕ ಮತ್ತು ಕಾರ್ಯತಂತ್ರದ ಶ್ರೇಷ್ಠತೆಯನ್ನು ಪ್ರದರ್ಶಿಸಿದವು.
ಭಾರತದ ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆ
ಭಾರತವು ತನ್ನು ಆಧುನಿಕ ವಾಯು ರಕ್ಷಣೆ ವ್ಯವಸ್ಥೆಯು ಬಲಿಷ್ಠವಾಗಿದೆ ಎನ್ನುವ ಸಂದೇಶವನ್ನು ಜಗತ್ತಿಗೆ ಸಾರಿತು. ಅಲ್ಲದೆ, ಭಾರತವು ಪಾಕಿಸ್ತಾನವು ನಿಯೋಜಿಸಿದ ಚೀನಾ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆಗಳನ್ನು ಯಶಸ್ವಿಯಾಗಿ ಭೇದಿಸಿತು. ಆಕಾಶ್‌ತೀರ್ ವಾಯು ರಕ್ಷಣಾ ವ್ಯವಸ್ಥೆಯು ನೂರಾರು ಪಾಕಿಸ್ತಾನಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು.
ಮೋಸ್ಟ್ ವಾಂಟೆಡ್ ಭಯೋತ್ಪಾದಕರ ನಿರ್ಮೂಲನೆ
ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವವರು ಸೇರಿದಂತೆ ಹಲವಾರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ. ಒಂದೇ ರಾತ್ರಿಯಲ್ಲಿ ಬಹು ಭಯೋತ್ಪಾದಕ ಮಾಡ್ಯೂಲ್‌ಗಳ ನಾಯಕತ್ವವನ್ನು ನಾಶಪಡಿಸಲಾಗಿದೆ.
ಮೂರೂ ಸೇನಾ ಪಡೆಗಳ ಸಮನ್ವಯತೆ
ಕರಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಸಂಘಟಿತ ದಾಳಿಗಳನ್ನು ನಡೆಸಿವೆ. ಇದು ಭಾರತದ ಜಂಟಿ ಯುದ್ಧ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.
ಭಯೋತ್ಪಾಕರಿಗೆ ಕಠಿಣ ಸಂದೇಶ
ತನ್ನ ಜನರನ್ನು ರಕ್ಷಿಸಲು ಯಾರ ಅನುಮತಿಗಾಗಿಯೂ ಕಾಯುವುದಿಲ್ಲ ಎಂದು ಭಾರತ ಜಗತ್ತಿಗೆ ತಿಳಿಸಿದೆ. ಭಯೋತ್ಪಾದನೆಯನ್ನು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಶಿಕ್ಷಿಸಲಾಗುತ್ತದೆ. ಭಯೋತ್ಪಾದಕರು ಮತ್ತು ಅವರ ಮಾಸ್ಟರ್‌ಮೈಂಡ್‌ಗಳಿಗೆ ಅಡಗಿಕೊಳ್ಳಲು ಸ್ಥಳವಿಲ್ಲ ಎಂಬುದನ್ನು ಇದು ಸಾರಿ ಹೇಳಿದೆ.
ಎಲ್ಲಡೆಯಿಂದ ಬೆಂಬಲ
ಭಯೋತ್ಪಾದನೆಯ ವಿರುದ್ಧದ ಭಾರತದ ಈ ಹೋರಾಟವನ್ನು ವಿಶ್ವ ಹಲವು ನಾಯಕರು ಬೆಂಬಲಿಸಿದ್ದಾರೆ.