ವೇಗವಾಗಿ ಬಂದ ಕಾರ್ ಹರಿದು ರಸ್ತೆ ಬದಿ ಕೆಲಸ ಮಾಡುತ್ತಿದ್ದ 8 ಕಾರ್ಮಿಕರ ದುರ್ಮರಣ; ತಡವಾಗಿ ಸ್ಥಳಕ್ಕೆ ತಲುಪಿದ ಆಂಬ್ಯುಲೆನ್ಸ್
Road Horror In Punjab: ಪಂಜಾಬ್ನಲ್ಲಿ ಭೀಕರ ಅಪಘಾತವೊಂದು ನಡೆದಿದ್ದು, ರಸ್ತೆ ಬದಿ ಕೆಲಸ ಮಾಡುತ್ತಿದ್ದ 8 ಕಾರ್ಮಿಕರು ಹತರಾಗಿದ್ದಾರೆ. ವೇಗವಾಗಿ ಬಂದ ಕಾರ್ ನಿಯಂತ್ರಣ ತಪ್ಪಿ ಕಾರ್ಮಿಕರ ಮೇಲೆ ಸಾಗಿ ಈ ದುರಂತ ಸಂಭವಿಸಿದೆ. ಮೃತ ಕಾರ್ಮಿಕರ ಪೈಕಿ 6 ಮಂದಿ ಮಹಿಳೆಯರು ಸೇರಿದ್ದಾರೆ.
ಪಂಜಾಬ್ನಲ್ಲಿ ನಡೆದ ಭೀಕರ ರಸ್ತೆ ಅಪಘಾತ -
ಚಂಡೀಗಢ, ಅ. 18: ಪಂಜಾಬ್ನಲ್ಲಿ ಭೀಕರ ಅಪಘಾತವೊಂದು ನಡೆದಿದ್ದು, ರಸ್ತೆ ಬದಿ ಕೆಲಸ ಮಾಡುತ್ತಿದ್ದ 8 ಕಾರ್ಮಿಕರು ಹತರಾಗಿದ್ದಾರೆ. ವೇಗವಾಗಿ ಬಂದ ಕಾರ್ ನಿಯಂತ್ರಣ ತಪ್ಪಿ ಕಾರ್ಮಿಕರ ಮೇಲೆ ಸಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತ ಕಾರ್ಮಿಕರೆಲ್ಲ ರಸ್ತೆ ಕಾಮಗಾರಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಪಂಜಾಬ್ನ ಸಂಗ್ರೂರ್ ಜಿಲ್ಲೆಯ ಲೆಹ್ರಗಾಗದ ಛೋಟಿಯಾನ್ ಗ್ರಾಮ ಜಾಖಲ್ ರಸ್ತೆಯಲ್ಲಿ ಈ ಅಪಘಡ (Road Horror In Punjab) ಸಂಭವಿಸಿದ್ದು, ಚಾಲಕನ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ವೇಗವಾಗಿ ಬಂದ ಕಾರ್ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಸುಮಾರು 20 ಕಾರ್ಮಿಕ ಗುಂಪಿನ ಕಡೆ ಚಲಿಸಿತು ಎಂದು ಮೂಲಗಳು ತಿಳಿಸಿವೆ. ಅಪಘಾತಕ್ಕೀಡಾದ ಶೆವರ್ಲೆ ಆಪ್ಟ್ರಾ ಮ್ಯಾಗ್ನಮ್ ಕಾರ್ನ ಚಾಲಕನನ್ನು ಪರ್ಗತ್ ಸಿಂಗ್ ಕಾಲ ಎಂದು ಗುರುತಿಸಲಾಗಿದೆ. ರೈಧ್ರಾನ ನಿವಾಸಿಯಾದ ಅತ ಅಪಘಾತದ ಬಳಿಕ ಕಾರ್ ನಿಲ್ಲಿಸದೆ ಪರಾರಿಯಾಗಿದ್ದು, ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಪಂಜಾಬ್ನಲ್ಲಿ ಭೀಕರ ರಸ್ತೆ ಪಾಘಾತ:
#BREAKING Tragic accident in Punjab's Sangrur: An out-of-control speeding car mowed down MGNREGA workers on the Lehragaga-Jakhal road near Chotiya village, resulting in 8 deaths and multiple injuries. @PunjabPoliceInd @BhagwantMann #punjab #Sangrur #accidnet https://t.co/nlJxW9KCcD
— Monu Lodhi 🇮🇳 (@monu_lodh) October 18, 2026
ಮೃತ ಕಾರ್ಮಿಕರ ಪೈಕಿ 6 ಮಂದಿ ಮಹಿಳೆಯರು ಸೇರಿದ್ದಾರೆ. ಮೃತರನ್ನು ಕರ್ಮಜೀತ್ ಕೌರ್, ನಿಕಿ, ಸರ್ಬಜೀತ್ ಕೌರ್, ರಂಜೀತ್ ಕೌರ್, ಕರ್ಮಜೀತ್, ರಾಣಿ ಕೌರ್, ಜೀವನ್ ಸಿಂಗ್ ಮತ್ತು ದೇಸ್ ರಾಜ್ ಎಂದು ಗುರುತಿಸಲಾಗಿದೆ. ಈ ಪೈಕಿ 7 ಮಂದಿ ಅಲಿಶರ್ ಗ್ರಾಮದವರು ಎಂದು ಮೂಲಗಳು ವರದಿ ಮಾಡಿವೆ. ಸ್ಥಳದಲ್ಲೇ 5 ಮಂದಿ ಮೃತಪಟ್ಟರೆ, ಗಾಯಗೊಂಡ ಮೂವರು ಚಿಕಿತ್ಸೆ ಫಲಿಸದೆ ಅಸುನೀಗಿದರು.
