ನರೇಂದ್ರ ಮೋದಿ-ಬಾಲೆನ್ ಶಾ ಭೇಟಿಯ ವಿಶೇಷ ಕ್ಷಣ: ನೇಪಾಳ ಪ್ರಧಾನಿಗೆ ತ್ರಿವೇಣಿ ಸಂಗಮದ ಗಂಗಾಜಲ ಉಡುಗೊರೆ
Balen Shah India Visit: ನೇಪಾಳದ ಪ್ರಧಾನಮಂತ್ರಿಯಾಗಿ ಬಾಲೆನ್ ಶಾ ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ಮೊದಲ ಅಧಿಕೃತ ಭೇಟಿ ನೀಡಿದ್ದಾರೆ. ನವದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಲೆನ್ ಶಾ ಪರಸ್ಪರ ಸಾಂಪ್ರದಾಯಿಕ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡಿದ್ದು ಗಮನ ಸೆಳೆದಿದೆ.
ಬಾಲೆನ್ ಶಾಗೆ ತ್ರಿವೇಣಿ ಸಂಗಮದ ಗಂಗಾಜಲ ಉಡುಗೊರೆ ನೀಡಿದ ಪ್ರಧಾನಿ ಮೋದಿ -
ನವದೆಹಲಿ, ನ. 23: ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿರುವ ನೇಪಾಳದ ಪ್ರಧಾನಮಂತ್ರಿ ಬಾಲೆನ್ ಶಾ (Balen Shah) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ನೀಡುತ್ತಿರುವ ಅವರ ಮೊದಲ ಅಧಿಕೃತ ಭೇಟಿ ಇದಾಗಿದ್ದು, ಮಾತುಕತೆಗೂ ಮುನ್ನ ಉಭಯ ನಾಯಕರು ಸಾಂಪ್ರದಾಯಿಕ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.
ನವದೆಹಲಿಯ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರಧಾನಿ ಬಾಲೆನ್ ಶಾ ಅವರಿಗೆ ಪವಿತ್ರ ತ್ರಿವೇಣಿ ಸಂಗಮದ ಗಂಗಾಜಲ ತುಂಬಿದ ಕಲಶವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಬಾಲೆನ್ ಶಾ ನೇಪಾಳದ ಪವಿತ್ರ ಪಶುಪತಿನಾಥ ದೇವಾಲಯದ ರುದ್ರಾಕ್ಷಿ ಮತ್ತು ಚಂದನವನ್ನು ಪ್ರಧಾನಿ ಮೋದಿ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಉಡುಗೊರೆಗಳು ಕೇವಲ ಶಿಷ್ಟಾಚಾರಕ್ಕಷ್ಟೇ ಸೀಮಿತವಾಗದೆ, ಎರಡೂ ದೇಶಗಳ ನಡುವಿನ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಪ್ರತಿಬಿಂಬಿಸಿವೆ.
ಬಾಲೆನ್ ಶಾ ಅವರಿಗೆ ಗಂಗಾ ಜಲ ನೀಡಿದ ಮೋದಿ:
A beautiful gesture symbolising the deep civilisational and spiritual ties between India and Nepal. PM @narendramodi gifts Nepal’s PM a kalash of Gangajal from Triveni, while the Nepalese PM presents him with Rudraksh and Chandan from the sacred Pashupatinath Temple. A bond rooted in faith, culture and shared heritage. @MEAIndia @ShahBalen #IndiaNepalRelations
— DD News (@DDNewslive) November 23, 2026
ನೇಪಾಳದಲ್ಲಿ ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ಪ್ರಧಾನಿ ಬಾಲೆನ್ ಶಾ ಭಾರತಕ್ಕೆ ಭೇಟಿ ನೀಡಿರುವುದು ರಾಜತಾಂತ್ರಿಕ ವಲಯದಲ್ಲಿ ಮಹತ್ವ ಪಡೆದಿದೆ. ನೆರೆಯ ರಾಷ್ಟ್ರದೊಂದಿಗೆ ವ್ಯಾಪಾರ, ಸಂಪರ್ಕ ಹಾಗೂ ಸಹಕಾರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಭೇಟಿ ಮತ್ತು ಉಡುಗೊರೆ ವಿನಿಮಯ ಗಮನ ಸೆಳೆದಿದೆ.
ನೇಪಾಳ ಪ್ರಧಾನಿ ಬಾಲೇನ್ ಶಾ ಮೊದಲ ಭಾರತ ಭೇಟಿ; ಮೋದಿ ಜೊತೆ ಮಹತ್ವದ ಸಭೆ!
ನೆರೆಯ ರಾಷ್ಟ್ರಗಳ ನಡುವಿನ ಸಹಕಾರವನ್ನು ಬಲಪಡಿಸುವ ಚರ್ಚೆಗಳ ಮೊದಲು ಉಡುಗೊರೆ ವಿನಿಮಯ ನಡೆಯಿತು. ಮಾತುಕತೆಗಳು ಇಂಧನ ಮತ್ತು ಜಲವಿದ್ಯುತ್ ಸಹಕಾರವನ್ನು ಒಳಗೊಂಡಿರುತ್ತವೆ ಎಂದು ನಿರೀಕ್ಷಿಸಲಾಗಿದೆ. ಭಾರತವು ನೇಪಾಳದಿಂದ ವಿದ್ಯುತ್ ಆಮದುಗಳನ್ನು ಹೆಚ್ಚಿಸಲು ನೋಡುತ್ತಿದೆ. ರೈಲ್ವೆ ಮತ್ತು ರಸ್ತೆ ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿ ಮತ್ತು ನೇಪಾಳಕ್ಕೆ ಭಾರತದ ಆರ್ಥಿಕ ಸಹಾಯವೂ ಚರ್ಚೆಗಳಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.