ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೋಳಿ ಎರಚುವ ವೇಳೆ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಕಿಡಿಗೇಡಿಗಳು; ವಿಡಿಯೊ ವೈರಲ್

ಮಥುರಾ, ವೃಂದಾವನ, ಬರ್ಸಾನಾ, ನಂದಗಾಂವ್ ಮತ್ತು ಗೋಕುಲ್‌ನಂತಹ ಸ್ಥಳಗಳಲ್ಲಿ ಬ್ರಜ್ ಕಿ ಹೋಳಿ ಹೆಸರುವಾಸಿ. ಆದರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೊ ಕಳವಳವನ್ನುಂಟು ಮಾಡಿದೆ. ಹೋಳಿ ಆಚರಣೆಯ ಸಮಯದಲ್ಲಿ ಕಿಡಿಗೇಡಿಗಳು ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಇದು ಸೀಶಿಯಲ್‌ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.

ಹೋಳಿ ಎರಚುವ ವೇಳೆ ಮಹಿಳೆಯರ ಮೈ ಮುಟ್ಟಿದ ಕಿಡಿಗೇಡಿಗಳು

ಹೋಳಿ ಎರಚುವ ವೇಳೆ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತನೆ -

Priyanka P
Priyanka P Feb 27, 2026 5:42 PM

ನವದೆಹಲಿ, ಫೆ. 27: ಹೋಳಿ ಹಬ್ಬ ಸಮೀಪಿಸುತ್ತಿದೆ. ದೇಶದ ಹಲವು ಭಾಗಗಳಲ್ಲಿ ಆಚರಣೆ ಈಗಾಗಲೇ ಆರಂಭವಾಗಿದೆ. ಉತ್ತರ ಭಾರತದಲ್ಲಿ ವಿಶೇಷವಾಗಿ ಮಥುರಾ, ವೃಂದಾವನ, ಬರ್ಸಾನಾ, ನಂದಗಾಂವ್ ಮತ್ತು ಗೋಕುಲ್‌ನಂತಹ ಸ್ಥಳಗಳಲ್ಲಿ ಹೋಳಿ ಹಬ್ಬದ (Holi festival) ರಂಗು ಮತ್ತಷ್ಟು ಹೆಚ್ಚಿದೆ. ಈ ಪ್ರದೇಶಗಳು ಬ್ರಜ್ ಕಿ ಹೋಳಿಗೆ ಹೆಸರುವಾಸಿ. ಆದರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೊ (viral video) ಕಳವಳವನ್ನುಂಟು ಮಾಡಿದೆ. ಹೋಳಿ ಆಚರಣೆಯ ಸಮಯದಲ್ಲಿ ಕಿಡಿಗೇಡಿಗಳು ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟು ಹಾಕಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ ಹಲವು ಮಹಿಳೆಯರು ಜನದಟ್ಟಣೆಯ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಅವರ ಮೇಲೆ ಬಣ್ಣಗಳನ್ನು ಎರಚಲಾಗುತ್ತಿದೆ. ಹೋಳಿ ಹಬ್ಬವು ತಮಾಷೆಯಿಂದ ಬಣ್ಣ ಬಳಿಯುವುದಕ್ಕೆ ಹೆಸರುವಾಸಿಯಾಗಿದ್ದರೂ, ಕೆಲವು ಕಿಡಿಗೇಡಿಗಳು ಮಹಿಳೆಯರನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದನ್ನು ಈ ದೃಶ್ಯ ತೋರಿಸುತ್ತವೆ. ಕೆಲವು ಪುರುಷರು ಮಹಿಳೆಯರ ಕೈಗಳನ್ನು ಬಲವಂತವಾಗಿ ಹಿಡಿದಿರುವುದನ್ನು ಸಹ ಕಾಣಬಹುದು. ಇದು ಮಹಿಳೆಯರಿಗೆ ಕಿರಿಕಿರಿಯನ್ನುಂಟು ಮಾಡಿದೆ. ಕೆಲವರು ದುಪ್ಪಟ್ಟಾಗಳಿಂದ ಮುಖ ಮುಚ್ಚಿಕೊಂಡಿರುವುದು ಕಂಡುಬಂದಿದೆ.

ಇಲ್ಲಿದೆ ವಿಡಿಯೊ:

ನೆಟ್ಟಿಗರು ವಿಡಿಯೊದಲ್ಲಿ ಕಂಡುಬರುವ ಪುರುಷರ ನಡವಳಿಕೆಯನ್ನು ಟೀಕಿಸಿದ್ದಾರೆ. ಯಾವುದೇ ಮಹಿಳೆ ಹೋಳಿ ಆಚರಿಸಲು ಬ್ರಜ್‌ಗೆ ಹೋಗಬಾರದು. ಇದು ಹೋಳಿ ಆಚರಣೆಯಲ್ಲ, ಇದು ಸಂಪೂರ್ಣ ಕಿರುಕುಳ. ಸ್ಥಳೀಯರಿಗೆ ಕಾನೂನಿನ ಭಯವಿಲ್ಲ. ಆದ್ದರಿಂದ ಅಲ್ಲಿ ಹೋಳಿ ಆಚರಿಸದೇ ಇರುವುದು ಉತ್ತಮ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.

ಬ್ರಜ್ ಕಿ ಹೋಳಿಯ ಕರಾಳ ಮುಖ ಎಂದು ಮತ್ತೊಬ್ಬರು ಹೇಳಿದರು. ಧರ್ಮ, ಸಂಸ್ಕೃತಿ ಅಥವಾ ಸಂಪ್ರದಾಯದ ಹೆಸರಿನಲ್ಲಿ ಕಿರುಕುಳವನ್ನು ಎಂದಿಗೂ ಸಮರ್ಥಿಸಲು ಸಾಧ್ಯವಿಲ್ಲ. ಹೆಣ್ಮಕ್ಕಳು ಬಹಿರಂಗವಾಗಿ ಕಿರುಕುಳಕ್ಕೊಳಗಾದಾಗ ಯಾರು ತಾನೇ ಅದನ್ನು ಸಂಸ್ಕೃತಿ ಅಥವಾ ಸಂಪ್ರದಾಯ ಎಂದು ಹೇಗೆ ಕರೆಯಬಹುದು? ಇದನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಮಗದೊಬ್ಬರು ಹೇಳಿದ್ದಾರೆ. ಹಬ್ಬದ ಹೆಸರಿನಲ್ಲಿ ಹೆಂಗಳೆಯರನ್ನು ಗುರಿಯಾಗಿಸಿಕೊಂಡ ಚಪ್ರಿಗಳು ಇವರು. ಇಂಥವರು ಭಾರತಕ್ಕೆ ಕಪ್ಪುಚುಕ್ಕೆ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಲೋಕಲ್‌ ಟ್ರೇನ್‌ನಲ್ಲಿ ಜಡೆ ಜಗಳ; ಯುವತಿಯ ಜುಟ್ಟು ಹಿಡಿದು ಎಳೆದ ಮಹಿಳೆ!

ನಾವು ಹೋಳಿ ಹಬ್ಬವನ್ನು ಬಣ್ಣ, ಸಂತೋಷ ಮತ್ತು ಸಂಸ್ಕೃತಿಗಾಗಿ ಆಚರಿಸುತ್ತೇವೆ. ಒಪ್ಪಿಗೆಯಿಲ್ಲದೆ ಯಾರನ್ನೂ ಮುಟ್ಟಬಾರದು. ಹಬ್ಬದ ಹೆಸರಿನಲ್ಲಿ ಕಿರುಕುಳ ಮಾಡುವುದನ್ನು ನಿಲ್ಲಿಸಿ. ಮಹಿಳೆಯರನ್ನು ಗೌರವಿಸಿ. ಘನತೆಯಿಂದ ಹೋಳಿ ಆಚರಿಸಿ ಎಂದು ಒಬ್ಬ ವ್ಯಕ್ತಿ ಹೇಳಿದರು.

ನಡೆಯುತ್ತಿರುವುದು ಹೋಳಿ ಅಲ್ಲ, ಕಿರುಕುಳ. ಹಬ್ಬ ಅಥವಾ ಭಾರತವನ್ನು ದೂಷಿಸಬೇಡಿ. ಅದನ್ನು ದುರುಪಯೋಗಪಡಿಸಿಕೊಳ್ಳುವವರ ಮನಸ್ಥಿತಿಯನ್ನು ದೂಷಿಸಿ. ಒಪ್ಪಿಗೆಯಿಲ್ಲದೆ ಆಚರಿಸುವುದು ಆಚರಣೆಯಲ್ಲ ಎಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ. ನಾನು ವೈಯಕ್ತಿಕವಾಗಿ ಈ ಹಬ್ಬವನ್ನು ಎಂದಿಗೂ ಇಷ್ಟಪಡದಿರಲು ಇದೇ ದೊಡ್ಡ ಕಾರಣ ಎಂದು ಮಹಿಳೆಯೊಬ್ಬರು ಪ್ರತಿಕ್ರಿಯಿಸಿದ್ದಾರೆ.