ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಚ್ಚರಿಕೆ ನೀಡಿದರೂ ರೈಲ್ವೆ ಹಳಿ ಬಳಿ ರೀಲ್ಸ್: ಟ್ರೈನ್ ಡಿಕ್ಕಿ ಹೊಡೆದು ಎರಡೂ ಕೈ ಕಳೆದುಕೊಂಡ 19 ವರ್ಷದ ಯುವತಿ

Woman hit by train: 19 ವರ್ಷದ ಯುವತಿಯೊಬ್ಬಳು ರೈಲ್ವೆ ಹಳಿಯ ಬಳಿ ರೀಲ್ಸ್ ಮಾಡುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದ್ದು, ಇದರಿಂದ ಎರಡೂ ಕೈಗಳು ತುಂಡಾಗಿವೆ. ದೇಹದ ಇತರ ಭಾಗಗಳಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸಂತ್ರಸ್ತೆಯನ್ನು ಪೂರ್ಣಿಮಾ ಕುಮಾರಿ ಎಂದು ಗುರುತಿಸಲಾಗಿದೆ.

ರೈಲ್ವೆ ಹಳಿ ಬಳಿ ರೀಲ್ಸ್: ಕೈ ಕಳೆದುಕೊಂಡ ಯುವತಿ

ಸಾಂದರ್ಭಿಕ ಚಿತ್ರ -

Priyanka P
Priyanka P Aug 26, 2026 5:11 PM

ರಾಂಚಿ, ಆ. 26: ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಗಳಿಸಲು ಹೋಗಿ ಅನೇಕರು ಅಪಾಯವನ್ನು ಮೈಮೇಲೆ ಎಳೆದುಕೊಂಡ ಅನೇಕ ಘಟನೆಗಳು ನಡೆದಿವೆ. ಪ್ರಾಣವನ್ನೂ ಕಳೆದುಕೊಂಡವರಿದ್ದಾರೆ. ಆದರೂ ಈ ಜನಕ್ಕೆ ಮಾತ್ರ ಬುದ್ಧಿ ಬಂದಂತೆ ತೋರುತ್ತಿಲ್ಲ. ಇದೀಗ 19 ವರ್ಷದ ಯುವತಿಯೊಬ್ಬಳು ರೈಲ್ವೆ ಹಳಿಯ ಬಳಿ ರೀಲ್ಸ್ (social media reels) ಮಾಡುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದೆ. ಜಾರ್ಖಂಡ್‌ನ (Jharkhand) ಗರ್ಹ್ವಾ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದ್ದು, ಆಕೆಯ ಎರಡೂ ಕೈಗಳು ತುಂಡಾಗಿವೆ.

ನಗರ-ಉಂಟಾರಿ ರೈಲ್ವೆ ವಿಭಾಗದ ಬಳಿ ರಾಂಚಿ-ಚೋಪನ್ ಎಕ್ಸ್‌ಪ್ರೆಸ್‌ ಡಿಕ್ಕಿ ಹೊಡೆದ ಪರಿಣಾಮ ಪೂರ್ಣಿಮಾ ಕುಮಾರಿ ತೀವ್ರ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಆಕೆಯ ಎರಡೂ ಕೈಗಳು ತುಂಡಾಗಿದ್ದು, ದೇಹದ ಇತರ ಭಾಗಗಳಿಗೂ ಗಾಯಗಳಾಗಿವೆ.

ಗರ್ಹ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅಶೋಕ್ ವಿಹಾರ್ ಪ್ರದೇಶದ ನಿವಾಸಿ ಧೀರಜ್ ಸಿಂಗ್ ಎಂಬವವರ ಪುತ್ರಿ ಪೂರ್ಣಿಮಾ, ಸ್ನೇಹಿತೆಯರೊಂದಿಗೆ ರೈಸಾದಲ್ಲಿ ರೈಲ್ವೆ ಮಾರ್ಗದ ಬಳಿ ಹೋಗಿದ್ದಳು. ಪೂರ್ಣಿಮಾ, ಗೆಳತಿಯರೊಂದಿಗೆ ರೀಲ್ಸ್ ಮಾಡುತ್ತಿದ್ದಳು. ಈ ವೇಳೆ ರಾಂಚಿ ಕಡೆಯಿಂದ ಬರುತ್ತಿದ್ದ ರೈಲಿನ ವೇಗ ಮತ್ತು ದೂರವನ್ನು ತಪ್ಪಾಗಿ ಊಹಿಸಿದ್ದಳು ಇದರಿಂದ ಡಿಕ್ಕಿ ಸಂಭವಿಸಿದೆ.

ಕರ್ನಾಟಕದ ರೈಲು ನಿಲ್ದಾಣಗಳಲ್ಲಿ ಫಂಗಸ್ ಬಂದ, ಅವಧಿ ಮೀರಿದ ಆಹಾರ ಮಾರಾಟ

ಸ್ನೇಹಿತೆಯರು ತಕ್ಷಣ ಆಕೆಯನ್ನು ಗರ್ಹ್ವಾ ಸದರ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರು. ಆಕೆ ಗಂಭೀರ ಗಾಯಗೊಂಡಿದ್ದರಿಂದ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಆಕೆಯ ಕುಟುಂಬ ಸದಸ್ಯರು ಕೂಡ ಆಸ್ಪತ್ರೆಗೆ ತೆರಳಿದರು.

ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್ ಮಾಡುವುದಕ್ಕಾಗಿ ಜೀವವನ್ನೇ ಪಣಕ್ಕಿಡುವ ಅಪಾಯಗಳನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ. ರೈಲ್ವೆ ಹಳಿಗಳು, ನದಿಗಳು, ಜಲಪಾತಗಳು, ಬಹುಮಹಡಿ ಕಟ್ಟಡಗಳು ಮತ್ತು ಇತರ ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ ಮಾಡಲು ಹೋಗಿ ಜನರು ಅಪಾಯಕ್ಕೆ ಸಿಲುಕುತ್ತಿರುವುದು ಹೆಚ್ಚುತ್ತಿದೆ. ಆದರೂ ಕೂಡ ಎಚ್ಚೆತ್ತಂತೆ ತೋರುತ್ತಿಲ್ಲ.