Rajnath Singh: ಭಿಕ್ಷುಕರ ಸಾಲಿನಲ್ಲಿ ಪಾಕ್ ಮೊದಲನೇ ಸ್ಥಾನದಲ್ಲಿದೆ-ರಾಜನಾಥ್ ಸಿಂಗ್ ಲೇವಡಿ
ಭಾರತ ಪಾಕಿಸ್ತಾನ ಉದ್ವಿಗ್ನತೆ ನಂತರ ಮೊದಲ ಬಾರಿಗೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನ ಒಂದು ಭಿಕ್ಷುಕ ದೇಶ. ಆರ್ಥಿಕವಾಗಿ ದಿವಾಳಿ ಆಗಿ ಪದೇ ಪದೇ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮೊರೆ ಹೋಗುತ್ತಿದೆ ಎಂದು ಲೇವಡಿ ಮಾಡಿದ್ದಾರೆ.


ಶ್ರೀನಗರ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ ಬಳಿಕ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಜಮ್ಮು ಕಾಶ್ಮೀರಕ್ಕೆ ಇಂದು ಮೊದಲ ಭೇಟಿ ನೀಡಿ ಮಾಡಿದ ಭಾಷಣದಲ್ಲಿ ಪಾಪಿ ಪಾಕಿಸ್ತಾನದ ಆರ್ಥಿಕ ಪರಿಸ್ಥತಿ ದಿವಾಳಿ ಆಗಿದೆ ಮತ್ತು ನಿರಂತರವಾಗಿ ಬಾಹ್ಯ ಹಣಕಾಸು ನೆರವು ಮತ್ತು ವಿಶೇಷವಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮೇಲೆ ಸಂಪೂರ್ಣವಾಗಿ ಅವಲಂಭಿತವಾಗಿದೆ. ಹೀಗಾಗಿ ಭಿಕ್ಷುಕರ ಸಾಲಿನಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ ಎಂದು ತೀವ್ರವಾಗಿ ಟೀಕಿಸಿದರು. ಇದೇ ವೇಳೆ ಅವರು ಭಾರತದ ಮುಂದಿನ ನಡೆ ಬಗ್ಗೆಯೂ ಯೋಧರ ಜೊತೆ ಚರ್ಚೆ ನಡೆಸಿದ್ದಾರೆ.
ಪಾಕಿಸ್ತಾನ ಅಂದ ಕೂಡಲೇ ಮೊದಲು ನೆನಪಾಗುವುದೇ ಭಿಕ್ಷುಕರ ದೇಶ. ಅಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಇದೆ. ಪಾಕ್ ಇದೀಗ ಮತ್ತೆ ಐಎಂಎಫ್ ಮೊರೆ ಹೋಗಿದೆ. ಈಗಾಗಲೇ IMFಕೂಡ ಬರೋಬ್ಬರಿ 8ಸಾವಿರ ಕೋಟಿ ಹಣಕಾಸು ಸಹಾಯ ಮಾಡಿದೆ. ನಿಮಗೆ ಗೊತ್ತೇ ಐಎಂಎಫ್‌ನಲ್ಲಿ ಭಾರತ ಕೂಡ ಒಂದು ಸದಸ್ಯ ರಾಷ್ಟ್ರ. ಅದಾಗ್ಯೂ ಪಾಕಿಸ್ತಾನ ಐಎಂಎಫ್ ಎದುರು ಕೈ ಚಾಚಿದೆ. ಇದರರ್ಥ ಪಾಕಿಸ್ತಾನ ನಿಜವಾಗಿಯೂ ಭಿಕ್ಷುಕ ರಾಷ್ಟ್ರ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Pahalgam Terror Attack: ಪ್ರತಿ ಕ್ಷಣದಲ್ಲೂ ಅನ್ಸುತ್ತೆ ಆತ ಎಲ್ಲಿಂದಾದರೂ ಮರಳಿ ಬರಲಿ- ಪಹಲ್ಗಾಮ್ ದುರಂತದಲ್ಲಿ ಬಲಿಯಾದ ಮಗನ ನೆನೆದ ತಾಯಿ
ಆಪರೇಷನ್ ಸಿಂದೂರ
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ, ಮೇ 7 ರಂದು ಆಪರೇಷನ್ ಸಿಂದೂರ ಮೂಲಕ ಭಾರತದ ಗಡಿಯುದ್ಧಕ್ಕೂ ಭಯೋತ್ಪಾದಕರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ನಿಖರವಾದ ದಾಳಿ ನಡೆಸಲು ಪ್ರಾರಂಭಿಸಿ ಯಶಸ್ವಿಯಾಯಿತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮೇ 8, 9, 10 ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಯತ್ನಿಸಿತು. ನಮಂತರ ಭಾರತ ಮೇ 10ರಂದು ದೀರ್ಘ ಶ್ರೇಣಿಯ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು.
ಇದೀಗ ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಜಾರಿಯಾದ ನಂತರ ಮೊದಲ ಮೊದಲ ಬಾರಿಗೆ ರಾಜನಾಥ್ ಸಿಂಗ್ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.