ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭೋಪಾಲ್ ಅನಿಲ ದುರಂತ ರ‍್ಯಾಲಿ: ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಅವಮಾನ ಆರೋಪ

ಭೋಪಾಲ್ ಅನಿಲ ದುರಂತದ ನೆನಪಿನ ಅಂಗವಾಗಿ ನಡೆದ ರ‍್ಯಾಲಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಅವಮಾನಿಸಲಾಗಿದೆ ಎಂದು ಆರ್‌ಎಸ್‌ಎಸ್ ಕಾರ್ಯಕರ್ತರು ಆರೋಪಿಸಿದ್ದು, ಘರ್ಷಣೆಯ ವಾತಾವರಣ ಉಂಟಾದ ಘಟನೆ ಭೋಪಾಲ್ ನಲ್ಲಿ ನಡೆದಿದೆ. ರ‍್ಯಾಲಿ ಆಯೋಜಕರು ಧಾರ್ಮಿಕ ಮತ್ತು ಸಾಂಸ್ಥಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

ಭೋಪಾಲ್ ಅನಿಲ ದುರಂತ  ರ‍್ಯಾಲಿಯಲ್ಲಿ ಘರ್ಷಣೆ

(ಸಂಗ್ರಹ ಚಿತ್ರ) -

ಭೋಪಾಲ್: ಆರ್‌ಎಸ್‌ಎಸ್ (RSS) ಕಾರ್ಯಕರ್ತರಿಗೆ ಅವಮಾನಿಸಲಾಗಿದೆ ಎಂದು ಆರೋಪಿಸಿ ಆರ್‌ಎಸ್‌ಎಸ್ ಕಾರ್ಯಕರ್ತರು ಘರ್ಷಣೆಗೆ ಇಳಿದ ಘಟನೆ ಭೋಪಾಲ್ (Bhopal) ನಲ್ಲಿ ನಡೆದಿದೆ. ಭೋಪಾಲ್ ಅನಿಲ ದುರಂತದ (Bhopal Gas Tragedy) ಸ್ಮರಣಾರ್ಥವಾಗಿ ನಡೆದ ರ‍್ಯಾಲಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಅವಮಾನಿಸಲಾಗಿದೆ ಎಂದು ಆರ್‌ಎಸ್‌ಎಸ್ ಕಾರ್ಯಕರ್ತರು ಆರೋಪಿಸಿದ್ದು, ರ‍್ಯಾಲಿ ಆಯೋಜಕರು ಧಾರ್ಮಿಕ ಮತ್ತು ಸಾಂಸ್ಥಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ದೂರಿದ್ದಾರೆ. ಭೋಪಾಲ್ ಅನಿಲ ದುರಂತದ 41ನೇ ವರ್ಷದ ಹಿನ್ನೆಲೆಯಲ್ಲಿ ನಡೆದ ರ‍್ಯಾಲಿ ವೇಳೆ ಈ ಘಟನೆ ನಡೆದಿದೆ.

ಭೋಪಾಲ್ ಅನಿಲ ದುರಂತದ 41ನೇ ವರ್ಷದ ಪ್ರಯುಕ್ತ ಬುಧವಾರ ಬೆಳಗ್ಗೆ ಶಾಂತಿಯುತವಾಗಿ ರ‍್ಯಾಲಿ ಪ್ರಾರಂಭವಾಗಿತ್ತು. ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಸಾಗಿಸಲಾದ ಪ್ರತಿಕೃತಿ ಕುರಿತು ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಅನಿಲ ಸಂತ್ರಸ್ತರ ಸಂಘಟನೆಗಳೊಂದಿಗೆ ಘರ್ಷಣೆ ನಡೆಸಿದ್ದು, ಇದು ರಾಜಕೀಯ ಘರ್ಷಣೆಯಾಗಿ ಮಾರ್ಪಟ್ಟಿತು.

ನಿನ್ನಂಥ ಅಪ್ಪ ಇಲ್ಲ; ಮಗುವಿನ ಸುರಕ್ಷತೆಗಾಗಿ ಬೈಕ್‌ನಲ್ಲಿ ಏರ್‌ಬ್ಯಾಗ್‌ ತಯಾರಿಸಿದ ವ್ಯಕ್ತಿ: ವೈರಲ್ ಆಯ್ತು ಈ ವಿಡಿಯೊ

