ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗೋಲ್ಗಪ್ಪ, ಐಸ್‌ಕ್ರೀಮ್ ಉಚಿತವಾಗಿ ತಿಂದ ಪೊಲೀಸ್: ವ್ಯಾಪಾರಿಗಳ ದೂರಿನ ಮೇರೆಗೆ ಉತ್ತರ ಪ್ರದೇಶ ಪೇದೆ ಸಸ್ಪೆಂಡ್‌

Police Constable Suspended: ಗೋಲ್ಗಪ್ಪ, ಐಸ್‌ಕ್ರೀಂ ಉಚಿತವಾಗಿ ತಿಂದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ. ಕರ್ತವ್ಯದಲ್ಲಿರುವಾಗ ಪಿಆರ್‌ವಿ ವಾಹನದ ಚಾಲಕ ಐಸ್‌ಕ್ರೀಂ ಸೇವಿಸುತ್ತಿರುವ ವಿಡಿಯೊವನ್ನು ವ್ಯಾಪಾರಿಗಳ ಸಂಘದ ಸದಸ್ಯರು ರೆಕಾರ್ಡ್ ಮಾಡಿದ ಬಳಿಕ ವಿವಾದ ಪ್ರಾರಂಭವಾಯಿತು.

ಗೋಲ್ಗಪ್ಪ, ಐಸ್‌ಕ್ರೀಮ್ ಉಚಿತವಾಗಿ ತಿಂದ ಪೊಲೀಸ್ ಸಸ್ಪೆಂಡ್‌

ಗೋಲ್ಗಪ್ಪ, ಐಸ್‌ಕ್ರೀಂ ಉಚಿತವಾಗಿ ತಿಂದ ಪೊಲೀಸ್ -

Priyanka P
Priyanka P Jun 1, 2026 7:03 PM

ಲಖನೌ, ಜೂ. 1: ಗೋಲ್ಗಪ್ಪ, ಐಸ್‌ಕ್ರೀಂ ಉಚಿತವಾಗಿ ತಿಂದ ಆರೋಪದ ಮೇಲೆ ಉತ್ತರ ಪ್ರದೇಶದ (Uttar Pradesh) ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೊ (viral video) ಹಾಗೂ ವ್ಯಾಪಾರಿಗಳಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ, ಸ್ಥಳೀಯ ವ್ಯಾಪಾರಿಗಳಿಂದ ಉಚಿತ ಆಹಾರ ಪದಾರ್ಥಗಳನ್ನು ಸ್ವೀಕರಿಸಿದ್ದಾನೆ ಎಂಬ ಪ್ರಾಥಮಿಕ ಸಾಕ್ಷ್ಯಗಳು ತನಿಖೆಯಲ್ಲಿ ಕಂಡುಬಂದ ನಂತರ, ಕಾನ್ಪುರ ಪೊಲೀಸರು ಪೊಲೀಸ್ ರೆಸ್ಪಾನ್ಸ್ ವಾಹನಕ್ಕೆ (ಪಿಆರ್‌ವಿ) ನಿಯೋಜಿಸಲಾಗಿದ್ದ ಓರ್ವ ಪೇದೆಯನ್ನು ಅಮಾನತುಗೊಳಿಸಿದ್ದಾರೆ.

ಕರ್ತವ್ಯದಲ್ಲಿರುವಾಗ ಪಿಆರ್‌ವಿ ವಾಹನದ ಚಾಲಕ ಐಸ್‌ಕ್ರೀಂ ಸೇವಿಸುತ್ತಿರುವ ವಿಡಿಯೊವನ್ನು ವ್ಯಾಪಾರಿಗಳ ಸಂಘದ ಸದಸ್ಯರು ರೆಕಾರ್ಡ್ ಮಾಡಿದ ಬಳಿಕ ವಿವಾದ ಪ್ರಾರಂಭವಾಯಿತು. ನಂತರ ಈ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಯಿತು. ದೂರಿನ ಜತೆಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ವಿಡಿಯೊವನ್ನು ರವಾನಿಸಲಾಯಿತು.

