ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಈ ರಾಜ್ಯದ ಸರ್ಕಾರಿ ನೌಕರರಿಗೆ ಬಂಪರ್‌ ಆಫರ್‌; ಸಂಬಳ, ಪಿಂಚಣಿಗಾಗಿಯೇ 6,000 ಕೋಟಿ ರೂ. ಮೀಸಲಿಟ್ಟ ಸರ್ಕಾರ!

ತೆಲಂಗಾಣ ರಾಜ್ಯವು ಪ್ರತಿ ತಿಂಗಳು ಸುಮಾರು ₹6,000 ಕೋಟಿ ಹಣವನ್ನು ಸರ್ಕಾರಿ ನೌಕರರ ಸಂಬಳ ಮತ್ತು ಪಿಂಚಣಿಗೆ ವೆಚ್ಚ ಮಾಡುತ್ತಿದೆ. ಇದು 2014ರಲ್ಲಿ ರಾಜ್ಯ ರಚನೆಯಾದಾಗಿದ್ದ ವೆಚ್ಚಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ನಿರಂತರ ವೇತನ ಪರಿಷ್ಕರಣೆಗಳು ಹಾಗೂ ಶೇ. 33.67ರಷ್ಟು ತುಟ್ಟಿ ಭತ್ಯೆ (DA) ಹೆಚ್ಚಳದಿಂದ ಸ್ಥಿರ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ.

ತೆಲಂಗಾಣದಲ್ಲಿ ವೇತನ ವ್ಯಯ ಏರಿಕೆ: ತಿಂಗಳಿಗೆ 6,000 ಕೋಟಿ ವೆಚ್ಚ

ಸಾಂದರ್ಭಿಕ ಚಿತ್ರ -

Profile
Sushmitha Jain Feb 27, 2026 4:29 PM

ಹೈದರಾಬಾದ್: ತೆಲಂಗಾಣ ರಾಜ್ಯ (Telangana State) ರಚನೆಯಾದ ಕಳೆದ ಹತ್ತು ವರ್ಷಗಳಲ್ಲಿ ವೇತನ (Government Salaries) ಮತ್ತು ಪಿಂಚಣಿ (Pensions) ಹೊರೆ ಗಣನೀಯವಾಗಿ ಏರಿಕೆಯಾಗಿದೆ. ಪ್ರಸ್ತುತ ರಾಜ್ಯ ಸರ್ಕಾರವು ಪ್ರತಿ ತಿಂಗಳು ಸರಿಸುಮಾರು 6,000 ಕೋಟಿ ರೂಪಾಯಿಗಳನ್ನು ಕೇವಲ ವೇತನ ಮತ್ತು ಪಿಂಚಣಿಗಾಗಿ ವ್ಯಯಿಸುತ್ತಿದೆ. ಇದು 2014 ರಲ್ಲಿ ರಾಜ್ಯ ಉದಯವಾದ ಸಮಯದಲ್ಲಿದ್ದ ವೆಚ್ಚಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣಾ ಸಂದರ್ಭಗಳಲ್ಲಿ ನಡೆದ ಸತತ ವೇತನ ಪರಿಷ್ಕರಣೆಗಳು ಈ ಏರಿಕೆಗೆ ಪ್ರಮುಖ ಕಾರಣವಾಗಿದ್ದು, ಇದು ರಾಜ್ಯದ ಸ್ಥಿರ ವೆಚ್ಚವನ್ನು ಹೆಚ್ಚಿಸಿದೆ. ವಿಶೇಷವೆಂದರೆ, ತೆಲಂಗಾಣದ ಕೆಲವು ಉನ್ನತ ದರ್ಜೆಯ ಇಂಜಿನಿಯರ್‌ಗಳು ಮಾಸಿಕ 7 ಲಕ್ಷ ರೂಪಾಯಿಗಳವರೆಗೆ ವೇತನ ಪಡೆಯುತ್ತಿದ್ದಾರೆ. ಹೈದರಾಬಾದ್ ಮಹಾನಗರ ಪಾಲಿಕೆಯ (GHMC) ಹಿರಿಯ ಸ್ವಚ್ಛತಾ ಕಾರ್ಮಿಕರು ದೀರ್ಘಾವಧಿಯ ಸೇವೆಯ ನಂತರ ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿಗಳವರೆಗೆ ವೇತನ ಪಡೆಯುತ್ತಿರುವುದು ಗಮನಾರ್ಹವಾಗಿದೆ.

