ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಿನ್ನಂಥ ಅಪ್ಪ ಇಲ್ಲ; ಮಗುವಿನ ಸುರಕ್ಷತೆಗಾಗಿ ಬೈಕ್‌ನಲ್ಲಿ ಏರ್‌ಬ್ಯಾಗ್‌ ತಯಾರಿಸಿದ ವ್ಯಕ್ತಿ: ವೈರಲ್ ಆಯ್ತು ಈ ವಿಡಿಯೊ

Viral Video: ವ್ಯಕ್ತಿಯೊಬ್ಬ ತನ್ನ ಮಗುವಿನ ಸುರಕ್ಷತೆಗಾಗಿ ಬೈಕ್‌ನಲ್ಲಿ ಏರ್‌ಬ್ಯಾಗ್ ಅಳವಡಿಸಿರುವ ವಿಡಿಯೊ ವೈರಲ್ ಆಗಿದೆ. ಬೈಕ್ ಚಲಾಯಿಸುವಾಗ ಪೋಷಕರು ತಮ್ಮ ಮಗುವಿನ ಬಗ್ಗೆ ನಿರ್ಲಕ್ಷ್ಯ ತೋರದಂತೆ ಎಚ್ಚೆತ್ತುಕೊಳ್ಳುವಂತೆ ಕಣ್ತೆರೆಸುವಲ್ಲಿ ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಸಂಚಲನ ಉಂಟು ಮಾಡಿದೆ.

ಮಗುವಿನ ಸುರಕ್ಷತೆಗಾಗಿ ಬೈಕ್‌ನಲ್ಲಿ ಏರ್‌ಬ್ಯಾಗ್‌ ತಯಾರಿಸಿದ ವ್ಯಕ್ತಿ

ಬೈಕ್‌ನಲ್ಲಿ ಏರ್ ಬ್ಯಾಗ್ ತಯಾರಿಸಿದ ವ್ಯಕ್ತಿ -

Profile
Pushpa Kumari Dec 3, 2025 8:25 PM

ನವದೆಹಲಿ, ಡಿ. 3: ವಾಹನ ಚಲಾಯಿಸುವಾಗ ಎಷ್ಟು ಜಾಗೃತಿ ವಹಿಸಿದರೂ ಅದು ಕಡಿಮೆಯೇ. ಅದರಲ್ಲೂ ಬೈಕ್, ಸ್ಕೂಟರ್‌ನಂತಹ ದ್ವಿಚಕ್ರ ವಾಹನ ಚಲಾಯಿಸುವಾಗ ಸ್ಕಿಡ್ ಆಗಿ, ಬ್ಯಾಲೆನ್ಸ್ ತಪ್ಪಿ ಅಪಘಾತವಾಗುವ ಪ್ರಮಾಣ ಹೆಚ್ಚಾಗಿದೆ. ಎಷ್ಟೋ ಸಲ ಚಾಲಕ ಹೆಲ್ಮೆಟ್ ಧರಿಸಿ ಸೇಫ್ ಆಗಿ ಹಿಂಬದಿ ಸವಾರರಿಗೆ ಗಾಯವಾಗಿ ಸಾವು ನೋವುಗಳು ಸಂಭವಿಸಿದ್ದೂ ಇದೆ. ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ಇದ್ದರೂ ಅದನ್ನು ಪಾಲಿಸುವವರ ಸಂಖ್ಯೆ ಮಾತ್ರ ಕಡಿಮೆ. ಇದೀಗ ವ್ಯಕ್ತಿಯೊಬ್ಬ ತನ್ನ ಮಗುವಿನ ಜತೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸುರಕ್ಷತೆಗಾಗಿ ಏರ್‌ಬ್ಯಾಗ್‌ ಅಳವಡಿಸಿಕೊಂಡಿರುವ ವಿಡಿಯೊ ವೈರಲ್ (Viral Video) ಆಗಿದೆ. ಬೈಕ್ ಚಲಾಯಿಸುವಾಗ ಪೋಷಕರು ತಮ್ಮ ಮಗುವಿನ ಬಗ್ಗೆ ನಿರ್ಲಕ್ಷ್ಯ ತೋರದಂತೆ ಎಚ್ಚೆತ್ತುಕೊಳ್ಳುವ ನಿಟ್ಟಿನಲ್ಲಿ ಈ ವಿಡಿಯೊ ಮುಖ್ಯ ಎನಿಸಿಕೊಂಡಿದೆ.

ತನ್ನ ಮಗುವಿಗೆ ಯಾವುದೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮಗುವಿನ ತಂದೆಯು ಈ ರೀತಿ ಏರ್‌ಬ್ಯಾಗ್‌ ಅಳವಡಿಸಿಕೊಂಡಿದ್ದಾರೆ. ವೈರಲ್ ಆದ ದೃಶ್ಯದಲ್ಲಿ ಆ ವ್ಯಕ್ತಿ ತಡರಾತ್ರಿ ಸಂಚರಿಸುತ್ತಿರುವುದನ್ನು ಕಾಣಬಹುದು. ಅವರು ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸಿದ್ದು ಬ್ಯಾಗ್ ನಡುವೆ ಮಗು ಕೂರಿಸಿಕೊಂಡು ಪ್ರಯಾಣಿಸಿದ್ದಾರೆ. ಪತ್ರಕರ್ತ ಪಿಯೂಷ್ ರೈ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಹೃದಯಸ್ಪರ್ಶಿ ವಿಡಿಯೊ ಹಂಚಿಕೊಂಡಿದ್ದಾರೆ.