ಇಲ್ಲಿದೆ ವಿಡಿಯೊ:



ದೂರಿನ ಪ್ರಕಾರ, ತುರ್ತು ಪ್ರತಿಕ್ರಿಯೆ ಸೇವೆ 112ರ ಅಡಿಯಲ್ಲಿ ನಿಯೋಜಿಸಲಾದ 9303 ಸಂಖ್ಯೆ ಹೊಂದಿರುವ ಪಿಆರ್‌ವಿ ವಾಹನವು ಆ ಪ್ರದೇಶದ ಅಂಗಡಿಗಳ ಬಳಿ ಆಗಾಗ ನಿಲ್ಲುತ್ತಿತ್ತು. ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿ ನಿಯಮಿತವಾಗಿ ಹತ್ತಿರದ ಬಂಡಿಯಿಂದ ಉಚಿತ ಐಸ್‌ಕ್ರೀಂ ಮತ್ತು ಬೀದಿ ವ್ಯಾಪಾರಿಯಿಂದ ಉಚಿತ ಗೋಲ್ಗಪ್ಪಾಗಳನ್ನು ಕೇಳುತ್ತಿದ್ದರು ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.

ಶ್ರಾದ್ಧದ ದಿನ ಭಜನೆ ಬದಲು ರಾತ್ರಿಯಿಡೀ ನಡೆದದ್ದು ಅಶ್ಲೀಲ ನೃತ್ಯ

ವ್ಯಾಪಾರಿಗಳ ಸಂಘಟನೆಯ ಸದಸ್ಯರು ಅಂತಹ ಒಂದು ದೃಶ್ಯವನ್ನು ವಿಡಿಯೊದಲ್ಲಿ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ. ಇದರಲ್ಲಿ ಪೊಲೀಸ್ ಸಿಬ್ಬಂದಿ ವಾಹನದೊಳಗೆ ಕುಳಿತು ಐಸ್‌ಕ್ರೀಂ ತಿನ್ನುತ್ತಿರುವುದನ್ನು ಕಂಡು ಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ಬಳಿಕ ಈ ವಿಡಿಯೊ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂತು.

ದೂರಿನ ನಂತರ, ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಆನಂದ್ ಕುಮಾರ್ ಝಾ ಆರೋಪಗಳ ತನಿಖೆಗೆ ಆದೇಶಿಸಿದರು. ತನಿಖೆಯಲ್ಲಿ ಆರೋಪ ನಿಜವೆಂದು ಕಂಡುಬಂದಿದ್ದು, ಪಿಆರ್‌ವಿ ಘಟಕಕ್ಕೆ ಸೇರಿದ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಕ್ರಮವನ್ನು ದೃಢಪಡಿಸಿದ ಎಸಿಪಿ ಝಾ, ಮಾರಾಟಗಾರರಿಂದ ಉಚಿತ ವಸ್ತುಗಳ ಬೇಡಿಕೆ ಇಟ್ಟಿರುವ ಬಗ್ಗೆ ಪೊಲೀಸ್ ಸಿಬ್ಬಂದಿ ವಿರುದ್ಧ ಆರೋಪ ಮಾಡಲಾಗಿದೆ ಎಂದು ಹೇಳಿದರು. ಪ್ರಾಥಮಿಕ ವಿಚಾರಣೆಯಲ್ಲಿ ದೂರಿನಲ್ಲಿ ಒಂದು ಅಂಶ ಕಂಡುಬಂದ ನಂತರ, ಕಾನ್‌ಸ್ಟೇಬಲ್ ಅನ್ನು ಅಮಾನತುಗೊಳಿಸಲಾಗಿದೆ. ವಿವರವಾದ ತನಿಖೆಯನ್ನು ಈಗ ಘಟಂಪುರದ ಎಸಿಪಿಗೆ ಹಸ್ತಾಂತರಿಸಲಾಗಿದೆ ಎಂದು ಎಸಿಪಿ ಹೇಳಿದರು. ಅಂತಿಮ ವಿಚಾರಣಾ ವರದಿ ಸಲ್ಲಿಸಿದ ನಂತರ ಅಗತ್ಯವಿದ್ದರೆ ಹೆಚ್ಚಿನ ಇಲಾಖಾ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.