ಪ್ರಮುಖ ವೇತನ ಶ್ರೇಣಿಗಳ ವಿವರ (ಜನವರಿ 2026ರ ಪರಿಷ್ಕರಣೆಯಂತೆ):

ಇತ್ತೀಚಿನ ವರದಿಯ ಪ್ರಕಾರ, ಮೂಲ ವೇತನದ ಶೇ. 33.67 ರಷ್ಟು ತುಟ್ಟಿ ಭತ್ಯೆಯನ್ನು (DA) ನೀಡಲಾಗುತ್ತಿದೆ. ವಿವಿಧ ಹಂತದ ಅಧಿಕಾರಿಗಳ ಅಂದಾಜು ವೇತನ ಪಟ್ಟಿ ಈ ಕೆಳಗಿನಂತಿದೆ:

ವರ್ಗ ಗ್ರೂಪ್-1 (ಹಿರಿಯ ಅಧಿಕಾರಿಗಳು) ಮೂಲ ವೇತನ: (ರೂ.) 54,000 - 1,33,000 ಒಟ್ಟು ಅಂದಾಜು ವೇತನ (ರೂ.) 80,000 ರಿಂದ 1.5 ಲಕ್ಷಕ್ಕೂ ಹೆಚ್ಚು

ಗ್ರೂಪ್-2 (ಮಧ್ಯಮ ಅಧಿಕಾರಿಗಳು) ಮೂಲ ವೇತನ: (ರೂ.) 38,890 - 1,18,230 ಒಟ್ಟು ಅಂದಾಜು ವೇತನ 60,000 ರಿಂದ 1.2 ಲಕ್ಷಕ್ಕೂ ಹೆಚ್ಚು

ಗ್ರೂಪ್-3 (ಕ್ಲರಿಕಲ್/ತಾಂತ್ರಿಕ) ಮೂಲ ವೇತನ: 32,810 - 96,890 ಒಟ್ಟು ಅಂದಾಜು ವೇತನ 45,000 ರಿಂದ 1 ಲಕ್ಷಕ್ಕೂ ಹೆಚ್ಚು

ಗ್ರೂಪ್-4 (ಸಹಾಯಕ ಸಿಬ್ಬಂದಿ) ಮೂಲ ವೇತನ: 24,280 - 72,850 ಒಟ್ಟು ಅಂದಾಜು ವೇತನ 35,000 ರಿಂದ 50,000 ವರೆಗೆ

ಗರ್ಭಿಣಿ ಪತ್ನಿಗಾಗಿ ʼಕೆಜಿಎಫ್‌ʼ ರಾಕಿ ಭಾಯ್‌ಯಾದ ಮಂಗಳೂರು ಉದ್ಯಮಿ; ಸೀಮಂತದ ಸಂಭ್ರಮದ ವೇಳೆ ಹೆಲಿಕಾಪ್ಟರ್‌ನಿಂದ ಹೂವಿನ ಸುರಿಮಳೆ

ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಅವರ ಇತ್ತೀಚಿನ ವರದಿಯ ಪ್ರಕಾರ, 2023-24ರಲ್ಲಿ ರಾಜ್ಯದ ಒಟ್ಟು ಆದಾಯದ ಸುಮಾರು ಶೇ. 45 ರಷ್ಟು ಭಾಗವು ಕೇವಲ ಸಂಬಳ, ಪಿಂಚಣಿ ಮತ್ತು ಸಾಲದ ಮೇಲಿನ ಬಡ್ಡಿ ಪಾವತಿಗೇ ಬಳಕೆಯಾಗಿದೆ. ಇಷ್ಟೆಲ್ಲಾ ಭಾರಿ ವೆಚ್ಚದ ಹೊರತಾಗಿಯೂ, ರಾಜ್ಯದ ಆದಾಯವು ಏರಿಕೆಯಾಗುತ್ತಿರುವುದರಿಂದ ಸರ್ಕಾರವು ವೇತನ ಪಾವತಿಯಲ್ಲಿ ಇದುವರೆಗೆ ಯಾವುದೇ ವಿಳಂಬ ಮಾಡಿಲ್ಲ.

ತೆಲಂಗಾಣದ ಆರ್ಥಿಕತೆಯು ಶೇ. 10 ಕ್ಕಿಂತ ಹೆಚ್ಚು ಜಿಎಸ್‍ಡಿಪಿ (GSDP) ಬೆಳವಣಿಗೆಯನ್ನು ಸಾಧಿಸುತ್ತಿದೆ. ಪ್ರಸ್ತುತ ತೆಲಂಗಾಣದ ತಲಾ ಆದಾಯವು ಭಾರತದಲ್ಲೇ ಅತ್ಯಧಿಕವಾಗಿದ್ದು, ರಾಜ್ಯದ ಆರ್ಥಿಕತೆಯು ಸದೃಢವಾಗಿ ಬೆಳೆಯುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.