ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Paris Couture Week 2026: ಪ್ಯಾರಿಸ್‌ನಲ್ಲಿ ಬೇಲೂರಿನ ಶಿಲಾಬಾಲಿಕೆಯರಂತೆ ವಾಕ್‌ ಮಾಡಿದ ಮಾಡೆಲ್‌ಗಳು

Paris Couture Week 2026: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್‌ನಲ್ಲಿ ಮಾಡೆಲ್‌ಗಳನ್ನು ಡಿಸೈನರ್‌ ರಾಹುಲ್‌ ಮಿಶ್ರಾ ಬೇಲೂರಿನ ಶಿಲಾಬಾಲಿಕೆಯರಂತೆ ವಾಕ್‌ ಮಾಡಿಸಿದರು. ಇವರೊಂದಿಗೆ ಇಶಾ ಅಂಬಾನಿ ಕೂಡ ಶಿಲಾಬಾಲಿಕೆಯಂತೆ ಕಾಣಿಸಿಕೊಂಡರು. ಈ ಬಗ್ಗೆ ಇಲ್ಲಿದೆ ರಿಪೋರ್ಟ್.

ಪ್ಯಾರಿಸ್‌ನಲ್ಲಿ ಬೇಲೂರಿನ ಶಿಲಾಬಾಲಿಕೆಯರಂತೆ ವಾಕ್‌ ಮಾಡಿದ ಮಾಡೆಲ್‌ಗಳು

ಚಿತ್ರಗಳು: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್‌ 2026 -

-ಶೀಲಾ ಸಿ. ಶೆಟ್ಟಿ

ಸೆಲೆಬ್ರೆಟಿ ಡಿಸೈನರ್‌ ರಾಹುಲ್‌ ಮಿಶ್ರಾ ಈ ಸಾಲಿನ ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್‌ನಲ್ಲಿ ಸೂಪರ್‌ ಮಾಡೆಲ್‌ಗಳನ್ನು ಬೇಲೂರಿನ ಶಿಲಾಬಾಲಿಕೆಯರಂತೆ ರ‍್ಯಾಂಪ್‌ ವಾಕ್‌ ಮಾಡಿಸಿದರು. ಹೌದು, ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿರುವ ಶಿಲಾಬಾಲಿಕೆಯರನ್ನು ಹೋಲುವಂತಹ ಡಿಸೈನರ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ಪ್ಯಾರಿಸ್‌ನಲ್ಲಿ ಫ್ಯಾಷನ್‌ ವಾಕ್‌ ಮಾಡಿರುವುದು ಇದೀಗ ಜಾಗತೀಕ ಮಟ್ಟದ ಫ್ಯಾಷನ್‌ ಲೋಕದಲ್ಲಿ ಸುದ್ದಿಯಾಗಿದೆ.

Paris Couture Week

ಪ್ಯಾರಿಸ್‌ ಕೌಚರ್‌ ಫ್ಯಾಷನ್‌ ವೀಕ್‌ನಲ್ಲಿ ಪ್ರದರ್ಶನ

ಪ್ರತಿ ಬಾರಿಯಂತೆ ಈ ಬಾರಿಯೂ ಈ ಫ್ಯಾಷನ್‌ ವೀಕ್‌ನಲ್ಲಿ ಪಾಲ್ಗೊಂಡಿದ್ದ ಭಾರತದ ಸೆಲೆಬ್ರೆಟಿ ಡಿಸೈನರ್‌ ರಾಹುಲ್‌ ಮಿಶ್ರಾ, ಈ ಸಾಲಿನಲ್ಲಿ ಕಪ್ಪು ಶಿಲೆ ಹಾಗೂ ಬಿಳಿ ಶಿಲೆಯಲ್ಲಿ ಕಡೆದ ಶಿಲಾಬಾಲಿಕೆಯರು ಧರಿಸಿದ ಉಡುಗೆಗಳನ್ನು ವಿಶೇಷವಾಗಿ ಡಿಸೈನ್‌ ಮಾಡಿದ್ದರು.

ಶಿಲಾಬಾಲಿಕೆಯರಂತೆ ಪೋಸ್‌ ನೀಡಿದ ಮಾಡೆಲ್‌ಗಳು

ಬೇಲೂರಿನ ದೇವಾಲಯಗಳಲ್ಲಿನ ಕಪ್ಪು ಹಾಗೂ ಬೂದು ಬಣ್ಣದ ಶಿಲ್ಪಕಲೆಗಳನ್ನು ಪ್ರತಿಬಿಂಬಿಸುವ ಶಿಲಾಬಾಲಿಕೆಯರನ್ನು ಸ್ಪೂರ್ತಿಯಾಗಿಟ್ಟುಕೊಂಡು ಈ ಡಿಸೈನರ್‌ವೇರ್ಸ್ ಸಿದ್ಧಪಡಿಸಲಾಗಿದ್ದು, ಇದು ನಮ್ಮ ಹೇರಿಟೇಜನ್ನು ಜಾಗತೀಕ ಮಟ್ಟದಲ್ಲಿ ಹೈಲೈಟ್‌ ಮಾಡಿದೆ ಎಂದು ರಾಹುಲ್‌ ಮಿಶ್ರಾ ಸೋಷಿಯಲ್‌ ಮೀಡಿಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಪ್ಯಾರಿಸ್‌ ಕೌಚರ್‌ ಫ್ಯಾಷನ್‌ ವೀಕ್‌ನಲ್ಲಿ ಇಶಾ ಅಂಬಾನಿ

ಅಷ್ಟೇಕೆ! ಉದ್ಯಮಿ ಇಶಾ ಅಂಬಾನಿ ಕೂಡ ಈ ಫ್ಯಾಷನ್‌ ವೀಕ್‌ನಲ್ಲಿ ರಾಹುಲ್‌ ಮಿಶ್ರಾ ಅವರ ಶಿಲಾಬಾಲಿಕೆಯ ಡಿಸೈನರ್‌ವೇರ್‌ ಧರಿಸಿ ಭಾಗವಹಿಸಿದ್ದರು. ಅವರೊಂದಿಗೆ ಆಫ್ರಿಕಾ, ಜಪಾನ್‌, ಅಮೆರಿಕಾ ಹಾಗೂ ಯೂರೋಪ್‌ನ ಮಾಡೆಲ್‌ಗಳು ಥೇಟ್‌ ಶಿಲಾ ಬಾಲಿಕೆಯರಂತೆ ಸಿಂಗಾರಗೊಂಡು ರ‍್ಯಾಂಪ್‌ ವಾಕ್‌ ಮಾಡಿದರು. ಮದುವೆ ಮನೆಯಲ್ಲಿ ಬಾರಿಸುವ ತಾಳ-ಹಿಮ್ಮೆಳ ಇಲ್ಲಿನ ರ‍್ಯಾಂಪ್‌ ವಾಕ್‌ಗೆ ಸಾಥ್‌ ನೀಡಿತ್ತು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)