ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇನ್ಮುಂದೆ ಭಾರತೀಯ ವಿಮಾನದಲ್ಲಿ ಪವರ್‌ ಬ್ಯಾಂಕ್‌ ನಿಷೇಧ? ಕಠಿಣ ನಿಯಮ ಜಾರಿಗೆ ಸಿದ್ಧತೆ

ಭಾರತೀಯ ವಿಮಾನಗಳಲ್ಲಿ ಇನ್ಮುಂದೆ ಪವರ್‌ ಬ್ಯಾಂಕ್‌ ಬಳಸುವಂತಿಲ್ಲ. ಹೌದು, ವಿಮಾನದೊಳಗೆ ಪವರ್‌ ಬ್ಯಾಂಕ್‌ ನಿಷೇಧಿಸಲು ಅಥವಾ ಬಳಕೆಗೆ ಕಠಿಣ ನಿಯಮ ಜಾರಿಗೆ ತರಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಚಿಂತನೆ ನಡೆಸಿದೆ. ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಇಂಡಿಗೋ ವಿಮಾನದೊಳಗೆ ಪವರ್‌ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ವಿಮಾನದಲ್ಲಿ ಪವರ್‌ ಬ್ಯಾಂಕ್‌ ನಿಷೇಧಕ್ಕೆ ಸಿದ್ಧತೆ

ಸಾಂದರ್ಭಿಕ ಚಿತ್ರ -

Ramesh B Ramesh B Oct 23, 2025 5:20 PM

ದೆಹಲಿ, ಅ. 23: ಭಾರತೀಯ ವಿಮಾನಗಳಲ್ಲಿ ಪವರ್‌ ಬ್ಯಾಂಕ್‌ (Power Bank) ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಹೊಸ ಕಾನೂನು ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ. ಹೌದು, ವಿಮಾನದೊಳಗೆ ಪವರ್‌ ಬ್ಯಾಂಕ್‌ ನಿಷೇಧಿಸಲು ಅಥವಾ ಬಳಕೆಗೆ ಕಠಿಣ ನಿಯಮ ಜಾರಿಗೆ ತರಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (Directorate General of Civil Aviation-DGCA) ಚಿಂತನೆ ನಡೆಸಿದೆ. ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಇಂಡಿಗೋ ವಿಮಾನದೊಳಗೆ (IndiGo Flight) ಪವರ್‌ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಈ ತೀರ್ಮಾನಕ್ಕೆ ಬರಲಾಗಿದೆ.

ದೆಹಲಿ ವಿಮಾನ ನಿಲ್ದಾಣದಿಂದ ನಾಗಲ್ಯಾಂಡ್‌ನ ದಿಮಾಪುರಕ್ಕೆ ಭಾನುವಾರ (ಅಕ್ಟೋಬರ್‌ 19) ಹೊರಡಲು ಸಿದ್ಧತೆ ನಡೆಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಅಪಾಯವಿದಲ್ಲದೆ ಪಾರಾಗಿದ್ದರು. ಜತೆಗೆ ಯಾವುದೇ ಹಾನಿ ಸಂಭವಿಸಿರಲಿಲ್ಲ. ಲಿಥಿಯಂ ಬ್ಯಾಟರಿ ಚಾಲಿತ ವಸ್ತುಗಳ ಸುರಕ್ಷತೆಯ ಬಗ್ಗೆ ಅನುಮಾನ ಮೂಡುತ್ತಿರುವ ಮಧ್ಯೆ ಬಳಕೆಯನ್ನು ನಿರ್ಬಂಧಿಸುವ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Fire on Indigo flight: ವಿಮಾನದಲ್ಲಿ ಪವರ್ ಬ್ಯಾಂಕ್ ಗೆ ಬೆಂಕಿ- ಪ್ರಯಾಣಿಕರು ಪಾರು

ವಿಮಾನಗಳಲ್ಲಿ ಪ್ರಯಾಣಿಕರು ಹೇಗೆ ಪವರ್ ಬ್ಯಾಂಕ್‌ಗಳನ್ನು ಹೇಗೆ ಬಳಸುತ್ತಾರೆ ಎಂಬುದರ ಕುರಿತು ಡಿಜಿಸಿಎ ಸಮಗ್ರ ಪರಿಶೀಲನೆಯನ್ನು ಪ್ರಾರಂಭಿಸಿದೆ. ಬಳಕೆ ಅಪಾಯಕಾರಿ ಎಂದು ಕಂಡುಬಂದರೆ ವಿಮಾನದೊಳಗೆ ಪವರ್‌ ಬ್ಯಾಂಕ್‌ ಬಳಕೆಯನ್ನು ನಿಷೇಧಿಸಲು, ಸಾಗಣೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲು ನಿಯಮ ಜಾರಿಗೆ ತರಬಹುದು ಎನ್ನಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯಕ್ಕೂ (MoCA) ಈ ಬಗ್ಗೆ ಮಾಹಿತಿ ನೀಡಲಾಗಿದೆ ಮತ್ತು ಎರಡೂ ಸಂಸ್ಥೆಗಳು ಈಗ ಹೊಸ ಸುರಕ್ಷತಾ ಕ್ರಮಗಳನ್ನು ನಿರ್ಧರಿಸಲು ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ.

