ನಾಗ್ಪುರದಲ್ಲಿ ಬಿಜೆಪಿ ಭದ್ರಕೋಟೆ ಭೇದಿಸಿದ ಅಭಿಜಿತ್ ವಾಂಜಾರಿ ಯಾರು?
Who is Abhijit Wanjarri: ಕಳೆದ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ವಾಂಜಾರಿ ಬಿಜೆಪಿಯ ಸಂದೀಪ್ ಜೋಶಿ ವಿರುದ್ಧ ಸೋತಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ತವರು ಕ್ಷೇತ್ರವಾಗಿದ್ದು, ಕೊಹಲೆ ಪರ ಬಿರುಸಿನ ಪ್ರಚಾರವನ್ನೂ ನಡೆಸಿದ್ದರು.
Abhijit Wanjarri -
ನಾಗ್ಪುರ, ಅ.29: ಅತ್ಯಂತ ಜಿದ್ದಾಜಿದ್ದಿನ ಹಣಾಹಣಿಗೆ ಸಾಕ್ಷಿಯಾದ ನಾಗ್ಪುರ ವಿಭಾಗ ಪದವೀಧರರ ಕ್ಷೇತ್ರದದಲ್ಲಿ ಕಾಂಗ್ರೆಸ್‌ನ ಹಾಲಿ ವಿಧಾನಪರಿಷತ್ ಸದಸ್ಯ ಅಭಿಜಿತ್ ವಾಂಜಾರಿ ಬಿಜೆಪಿ ಅಭ್ಯರ್ಥಿಯ ವಿರುದ್ಧ 3,271 ಮತಗಳಿಂದ ಗೆದ್ದು ಬೀಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ವಿಧಾನ ಪರಿಷತ್ ಸದಸ್ಯ (MLC) ವಂಜಾರಿ ಅವರು 67,231 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಸುಧಾಕರ್ ಕೊಹಲೆ ಅವರು 63,960 ಮತಗಳನ್ನು ಪಡೆದರು. ತಮ್ಮ ಗೆಲುವಿನ ಕುರಿತು ಪ್ರತಿಕ್ರಿಯಿಸಿದ ಅವರು, "ಇದು ಇನ್ನು ಮುಂದೆ ಬಿಜೆಪಿಯ ಭದ್ರಕೋಟೆಯಾಗಿ ಉಳಿದಿಲ್ಲ. ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿ ಮಾರ್ಪಟ್ಟಿದೆ" ಎಂದು ತಿಳಿಸಿದರು.
ಕಳೆದ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ವಾಂಜಾರಿ ಬಿಜೆಪಿಯ ಸಂದೀಪ್ ಜೋಶಿ ವಿರುದ್ಧ ಸೋತಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ತವರು ಕ್ಷೇತ್ರವಾಗಿದ್ದು, ಕೊಹಲೆ ಪರ ಬಿರುಸಿನ ಪ್ರಚಾರವನ್ನೂ ನಡೆಸಿದ್ದರು.
"ಆರು ವರ್ಷಗಳ ಹಿಂದೆ, ನಾನು ಪದವೀಧರರ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದಾಗ, ಈ ಕ್ಷೇತ್ರದಲ್ಲಿ ಆಗಬೇಕಾಗಿದ್ದ ಬಹುತೇಕ ಕೆಲಸಗಳು ಇನ್ನೂ ಬಾಕಿ ಉಳಿದಿದ್ದವು. ಪದವೀಧರರಿಗಾಗಿಯೇ ಪ್ರತ್ಯೇಕ ಕ್ಷೇತ್ರವಿರುವುದರಿಂದ, ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ನಾನು ವಿಶೇಷ ಪ್ರಯತ್ನ ಮಾಡಿದೆನು. ನಾನು ಜನರೊಂದಿಗೆ ನಿಕಟ ಸಂಪರ್ಕವನ್ನು ಕಾಯ್ದುಕೊಂಡೆ. ವಿವಿಧ ಕಾರ್ಯಕ್ರಮಗಳ ಮೂಲಕ ನಮ್ಮ ಯುವಜನರು, ವಿದ್ಯಾರ್ಥಿಗಳು ಮತ್ತು ವಿದ್ವಾಂಸರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡೆನು"
ಹಿಂಸಾತ್ಮಕ ಆಡಳಿತ ಬದಲಾವಣೆಗೆ ಪ್ರತಿಭಟನೆ ನಡೆಸಿದರೆ ಸರ್ಕಾರಿ ಉದ್ಯೋಗವಿಲ್ಲ; ಕಠಿಣ ನಿಯಮ ಜಾರಿ
"ಇದು ಈ ಕ್ಷೇತ್ರ ಹಾಗೂ ಈ ಚುನಾವಣೆಯಲ್ಲಿ ಪ್ರಯೋಜನಕಾರಿಯಾಯಿತು ಮತ್ತು ಅಂತಿಮವಾಗಿ ನನ್ನ ಮರುಚುನಾವಣೆಗೆ ದಾರಿ ಮಾಡಿಕೊಟ್ಟಿತು. ಇಲ್ಲಿ ಗೆಲುವು ಸಾಧಿಸುವುದು ಅತ್ಯಂತ ಮಹತ್ವದ್ದಾಗಿದೆ. ವಿಶೇಷವಾಗಿ ದೇಶದ ವಿವಿಧ ಭಾಗಗಳಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದ ಮೂರು ಕಡೆಗಳಲ್ಲಿ ಇದೇ ರೀತಿಯ ಚುನಾವಣೆಗಳು ನಡೆದಿದ್ದವು ಎಂಬುದನ್ನು ಗಮನಿಸಿದರೆ ಇದು ಇನ್ನಷ್ಟು ಮುಖ್ಯವಾಗುತ್ತದೆ" ಎಂದು ಅವರು ಹೇಳಿದರು.
ಅಭಿಜಿತ್ ವಂಜಾರಿ ಯಾರು?
ವಕೀಲರಾಗಿರುವ ವಂಜಾರಿ, ನಾಗ್ಪುರದ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬವೊಂದರಿಂದ ಬಂದವರು. ಇವರ ತಂದೆ ಗೋವಿಂದರಾವ್ ವಂಜಾರಿ ಅವರು ದಕ್ಷಿಣ ನಾಗ್ಪುರದಿಂದ ಕಾಂಗ್ರೆಸ್ ಶಾಸಕರಾಗಿದ್ದರು. ವಂಜಾರಿ ಅವರು ರಾಷ್ಟ್ರಸಂತ ತುಕಾಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದಿಂದ ಬಿ.ಎ. (BA) ಮತ್ತು ಕಾನೂನು ಪದವಿಗಳನ್ನು ಪಡೆದಿದ್ದಾರೆ. ಅವರು ಕಾಂಗ್ರೆಸ್‌ನ ಎನ್‌ಎಸ್‌ಯುಐ (NSUI) ಮೂಲಕ ವಿದ್ಯಾರ್ಥಿ ರಾಜಕೀಯ ಪ್ರವೇಶಿಸಿದರು ಮತ್ತು 2002ರವರೆಗೆ ಅದರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಪಕ್ಷದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿರುವ ಅವರು, ರಾಜ್ಯ ಯುವ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿ, ನಾಗ್ಪುರ ಜಿಲ್ಲಾ ಕಾಂಗ್ರೆಸ್‌ನ ಮುಖ್ಯ ವಕ್ತಾರರಾಗಿ ಹಾಗೂ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಚುನಾವಣಾ ವೀಕ್ಷಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
#WATCH | Nagpur | Congress leader Abhijit Wanjari, who has won Nagpur Division Graduates' Constituency election, says, "Six years ago, when I was first elected from the Graduates' Constituency, much of the work that should have been done in this constituency had not yet been done. There is a distinct constituency for graduates, and I made a concerted effort to work in a manner befitting it. I maintained close contact with the people—engaging with our youth, students, and scholars through various programs. This proved beneficial in this constituency and in this election, ultimately leading to my re-election. Winning here carries immense weight, especially considering that similar elections were held in various parts of the country—in Uttar Pradesh, Bihar, and three instances in Maharashtra. In Maharashtra, the Maha Vikas Aghadi has won all three Graduates' Constituency elections. We are very pleased with this outcome; it is a testament to the work we have been doing for several years. It is no longer a BJP stronghold; it has become a Congress stronghold. The results from this Graduates' Constituency election once again demonstrate that the youth of our state—and the country—are reconnecting with the Congress. Through initiatives like his interactive programs with students over the past few years, Rahul Gandhi has sought to bring people together and address their concerns. Consequently, the nation's youth have become drawn to Rahul Gandhi, and this has yielded positive results in this election as well. Rahul-ji has consistently raised this issue—he has led several protests, arguing that elections in this country conducted via EVMs are, in some way, questionable. We all demand that this practice be stopped, and this demand is now set to emerge on an even larger scale. I truly believe that, eventually, the Election Commission will have to take a decision on this."
— ANI (@ANI) October 29, 2026
ಅವರು 2005ರಲ್ಲಿ ದಕ್ಷಿಣ ನಾಗ್ಪುರ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಆದರೆ ಸೋಲನ್ನಪ್ಪಿದರು. 2014ರ ಪೂರ್ವ ನಾಗ್ಪುರ ವಿಧಾನಸಭಾ ಚುನಾವಣೆಯಲ್ಲೂ ಅವರು ಪರಾಭವಗೊಂಡರು. ಆದಾಗ್ಯೂ, 2020ರಲ್ಲಿ ನಡೆದ ನಾಗ್ಪುರ ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ, ಬಿಜೆಪಿ ಅಭ್ಯರ್ಥಿ ಸಂದೀಪ್ ಜೋಶಿ ಅವರನ್ನು 18,910 ಮತಗಳ ಅಂತರದಿಂದ ಸೋಲಿಸುವ ಮೂಲಕ ಅವರು ಮೊದಲ ಬಾರಿಗೆ ಜಯಗಳಿಸಿದರು.