ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಪರೂಪದ ಬಿಳಿ ಹುಲಿ ಅಸ್ವಸ್ಥ: ಪ್ರಾಣಿಪ್ರಿಯರಲ್ಲಿ ಆತಂಕ

Viral Video: ಇತ್ತೀಚೆಗೆ ಬಿಹಾರದ ಪಾಟ್ನಾದಲ್ಲಿರುವ ಉದ್ಯಾನವನದಲ್ಲಿ ಪ್ರಾಣಿಗಳ ಆರೈಕೆಯ ಮಾನದಂಡಗಳ ಬಗ್ಗೆ ಅನುಮಾನ ಮೂಡಿದೆ. ಇಲ್ಲಿನ ಮೃಗಾಲಯದಲ್ಲಿರುವ ಬಿಳಿ ಹುಲಿಯೊಂದು ಅಸ್ವಸ್ಥಗೊಂಡಂತೆ ಕಾಣಿಸಿಕೊಂಡಿದ್ದುನಿರ್ವಾಹಕರು ಸರಿಯಾದ ಕಾಳಜಿ ವಹಿಸುತ್ತಿಲ್ಲ ಎಂದು ಪ್ರಾಣಿಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸ್ವಸ್ಥ ಬಿಳಿ ಹುಲಿಯ ರಕ್ಷಣೆಗೆ ಪ್ರಾಣಿಪ್ರಿಯರ ಮನವಿ

ಅಸ್ವಸ್ಥ ಅಪರೂಪದ ಬಿಳಿ ಹುಲಿ -

Profile
Pushpa Kumari Feb 26, 2026 11:11 PM

ಪಾಟ್ನಾ, ಫೆ. 26: ಮೂಕ ಪ್ರಾಣಿಗಳ ಆರೋಗ್ಯ ನಮ್ಮೆಲ್ಲರ ಜವಾಬ್ದಾರಿ. ಅದರಲ್ಲಿಯೂ ಮೃಗಾಲಯದಲ್ಲಿರುವ ಪ್ರಾಣಿಗಳ ಆಹಾರ, ಆಶ್ರಯ ಹಾಗೂ ವೈದ್ಯಕೀಯ ಆರೈಕೆಯ ಜವಾಬ್ದಾರಿ ನಾವೇ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಇತ್ತೀಚೆಗೆ ಬಿಹಾರದ ಪಾಟ್ನಾದಲ್ಲಿರುವ (Patna) ಮೃಗಾಲಯದ ಪ್ರಾಣಿಗಳ ಆರೈಕೆಯ ಮಾನದಂಡಗಳ ಬಗ್ಗೆ ಗಂಭೀರ ಕಳವಳ ಮೂಡಿದೆ. ಮೃಗಾಲಯದಲ್ಲಿರುವ ಬಿಳಿ ಹುಲಿಯೊಂದು ಅಸ್ವಸ್ಥಗೊಂಡಂತೆ ಕಾಣಿಸಿಕೊಂಡಿದ್ದು, ನಿರ್ವಾಹಕರು ಸರಿಯಾದ ಕಾಳಜಿ ವಹಿಸುತ್ತಿಲ್ಲ ಎಂದು ಪ್ರಾಣಿಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಜಯ್ ಗಾಂಧಿ ಜೈವಿಕ ಉದ್ಯಾನವದಲ್ಲಿ ಈ ದೃಶ್ಯ ಕಂಡು ಬಂದಿದ್ದು ಅಪರೂಪದ ಬಿಳಿ ಹುಲಿಯು ತನ್ನ ಆವರಣದೊಳಗೆ ದುರ್ಬಲ ಮತ್ತು ಅಪೌಷ್ಟಿಕತೆಯಿಂದ ಕಾಣಿಸಿಕೊಂಡಿರುವ ವಿಡಿಯೊ ವೈರಲ್ ಆಗಿದೆ. ಬಿಳಿ ಹುಲಿಗೆ ಸರಿಯಾದ ಆಹಾರ ಸಿಗದೇ ಅದು ನಿತ್ರಾಣಗೊಂಡಂತೆ ಕಾಣಿಸುತ್ತಿದೆ.‌ ಅದಕ್ಕೆ ಸರಿಯಾಗಿ ನಡೆಯಲಾಗದೆ ಒಂದೆ ಕಡೆ ಆಶ್ರಯ ಪಡೆಯುತ್ತಿದೆ. ಹುಲಿಯ ಎಲುಬುಗಳು ಮೇಲೆ ಬಂದಿದ್ದು ಅದಕ್ಕೆ ಸರಿಯಾದ ಆಹಾರ ಮತ್ತು ವೈದ್ಯಕೀಯ ಆರೈಕೆ ನೀಡುತ್ತಿಲ್ಲ ಎಂಬ ಅನುಮಾನಗಳನ್ನು ಹಲವರು ವ್ಯಕ್ತ ಪಡಿಸಿದ್ದಾರೆ.

ವಿಡಿಯೊ ನೋಡಿ:



2026ರ ಫೆಬ್ರವರಿ 18ರಂದು ಮೃಗಾಲಯಕ್ಕೆ ಭೇಟಿ ನೀಡಿದ್ದ ಪ್ರವಾಸಿಗರೊಬ್ಬರು ಈ ವಿಡಿಯೊ ಶೇರ್ ಮಾಡಿದ್ದಾರೆ. ವನ್ಯಜೀವಿ ಉತ್ಸಾಹಿಗಳು ಮತ್ತು ಕಾರ್ಯಕರ್ತರು ಹುಲಿಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಫ್ಲೈಓವರ್‌ನಲ್ಲಿ ಹುಟ್ಟುಹಬ್ಬ ಆಚರಣೆ; FIR ಆಗುತ್ತಲೇ ಕ್ಷಮಿಸಿ ಎಂದು ಬೇಡಿಕೊಂಡ ಯುವಕ

ಈ ವಿಡಿಯೊ ಗಮನಿಸಿದ ಪ್ರಾಣಿ ಹಕ್ಕುಗಳ ಸಂಘಟನೆ ಪೇಟಾ ಇಂಡಿಯಾ, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ರಾಜ್ಯದ ಪರಿಸರ ಇಲಾಖೆಯನ್ನು ಟ್ಯಾಗ್ ಮಾಡಿ, ಅಧಿಕಾರಿಗಳು ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿದೆ.

ವೈರಲ್ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿರುವ ಮೃಗಾಲಯದ ಆಡಳಿತ ಮಂಡಳಿ, ಹುಲಿಯ ಆರೋಗ್ಯದ ಬಗ್ಗೆ ಯಾವುದೇ ರೀತಿ ನಿರ್ಲಕ್ಷ್ಯ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದೆ. ಆದರೆ ಸಾರ್ವಜನಿಕರು ತನಿಖೆನಡೆಸುವಂತೆ ಒತ್ತಾಯಿಸುತ್ತಿದ್ದಾರೆ.