ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎನ್‌ಸಿಇಆರ್‌ಟಿ 8ನೇ ತರಗತಿ ಪಠ್ಯಪುಸ್ತಕದ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ; ಏನಿದು ವಿವಾದ?

NCERT Class 8 textbook controversy: ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ 8ನೇ ತರಗತಿಯ ಪಠ್ಯಪುಸ್ತಕದಲ್ಲಿನ ಅಧ್ಯಾಯದ ಕುರಿತು ಹೆಚ್ಚುತ್ತಿರುವ ವಿವಾದದ ಮಧ್ಯೆ, ಜವಾಬ್ದಾರಿಯನ್ನು ಸರಿಪಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

8ನೇ ತರಗತಿ ಪಠ್ಯಪುಸ್ತಕದ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ

ಸಂಗ್ರಹ ಚಿತ್ರ -

Priyanka P
Priyanka P Feb 26, 2026 10:10 PM

ನವದೆಹಲಿ, ಫೆ. 26: ಎನ್‌ಸಿಇಆರ್‌ಟಿಯ 8ನೇ ತರಗತಿ ಪಠ್ಯ ಪುಸ್ತಕದ ಬಗ್ಗೆ ಪ್ರಧಾನಿ ಮೋದಿ (PM Narendra Modi) ಅತೃಪ್ತರಾಗಿದ್ದಾರೆ ಎನ್ನಲಾಗಿದೆ. ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (NCERT) 8ನೇ ತರಗತಿಯ ಪಠ್ಯಪುಸ್ತಕದ ಅಧ್ಯಾಯದ ಕುರಿತು ಹೆಚ್ಚುತ್ತಿರುವ ವಿವಾದದ ಮಧ್ಯೆ, ಜವಾಬ್ದಾರಿಯನ್ನು ಸರಿಪಡಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ವಿವಾದಾತ್ಮಕ ಅಧ್ಯಾಯವನ್ನು ಸೇರಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು. ʼʼನಾವು ನ್ಯಾಯಾಂಗವನ್ನು ಅತ್ಯಂತ ಗೌರವದಿಂದ ಕಾಣುತ್ತೇವೆ. ನ್ಯಾಯಾಂಗವನ್ನು ಅಗೌರವಿಸುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇರಲಿಲ್ಲ. ನಾವು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ನ್ಯಾಯಾಂಗದ ನಿರ್ಧಾರವನ್ನು ನಾವು ಸಂಪೂರ್ಣವಾಗಿ ಪಾಲಿಸುತ್ತೇವೆ. ಈ ಘಟನೆಯಿಂದ ನನಗೆ ತೀವ್ರ ದುಃಖವಾಗಿದೆ ಮತ್ತು ವಿಷಾದ ವ್ಯಕ್ತಪಡಿಸುತ್ತೇನೆʼʼ ಎಂದು ಪ್ರಧಾನ್ ತಿಳಿಸಿದರು.

ಎನ್‌ಸಿಇಆರ್‌ಟಿಯ ಪ್ರಕಟಣೆ:



ಗುರುವಾರ (ಫೆ. 26) ಬೆಳಗ್ಗೆ ಸುಪ್ರೀಂ ಕೋರ್ಟ್ NCERT ಪುಸ್ತಕದಲ್ಲಿನ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಉಲ್ಲೇಖಗಳನ್ನು ಆಕ್ಷೇಪಿಸಿ, ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಕಾರ್ಯದರ್ಶಿ ಮತ್ತು NCERT ನಿರ್ದೇಶಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತು.

8ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ವಿವಾದಾತ್ಮಕ ಅಧ್ಯಾಯ: ಕ್ಷಮೆ ಕೋರಿದ ಎನ್‌ಸಿಇಆರ್‌ಟಿಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ನ್ಯಾಯಾಲಯ ನಿಂದನೆ ಕಾಯ್ದೆ ಅಥವಾ ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ವಿವರಣೆ ಕೇಳಿದೆ. ವಿವಾದಾತ್ಮಕ ವಿಷಯವನ್ನು ಒಳಗೊಂಡಿರುವ ಪುಸ್ತಕದ ಪ್ರಕಟಣೆ, ಮರುಮುದ್ರಣ ಮತ್ತು ಡಿಜಿಟಲ್ ಪ್ರಸರಣದ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ

ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ ಪಡೆದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ (ಫೆಬ್ರವರಿ 25) ಇಸ್ರೇಲ್‌ನ ಅತ್ಯುನ್ನತ ಪುರಸ್ಕಾರ 'ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ' ನೀಡಲಾಯಿತು. ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ಅವರ ಅಸಾಧಾರಣ ಕೊಡುಗೆಯನ್ನು ಗುರುತಿಸಿ ನೆಸ್ಸೆಟ್ ಸ್ಪೀಕರ್ ಅಮೀರ್ ಒಹಾನಾ ಈ ಗೌರವವನ್ನು ಪ್ರಧಾನ ಮಾಡಿದರು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್, ಪಾಲೆಸ್ತೀನ್ ಎರಡೂ ದೇಶಗಳ ಅತ್ಯುನ್ನತ ಗೌರವ ಪಡೆದ ಅಪರೂಪದ ನಾಯಕ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇಸ್ರೇಲ್ ಸಂಸತ್ತು ನೆಸ್ಸೆಟ್‌ ಅನ್ನು ಉದ್ದೇಶಿಸಿ ಬುಧವಾರ ಭಾಷಣ ಮಾಡುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸತ್ ಸದಸ್ಯರು ಘೋಷಣೆಗಳನ್ನು ಕೂಗಿ, ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಇಸ್ರೇಲ್ ಸಂಸತ್ತು ಉದ್ದೇಶಿಸಿ ಭಾಷಣ ಮಾಡಿದ ಮೊದಲ ಭಾರತೀಯ ನಾಯಕ ಪ್ರಧಾನಿ ಮೋದಿ.