9 ಸಿಮ್ ಚಂದಾದಾರರನ್ನು ಗುರುತಿಸಿ, ಮಿತಿ ದಾಟದಂತೆ ಸೂಚಿಸಿ: ಟೆಲಿಕಾಂ ಆಪರೇಟರ್‌ಗಳಿಗೆ ದೂರಸಂಪರ್ಕ ಇಲಾಖೆ ಸೂಚನೆ
ಹೆಚ್ಚುವರಿ ಸಿಮ್ ಪಡೆಯುವ ಯೋಚನೆಯಲ್ಲಿದ್ದೀರಾ ಹಾಗಿದ್ದರೆ ದೂರಸಂಪರ್ಕ ಇಲಾಖೆಯ ಹೊಸ ಸುತ್ತೋಲೆ ಏನು ಹೇಳುತ್ತದೆ ನೋಡಿ. ಈಗಾಗಲೇ 9 ಸಂಪರ್ಕಗಳನ್ನು ಹೊಂದಿರುವವರಿಗೆ ಹೊಸ ಸಿಮ್‌ಗಳನ್ನು ನೀಡದಂತೆ ಟೆಲಿಕಾಂ ಆಪರೇಟರ್‌ಗಳಿಗೆ ಸೂಚನೆ ನೀಡಲಾಗಿದೆ. ಆಗಸ್ಟ್ 24ರಿಂದ ಕಡ್ಡಾಯವಾಗಿ ಈ ಆದೇಶ ಪಾಲನೆಯಾಗಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಒಬ್ಬರ ಹೆಸರಿನಲ್ಲಿ ಈಗಾಗಲೇ ಒಂಬತ್ತು ಮೊಬೈಲ್ ಸಿಮ್‌ಗಳನ್ನು (Mobile sim) ನೀಡಿದ್ದರೆ ಮತ್ತೆ ಅವರಿಗೆ ಹತ್ತನೇ ಸಿಮ್ ನೀಡುವಂತಿಲ್ಲ ಎಂದು ದೂರಸಂಪರ್ಕ ಇಲಾಖೆ (Department of Telecommunications) ತಿಳಿಸಿದೆ. ಈ ಕುರಿತು ಟೆಲಿಕಾಂ ಆಪರೇಟರ್‌ಗಳಿಗೆ (telecom operators) ಸೂಚನೆಯನ್ನು ನೀಡಲಾಗಿದ್ದು, ಇದು ಆಗಸ್ಟ್ 24ರಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ. ಈ ಕುರಿತು ಅಧಿಕೃತ ಸುತ್ತೋಲೆಯನ್ನು ಹೊರಡಿಸಿರುವ ದೂರಸಂಪರ್ಕ ಇಲಾಖೆ, ಒಂಬತ್ತು ಮೊಬೈಲ್ ಸಿಮ್‌ಗಳನ್ನು ಹೊಂದಿರುವ ಚಂದಾದಾರರಿಗೆ ಹೊಸ ಸಂಪರ್ಕಗಳನ್ನು (mobile connection) ನೀಡದಿರುವಂತೆ ಟೆಲಿಕಾಂ ಆಪರೇಟರ್‌ಗಳಿಗೆ (telecom operators) ನಿರ್ದೇಶನವನ್ನು ನೀಡಿದೆ.
ನಿಗದಿತ ಮಿತಿ ಮೀರಿ ಸಂಪರ್ಕವನ್ನು ಪಡೆಯಲು ಬಯಸುವ ಪ್ರತಿಯೊಬ್ಬ ಚಂದಾದಾರರನ್ನು ಗುರುತಿಸಲು ಸೂಚಿಸಿರುವ ದೂರ ಸಂಪರ್ಕ ಇಲಾಖೆ, ಅವರಿಗೆ ಮುಂದಿನ ಹೊಸ ಸಿಮ್ ಕಾರ್ಡ್‌ಗಳನ್ನು ನೀಡಲು ನಿರಾಕರಿಸಿ. ಇದಕ್ಕಾಗಿ ಆಗಸ್ಟ್ 24ರಿಂದ ಸೂಕ್ತ ತಾಂತ್ರಿಕ ಮತ್ತು ಸಾಂಸ್ಥಿಕ ಕ್ರಮಗಳನ್ನು ಜಾರಿಗೆ ತರಲಾಗುವುದು.
ಪ್ರಯಾಣಿಕರ ಗಮನಕ್ಕೆ: ಕರ್ನಾಟಕದ ರೈಲು ನಿಲ್ದಾಣಗಳಲ್ಲಿ ಫಂಗಸ್ ಬಂದ, ಅವಧಿ ಮೀರಿದ ಆಹಾರ ಮಾರಾಟ
ಸುತ್ತೋಲೆಯಲ್ಲಿ ಏನಿದೆ?
