ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಜಯಲಕ್ಷ್ಮೀ ದರ್ಶನ್‌ ಜೊತೆ ಜಟಾಪಟಿ, ನಟ ಧನ್ವೀರ್ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲು! ಶೋಕ್ಧಾರ್‌ಗೆ ಶುರುವಾಯ್ತು ಸಂಕಷ್ಟ!

Actor Dhanveerrah Gowda: ಸ್ಯಾಂಡಲ್‌ವುಡ್ ನಟ ಧನ್ವೀರ್ ಗೌಡ ವಿರುದ್ಧ ವಿಜಯಲಕ್ಷ್ಮೀ ದರ್ಶನ್ ಅವರ ಆಪ್ತರು ನೀಡಿದ ದೂರಿನನ್ವಯ ಬೆಂಗಳೂರಿನ ಎರಡು ಪ್ರತ್ಯೇಕ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಾಗಿದ್ದು, ಇನ್ನೆರಡು ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಲು ಕೋರ್ಟ್ ಅನುಮತಿಗೆ ಕಾಯಲಾಗುತ್ತಿದೆ.

ಧನ್ವೀರ್ ವಿರುದ್ಧ 2 FIR ದಾಖಲು; ಶೋಕ್ದಾರ್‌ಗೆ ಹೆಚ್ಚಿತು ಕಾನೂನು ಸಂಕಷ್ಟ

-

Avinash GR
Avinash GR Oct 29, 2026 12:57 PM

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಸ್ಯಾಂಡಲ್‌ವುಡ್ ನಟ ಧನ್ವೀರ್ ಗೌಡ ನಡುವಿನ ವೈಮನಸ್ಸು ಮತ್ತು ಜಟಾಪಟಿ ಇದೀಗ ಕಾನೂನು ಸಮರಕ್ಕೆ ತಿರುಗಿದ್ದು, ನಟ ಧನ್ವೀರ್‌ಗೆ ಸಂಕಷ್ಟಗಳು ಸುತ್ತಿಕೊಳ್ಳಲಾರಂಭಿಸಿವೆ. ವಿಜಯಲಕ್ಷ್ಮೀ ಅವರ ಆಪ್ತರು ನೀಡಿದ್ದ ದೂರುಗಳ ಅನ್ವಯ ಈ ಹಿಂದೆ ದಾಖಲಾಗಿದ್ದ ನಾಲ್ಕು ಎನ್‌ಸಿಆರ್‌ಗಳ ಪೈಕಿ, ಇದೀಗ ಎರಡು ಪ್ರಕರಣಗಳಲ್ಲಿ ಧನ್ವೀರ್ ವಿರುದ್ಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಾಗಿದೆ.

ಎರಡು ಎಫ್‌ಐಆರ್‌ ದಾಖಲು

ವಿಜಯಲಕ್ಷ್ಮೀ ದರ್ಶನ್ ಅವರ ಆಪ್ತ ಸಹಾಯಕ ನಾಗರಾಜು ಹಾಗೂ ಮತ್ತೊಬ್ಬ ಆಪ್ತ ಭೋಜರಾಜು ಅವರು ನಗರದ ವಿವಿಧ ಠಾಣೆಗಳಲ್ಲಿ ಧನ್ವೀರ್ ವಿರುದ್ಧ ದೂರು ದಾಖಲಿಸಿದ್ದರು. ಈ ದೂರುಗಳ ಆಧಾರದ ಮೇಲೆ ರಾಜರಾಜೇಶ್ವರಿ ನಗರ ಹಾಗೂ ಬಸವೇಶ್ವರನಗರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 351(2) ಹಾಗೂ ಸೆಕ್ಷನ್ 352 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕಾಯ್ದೆಗಳಡಿ ಅಪರಾಧ ಸಾಬೀತಾದರೆ ಗರಿಷ್ಠ 2 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ.

ಕೋರ್ಟ್‌ ಅನುಮತಿಗೆ ಕಾದಿರುವ ಪೊಲೀಸರು

ಇಷ್ಟಕ್ಕೇ ಧನ್ವೀರ್ ಮೇಲಿನ ಕಾನೂನು ಕಂಟಕ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಚಾಮರಾಜಪೇಟೆ ಮತ್ತು ಬ್ಯಾಟರಾಯನಪುರ ಪೊಲೀಸ್ ಠಾಣೆಗಳಲ್ಲೂ ಧನ್ವೀರ್ ವಿರುದ್ಧ ದೂರುಗಳು ದಾಖಲಾಗಿದ್ದು, ಅಲ್ಲಿಯೂ ಎಫ್‌ಐಆರ್ ದಾಖಲಿಸಲು ಪೊಲೀಸರು ನ್ಯಾಯಾಲಯದ ಅನುಮತಿ ಕೋರಿದ್ದಾರೆ. ಕೋರ್ಟ್ ಅನುಮತಿ ಸಿಕ್ಕ ಬೆನ್ನಲ್ಲೇ ಉಳಿದೆರಡು ಠಾಣೆಗಳಲ್ಲೂ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ.

Actor Dhanveer: ನಟ ಧನ್ವೀರ್ ಗೌಡಗೆ ಸಂಕಷ್ಟ; ಮತ್ತೊಂದು ದೂರು ದಾಖಲು

10 ಕೋಟಿ ವ್ಯವಹಾರದ ಮೇಲೂ ಪೊಲೀಸರ ಕಣ್ಣು

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಆರ್.ಆರ್. ನಗರ ಮತ್ತು ಬಸವೇಶ್ವರನಗರ ಠಾಣಾ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನಟ ಧನ್ವೀರ್‌ಗೆ ಶೀಘ್ರವೇ ನೋಟಿಸ್ ಜಾರಿ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ಜಟಾಪಟಿಗೆ ಸಂಬಂಧಿಸಿದ ಪ್ರಮುಖ ಆಡಿಯೋ ಸಾಕ್ಷ್ಯಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಧನ್ವೀರ್ ಅವರನ್ನು ಮುಖಾಮುಖಿ ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲು ಸಿದ್ಧತೆ ನಡೆದಿದೆ. ಇದೇ ವೇಳೆ, ಈ ವಿವಾದದ ಕೇಂದ್ರಬಿಂದುವಾಗಿ ಕೇಳಿಬರುತ್ತಿರುವ ಬರೋಬ್ಬರಿ 10 ಕೋಟಿ ರೂಪಾಯಿ ಹಣದ ವಹಿವಾಟಿನ ವಿಚಾರದ ಕುರಿತಾಗಿಯೂ ಪೊಲೀಸರು ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿವೆ.