ದೇಶ, ಪಂಜಾಬ್‌ನ ಶಾಂತಿ ಬಯಸದ ಸಾಕಷ್ಟು ಶಕ್ತಿಗಳಿವೆ: ಗುಂಡಿನ ದಾಳಿ ಬಳಿಕ ಸುಖಬೀರ್ ಸಿಂಗ್ ಬಾದಲ್ ಮೊದಲ ಪ್ರತಿಕ್ರಿಯೆ
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ದಾಳಿಯ ಬಳಿಕ ಮೊದಲ ಬಾರಿಗೆ ಮಾತನಾಡಿದ ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು ನನಗೆ ಯಾವುದೇ ಭಯವಿಲ್ಲ. ನಾನು ಪರಿಪೂರ್ಣನಾಗಿದ್ದೇನೆ. ಪಂಜಾಬ್ ಮತ್ತು ಈ ದೇಶದಲ್ಲಿರುವ ಬಹಳಷ್ಟು ಶಕ್ತಿಗಳು ಇಲ್ಲಿ ಶಾಂತಿಯನ್ನು ಬಯಸುತ್ತಿಲ್ಲ ಎಂದು ಹೇಳಿದರು.
ಸಂಗ್ರಹ ಚಿತ್ರ -
ಮಹಾರಾಷ್ಟ್ರ: ದೇಶ ಮತ್ತು ಪಂಜಾಬ್‌ನಲ್ಲಿ ಶಾಂತಿ ಬಯಸದ ಸಾಕಷ್ಟು ಶಕ್ತಿಗಳಿವೆ. ಎರಡು ಬಾರಿ ನನ್ನ ಮೇಲೆ ದಾಳಿಯಾಗಿದೆ. ಈಗ ನನಗೆ ಯಾವುದೇ ಭಯವಿಲ್ಲ. ನಾನು ಪರಿಪೂರ್ಣನಾಗಿದ್ದೇನೆ ಎಂದು ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ, ಅಕಾಲಿ ದಳದ ಮುಖ್ಯಸ್ಥ (Shiromani Akali Dal) ಸುಖಬೀರ್ ಸಿಂಗ್ ಬಾದಲ್ (Sukhbir Singh Badal) ಹೇಳಿದರು. ಮಹಾರಾಷ್ಟ್ರದ (Maharastra) ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರ ಮೇಲೆ ಇತ್ತೀಚೆಗೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ (Nanded) ಗುರುದ್ವಾರದಲ್ಲಿ ದಾಳಿ ನಡೆಸಲಾಗಿತ್ತು.
ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆಯಾದ ಅವರು ಪತ್ನಿ ಮತ್ತು ಹಲವಾರು ಭದ್ರತಾ ಸಿಬ್ಬಂದಿಯೊಂದಿಗೆ ಮಾಧ್ಯಮದವರೊಂದಿಗೆ ಮಾತನಾಡಿ, ಬಹಳಷ್ಟು ಶಕ್ತಿಗಳು ಪಂಜಾಬ್ ಮತ್ತು ಈ ದೇಶದಲ್ಲಿ ಶಾಂತಿಯನ್ನು ಬಯಸುತ್ತಿಲ್ಲ. ಅವರ ಧ್ಯೇಯಕ್ಕೆ ಶಿರೋಮಣಿ ಅಕಾಲಿ ದಳವು ಅಡ್ಡಿ ಎಂದು ಭಾವಿಸುತ್ತಿದ್ದಾರೆ ಎಂದು ತಿಳಿಸಿದರು.
ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ವೀಕ್ಷಿಸಬೇಕೆ? ಟಿಕೆಟ್ ಬುಕ್ ಮಾಡೋದು ಹೇಗೆ? ಇಲ್ಲಿದೆ ಡಿಟೇಲ್ಸ್
ಬಾದಲ್ ಅವರ ಮೇಲೆ ಗುರುವಾರ ನಾಂದೇಡ್‌ನಲ್ಲಿರುವ ಗುರುದ್ವಾರದಲ್ಲಿ ದಾಳಿ ನಡೆಸಲಾಗಿತ್ತು. ಸಿಖ್ ಸಮರ ಪಂಥವಾದ ನಿಹಾಂಗ್ ಸಿಖ್‌ನ ವೇಷಭೂಷಣ ಧರಿಸಿದ ವ್ಯಕ್ತಿಯೊಬ್ಬ ಅವರ ಮೇಲೆ ದಾಳಿ ನಡೆಸಿದ್ದರಿಂದ ಅವರ ಕೈಗೆ ಗಾಯವಾಗಿತ್ತು.
ನಾಂದೇಡ್ ನಗರದ ಹೊರವಲಯದಲ್ಲಿರುವ ಗುರುದ್ವಾರ ಮಾತಾ ಸಾಹಿಬ್ ದೇವನ್ ಜಿ ಮುಗತ್‌ನಲ್ಲಿ ನಡೆದ ಕಿರ್ಪಾಣ್ ದಾಳಿಯಿಂದ ನಾನು ಹೆದರುವುದಿಲ್ಲ. ಹೆದರುವುದು ಕೂಡ ಇಲ್ಲ ಎಂದ ಅವರು, ಎಲ್ಲವೂ ದೇವರ ಕೈಯಲ್ಲಿದೆ ಎಂದ ಅವರು ಗುರು ಗೋವಿಂದ ಸಿಂಗ್ ಜಿ ಮಹಾರಾಜ್‌ಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.
Speaking to the media before boarding for Delhi from Nanded Sahib, SAD president Sukhbir Singh Badal said forces trying to disturb Punjab’s peace had targeted him twice at Sikh holy places, first at the Golden Temple and now in Nanded.
— swaran danewalia (@danewaliaswaran) August 14, 2026
“They want to take control of the situation… pic.twitter.com/Ap9wD5CWNA
ನನ್ನ ಮೇಲೆ ದಾಳಿ ನಡೆದಿರುವುದು ಇದೇ ಮೊದಲೇನಲ್ಲ. ಎರಡು ವರ್ಷಗಳ ಹಿಂದೆ ಅಮೃತಸರದ ಸುವರ್ಣ ದೇವಾಲಯದ ಪ್ರವೇಶ ದ್ವಾರದಲ್ಲಿ ತಪಸ್ಸು ಮಾಡುತ್ತಿದ್ದಾಗ ಕೂಡ ದಾಳಿ ನಡೆಸಿ ಹತ್ಯೆ ಮಾಡುವ ಪ್ರಯತ್ನ ಮಾಡಲಾಗಿತ್ತು. ಪಂಜಾಬ್‌ನಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸುವುದು ಮತ್ತು ಶಾಂತಿಯನ್ನು ಕದಡುವುದು ಅವರ ಮುಖ್ಯ ಉದ್ದೇಶವಾಗಿದೆ. ಅಕಾಲಿ ದಳದ ಅಧ್ಯಕ್ಷನಾಗಿ ನಾನು ಅದಕ್ಕೆ ಎಂದಿಗೂ ಅವಕಾಶಕೊಡುವುದಿಲ್ಲ. ಎರಡೂ ಬಾರಿ ಅವರು ಅತ್ಯಂತ ಪವಿತ್ರ ಸ್ಥಳಗಳಲ್ಲಿ ನನ್ನ ಮೇಲೆ ದಾಳಿ ನಡೆಸಿದರು ಎಂದರು.
ಗಾಯಗೊಂಡಿದ್ದ ಬಾದಲ್ ಅವರನ್ನು ಯಶೋಸಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಅವರ ಕೈಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದರ ಬಳಿಕ ಅವರು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ಜನ ಮಾರ್ಗದಲ್ಲಿ ಸ್ಕೂಟರ್ ಚಲಾಯಿಸಿದನಾ ರ‍್ಯಾಪಿಡೋ ಸವಾರ? ದ್ವಿಚಕ್ರ ವಾಹನದಿಂದ ಜಿಗಿದ ಮಹಿಳೆಗೆ ಗಾಯ
ಈ ಕುರಿತು ಮಾಹಿತಿ ನೀಡಿರುವ ಆಸ್ಪತ್ರೆಯ ವೈದ್ಯರೊಬ್ಬರು, ಬಾದಲ್ ಅವರ ಶಸ್ತ್ರಚಿಕಿತ್ಸೆ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದಿದೆ. ಅವರ ಸ್ನಾಯುವಿಗೆ ತೀಕ್ಷ್ಣವಾದ ಗಾಯವಾಗಿದೆ. ಪ್ಲಾಸ್ಟಿಕ್ ಸರ್ಜನ್ ಅವರ ಉಲ್ನರ್ ಅಪಧಮನಿ ನರವನ್ನು ಸರಿಪಡಿಸಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು.