ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ನೂರಾರು ಸುಮಂಗಲಿಯರಿಂದ ಲಲಿತಾ ಸಹಸ್ರನಾಮ ಪಠಣ; ನಾಡಿನ ಒಳಿತಿಗಾಗಿ ಪ್ರಾರ್ಥನೆ

ಪಂಚಗಿರಿ ಮತ್ತು ಕೆ.ವಿ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್‌ಕಿರಣ್ ಅವರ ನೇತೃತ್ವದಲ್ಲಿ ಹಲವು ವರ್ಷಗಳಿಂದ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಭಾನುವಾರ ನಡೆದ ಹೋಮದ ಅಂಗವಾಗಿ ಬೆಳಗ್ಗೆಯಿಂದಲೇ ವರಸಿದ್ಧಿ ವಿನಾಯಕ ಸ್ವಾಮಿಗೆ ಅಭಿಷೇಕ, ನೈವೇದ್ಯ, ಪುಷ್ಪಾಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.

ಭಕ್ತಿ, ಶ್ರದ್ಧೆಯಿಂದ ಮಹಾ ಚಂಡಿಕಾಹೋಮ: ಕೆ.ವಿ. ನವೀನ್‌ಕಿರಣ್

-

Profile
Ashok Nayak Oct 18, 2026 10:02 PM

ಚಿಕ್ಕಬಳ್ಳಾಪುರ: ಆಯುಧಪೂಜೆ(Ayudhapooje) ಮತ್ತು ವಿಜಯದಶಮಿ(Vijayadashami) ಅಂಗವಾಗಿ ನಗರದ ಹೊರವಲಯದ ಸಿವಿವಿ ಕ್ಯಾಂಪಸ್‌ನ ವರಸಿದ್ಧಿ ವಿನಾಯಕ ದೇವಾಲಯದ ಆವರಣದಲ್ಲಿ ನೂರಾರು ಸುಮಂಗಲಿಯರ ಪಾದಪೂಜೆ, ಸಾಮೂಹಿಕ ಲಲಿತಾ ಸಹಸ್ರನಾಮ ಪಠಣ ಹಾಗೂ ಮಹಾ ಚಂಡಿಕಾಹೋಮ ಶ್ರದ್ಧಾಭಕ್ತಿಯಿಂದ ನೆರವೇರಿತು.

cbpm2pp

ಪಂಚಗಿರಿ ಮತ್ತು ಕೆ.ವಿ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್‌ಕಿರಣ್ ಅವರ ನೇತೃತ್ವದಲ್ಲಿ ಹಲವು ವರ್ಷಗಳಿಂದ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಭಾನುವಾರ ನಡೆದ ಹೋಮದ ಅಂಗವಾಗಿ ಬೆಳಗ್ಗೆಯಿಂದಲೇ ವರಸಿದ್ಧಿ ವಿನಾಯಕ ಸ್ವಾಮಿಗೆ ಅಭಿಷೇಕ, ನೈವೇದ್ಯ, ಪುಷ್ಪಾಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ನವೀನ್‌ಕಿರಣ್ ದಂಪತಿ ಹೋಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.

ಇದನ್ನೂ ಓದಿ: Chikkaballapur News: ಜೈನ್ ಮಿಷನ್ ಆಸ್ಪತ್ರೆಯಲ್ಲಿ ಜಿಲ್ಲೆಯ ಮೊದಲ ಸರ್ಜಿಕಲ್ ತೀವ್ರ ನಿಗಾ ಘಟಕ ಆರಂಭ

ನಾಡಿನಲ್ಲಿ ಸುಭಿಕ್ಷೆ ನೆಲೆಸಬೇಕು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನರು ಸುಖ-ಸಮೃದ್ಧಿ ಯಿಂದ ಬಾಳಬೇಕು ಹಾಗೂ ಬರಗಾಲದ ಸಂಕಷ್ಟಗಳು ದೂರವಾಗಬೇಕು ಎಂದು ಜಗನ್ಮಾತೆ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಲಾಯಿತು. ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಸುಮಂಗಲಿಯರ ಪಾದಪೂಜೆ ನೆರವೇರಿಸಿ ಗೌರವಿಸಲಾಯಿತು.

cbpm2ppa

ಈ ಸಂದರ್ಭದಲ್ಲಿ ಮಾತನಾಡಿದ ಕೆ.ವಿ. ನವೀನ್‌ಕಿರಣ್, ಭಾರತೀಯ ಪರಂಪರೆಯಲ್ಲಿ ಆಯುಧ ಪೂಜೆ ಮತ್ತು ವಿಜಯದಶಮಿಗೆ ವಿಶೇಷ ಮಹತ್ವವಿದೆ. ಪೂಜೆಗೆ ಭಕ್ತಿಯೇ ಮುಖ್ಯವೇ ಹೊರತು ಆಡಂಬರವಲ್ಲ. ಈ ಆಶಯದೊಂದಿಗೆ ಪೂಜೆಯಲ್ಲಿ ಪಾಲ್ಗೊಂಡ ಎಲ್ಲ ಸುಮಂಗಲಿಯರಿಗೆ ಪಂಚಗಿರಿ ಮತ್ತು ಕೆ.ವಿ. ಶಿಕ್ಷಣ ಸಂಸ್ಥೆಗಳ ವತಿಯಿಂದ ಅಗತ್ಯ ಪೂಜಾ ಪರಿಕರಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು.

ಕೆಟ್ಟದ್ದರ ವಿರುದ್ಧ ಒಳಿತಿನ ವಿಜಯದ ಸಂಕೇತವಾಗಿ ವಿಜಯದಶಮಿ ಆಚರಿಸಲಾಗುತ್ತದೆ. ಮೈಸೂರು ದಸರಾ ನಾಡಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯ ಪ್ರತೀಕವಾಗಿದೆ. ನವರಾತ್ರಿ ಹಬ್ಬವು ನಾಡಿನ ಜನರಿಗೆ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಅವರು ಹಾರೈಸಿದರು.

ವರಸಿದ್ಧಿ ವಿನಾಯಕ ದೇವಾಲಯದ ಸಮಿತಿ ವತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಭಕ್ತರಿಗೂ ಕೃತಜ್ಞತೆ ಸಲ್ಲಿಸಲಾಯಿತು.