ದೆಹಲಿಯಿಂದ ನಾಗಾಲ್ಯಾಂಡ್‌ನ ದಿಮಾಪುರಕ್ಕೆ ಅಕ್ಟೋಬರ್ 19ರಂದು ಹೊರಡಲು ಸಿದ್ಧವಾಗುತ್ತಿದ್ದ 6ಇ 2107 ವಿಮಾನದ ಸೀಟ್-ಬ್ಯಾಕ್ ಪಾಕೆಟ್‌ನಲ್ಲಿ ಇಟ್ಟಿದ್ದ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್‌ನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ವಿಮಾನವು ನಿಲ್ದಾಣದಲ್ಲಿ ಟ್ಯಾಕ್ಸಿ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿತ್ತು ಎಂದು ವಿಮಾನಯಾನ ಸಂಸ್ಥೆ ತಿಳಿಸಿತ್ತು.

ಇದೇ ಮೊದಲಲ್ಲ

ಅಕ್ಟೋಬರ್ ಆರಂಭದಲ್ಲಿ ಎಮಿರೇಟ್ಸ್ ಏರ್‌ಲೈನ್ಸ್‌ ತನ್ನ ಎಲ್ಲ ವಿಮಾನಗಳಲ್ಲಿ ಪವರ್ ಬ್ಯಾಂಕ್‌ಗಳ ಬಳಕೆಗೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಪ್ರಯಾಣಿಕರು 100 ವ್ಯಾಟ್-ಅವರ್‌ಗಳಿಗಿಂತ ಕಡಿಮೆ ರೇಟಿಂಗ್ ಹೊಂದಿರುವ ಪವರ್ ಬ್ಯಾಂಕ್‌ಗಳನ್ನು ಮಾತ್ರ ಕೊಂಡೊಯ್ಯಲು ಅನುಮತಿ ನೀಡಲಾಗಿದೆ. ಅವುಗಳನ್ನು ವಿಮಾನದೊಳಗೆ ಚಾರ್ಜ್ ಮಾಡುವುದು ಅಥವಾ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಅದೇ ರೀತಿ ಸಿಂಗಾಪುರ್ ಏರ್‌ಲೈನ್ಸ್‌ ಕೂಡ ಏಪ್ರಿಲ್‌ನಲ್ಲಿ ಇದೇ ರೀತಿಯ ನಿಯಮ ಜಾರಿಗೆ ತಂದಿದೆ. ಹಾರಾಟದ ಮಧ್ಯದಲ್ಲಿ ಪವರ್ ಬ್ಯಾಂಕ್‌ಗಳ ಬಳಕೆ ನಿಷೇಧಿಸಿದೆ. ಕ್ಯಾಥೆ ಪೆಸಿಫಿಕ್ ಮತ್ತು ಕತಾರ್ ಏರ್‌ವೇಸ್‌ ಸೇರಿದಂತೆ ಅನೇಕ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರು ಪವರ್ ಬ್ಯಾಂಕ್‌ ಬಳಸುವುದನ್ನು ನಿಷೇಧಿಸಿದೆ.

ಪವರ್ ಬ್ಯಾಂಕ್‌ಗಳು ಲಿಥಿಯಂ-ಐಯಾನ್ ಸೆಲ್‌ಗಳನ್ನು ಹೊಂದಿರುತ್ತವೆ. ಹೆಚ್ಚಿನ ಪವರ್‌ ಉಳ್ಳ ಬ್ಯಾಟರಿಗಳು ಗಮನಾರ್ಹ ವಿದ್ಯುತ್ ಚಾರ್ಜ್ ಅನ್ನು ಸಂಗ್ರಹಿಸಬಲ್ಲವು. ಆದಾಗ್ಯೂ ಅಗ್ಗದ ಪವರ್‌ ಬ್ಯಾಂಕ್‌ ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಬಲ್ಲದು.