ಭಾರತ್ ಟಾಕೀಸ್ ಕೆಳಸೇತುವೆಯಿಂದ ಜೆಪಿ ನಗರ ಅನಿಲ ಸ್ಮಾರಕದವರೆಗೆ ನಡೆದ ರ‍್ಯಾಲಿ ವೇಳೆ ಸಂತ್ರಸ್ತರು ದೀರ್ಘಕಾಲದಿಂದ ಬಾಕಿ ಇರುವ ನ್ಯಾಯ, ಯೂನಿಯನ್ ಕಾರ್ಬೈಡ್ ಮತ್ತು ಡೌ ಕೆಮಿಕಲ್ ವಿರುದ್ಧ ಕಠಿಣ ಕ್ರಮ ಮತ್ತು ಬದುಕುಳಿದವರಿಗೆ ಸರಿಯಾದ ಪುನರ್ವಸತಿಗೆ ಒತ್ತಾಯಿಸಿದರು. ಆದರೆ ಈ ಸಂದರ್ಭದಲ್ಲಿ ಸಂಘಟನೆಗಳು ಯೂನಿಯನ್ ಕಾರ್ಬೈಡ್, ಡೌ ಮತ್ತು 1984 ರ ದುರಂತಕ್ಕೆ ಸಂಬಂಧಿಸಿದ ಕಂಪೆನಿಗಳನ್ನು ಸಂಕೇತಿಸುವ ಪ್ರತಿಕೃತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದಾಗ ಉದ್ವಿಗ್ನ ವಾತಾವರಣ ಉಂಟಾಯಿತು.



ರ‍್ಯಾಲಿ ಸಂಘಟಕರು ಪ್ರತಿಕೃತಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಚಿತ್ರಿಸಿದ್ದಾರೆ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು ಆರೋಪಿಸಿದ್ದು, ಇದರಿಂದ ಆಯೋಜಕರು ಧಾರ್ಮಿಕ ಮತ್ತು ಸಾಂಸ್ಥಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ದೂರಿದ್ದಾರೆ. ಅಲ್ಲದೇ ಮೆರವಣಿಗೆಯನ್ನು ತಡೆದು ಪ್ರತಿಕೃತಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿದರು. ಇದು ಪ್ರಚೋದನಕಾರಿ ಮತ್ತು ರಾಷ್ಟ್ರವಿರೋಧಿ ಕೃತ್ಯ ಎಂದು ಆಕ್ಷೇಪಿಸಿದರು.

ರ‍್ಯಾಲಿ ಆಯೋಜಕರು ಪ್ರತಿಕೃತಿಯನ್ನು ತೆಗೆಯಲು ಕೇಳಲಿಲ್ಲ. ಇದು ದುರಂತಕ್ಕೆ ಕಾರಣವಾದ ನಿಗಮಗಳನ್ನು ಪ್ರತಿನಿಧಿಸುತ್ತದೆ. ಇಲ್ಲಿ ಯಾರಿಗೂ ನೋವುಂಟು ಮಾಡುವ ವಿಚಾರವಿಲ್ಲ. ಬಿಜೆಪಿ ಸರ್ಕಾರವು ಡೌ ಕೆಮಿಕಲ್ ಅನ್ನು ರಕ್ಷಿಸುತ್ತಿದೆ ಮತ್ತು ತಪ್ಪಿತಸ್ಥ ಕಂಪೆನಿಗಳ ವಿರುದ್ದದ ಕ್ರಮಕ್ಕೆ ಅಡ್ಡಿಪಡಿಸುತ್ತಿದೆ. ಇದು ರಾಜಕೀಯ ಪ್ರೇರಿತ ಘಟನೆಯಾಗಿದೆ ಎಂದು ದೂರಿದರು.

ಅಂತರರಾಷ್ಟ್ರೀಯ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ದಿನದ ಆಚರಣೆ

ಸಂತ್ರಸ್ತರು ಮತ್ತು ಬಿಜೆಪಿ ನಾಯಕರ ನಡುವೆ ವಾದ ವಿವಾದಗಳು ಹೆಚ್ಚಾದಂತೆ ಪೊಲೀಸರು ಮಧ್ಯಪ್ರವೇಶಿಸಿ ಇದನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ತಮ್ಮ ನಿಲುವನ್ನು ಸಮರ್ಥಿಸಿಕೊಂಡರೆ, ಅನಿಲ ಸಂತ್ರಸ್ತರ ಸಂಘಟನೆಗಳು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಾಯಕರೊಬ್ಬರು, ಆಯೋಜಕರು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವ್ಯಕ್ತಿಯ ಪ್ರತಿಕೃತಿಯನ್ನು ಹೊತ್ತೊಯ್ಯುವ ಮೂಲಕ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.