ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ಮಹಿಳಾ ಪೊಲೀಸ್ ಅಧಿಕಾರಿ ಜೊತೆ ರಾಹುಲ್ ಗಾಂಧಿ ಅನುಚಿತವಾಗಿ ವರ್ತಿಸಿದ್ದಾರೆ”: ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ

BJP Slams Rahul Gandhi: ಪ್ರತಿಭಟನೆಯ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ವಿಚಾರವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಒಬ್ಬ ಪುರುಷ ನಾಯಕ ಮಹಿಳಾ ಪೊಲೀಸ್ ಅಧಿಕಾರಿಯನ್ನು ಹೇಗೆ ಅನುಚಿತವಾಗಿ ಮುಟ್ಟಲು ಸಾಧ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.

ರಾಹುಲ್ ಗಾಂಧಿ ಅನುಚಿತವಾಗಿ ವರ್ತಿಸಿದ್ದಾರೆ: ಬಿಜೆಪಿ ವಾಗ್ದಾಳಿ

ಸಾಂದರ್ಭಿಕ ಚಿತ್ರ -

Priyanka P
Priyanka P Oct 15, 2026 9:19 PM

ನವದೆಹಲಿ, ಅ.15: ಪ್ರತಿಭಟನೆಯ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ವಿಚಾರವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಬಿಜೆಪಿ ತನ್ನ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸಗೊಳಿಸಿ ಎಂಬ ಘೋಷಣೆ ಕೂಗುತ್ತಾರೆ. ಆದರೆ, ಅವರೇ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ಬಿಜೆಪಿ (BJP) ವಕ್ತಾರ ಗೌರವ್ ಭಾಟಿಯಾ ಅವರು ರಾಹುಲ್ ಗಾಂಧಿ ವಿರುದ್ಧ ಆರೋಪಿಸಿದ್ದಾರೆ.

ಪ್ರತಿಭಟನೆಯ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ರಾಹುಲ್ ಗಾಂಧಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪಕ್ಕೆ, ಆ ಘಟನೆಯ ವಿಡಿಯೊವನ್ನು ಬಿಜೆಪಿ ಆಧಾರವಾಗಿ ತೋರಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಗೌರವ್ ಭಾಟಿಯಾ ಪ್ರದರ್ಶಿಸಿದ ವಿಡಿಯೊದಲ್ಲಿ ರಾಹುಲ್ ಗಾಂಧಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ತಳ್ಳುತ್ತಿರುವ ದೃಶ್ಯ ಕಂಡುಬಂದಿದೆ.

ಮತಗಳ್ಳತನದ ಆರೋಪದ ವಿಚಾರವನ್ನು ಪ್ರಸ್ತಾಪಿಸಲು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ, ಅಕ್ಟೋಬರ್ 7ರಂದು ಇಂಡಿಯಾ ಮೈತ್ರಿಕೂಟದ ವಿರೋಧ ಪಕ್ಷಗಳ ಸಂಸದರು ಅಶೋಕ ರಸ್ತೆಯಲ್ಲಿ ಧರಣಿ ನಡೆಸಿದ್ದರು. ಇದಕ್ಕೂ ಹಿಂದಿನ ದಿನ ಚುನಾವಣಾ ಆಯುಕ್ತರನ್ನು ಭೇಟಿಯಾಗಲು ಅವಕಾಶ ನೀಡುವಂತೆ ಒತ್ತಾಯಿಸಿ ಎಂಟು ಗಂಟೆಗಳ ಕಾಲ ಧರಣಿ ನಡೆಸಿದ್ದರು.

ಇಲ್ಲಿದೆ ವಿಡಿಯೊ:



ಈ ಪ್ರತಿಭಟನೆಯನ್ನು ಜಂತರ್ ಮಂತರ್‌ನಲ್ಲಿ ನಡೆಸಲು ನಾಯಕರು ಬಯಸಿದ್ದರು. ಆದರೆ, ಅಶೋಕ ರಸ್ತೆಯ ವೃತ್ತವೊಂದರ ಬಳಿ ಪೊಲೀಸರು ಅವರನ್ನು ತಡೆದಿದ್ದರು. ಬಳಿಕ ನಾಯಕರನ್ನು ವಶಕ್ಕೆ ಪಡೆಯಲಾಗಿತ್ತು. ಇದೇ ಪ್ರತಿಭಟನೆಯ ವಿಡಿಯೊವನ್ನು ಬಿಜೆಪಿ ನಾಯಕ ಪ್ರದರ್ಶಿಸಿದರು.