2026ರ ಆಗಸ್ಟ್, 24ರಿಂದ ನಿಗದಿತ ಮಿತಿ ಮೀರಿ ಹೊಸ ಹೆಚ್ಚಿನ ಮೊಬೈಲ್ ಸಂಪರ್ಕಗಳನ್ನು ಪಡೆಯಲು ಬಯಸುವ ಪ್ರತಿಯೊಬ್ಬ ಚಂದಾದಾರರನ್ನು ಗುರುತಿಸಲು ಟೆಲಿಕಾಂ ಸೇವಾ ಪೂರೈಕೆದಾರರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಬ್ಬ ವ್ಯಕ್ತಿಗೆ ಅನುಮತಿಸಲಾದ ಗರಿಷ್ಠ ಸಂಖ್ಯೆಯ ಮೊಬೈಲ್ ಸಂಪರ್ಕಗಳನ್ನು ಹೊಂದಿದ್ದಾರೆ ಮತ್ತು ಅದಕ್ಕೆ ಅನುಗುಣವಾಗಿ ಅವರಿಗೆ ಹೊಸ ಮೊಬೈಲ್ ಸಂಪರ್ಕವನ್ನು ಒದಗಿಸಲಾಗುವುದಿಲ್ಲ ಎಂದು ಅವರಿಗೆ ತಿಳಿಸಬೇಕು ಎಂದು ತಿಳಿಸಿದೆ. ಈ ಸುತ್ತೋಲೆಯನ್ನು ಆಗಸ್ಟ್ 17ರಂದು ಹೊರಡಿಸಲಾಗಿದೆ.
The Department of Telecommunications (DoT) has issued fresh instructions directing telecom operators to identify and block subscribers who exceed the permissible limit of mobile connections held in their name, using photo-based verification through its Digital Intelligence… pic.twitter.com/dOUpuE1ncR
— ANI (@ANI) August 19, 2026
ಮೊಬೈಲ್ ಚಂದಾದಾರ ಮಾಹಿತಿಯನ್ನು ದೂರಸಂಪರ್ಕ ಕಂಪನಿಗಳು ಇಲಾಖೆಯ ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ (ಡಿಐಪಿ) ನಲ್ಲಿ ಒದಗಿಸುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ದೂರಸಂಪರ್ಕ ಇಲಾಖೆ ತಿಳಿಸಿದೆ.
ನಿಗದಿತ ಮಿತಿ ಮೀರಿ ಈಗಾಗಲೇ ಮೊಬೈಲ್ ಸಂಪರ್ಕಗಳನ್ನು ಪಡೆದಿರುವ ಚಂದಾದಾರರ ವಿವರಗಳು ಡಿಐಪಿಯಲ್ಲಿ ಲಭ್ಯವಿದೆ. ಆಗಸ್ಟ್ 23ರಿಂದ ತಮ್ಮ ಹೆಸರಿನಲ್ಲಿ ಮೊಬೈಲ್ ಸಂಪರ್ಕಗಳಿಗಾಗಿ ನಿಗದಿತ ಮಿತಿಯನ್ನು ತಲುಪಿರುವ ಪ್ರತಿಯೊಬ್ಬ ಚಂದಾದಾರರ ಫೋಟೋ ಕೂಡ ಇದರಲ್ಲಿ ಲಭ್ಯವಾಗಲಿದೆ ಎಂದು ಹೇಳಿದೆ. ನವೆಂಬರ್ 30ರ ಮೊದಲು ಇದನ್ನು ಪೂರ್ಣಗೊಳಿಸುವಂತೆ ಟೆಲಿಕಾಂ ವರದಿಗಾರರಿಗೆ ಸೂಚಿಸಲಾಗಿದೆ.
ಎಸ್‌ಬಿಐ ಗ್ರಾಹಕರೇ ಗಮನಿಸಿ: ಅಕ್ಟೋಬರ್ 1ರಿಂದ ನಗದು ಹಿಂಪಡೆಯುವ ಶುಲ್ಕದಲ್ಲಿ ಬದಲಾವಣೆ
ಈಗಾಗಲೇ ಹೆಚ್ಚು ಸಿಮ್ ಇದ್ದರೆ ಏನು ಪರಿಣಾಮ?
ಗ್ರಾಹಕ ಅರ್ಜಿ ನಮೂನೆಯ (CAF) ನಿಯಮಗಳ ಪ್ರಕಾರ, ನಿಗದಿತ ಮಿತಿಯನ್ನು ಮೀರಿ ಸಕ್ರಿಯಗೊಳಿಸಲಾದ ಹೊಸ ಮೊಬೈಲ್ ಸಂಪರ್ಕವನ್ನು ಸಮಸ್ಯೆ ಬಗೆಹರಿಯುವವರೆಗೆ ತಕ್ಷಣ ಸ್ಥಗಿತಗೊಳಿಸಲಾಗುತ್ತದೆ ಎಂದು ದೂರ ಸಂಪರ್ಕ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.