"ಸ್ತನವನ್ನು ಮುಟ್ಟಿ, ಸಲ್ವಾರ್ ಕಳಚಲು ಪ್ರಯತ್ನಿಸಿದರೆ ಅದು ಅತ್ಯಾಚಾರದ ಯತ್ನವಲ್ಲವೇ?" ಪಾಟ್ನಾ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತರಾಟೆ
ಮಹಿಳೆಯ ಸ್ತನ ಒತ್ತಿ, ಸಲ್ವಾರ್ ಕಳಚಲು ಯತ್ನಿಸಿದ್ದರೂ ಅದು ಅತ್ಯಾಚಾರಕ್ಕೆ ಯತ್ನವಲ್ಲ ಎಂದು ಪಾಟ್ನಾ ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಪ್ರಶ್ನೆ ಎತ್ತಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಲಯಗಳು ಹೆಚ್ಚು ಸಂವೇದನಾಶೀಲವಾಗಿ ನಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ದೇಶದ ಎಲ್ಲಾ ನ್ಯಾಯಾಲಯಗಳಿಗೆ ಹೊಸ ಮಾರ್ಗಸೂಚಿಗಳನ್ನು ಅನುಸರಿಸುವಂತೆ ನಿರ್ದೇಶಿಸಿದೆ.
ಪಾಟ್ನಾ ಹೈಕೋರ್ಟ್ -
ನವದೆಹಲಿ, ಜುಲೈ 15: ಮಹಿಳೆಯ ಸ್ತನವನ್ನು ಒತ್ತುವುದು ಹಾಗೂ ಸಲ್ವಾರ್ ಕಳಚಲು ಯತ್ನಿಸುವುದು ಅತ್ಯಾಚಾರಕ್ಕೆ ಯತ್ನವಲ್ಲ ಎಂದು ಪಾಟ್ನಾ ಹೈಕೋರ್ಟ್ (High Court) ನೀಡಿದ್ದ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮುಖ್ಯ ನ್ಯಾಯಮೂರ್ತಿ z ನೇತೃತ್ವದ ಪೀಠ, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಲಯಗಳು ಹೆಚ್ಚು ಸಂವೇದನಾಶೀಲವಾಗಿ ನಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.
ಈ ಪ್ರಕರಣವು 2008ರಲ್ಲಿ ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದ ಘಟನೆಯಾಗಿದೆ. ಫೋಟೋ ಸ್ಟುಡಿಯೋ ಮಾಲೀಕ ಮಹಿಳೆಯನ್ನು ಒಳಗೆ ಕರೆದೊಯ್ದು ಬಾಗಿಲು ಹಾಕಿ, ಆಕೆಯ ಸ್ತನವನ್ನು ಒತ್ತಿ, ಸಲ್ವಾರ್ ಕಳಚಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿತ್ತು.
#BREAKING | "We still have misogynists among judges who fail to understand a woman's bodily autonomy", says Pratibha Prahlad, Women’s Rights Activist(@PrathibhaP), reacting to the Patna HC verdict. She asserts that touching or groping any part of a woman's body without her… pic.twitter.com/coUsjhppIk
— Republic (@republic) July 15, 2026
ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಅತ್ಯಾಚಾರಕ್ಕೆ ಯತ್ನ ಹಾಗೂ ಅಕ್ರಮ ಬಂಧನ ಆರೋಪಗಳಲ್ಲಿ ದೋಷಿ ಎಂದು ತೀರ್ಪು ನೀಡಿತ್ತು. ಆದರೆ ಮೇಲ್ಮನವಿಯಲ್ಲಿ ಪಾಟ್ನಾ ಹೈಕೋರ್ಟ್, ಆರೋಪಿಯ ಕೃತ್ಯವು ಅತ್ಯಾಚಾರಕ್ಕೆ ಯತ್ನ ಎಂದು ಸಾಬೀತಾಗಿಲ್ಲ ಎಂದು ಹೇಳಿ ಆ ಆರೋಪದಿಂದ ಮುಕ್ತಗೊಳಿಸಿತ್ತು. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 354ರಡಿ ಮಹಿಳೆಯ ಶೀಲಭಂಗ ಪ್ರಕರಣ ಮಾತ್ರ ಅನ್ವಯಿಸುತ್ತದೆ ಎಂದು ಹೈಕೋರ್ಟ್ ಹೇಳಿತ್ತು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿ ಪ್ರಯಾಣ ಬೆಳೆಸಿದ ಅನಿಲ್ ಮೆನನ್; ಯಾರಿವರು? ಹಿನ್ನೆಲೆಯೇನು?
ಈ ತೀರ್ಪನ್ನು ಹಿರಿಯ ವಕೀಲರಾದ ಶೋಭಾ ಗುಪ್ತಾ ಮತ್ತು ಎಚ್.ಎಸ್. ಫೂಲ್ಕಾ ಅವರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು.
#BREAKING | "We still have misogynists among judges who fail to understand a woman's bodily autonomy", says Pratibha Prahlad, Women’s Rights Activist(@PrathibhaP), reacting to the Patna HC verdict. She asserts that touching or groping any part of a woman's body without her… pic.twitter.com/coUsjhppIk
— Republic (@republic) July 15, 2026
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಇಂತಹ ತೀರ್ಪುಗಳಲ್ಲಿ ಸಮರ್ಪಕ ಕಾನೂನು ಅಧ್ಯಯನದ ಕೊರತೆ ಕಂಡು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಲಯಗಳು ಹೆಚ್ಚು ಜವಾಬ್ದಾರಿಯುತ ಮತ್ತು ಸಂವೇದನಾಶೀಲವಾಗಿ ವರ್ತಿಸಬೇಕು ಎಂದು ಅವರು ಹೇಳಿದರು.
ಈ ವೇಳೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ (NJA) ಸಿದ್ಧಪಡಿಸಿರುವ ಹೊಸ ಮಾರ್ಗಸೂಚಿಗಳಿಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿತು. ಈ ಮಾರ್ಗಸೂಚಿಗಳನ್ನು ದೇಶದ ಎಲ್ಲಾ ನ್ಯಾಯಾಲಯಗಳು, ತನಿಖಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಲಾಗಿದೆ.
ಗಮನಾರ್ಹವಾಗಿ, ಈ ವರ್ಷದ ಆರಂಭದಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಇದೇ ರೀತಿಯ ವಿವಾದಾತ್ಮಕ ತೀರ್ಪನ್ನೂ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಈಗ ಪಾಟ್ನಾ ಹೈಕೋರ್ಟ್ ತೀರ್ಪಿನ ಕುರಿತೂ ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ವಿವರವಾದ ಆದೇಶ ಹೊರಡಿಸುವ ಸಾಧ್ಯತೆ ಇದೆ.