ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ ಪತ್ನಿಗೆ ಸೋನಿಯಾ ಗಾಂಧಿ ಪತ್ರ

ಹರಿಯಾಣದ ಪೊಲೀಸ್ ಅಧಿಕಾರಿ ವೈ. ಪೂರಣ್ ಕುಮಾರ್ ಆತ್ಮಹತ್ಯೆ ಬಳಿಕ ಅವರ ಪತ್ನಿ ಅಮ್ನೀತ್ ಪಿ. ಕುಮಾರ್ ಅವರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪತ್ರ ಬರೆದಿದ್ದಾರೆ. ಇದರಲ್ಲಿ ಅವರು ದುಃಖ ವ್ಯಕ್ತಪಡಿಸಿದ್ದು, ಅಧಿಕಾರದಲ್ಲಿರುವವರ ಪೂರ್ವಾಗ್ರಹ ಮತ್ತು ಪಕ್ಷಪಾತದ ವರ್ತನೆ, ಸಾಮಾಜಿಕ ನ್ಯಾಯದ ಬಗ್ಗೆ ಪ್ರಶ್ನಿಸಿದ್ದಾರೆ.

ಹರಿಯಾಣ ಪೊಲೀಸ್ ಅಧಿಕಾರಿ ಆತ್ಮಹತ್ಯೆ; ಸೋನಿಯಾ ಗಾಂಧಿ ಪತ್ರ

-

ನವದೆಹಲಿ: ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ವೈ. ಪೂರಣ್ ಕುಮಾರ್ (Y. Puran Kumar Suicide Case) ಇತ್ತೀಚೆಗೆ ಆತ್ಮಹತ್ಯೆ (Haryana Cop Suicide Case) ಮಾಡಿಕೊಂಡಿದ್ದು, ಅವರ ಪತ್ನಿ ಅಮ್ನೀತ್ ಪಿ. ಕುಮಾರ್ ಅವರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Congress leader Sonia Gandhi) ಪತ್ರ ಬರೆದು ಸಾಂತ್ವಾನ ಹೇಳಿದ್ದಾರೆ. ಇದರಲ್ಲಿ ಅವರು ಅಧಿಕಾರದಲ್ಲಿರುವವರ ಪೂರ್ವಾಗ್ರಹ ಮತ್ತು ಪಕ್ಷಪಾತದ ವರ್ತನೆ, ಸಾಮಾಜಿಕ ನ್ಯಾಯದ ಕುರಿತು ಮಾತನಾಡಿದ್ದು, ಐಪಿಎಸ್ ಅಧಿಕಾರಿಯ ಸಾವು ಆಘಾತಕಾರಿಯಾಗಿದೆ ಮತ್ತು ತೀವ್ರ ದುಃಖ ತಂದಿದೆ ಎಂದು ಹೇಳಿದ್ದಾರೆ. ನ್ಯಾಯಕ್ಕಾಗಿ ಹೋರಾಟದಲ್ಲಿ ಇಡೀ ದೇಶವು ತಮ್ಮೊಂದಿಗೆ ಇರುವುದಾಗಿ ತಿಳಿಸಿದ್ದಾರೆ.

ಹರಿಯಾಣ ಸರ್ಕಾರದ ಆಯುಕ್ತ ಮತ್ತು ಕಾರ್ಯದರ್ಶಿ ಅಮ್ನೀತ್ ಅವರಿಗೆ ಸೋನಿಯಾ ಬರೆದ ಪತ್ರದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಸಾವಿನ ಸುದ್ದಿ ತೀವ್ರ ದುಃಖ ತಂದಿದೆ. ಈ ಕಷ್ಟದ ಸಮಯದಲ್ಲಿ ನಿಮಗೆ ಮತ್ತು ನಿಮ್ಮ ಇಡೀ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಬರೆದ ಪತ್ರ:



ವೈ. ಪೂರಣ್ ಕುಮಾರ್ ಅವರ ಸಾವು ಅಧಿಕಾರದಲ್ಲಿರುವವರ ಪೂರ್ವಾಗ್ರಹ ಪೀಡಿತ ಮತ್ತು ಪಕ್ಷಪಾತದ ಮನೋಭಾವ ಕಾರಣ. ಇದು ಅತ್ಯಂತ ಹಿರಿಯ ಅಧಿಕಾರಿಗಳನ್ನು ಸಹ ಸಾಮಾಜಿಕ ನ್ಯಾಯದಿಂದ ವಂಚಿತಗೊಳಿಸುತ್ತಿದೆ ಎಂದು ಹೇಳಿದ್ದಾರೆ.

ನಾನು ಸೇರಿದಂತೆ ದೇಶದ ಲಕ್ಷಾಂತರ ಜನರು ನಿಮ್ಮೊಂದಿಗೆ ಇದ್ದಾರೆ. ಈ ಕಠಿಣ ಪರಿಸ್ಥಿತಿಯಲ್ಲಿ ದೇವರು ನಿಮಗೆ ತಾಳ್ಮೆ, ಧೈರ್ಯ ಮತ್ತು ಶಕ್ತಿಯನ್ನು ನೀಡಲಿ ಎಂದು ತಿಳಿಸಿದ್ದಾರೆ.

ಏನಾಗಿತ್ತು?

2001ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿದ್ದ ವೈ. ಪೂರಣ್ ಕುಮಾರ್ (52) ಇತ್ತೀಚೆಗೆ ಚಂಡೀಗಢ ಸೆಕ್ಟರ್ 11ರಲ್ಲಿರುವ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಅಧಿಕಾರಿಯ ಮೃತದೇಹ ಅಕ್ಟೋಬರ್ 7ರಂದು ಪತ್ತೆಯಾಗಿತ್ತು. ಇತ್ತೀಚೆಗೆ ರೋಹ್ಟಕ್‌ನ ಸುನಾರಿಯಾದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ (ಪಿಟಿಸಿ) ಇನ್ಸ್‌ಪೆಕ್ಟರ್ ಜನರಲ್ ಆಗಿ ನೇಮಕಗೊಂಡಿದ್ದ ಕುಮಾರ್, ಹಿರಿಯ ಅಧಿಕಾರಿಗಳ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿ ಪತ್ರವನ್ನು ಬರೆದಿದ್ದು, ಇದು ತನಿಖೆ ವೇಳೆ ಪೊಲೀಸರಿಗೆ ಸಿಕ್ಕಿದೆ.

ಎಂಟು ಪುಟಗಳ ಪತ್ರದಲ್ಲಿ ಅವರು ಹರಿಯಾಣದ ಡಿಜಿಪಿ ಶತ್ರುಜಿತ್ ಕಪೂರ್, ಎಡಿಜಿಪಿ ಸಂಜಯ್ ಕುಮಾರ್, ಐಜಿಪಿ ಪಂಕಜ್ ನೈನ್, ಐಪಿಎಸ್ ಅಧಿಕಾರಿಗಳಾದ ಕೆ. ರಾಮಚಂದ್ರನ್, ಸಂದೀಪ್ ಖಿರ್ವಾರ್, ಸಿಬಾಶ್ ಕವಿರಾಜ್ , ಮಾಜಿ ಡಿಜಿಪಿ ಮನೋಜ್ ಯಾದವ್, ಮಾಜಿ ಡಿಜಿಪಿ ಪಿ.ಕೆ. ಅಗರ್ವಾಲ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ವಿರುದ್ಧ ಮಾನಸಿಕ ಕಿರುಕುಳ ನೀಡಿರುವ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Leopard Attack: ಹಾವೇರಿಯಲ್ಲಿ ನೀರು ಹಾಯಿಸಲು ಹೋದ ಸಹೋದರರ ಮೇಲೆ ಚಿರತೆ ದಾಳಿ- ಓರ್ವ ಸಾವು!

ವೈ. ಪೂರಣ್ ಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಲಾಗಿದೆ. ಕುಮಾರ್ ಮರಣೋತ್ತರ ಪರೀಕ್ಷೆಗೆ ಕುಟುಂಬ ಒಪ್ಪಿಕೊಂಡಿಲ್ಲ. ಎಫ್‌ಐಆರ್‌ನಲ್ಲಿರುವ ಮಾಹಿತಿ ಅಪೂರ್ಣವಾಗಿದೆ ಎಂದು ಅವರ ಪತ್ನಿ ಆರೋಪಿಸಿದ್ದಾರೆ.