ರಾಹುಲ್ ಗಾಂಧಿ ವೈರಲ್ ವಿಡಿಯೋ ವಿವಾದ: ಕರ್ನಾಟಕಕ್ಕೆ ಅವಮಾನ ಎಂದ ಬಿಜೆಪಿ, ಡಿಕೆ ಶಿವಕುಮಾರ್ ತಿರುಗೇಟು

ಒಬ್ಬ ಪುರುಷ ನಾಯಕ ಮಹಿಳಾ ಪೊಲೀಸ್ ಅಧಿಕಾರಿಯನ್ನು ಹೇಗೆ ಅನುಚಿತವಾಗಿ ಮುಟ್ಟಲು ಸಾಧ್ಯ? ಮಹಿಳಾ ಪ್ರತಿಭಟನಾಕಾರರಿಗೆ ಇರುವಂತೆಯೇ ಮಹಿಳಾ ಪೊಲೀಸ್ ಅಧಿಕಾರಿಗಳಿಗೂ ಗೌರವದಿಂದ ಕಾಣಿಸಿಕೊಳ್ಳುವ ಹಕ್ಕಿದೆ ಎಂದು ಭಾಟಿಯಾ ಹೇಳಿದರು. ರಾಹುಲ್ ಗಾಂಧಿಯವರ ನಡವಳಿಕೆಯನ್ನು ನಾಚಿಕೆಗೇಡಿನ ಸಂಗತಿ ಎಂದು ಕರೆದ ಭಾಟಿಯಾ , ಪ್ರತಿಭಟನೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ನಡೆದುಕೊಂಡ ರೀತಿ ಸರಿಯಲ್ಲ. ಅವರ ವರ್ತನೆ ಮಹಿಳಾ ಪೊಲೀಸ್ ಅಧಿಕಾರಿಯ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಹುಲ್ ಗಾಂಧಿಯಂತಹ ನಾಯಕರು ಹೀಗೆ ವರ್ತಿಸುವುದು ಸರಿಯೇ ಎಂದು ಭಾಟಿಯಾ ಪ್ರಶ್ನಿಸಿದ್ದಾರೆ. ಅಲ್ಲದೆ, ಬಿಜೆಪಿ ಪ್ರದರ್ಶಿಸಿದ ವಿಡಿಯೊ ಕುರಿತು ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷ ಈವರೆಗೆ ವಿವರಣೆ ನೀಡಿಲ್ಲ ಎಂದು ಭಾಟಿಯಾ ಹೇಳಿದ್ದಾರೆ. ಈ ವಿಚಾರದಲ್ಲಿ ಅವರು ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಪಿತೃಪ್ರಭುತ್ವವನ್ನು ನಾಶಮಾಡಿ ಎಂಬುದು ಕಾಂಗ್ರೆಸ್‌ನ ಕೇವಲ ಘೋಷಣೆಯಾಗಿದೆಯಷ್ಟೇ. ಪ್ರತಿಭಟನೆಯ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ತಳ್ಳುವ ಬದಲು, ಪ್ರತಿಭಟನೆಯಲ್ಲಿದ್ದ ಮಹಿಳಾ ನಾಯಕರಿಗೆ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಏಕೆ ಅವಕಾಶ ನೀಡಲಿಲ್ಲ ಎಂದು ಬಿಜೆಪಿ ಅವರು ಪ್ರಶ್ನಿಸಿದ್ದಾರೆ.

ಪ್ರತಿಭಟನೆಯ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಜಗಳವಾಡುತ್ತಿರುವ ವಿಡಿಯೊವನ್ನು ಸಹ ಭಾಟಿಯಾ ಪ್ಲೇ ಮಾಡಿದರು.