ಮಧ್ಯಪ್ರದೇಶದ ದೇವಸ್ಥಾನದ ಬಳಿ ಭಕ್ತರ ಮೇಲೆ ಟ್ರಕ್ ಹರಿದು 13 ಮಂದಿ ಸಾವು
ಸಮಯಕ್ಕೆ ಸರಿಯಾಗಿ ತಲುಪದ ಆಂಬ್ಯುಲೆನ್ಸ್
ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ತಲುಪದೇ ಇರುವುದು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಸ್ಥಳೀಯರು ದೂರಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಅಪಘಾತದ ಮಾಹಿತಿ ಲಭ್ಯವಾದ ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದ ಹರ್ವಿಂದರ್ ಸಿಂಗ್ ಮಾತನಾಡಿ ಸಂತ್ರಸ್ತರೆಲ್ಲ ವಿಬಿ ಜಿ-ರಾಮ್-ಜಿ (ಮನರೇಗಾ) ಯೋಜನೆಯ ಕಾರ್ಮಿಕರು ಎಂದು ಮಾಹಿತಿ ನೀಡಿದ್ದಾರೆ.
ತಾವು ಆಗಮಿಸಿದಾಗ ಕನಿಷ್ಠ 23 ಕಾರ್ಮಿಕರು ಗಾಯಗೊಂಡಿದ್ದರು. ಈ ಪೈಕಿ 4-5 ಮಂದಿ ಗಂಭೀರ ಸ್ಥಿತಿಯಲ್ಲಿದ್ದರು ಎಂದಿದ್ದಾರೆ. ʼʼನಾನು ಆಗಮಿಸಿದಾಗ ಸ್ಥಳದಲ್ಲಿ ಯಾರೂ ಇರಲಿಲ್ಲ. 5-6 ಮೃತದೇಹ ರಸ್ತೆ ಬದಿ ಬಿದ್ದಿತ್ತು. ಮೃತರೆಲ್ಲ ಬಡ ಕೂಲಿ ಕಾರ್ಮಿಕರು. ಸ್ಥಳಕ್ಕೆ ಆಂಬ್ಯುಲೆನ್ಸ್ ತಲುಪಲು ಸುಮಾರು 1 ಗಂಟೆ ಬೇಕಾಯ್ತು. ಇದು ಸಾವಿನ ಸಂಖ್ಯೆ ಹೆಚ್ಚಲು ಕಾರಣʼʼ ಎಂದು ಸ್ಥಳೀಯಾಡಳಿತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಂಬ್ಯುಲೆನ್ಸ್ಗೆ ಕಾಯುತ್ತಿದ್ದಾಗಲೇ ಒಂದಿಬ್ಬರ ಜೀವ ಹೋಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಆಂಬ್ಯುಲೆನ್ಸ್ ಕೊರತೆ; ಸುಡು ಬಿಸಿಲಿನಲ್ಲೇ ಬಾಲಕನನ್ನು ಆಸ್ಪತ್ರೆಗೆ ಸ್ಟ್ರೆಚರ್ನಲ್ಲಿ ಸಾಗಿಸಿದ ಕುಟುಂಬಸ್ಥರು
ಪೊಲೀಸರ ಕಣ್ಣೆದುರೇ ಚಾಲಕ ಪರಾರಿ
ಪೊಲೀಸ್ ಸಿಬ್ಬಂದಿ ಆಗಮಿಸಿದ ಬಳಿಕ ಅವರ ಕಣ್ಣೆದುರಿನಿಂದಲೇ ಅಪಘಾತ ಎಸಗಿದ ಚಾಲಕ ಪರಾರಿಯಾಗಿದ್ದಾನೆ ಎಂದು ಕೆಲವರು ಆರೋಪಿಸಿದ್ದಾರೆ. ಸ್ಥಳದಲ್ಲಿ ನೆರೆದ ನೂರಾರು ಕಾರ್ಮಿಕರು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ. ಜತೆಗೆ ಸಂತ್ರಸ್ತ ಕುಟುಂಬ ಸದಸ್ಯರಿಗೆ ನೆರವು ನೀಡುವುದಾಗಿಯೂ ತಿಳಿಸಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.