ವಿಡಿಯೊ ನೋಡಿ:

ರಸ್ತೆಯಲ್ಲಿ ಪ್ರಯಾಣಿಸುವಾಗ ಬೀದಿ ದೀಪಗಳ ಬೆಳಕಿನಲ್ಲಿ ಮಗುವಿನ ಕಾಲು ಕಾಣಿಸಿಕೊಂಡಿದ್ದು ವಿಡಿಯೊದಲ್ಲಿ ಕಾಣಬಹುದು. ಮಗುವಿನ ಮುಖ ಸಂಪೂರ್ಣವಾಗಿ ಬ್ಯಾಗ್ ನಡುವೆ ಮುಚ್ಚಲ್ಪಟ್ಟಿದೆ. ಈ ವಿಡಿಯೊಗೆ ಬಾಲಿವುಡ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ʼಅನಿಮಲ್ʼನ ಮ್ಯೂಸಿಕ್ ಎಡಿಟ್ ಮಾಡಿ ಹಾಕಲಾಗಿದೆ. ಆ ವ್ಯಕ್ತಿ ಯಾರು? ಆ ಮಗು ನೋಡಲು ಹೇಗಿದೆ ಎಂಬ ಬಗ್ಗೆ ಯಾವುದೆ ಮಾಹಿತಿ ಇಲ್ಲ. ಹಾಗಿದ್ದರೂ ಮಗುವಿಗೆ ಅಪಾಯ ಬಾರದಂತೆ ತನ್ನ ಬ್ಯಾಗ್‌ನ ಸಹಾಯದಿಂದ ಏರ್‌ಬ್ಯಾಗ್‌ಗಳಂತೆ ರಕ್ಷಣಾತ್ಮಕ ವಿಧಾನ ಅನುಸರಿಸಿದ್ದ ವ್ಯಕ್ತಿಯ ಈ ಹೊಸ ಐಡಿಯಾ ಕಂಡು ನೆಟ್ಟಿಗರು ಮೆಚ್ಚುಗೆಯ ಕಮೆಂಟ್ ವ್ಯಕ್ತಪಡಿಸಿದ್ದಾರೆ. ʼಮನುಷ್ಯನ ರಕ್ಷಣಾತ್ಮಕ ಪ್ರವೃತ್ತಿʼ ಎಂಬ ಶೀರ್ಷಿಕೆಯೊಂದಿಗೆ ಈ ಕ್ಲಿಪ್ ಹಂಚಿಕೊಳ್ಳಲಾಗಿದ್ದು, ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಕಪ್ಪೆ ಪತ್ತೆ; ತನಿಖೆಗೆ ಆದೇಶ

ಇದೇ ಕ್ಲಿಪ್ ಅನ್ನು ʼಸೀಟ್ ಬೆಲ್ಟ್ ಹೊಂದಿರುವ ದ್ವಿಚಕ್ರ ವಾಹನʼ ಎಂಬ ಶೀರ್ಷಿಕೆಯೊಂದಿಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅನೇಕ ಬಳಕೆದಾರರು ಆ ವ್ಯಕ್ತಿಯ ಆಲೋಚನಾ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ಅವನು ಅಪಘಾತದ ಭಯದಿಂದ ಮಗುವಿಗೆ ರಕ್ಷಣೆ ನೀಡಲು ಹೀಗೆ ಮಾಡಿರಬಹುದು ಅಥವಾ ಆ ಮಗುವಿಗೆ ರಾತ್ರಿಯ ಕೋಲ್ಡ್ ವೆದರ್‌ನಿಂದ ರಕ್ಷಿಸಲು ಹೀಗೆ ಮಾಡಿರಬಹುದು ಎಂದು ಕಮೆಂಟ್ ಮಾಡಿದ್ದಾರೆ.

ಈ ಕ್ಲಿಪ್ ವೈರಲ್ ಆದ ತಕ್ಷಣವೇ ಸುಮಾರು 2.8 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ಹೊಂದಿದ್ದರೆ ಅವರಿಗೆ ಸಿಗುವ ಪುಟ್ಟ ಹೆಲ್ಮೆಟ್ ಕೊಡಿಸಬೇಕು. ಇದರಿಂದ ಸೇಫ್ ಜರ್ನಿ ನಿಮ್ಮದಾಗಲಿದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಇಂತಹ ಉಪಯುಕ್ತ ವಿಧಾನವಾದರೂ ಅನುಸರಿಸಿ ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ.